ಕಲಬುರಗಿಯಲ್ಲಿ ಹುಡುಗಿಯ ವಿಚಾರಕ್ಕೆ ಅಪ್ರಾಪ್ತ ವಿದ್ಯಾರ್ಥಿಗಳ ನಡುವೆ ಗ್ಯಾಂಗ್ ವಾರ್ ನಡೆದು, ಪರಸ್ಪರ ಕಲ್ಲು ತೂರಾಟ ಮತ್ತು ಹೊಡೆದಾಟ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಕಲಬುರಗಿ (ಡಿ.12): ಹುಡುಗಿಯ ವಿಚಾರಕ್ಕೆ ಅಪ್ರಾಪ್ತ ವಿದ್ಯಾರ್ಥಿಗಳ ನಡುವೆ ಗ್ಯಾಂಗ್ ವಾರ್ ನಡೆದು ಪರಸ್ಪರ ಕಲ್ಲು ತೂರಾಟ, ಹೊಡೆದಾಟ ಮಾಡಿಕೊಂಡ ಘಟನೆ ಕಲಬುರಗಿ ನಗರದ ಸಂಗಮೇಶ್ವರ ಕಾಲೋನಿಯಲ್ಲಿ ನಡೆದಿದೆ.

ಹುಡುಗಿಯೊಬ್ಬಳಿಗೆ ಒಂದು ಗುಂಪಿನವರು ಮೆಸೇಜ್ ಕಳಿಸಿದ್ದಾರೆ ಎನ್ನಲಾಗಿದೆ. ಈ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಗಲಾಟೆಯಾಗಿ ಕುಡಿದ ನಶೆಯಲ್ಲಿ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಬಳಿಕ ಎರಡು ಗುಂಪುಗಳ ಕಡೆಯಿಂದ ಕಲ್ಲು ತೂರಾಟ ನಡೆದಿದೆ. ಗಲಾಟೆಯಲ್ಲಿ ಹಲವರು ಗಾಯಗೊಂಡಿದ್ದಾರೆ. ಘಟನೆಯ ವಿಡಿಯೋ ಮೊಬೈಲ್ ದೃಶ್ಯದಲ್ಲಿ ಸೆರೆಯಾಗಿದ್ದು, ಅಪ್ರಾಪ್ತ ವಿದ್ಯಾರ್ಥಿಗಳು ಕುಡಿದ ನಿಶೆಯಲ್ಲಿ ಬಡಿದಾಡಿಕೊಳ್ಳುತ್ತಿರುವುದು ಕಲಬುರಗಿ ನಗರದಲ್ಲಿ ಇಂಥ ಬೆಳವಣಿಗೆ ಕಂಡು ನಾಗರಿಕರು ಬೆಚ್ಚಿಬಿದ್ದಿದ್ದಾರೆ.

ಸದ್ಯ ಘಟನೆ ಸಂಬಂಧ ಆರ್‌ಜಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಗಲಾಟೆಯಲ್ಲಿ ಭಾಗಿಯಾದ ಹಲವು ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಕಲಬುರಗಿ ಜೈಲಿನಲ್ಲಿ ಖೈದಿಗಳ ಬಿಂದಾಸ್ ಲೈಫ್: ಇದು ಅಧೀಕ್ಷಕಿ ವಿರುದ್ಧದ ಷಡ್ಯಂತ್ರವೇ?

ಕಲಬುರಗಿ ನಗರ ಪೊಲೀಸ್ ಕಮಿಷನರ್ ಡಾ. ಶರಣಪ್ಪ ಎಸ್‌.ಡಿ ಪ್ರತಿಕ್ರಿಯೆ ನೀಡಿದ್ದು, ಅಬ್ರಹ್ಮಪೂರ ಬಡಾವಣೆಯ ಸಂಗಮೇಶ್ವರ ಕಾಲೋನಿಯಲ್ಲಿ ಎರಡು ಗುಂಪುಗಳ ನಡುವೆ ಗಲಾಟೆಯಾಗಿದೆ. ಕಲ್ಲು ತೂರಾಟ, ಹಲ್ಲೆ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಆದ್ರೆ ಇದುವರೆಗೆ ಯಾರೂ ದೂರು ಕೊಟ್ಟಿಲ್ಲ. ವಿಡಿಯೋ ಆಧರಿಸಿ ನಾವೇ ಸ್ವಯಂ ಪ್ರೇರಣೆಯಿಂದ ದೂರು ದಾಖಲಿಸಿಕೊಂಡಿದ್ದೇವೆ. ಈ ಗಲಾಟೆಯಲ್ಲಿ ಭಾಗಿಯಾದವರಲ್ಲಿ ಹೆಚ್ಚಿನವರು ಬಾಲಾಪರಾಧಿಗಳಾಗಿದ್ದಾರೆ. ಎಲ್ಲರೂ ಶಾಲಾ ವಿದ್ಯಾರ್ಥಿಗಳಾಗಿದ್ದಾರೆ. ಕುಡಿದ ನಸೆಯಲ್ಲಿ ಈ ರೀತಿ ಗಲಾಟೆ ಮಾಡಿಕೊಂಡಿರುವ ಸಾಧ್ಯತೆ ಇದೆ. ಕಾನೂನು ಪ್ರಕಾರ ಗಲಾಟೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

ಕಾಂಗ್ರೆಸ್ ಮುಖಂಡರೇ ನೆನಪಿಡಿ, ನಾಳೆ ನಿಮ್ಮ ಮನೇಲೂ ಬಲತ್ಕಾರ ನಡೆದ್ರೂ ಪಕ್ಷ ನಿಮ್ಮ ಸಹಾಯಕ್ಕೆ ಬರೋಲ್ಲ: ಆಂದೋಲಾ ಶ್ರೀ ಎಚ್ಚರಿಕೆ

ಕಲಬುರಗಿ ನಗರದಲ್ಲಿ ಅತ್ಯಾಚಾರ, ಕೊಲೆ, ಹಲ್ಲೆ, ಕಳ್ಳತನ ಪ್ರಕರಣಗಳು ದಿನೇದಿನೆ ಹೆಚ್ಚುತ್ತಿವೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ, ನಗರದಲ್ಲಿ ರೌಡಿಗಳು ಉಪಟಳ ಹೆಚ್ಚಾಗಿದ್ದು. ಪೊಲೀಸರ ಭಯ ಇಲ್ಲದಂತಾಗಿದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ

ಸಂಗೊಳ್ಳಿ ರಾಯಣ್ಣನ ಪ್ರತಿಮೆ ವಿರೂಪ: ಹೆದ್ದಾರಿ ತಡೆದು ಪ್ರತಿಭಟನೆ

ಆಳಂದ: ಪಾನಮತ್ತನಾಗಿದ್ದ ವ್ಯಕ್ತಿಯೋರ್ವ ಅಮಲಿನಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಪ್ರತಿಮೆಗೆ ವಿರೂಪಗೊಳಿಸಿದ ಘಟನೆ ಪಟ್ಟಣದಲ್ಲಿ ಬುಧವಾರ ಬೆಳೆಗಿನ ಜಾವ ನಡೆದಿದೆ. ಪಟ್ಟಣದ ಹಳೆಯ ಚೆಕ್‍ಪೋಸ್ಟ್ ಕ್ರಾಸ್‍ನಲ್ಲಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಪ್ರತಿಮೆಗೆ ಬೆಳಗಿನ 8:30ಗಂಟೆಯ ಸುಮಾರಿಗೆ ಕುಡಿದ ಅಮಲಿನಲ್ಲಿ ಬೆಳಮಗಿ ಗ್ರಾಮದವರನ್ನೆಲಾದ ವ್ಯಕ್ತಿಯೋರ್ವ ಪ್ರತಿಮೆಗೆ ಭಗ್ನಗೊಳಿಸಿದ್ದಾನೆ. ಕುಡುಕನ ಈ ಕೃತ್ಯವನ್ನು ಗಮನಿಸಿದ ಸ್ಥಳೀಯರು ಕೂಡಲೇ ಉದ್ರಿಕ್ತರಾಗಿ ಆಕ್ರೋಶ ಹೊರಹಾಕಿದರು. ಸ್ಥಳಕ್ಕೆ ದಾವಿಸಿದ ಕರ್ನಾಟಕ ಪ್ರದೇಶ ಕುರುಬರ ಸಂಘದ ಪ್ರಮುಖರು ಕೆಲಕಾಲ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.

ವರದಕ್ಷಿಣೆ ಕೇಸ್‌ಲ್ಲಿ 26 ವರ್ಷ ಜೈಲಿನಲ್ಲಿದ್ದ 93 ವರ್ಷದ ಅಜ್ಜಿ, ಬಿಡುಗಡೆಯಾದ ಒಂದೇ ವಾರಕ್ಕೆ ಸಾವು

ಸ್ಥಳಕ್ಕೆ ಆಗಮಿಸಿದ್ದ ಡಿವೈಎಸ್‍ಪಿ ಗೋಪಿ ಬಿ.ಆರ್. ಸಿಪಿಐ ಪ್ರಕಾಶ ಯಾತ್ನೂರ ಮತ್ತವರ ಪೊಲೀಸ್‍ರು ಪ್ರತಿಮೆ ವಿರೋಪಗೊಳಿಸಿದ ಎನ್ನಲಾದ ಆರೋಪಿಯನ್ನು ವಶಕ್ಕೆ ಪಡೆದಿದ್ದು, ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದ್ದರು. ಇದರಿಂದಾಗಿ ಹೊಸ ಪ್ರತಿಮೆಯ ಬೇಡಿಕೆಯನ್ನಿಟ್ಟಿರುವ ಸಮಾಜ ಬಾಂಧವರು ಪ್ರತಿಭಟನೆ ಹಿಂದಕ್ಕೆ ಪಡೆದ ಮೇಲೆ ಪರಿಸ್ಥಿತಿ ಶಾಂತಗೊಂಡಿತು. ಕರ್ನಾಟಕ ಪ್ರದೇಶ ಕುರುಬರ ಸಂಘ ತಾಲೂಕು ಅಧ್ಯಕ್ಷ ಸಿದ್ಧು ಪೂಜಾರಿ, ನಾಗರಾಜ ಘೋಡಕೆ, ಯುವ ಘಟಕದ ಅಧ್ಯಕ್ಷ ಬೀರಣ್ಣಾ ಪೂಜಾರಿ, ಸಂಗೋಳ್ಳಿ ರಾಯಣ್ಣ ಯುವ ಸಂಘದ ಅಧ್ಯಕ್ಷ ಬಾಲಾಜಿ ಘೋಡಕೆ, ಕಲ್ಯಾಣಿ ದೇವಂತಗಿ, ಮಲ್ಲಿಕಾರ್ಜುನ ತೊಗರೆ, ಮಾಂತು ಚಿತಲಿ ಮೊದಲಾದವರು ಪಾಲ್ಗೊಂಡು, ಪ್ರತಿಮೆ ಭಗ್ನಗೊಳಿಸಿದ ಆರೋಪಿಯನ್ನು ಕ್ರಮ ಜರುಗಿಸಬೇಕು ಹೊಸ ಪ್ರತಿಮೆಯನ್ನು ಪ್ರತಿಷ್ಠಾಪಿಸಬೇಕು ಎಂದು ಆಗ್ರಹಿಸಿದರು.

ಈ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಬಳಿಕ ಕುರುಬರ ಸಂಘವು ದೂರು ನೀಡಿದ್ದು, ದೂರು ಸ್ವೀಕರಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಅನುಸರಿಸಿದ್ದಾರೆ.