Asianet Suvarna News Asianet Suvarna News

ಶಿಕ್ಷಕನ ಆಕ್ರೋಶದ ಹೊಡೆತಕ್ಕೆ ವಿದ್ಯಾರ್ಥಿಗೆ ಶ್ರವಣ ದೋಷ, ಕಂಗಾಲದ ಕುಟುಂಬ!

ಶಿಕ್ಷಕ ತನ್ನ ಆಕ್ರೋಶವನ್ನು ವಿದ್ಯಾರ್ಥಿ ಮೇಲೆ ತೋರಿಸಿದ್ದಾನೆ. ತನ್ನೆಲ್ಲಾ ಶಕ್ತಿ ಬಳಸಿ ಕಪಾಳಕ್ಕೆ ಭಾರಿಸಿದ್ದಾನೆ. ಪರಿಣಾಮ 10ನೇ ತರಗತಿ ವಿದ್ಯಾರ್ಥಿ ಭಾಗಶಃ ಕಿವುಡನಾಗಿದ್ದಾನೆ. ಇತ್ತ ಕುಟುಂಬ ಕಂಗಾಲಾಗಿದೆ.

Student partially loss of hearing after teacher slaps multiple times in Uttar Pradesh ckm
Author
First Published May 19, 2024, 9:09 PM IST

ಲಖನೌ(ಮೇ.19) ತರಗತಿಯಲ್ಲಿ ಸಹಪಾಠಿಯ ಜೊತೆ ಮಾತನಾಡಿದ ಅನ್ನೋ ಕಾರಣಕ್ಕೆ ಶಿಕ್ಷಕ ಕೋಪ ನೆತ್ತಿಗೇರಿದೆ. ನೇರವಾಗಿ ವಿದ್ಯಾರ್ಥಿ ಬಳಿ ಬಂದು ಆತನ ಎಬ್ಬಿಸಿ ಕಪಾಳಕ್ಕೆ ಭಾರಿಸಿದ್ದಾನೆ. ಶಿಕ್ಷಕ ತನ್ನ ಎಲ್ಲಾ ಶಕ್ತಿ ಪ್ರಯೋಗಿಸಿ ಹೊಡೆದ ಪರಿಣಾಮ ಇದೀಗ ಬಾಲಕನ ಕಿವಿ ಕೇಳಿಸುತ್ತಿಲ್ಲ. ಬಾಲಕನಿಗೆ ಭಾಗಶಃ ಶ್ರವಣ ದೋಷ ಕಾಣಿಸಿಕೊಂಡಿದೆ. ಉತ್ತರ ಪ್ರದೇಶದ ಉಭೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೋಷಕರು ಶಿಕ್ಷಕನ ವಿರುದ್ದ ದೂರು ದಾಖಲಿಸಿದ್ದಾರೆ.

ಬಾಲಕ ವಿಧ್ಯಾಭ್ಯಾಸದಲ್ಲಿ ಸರಾಸರಿ ಅಂಕ ಪಡೆಯುತ್ತಿದ್ದ. ತರಗತಿಯಲ್ಲಿ ಶಿಕ್ಷಕ ಪಾಠ ಮಾಡುತ್ತಿರುವ ವೇಳೆ ಸಹಪಾಠಿ ಜೊತೆ ಮಾತನಾಡಿದ್ದಾನೆ ಅನ್ನೋ ಕಾರಣಕ್ಕೆ ಹೊಡದಿದ್ದಾರೆ ಎಂದು ವಿದ್ಯಾರ್ಥಿ ತಂದೆ ಪ್ರವೀಣ್ ಕುಮಾರ್ ಮಧುಕರ್ ಆರೋಪಿಸಿದ್ದಾರೆ. ಈ ಕುರಿತು ಉಭೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಒಂದೆಡೆರು ಬಾರಿಯಲ್ಲಿ ಹಲವು ಬಾರಿ ಮಗನ ಕೆನ್ನೆಗೆ ಭಾರಿಸಿದ್ದಾರೆ. ರಭಸದಿಂದ ಹೊಡೆದ ಪರಿಣಾಮ ಶ್ರವಣ ದೋಷವಾಗಿದೆ ಎಂದು ತಂದೆ ಅಳಲು ತೋಡಿಕೊಂಡಿದ್ದಾರೆ.

ತಡವಾಗಿ ಬಂದರೆಂದು ಶಿಕ್ಷಕಿಗೆ ಹೊಡೆದ ಪ್ರಾಂಶುಪಾಲೆ; ವಿಡಿಯೋ ವೈರಲ್

ಶಿಕ್ಷಕನ ಹೊಡೆತದಿಂದ ಬಾಲಕ ಬಲ ಕಿವಿ ಸಂಪೂರ್ಣ ಕೇಳಿಸದಂತಾಗಿದೆ. ಇನ್ನು ಎಡ ಕಿವಿಯ ನರಗಳಿಗೂ ಗಾಯವಾಗಿದೆ.ಹೀಗಾಗಿ ಭಾಗಶಃ ಕಿವಿ ಕೇಳಿಸದಂತಾಗಿದೆ. ಸದ್ಯ ಬಾಲಕನಿಗೆ ಚಿಕಿತ್ಸೆ ಮುಂದುವರಿದಿದೆ. ಆದರೆ ಶ್ರವಣ ದೋಷ ಸರಿಪಡಿಸಲು ಅಸಾಧ್ಯ ಎಂದು ವೈದ್ಯರು ಹೇಳಿದ್ದಾರೆ.ವಿದ್ಯಾರ್ಥಿಯ ತಂದೆ ದೂರಿನ ಅನ್ವಯ ಪೊಲೀಸರು ಸೆಕ್ಷನ್ 323 ಹಾಗೂ 325ರ ಅಡಿ ದೂರು ದಾಖಲಿಸಿದ್ದಾರೆ.

ಮೇ.13ರಂದು ಪ್ರಿಪ್ರೌಲಿ ಬರ್ಗೌನ್‌ನಲ್ಲಿರುವ ಈ ಶಾಲೆಯಲ್ಲಿ ಈ ಘಟನೆ ನಡೆದಿದೆ. ಗಣಿತ ಶಿಕ್ಷಕ ರಾಘವೇಂದ್ರ ವಿದ್ಯಾರ್ಥಿಯ ಕಪಾಳಕ್ಕೆ ಹಲವು ಬಾರಿ ಹೊಡೆದಿದ್ದಾರೆ. ಘಟನೆ ಬಳಿಕ ವಿದ್ಯಾರ್ತಿ ತೀವ್ರ ತಲೆನೋವಿನಿಂದ ಬಳಲಿದ್ದಾನೆ. ಆದರೂ ದಿನವಿಡೀ ಅದೇ ನೋವಿನಲ್ಲಿ ತರಗತಿಯಲ್ಲಿ ಕುಳಿತು ಇತರ ಶಿಕ್ಷಕರ ಪಾಠ ಕೇಳಿದ್ದಾನೆ. ಸಂಜೆ ಹೊತ್ತಿಗೆ ವಿದ್ಯಾರ್ಥಿ ಕಿವಿ ಭಾಗದಲ್ಲಿ ಊತ ಕಾಣಿಸಿಕೊಂಡಿದೆ. 

ಪಾಠ ಮಾಡುವ ಬದಲು ಶಾಲೆಯಲ್ಲೇ ಫೇಶಿಯಲ್ ಮಾಡಿಸಿಕೊಂಡ ಮುಖ್ಯ ಶಿಕ್ಷಕಿ: ವೀಡಿಯೋ ಮಾಡಿದ ಸಹ ಶಿಕ್ಷಕಿ ಮೇಲೆ ಹಲ್ಲೆ

ಮನೆಗೆ ಮರಳಿದ ವಿದ್ಯಾರ್ಥಿ ಸ್ಥಿತಿ ನೋಡಿ ಪೋಷಕರು ಆತಂಕಗೊಂಡಿದ್ದಾರೆ. ಅಷ್ಟರಲ್ಲೇ ಬಾಲಕನಿಗೆ ಶ್ರವಣ ದೋಷಗಳು ಕಾಣಿಸಿಕೊಂಡಿದೆ. ಆಸ್ಪತ್ರೆ ದಾಖಲಿಸಿದಾಗ ಶ್ರವಣ ದೋಷವಾಗಿರುವುದು ಬಹಿರಂಗವಾಗಿದೆ. ಬಾಲಕನಿಗೆ ಹೆಚ್ಚಿನ ಚಿಕಿತ್ಸೆ ನೀಡಲು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ವರ್ಗಾಯಿಸಲಾಗಿದೆ. ಇತ್ತ ಬಾಲಕನ ತಂದೆ ಕಾನೂನು ನ್ಯಾಯಕ್ಕಾಗಿ ಹೋರಾಟ ಆರಂಭಿಸಿದ್ದಾರೆ. ವಿದ್ಯಾರ್ಥಿಗಳಿಗೆ ಎಚ್ಚರಿಸುವುದು, ಹೊಡೆಯುವುದು ತಪ್ಪಲ್ಲ, ಆದರೆ ಈ ರೀತಿಯ ವರ್ತನೆ ಸರಿಯಲ್ಲ, ಮಕ್ಕಳ ಭವಿಷ್ಯವನ್ನೇ ಹಾಳುಮಾಡಿದ್ದಾರೆ ಎಂದು ಬಾಲಕನ ತಂದೆ ಆಕ್ರೋಶ ಹೊರಹಾಕಿದ್ದಾರೆ. 

Latest Videos
Follow Us:
Download App:
  • android
  • ios