Asianet Suvarna News Asianet Suvarna News

ಪ್ಲಾಸ್ಟಿಕ್ ಸೀಜ್ ಮಾಡಲು ಹೋದವರಿಗೆ ಶಾಕ್, ಆತ್ಮಹತ್ಯೆ ಮಾಡಿಕೊಳ್ಳುತ್ತೆವೆಂದು ಅವಾಜ್

* ಪ್ಲಾಸ್ಟಿಕ್ ಸೀಜ್ ಮಾಡಲು ಹೋದವರಿಗೆ ಶಾಕ್
* ಪ್ಲಾಸ್ಟಿಕ್ ಸೀಜ್ ಮಾಡಲು ಹೋದವರಿಗೆ ವ್ಯಾಪಾರಸ್ಥರ ಅವಾಜ್
 * ಆತ್ಮಹತ್ಯೆ ಮಾಡಿಕೊಳ್ಳುತ್ತೆವೆಂದು ಬೆದರಿಕೆ

merchants Suicide threat To Yadgir Officers Who sized plastic bags rbj
Author
Bengaluru, First Published May 26, 2022, 10:30 PM IST

ವರದಿ: ಪರಶುರಾಮ್ ಐಕೂರ್, ಏಷ್ಯಾನೆಟ್ ಸುವರ್ಣ ನ್ಯೂಸ್

ಯಾದಗಿರಿ, (ಮೇ.26): ಪ್ಲಾಸ್ಟಿಕ್ ಬಳಕೆಯಿಂದ ಜನರ ಆರೋಗ್ಯದ ಜೊತೆ ಪರಿಸರದ ಮೇಲೆ ಪರಿಣಾಮ ಬಿರುತ್ತಿದೆ. ಇದನ್ನು ಮನಗೊಂಡ ಯಾದಗಿರಿ ನಗರಸಭೆ ಅಧ್ಯಕ್ಷ ಸುರೇಶ್ ಅಂಬಿಗರ್ ಯಾದಗಿರಿ ನಗರವನ್ನು ಪ್ಲಾಸ್ಟಿಕ್ ಮುಕ್ತ ಮಾಡಲು ಸಂಕಲ್ಪ ತೊಟ್ಟಿದ್ದು, ಹೀಗಾಗಿ ಕಳೆದ ಒಂದು ವಾರದಿಂದ ಪ್ಲಾಸ್ಟಿಕ್ ಬಳಕೆ ಹಾಗೂ ನಿಷೇಧ ಬಗ್ಗೆ ಜಾಗೃತಿ ಮೂಡಿಸಿ ಪ್ಲಾಸ್ಟಿಕ್ ಬಳಕೆ ಮಾಡುತ್ತಿದ್ದರೆ ಪ್ಲಾಸ್ಟಿಕ್ ಉತ್ಪನ್ನಗಳು ಜಪ್ತಿ ಮಾಡುತ್ತಿದ್ದಾರೆ.

ನಗರಸಭೆ ಅಧ್ಯಕ್ಷರ ನೇತೃತ್ವದಲ್ಲಿ ಪ್ಲಾಸ್ಟಿಕ್ ಸೀಜ್
ಪ್ಲಾಸ್ಟಿಕ್ ಬಳಕೆ ಮಾಡದೇ ಜೀವನವಿಲ್ಲದಂತೆ ಸಮಾಜದಲ್ಲಿ ವಾತಾವರಣ ಜನರು ನಿರ್ಮಾಣ ಮಾಡಿಕೊಂಡಿದ್ದಾರೆ. ಹೀಗಾಗಿ ಇಂದು ನಗರಸಭೆ ಅಧ್ಯಕ್ಷ ಸುರೇಶ್ ಅಂಬೀಗರ ಅವರು ಯಾದಗಿರಿ ನಗರದ ವಿವಿಧೆಡೆ ದಾಳಿ ನಡೆಸಿ ಪ್ಲಾಸ್ಟಿಕ್ ಜಪ್ತಿ ಮಾಡಿದ್ದಾರೆ. ಶರಣನಗರದ ಮಸೀದಿ ಹಿಂಭಾಗದಲ್ಲಿ ಯಾವುದೇ ಅನುಮತಿ ಪಡೆಯದೇ ಶುದ್ಧ ಕುಡಿಯುವ ನೀರಿನ ಘಟಕ ಅಳವಡಿಕೆ ಮಾಡಿ ಅನಧಿಕೃತವಾಗಿ ನೀರಿನ ಘಟಕ ನಡೆಸಿ ನೀರು ಮಾರಾಟ ಮಾಡಲಾಗುತ್ತಿದೆ ‌.ಆದರೆ, ಯಾವುದೇ ಅನುಮತಿ ಪಡೆದಿಲ್ಲ‌‌. ನೀರು ಪ್ಯಾಕ್ ಮಾಡಲು ನಿಷೇಧಿತ ಪ್ಲಾಸ್ಟಿಕ್ ಬಳಕೆ ಮಾಡುವದನ್ನು ಕಂಡು ದಾಳಿ ನಡೆಸಿ ನೀರಿನ ಘಟಕದ ಮಾಲಿಕರಿಗೆ ಬಿಸಿ ಮುಟ್ಟಿಸಿದರು. ಈ ವೇಳೆ ಪ್ಲಾಸ್ಟಿಕ್ ಸೀಜ್ ಮಾಡಿದರು.

Single Use Plastic ವಿಶ್ವದಲ್ಲೇ ಅತೀ ಕಡಿಮೆ ಏಕಬಳಕೆ ಪ್ಲಾಸ್ಟಿಕ್ ಬಳಕೆ ಮಾಡುತ್ತಿರುವ ದೇಶ ಭಾರತ!

ಆತ್ಮಹತ್ಯೆ ಮಾಡಿಕೊಳ್ಳುತ್ತೆವೆಂದು ಅವಾಜ್..!
ಯಾದಗಿರಿ ನಗರದ ಶ್ರೀ ಶಿವಾ ಪೆಪರ್ ಪ್ಲೆಟ್ ತೈಯಾರು ಮಾಡುವ ಘಟಕದ ಮೇಲೆ ದಾಳಿ ನಡೆಸಿದರು. ಈ ವೇಳೆ ನಿಷೇಧಿತ ಪ್ಲಾಸ್ಟಿಕ್ ಬಳಕೆ ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡುವದನ್ನು ಕಂಡು ಬೆರಗಾದರು. ಈ ವೇಳೆ ನಿಷೇಧಿತ ಪ್ಲಾಸ್ಟಿಕ್ ಉತ್ಪನ್ನಗಳು ಸೀಜ್ ಮಾಡಿದಾಗ ಹೈಡ್ರಾಮಾ ನಡೆದಿದೆ. ಪ್ಲಾಸ್ಟಿಕ್ ಜಪ್ತಿ ಮಾಡಿದಾಗ ಘಟಕದ ಮಾಲಿಕರು ಹಾಗೂ ಕುಟುಂಬಸ್ಥರು ನಗರಸಭೆ ಅಧ್ಯಕ್ಷ ಸುರೇಶ್ ಅಂಬೀಗರ ಹಾಗೂ, ನಗರಸಭೆ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡು ಅವಾಜ್ ಹಾಕಿದರು. ನೀವು ಸೀಜ್ ಮಾಡಿದರೆ ಹೇಗೆ ನಮಗೆ 8 ಲಕ್ಷ ರೂಪಾಯಿ ಸಾಲವಿದೆ, ಬಡವರ ಮೇಲೆ ಹೀಗೆ ಮಾಡಿದರೆ ಹೇಗೆ..? ನಾವೆಲ್ಲರೂ ಮುನ್ಸಿಪಾಲಿಟಿ ಮುಂದೆ ಬಂದು ಆತ್ಮಹತ್ಯೆ ಮಾಡಿಕೊಳ್ಳುತ್ತೆವೆ ಎಂದು ಬೇದರಿಕೆ ಹಾಕಿದರು. ಸರಕಾರ ದೊಡ್ಡವರ ಮೇಲೆ ಯಾವುದೇ ಕ್ರಮಕೈಗೊಳ್ಳಲ್ಲ ಬಡವರ ಮೇಲೆ ಹೀಗೆ ಮಾಡುತ್ತಾರೆ‌. ದೊಡ್ಡವರು ತಪ್ಪು ಮಾಡಿದ್ರೆ ಅವರ ಮೇಲೆ ಏನು ಮಾಡಲ್ಲ‌ ಎಂದು ಮಾಲಿಕ ಆಕ್ರೋಶ ವ್ಯಕ್ತಪಡಿಸಿದರು.

 ಖಡಕ್ ಎಚ್ಚರಿಕೆ
ನಂತರ ಪ್ಲಾಸ್ಟಿಕ್ ಉತ್ಪನ್ನಗಳನ್ನು ಜಪ್ತಿ ಮಾಡಲಾಗಿದೆ. ಈ ವೇಳೆ ನಗರಸಭೆ ಅಧಿಕಾರಿಗಳು ಹಾಗೂ ನಗರಸಭೆ ಅಧ್ಯಕ್ಷರ ಬುದ್ದಿ ಮಾತು ಹೇಳಿದರು ಬಗ್ಗದೆ ಬೇದರಿಕೆ ಹಾಕುವ ಕೆಲಸ ಮಾಡಿದರು. ನಂತರ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ಶಾಂತಗೊಳಿಸಿದರು. ನಗರಸಭೆ ಅಧ್ಯಕ್ಷ ಹಾಗೂ ಅಧಿಕಾರಿಗಳ ಖಡಕ್ ಎಚ್ಚರಿಕೆಗೆ ವ್ಯಾಪಾರಸ್ಥರು ಕಂಗಲಾಗಿದ್ದಾರೆ. ಈ ಬಗ್ಗೆ ನಗರಸಭೆ ಅಧ್ಯಕ್ಷ ಸುರೇಶ್ ಅಂಬೀಗರ ಮಾತನಾಡಿ, ನಾನು ಅಧಿಕಾರ ಸ್ವೀಕಾರ ಮಾಡಿದ ನಂತರ ಯಾದಗಿರಿ ನಗರವನ್ನು ಪ್ಲಾಸ್ಟಿಕ್ ಮುಕ್ತ ಮಾಡುವ ಸಂಕಲ್ಪ ತೊಟ್ಟಿದ್ದೆನೆ‌. ಪ್ಲಾಸ್ಟಿಕ್ ಬಳಕೆಯಿಂದ ಅನಾರೋಗ್ಯಕ್ಕೆ ಹಾಗೂ ಪರಿಸರದ ಮೇಲೆ ಪರಿಣಾಮ ಬಿರಲಿದೆ.ಯಾರು ನಿಷೇಧಿತ ಪ್ಲಾಸ್ಟಿಕ್ ಬಳಕೆ ಮಾಡಬಾರದು ಸಾರ್ವಜನಿಕರು ಕೂಡ ಪರಿಸರದ ಪೂರಕವಾದ ಬ್ಯಾಗ್ ಬಳಕೆ ಮಾಡಬೇಕೆಂದರು.

Follow Us:
Download App:
  • android
  • ios