ಬೀದರ್‌: ಮೊರಾರ್ಜಿ ಶಾಲೆ ಪ್ರಾಂಶುಪಾಲರಿಂದ ಅಸಭ್ಯ ವರ್ತನೆ: ವಿದ್ಯಾ​ರ್ಥಿ​ನಿ​ಯರ ದೂರು

15 ದಿನಗಳ ಹಿಂದೆಯೇ ವಿದ್ಯಾರ್ಥಿನಿಯರಿಂದ ಮೌಖಿಕ ದೂರು, ಸಮಾಜ ಕಲ್ಯಾಣ ಅಧಿಕಾರಿ ನೇತೃತ್ವದಲ್ಲಿ ತನಿಖಾ ಸಮಿತಿ ರಚನೆ, ಪ್ರಾಂಶುಪಾಲನ ವಿರುದ್ಧ ಸಿಡಿದೆದ್ದಿರುವ 20 ವಿದ್ಯಾರ್ಥಿನಿಯರು, ಪ್ರಕರಣ ಮುಚ್ಚಿ ಹಾಕುವ ಕುತಂತ್ರದ ಅನುಮಾನ, ಕ್ರಮಕ್ಕೆ ಆಗ್ರ​ಹ. 

Students Complaint against Morarji School Principal for Misbehave in Bidar

ಬೀದರ್‌(ಜು.21): ಜಿಲ್ಲೆಯ ಸರ್ಕಾರಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯೊಂದರ ಬಾಲಕಿಯರಿಗೆ ಅಲ್ಲಿನ ಪ್ರಾಂಶುಪಾಲರು ಅಸಭ್ಯ ವರ್ತನೆ ತೋರಿದ್ದಾರೆ ಎಂಬ ಆರೋಪದ ಮೇಲೆ ಶಾಲೆಗೆ ಮಕ್ಕಳ ಕಲ್ಯಾಣ ಆಯೋಗ, ಸಾಮಾಜ ಕಲ್ಯಾಣ ಇಲಾ​ಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ ಘಟನೆ ನಡೆದಿದೆ.

ಪ್ರಾಂಶುಪಾಲರು ವಿದ್ಯಾ​ರ್ಥಿ​ನಿ​ಯ​ರೊಂದಿ​ಗೆ ಅಸಭ್ಯವಾಗಿ ವರ್ತಿಸಿ, ಮೈ ಮುಟ್ಟುವದು, ಮುತ್ತು ಕೊಡುವದು, ಫೋಟೋ ತೆಗೆಸಿಕೊಳ್ಳುವದು ಸೇರಿದಂತೆ ಮತ್ತಿತರ ಅಸಭ್ಯ ವರ್ತನೆ ತೋರಿದ್ದಾರೆ. ಹಲವು ವಿದ್ಯಾರ್ಥಿನಿಯರು ಇವರ ಕೆಟ್ಟದೃಷ್ಟಿಯಿಂದ ಬಳಲಿದ್ದಾರೆ. ಇವರ ವಿರುದ್ಧ ಶಿಸ್ತು ಕ್ರಮವಾಗಲಿ ಎಂದು ವಿದ್ಯಾರ್ಥಿಗಳು ಜು. 17ರಂದೇ ಜಿಲ್ಲಾ ಹಿಂದುಳಿದ ವರ್ಗಗಳ ಅಧಿಕಾರಿಗಳಿಗೆ ಪತ್ರ ಬರೆದು ದೂರು ನೀಡಿದ್ದಾರೆ.

ಹೆತ್ತ ತಂದೆ- ತಾಯಿಗೆ ಚಟ್ಟ ಕಟ್ಟಿದ ಸೈಕೋ ಮಗ: ಅಪ್ಪ-ಅಮ್ಮ, ಮಕ್ಕಳು..ಇಲ್ಲಿ ಸಂಬಂಧಗಳಿಗಿಲ್ವಾ ಬೆಲೆ..?

ಗುರುವಾರ ಅಧಿಕಾರಿಗಳು ಸ್ಥಳಕ್ಕೆ ತೆರಳಿ ವಿಚಾರಣೆ ನಡೆಸಿದ್ದಾರಾದರೂ ಇದಕ್ಕೂ 10 ದಿನಗಳ ಮೊದಲು ವಸತಿ ಶಾಲೆಯ ಸ್ಟಾಫನರ್ಸ, ಎಫ್‌ಡಿಸಿ ಹಾಗೂ ಶಿಕ್ಷಕರಿಗೆ ತಿಳಿಸಿದ್ದು, ಬಾಲಕಿಯರಿಗೆ ಕಿರುಕುಳ ನೀಡುತ್ತಿದ್ದ ಪ್ರಾಂಶುಪಾಲನ ವಿರುದ್ಧ 10 ದಿನಗಳಾದರೂ ಶಿಸ್ತು ಕ್ರಮವಹಿಸುವ ಜವಾಬ್ದಾರಿಯನ್ನ ಜಿಲ್ಲೆಯ ಹಿರಿಯ ಅಧಿಕಾರಿಗಳು ತೋರಿ​ಲ್ಲ ಎಂದು ವಿದ್ಯಾ​ರ್ಥಿ​ನಿ​ಯರು ಆಕ್ರೋಶ ವ್ಯಕ್ತ​ಪ​ಡಿ​ಸಿ​ದ್ದಾರೆ.

ವಿದ್ಯಾರ್ಥಿನಿಯರು ತಮ್ಮ ಪಾಲಕ ಪೋಷಕರನ್ನು ಬಿಟ್ಟು ಬಂದು ವಸತಿ ನಿಲಯದಲ್ಲಿ ತಮ್ಮ ಶಿಕ್ಷಣ ಮುಂದುವರಿಸಿದ ಸಂದರ್ಭ ಇಂಥ ಕಾಮುಕ ಪ್ರಾಂಶುಪಾಲರು ಇಡೀ ವ್ಯವಸ್ಥೆಯನ್ನೇ ಹದೆಗೆಡಿಸುವ ವಾತಾವರಣ ನಿರ್ಮಿಸಿದ್ದಾ​ರೆ. ಇವರ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ವಸತಿ ನಿಲಯಗಳ ಮೇಲಾಧಿಕಾರಿಗಳು ಮುಗುಂ ಆಗಿ​ದ್ದಾರೆ. ಈ ವಿಷಯ ಹೊರಬರದಂತೆ ನೋಡಿಕೊಂಡಿದ್ದು ಪ್ರಕರಣ ಮುಚ್ಚಿ ಹಾಕುವ ಅನುಮಾನ ಮೂಡಿಸುತ್ತದೆ. ಆರೋಪಿ ಪ್ರಾಂಶುಪಾಲರಷ್ಟೇ ಸಂಬಂಧಿತ ಹಿರಿಯ ಅಧಿಕಾರಿಗಳೆಲ್ಲರೂ ತಪ್ಪಿತಸ್ಥರು. ಇವರ ವಿರುದ್ಧವೂ ಶಿಸ್ತು ಕ್ರಮವಾಗಬೇಕು ಎಂದು ವಿದ್ಯಾ​ರ್ಥಿ​ನಿ​ಯರು ಒತ್ತಾ​ಯಿ​ಸಿ​ದ್ದಾರೆ.

ಕರಾವಳಿಯ ಶಿಕ್ಷಣ ಕ್ಯಾಂಪಸ್‌ಗಳ ಸುತ್ತಮುತ್ತ ಮಾದಕದ್ರವ್ಯ ಘಾಟು..!

ವಿದ್ಯಾರ್ಥಿನಿಯರು ಮೌಖಿಕವಾಗಿ ದೂರು ಹೇಳುತ್ತಿದ್ದಂತೆ ಇರಲಿ ಅನಿವಾರ್ಯವಾಗಿ ಪತ್ರದ ಮುಖೇನ ದೂರು ನೀಡಿದ ಮೇಲಾದರೂ ಎಚ್ಚೆತ್ತುಕೊಂಡು ಪ್ರಾಂಶುಪಾಲರ ವಿರುದ್ಧ ಪ್ರಕ​ರ​ಣ ದಾಖಲಾಗಬೇಕಿತ್ತು. ಇದು ಆಗದಿರುವದು ಅಪ್ರಾಪ್ತರ ದೌರ್ಜನ್ಯಕ್ಕೆ ಕುಮ್ಮಕ್ಕು ನೀಡಿದಂತೆ ಎಂಬುದು ಪೋಷ​ಕರ ಅಭಿ​ಪ್ರಾ​ಯ​ವಾ​ಗಿದೆ.

ಸಮಾಜಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿಯ ನೇತೃತ್ವದಲ್ಲಿ 5 ಜನ ಮಹಿಳಾ ಅಧಿಕಾರಿಗಳ ತಂಡವನ್ನು ನಿಯೋಜಿಸಿ ಶಾಲೆಯ ವಿದ್ಯಾರ್ಥಿಗಳಿಂದ ಗುರುವಾರ ಮಾಹಿತಿ ಪಡೆಯಲಾಗಿದ್ದು ಸದರಿ ತಂಡದ ವರದಿ ಬರುತ್ತಲೇ ನಿಯಮಾನುಸಾರ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಬೀದರ್‌ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ತಿಳಿಸಿದ್ದಾರೆ.  

Latest Videos
Follow Us:
Download App:
  • android
  • ios