ರಾಯಚೂರಿನಲ್ಲಿ ಬಿಹಾರ ಮೂಲದ ಶಂಕಿತ ನಕ್ಸಲನನ್ನು ಬಂಧಿಸಲಾಗಿದೆ. 18 ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪಿಯನ್ನು ಬಿಹಾರ ಪೊಲೀಸರು ರಾಯಚೂರಿನ ಯರಮರಸ್ ಕೈಗಾರಿಕಾ ವಲಯದಲ್ಲಿ ಬಂಧಿಸಿದ್ದಾರೆ.

ರಾಯಚೂರು (ಸೆ.4): ಶಂಕಿತ ನಕ್ಸಲ್‌, ಕೊಲೆ, ಸುಲಿಗೆ, ಜೀವ ಬೆದರಿಕೆ ಸೇರಿ 18 ಅಪರಾಧಗಳಲ್ಲಿ ಆರೋಪಿ ಆಗಿರುವ ಬಿಹಾರ ಮೂಲದ ಮನೋಜ ಸದಾನನ್ನು ಅಲ್ಲಿನ ಪೊಲೀಸರು ರಾಯಚೂರಿನ ಯರಮರಸ್‌ ಕೈಗಾರಿಕಾ ವಲಯದಲ್ಲಿ ಬಂಧಿಸಿದ್ದಾರೆ. 

ಆತ ಅಕ್ಕಿ ಗಿರಣಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಬಿಹಾರದ ಖಗಾರಿಯಾ ಜಿಲ್ಲೆಯ ಅಲೌಲಿ ಠಾಣೆ ಪೊಲೀಸರು ಮನೋಜ್‌ಗಾಗಿ ಹುಡುಕಾಟ ನಡೆಸುತ್ತಿದ್ದರು. ಸುಳಿವು ಆಧರಿಸಿ ರಾಯಚೂರು ಗ್ರಾಮೀಣ ಠಾಣೆ ಪೊಲೀಸರ ಸಹಕಾರದೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಬಿಹಾರದಲ್ಲಿ ಹಲವಾರು ಅಪರಾಧ ಪ್ರಕರಣಗಳಲ್ಲಿ ಆರೋಪಿಯಾಗಿರುವ ಮನೋಜ್‌, ಶಂಕಿತ ನಕ್ಸಲ್‌ ಎನ್ನುವ ಅನುಮಾನಗಳಿವೆ.

ಇದನ್ನೂ ಓದಿ: ಬಾತ್ರೂಮ್‌ನಲ್ಲಿ ಮಹಿಳೆ ಅಸಹ್ಯಕರ ಕೃತ್ಯ; ಪ್ರಸಿದ್ಧ ಟಿವಿ ನಟ ಬಂಧನ! ಏನಿದು ಘಟನೆ?

ತಲೆಮರಿಸಿಕೊಳ್ಳಲು ಬಿಹಾರದಿಂದ ಬಂದು ಅಕ್ಕಿ ಗಿರಣಿಯಲ್ಲಿ ಕೆಲಸ ಮಾಡುತ್ತಿದ್ದ. ಪ್ರಕರಣಗಳ ಬೆನ್ನಟ್ಟಿದ ಬಿಹಾರಿ ಪೊಲೀಸರು ಕೊನೆಗೂ ಆರೋಪಿಯನ್ನು ಪತ್ತೆ ಹಚ್ಚಿ ಸ್ಥಳೀಯ ಜಿಲ್ಲಾ ನ್ಯಾಯಾಲಯದ ಎದುರು ಹಾಜರು ಪಡಿಸಿ ತಮ್ಮ ಸುಪರ್ದಿಗೆ ತೆಗೆದುಕೊಂಡಿದ್ದಾರೆ.

ಶಂಕಿತ ನಕ್ಸಲ್‌, ಕೊಲೆ, ಸುಲಿಗೆ, ಜೀವ ಬೆದರಿಕೆ ಸೇರಿ 18 ಅಪರಾಧಗಳಲ್ಲಿ ಆರೋಪಿ ಆಗಿರುವ ಬಿಹಾರ ಮೂಲದ ಮನೋಜ ಸದಾನನ್ನು ಅಲ್ಲಿನ ಪೊಲೀಸರು ರಾಯಚೂರಿನ ಯರಮರಸ್‌ ಕೈಗಾರಿಕಾ ವಲಯದಲ್ಲಿ ಬಂಧಿಸಿದ್ದಾರೆ.