ನೋಡಲು ಮಗುವಿನಂತೆ ಕಾಣವು 21ರ ಹರೆಯದ ಸೋಶಿಯಲ್ ಮೀಡಿಯಾ ಸ್ಟಾರ್ ಹಸಾಬುಲ್ಲಾ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ರಸ್ತೆಯಲ್ಲಿ ಸ್ಟಂಟ್ ಪ್ರದರ್ಶಿಸಲು ಹೋಗಿ ಇದೀಗ ಕಂಬಿ ಎಣಿಸುವಂತಾಗಿದೆ. 

ಮಾಸ್ಕೋ(ಮೇ.09): ಹಸಾಬುಲ್ಲಾ ವಿಶ್ವದಲ್ಲೇ ಅತ್ಯಂತ ಜನಪ್ರಿಯ ಸೆಲೆಬ್ರೆಟಿಯಾಗಿ ಹೊರಹೊಮ್ಮಿದ್ದಾನೆ. ಹಾರ್ಮೋನ್ ಸಮಸ್ಯೆಯಿಂದ ಈತ ಈಗಲೂ ಮಗುವಿನಂತೆ ಕಾಣಿಸುತ್ತಾನೆ.ಆದರೆ ವಯಸ್ಸು 21. ರಷ್ಯಾ ಮೂಲದ ಹಸಾಬುಲ್ಲಾ ಸೋಶಿಯಲ್ ಮಿಡಿಯಾ ಮೂಲಕ ಅತ್ಯಂತ ಜನಪ್ರಿಯ. ಕೋಟ್ಯಾಂತರ ಫಾಲೋವರ್ಸ್ ಹೊಂದಿರುವ ಹಸಾಬುಲ್ಲಾ ಇದೀಗ ಟ್ರಾಫಿಕ್ ನಿಯಮ ಉಲ್ಲಂಘಿಸಿ ಅರೆಸ್ಟ್ ಆಗಿದ್ದಾನೆ. ರಸ್ತೆಯಲ್ಲಿ ಸ್ಟಂಟ್ ಪ್ರದರ್ಶಿಸಿದ ಹಸಾಬುಲ್ಲಾ ಹಾಗೂ ಆತನ ಸ್ನೇಹಿತರನ್ನು ಪೊಲೀಸರು ಬಂಧಿಸಿದ್ದಾರೆ.

ಹಸಾಬುಲ್ಲಾ ಹಾಗೂ ಆತನ ಗೆಳೆಯರು ಕಾರಿನ ಮೂಲಕ ಪ್ರಯಾಣ ಮಾಡಿದ್ದಾರೆ. ಆದರೆ ಪ್ರಯಾಣದ ನಡುವೆ ಟ್ರಾಫಿಕ್ ನಿಯಮ ಉಲ್ಲಂಘಿಸಲಾಗಿದೆ. ಇತರ ಚಾಲಕರಿಗೆ ಸಮಸ್ಯೆ ಸೃಷ್ಟಿಸಿದ್ದಾರೆ. ಹಸಾಬುಲ್ಲಾ ಗೆಳೆಯರು ದಾರಿ ನಡುವೆ ಸ್ಟಂಟ್ ಪ್ರದರ್ಶಿಸಿದ್ದಾರೆ. ಇತ್ತ ಹಸಾಬುಲ್ಲಾ ಇತರ ಚಾಲಕರೊಂದಿಗೆ ವಾಗ್ವಾದ ನಡೆಸಿದ್ದಾರೆ. ಇದರಿಂದ ಕೆಲ ಹೊತ್ತು ಟ್ರಾಫಿಕ್ ಜಾಮ್ ಸೃಷ್ಟಿಯಾಗಿತ್ತು. ಇಷ್ಟೇ ಅಲ್ಲ ಹಲವು ವಾಹನ ಸವಾರರು ಪರಾದಾಡಿದ್ದರು.

ಚಿನ್ನ ಕಳ್ಳತನ ಮಾಡುತ್ತಿದ್ದ ಸೋಷಿಯಲ್ ಮೀಡಿಯಾ ಸ್ಟಾರ್ ಬೆಂಗಳೂರಿನಲ್ಲಿ ಬಂಧನ!

ಆಕ್ರೋಶಗೊಂಡ ವಾಹನ ಸವಾರರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಹಸಾಬುಲ್ಲಾ ಹಾಗೂ ಆತನ ಗೆಳೆಯರನ್ನು ಬಂಧಿಸಿದ್ದಾರೆ. ಪೊಲೀಸ್ ಠಾಣೆಯಲ್ಲಿ ಹಸಾಬುಲ್ಲಾ ಹಾಗೂ ಆತನ ಗೆಳೆಯರು ತಪ್ಪೊಪ್ಪಿಗೆ ಬರೆದಿದ್ದಾರೆ. ಇಷ್ಟೇ ಅಲ್ಲ ದುಬಾರಿ ಮೊತ್ತ ದಂಡದ ರೂಪದಲ್ಲಿ ಪಾವತಿಸಿದ್ದಾರೆ. ಗೆಳೆಯನ ಮದುವೆ ಸಂಭ್ರಮದಲ್ಲಿ ತಪ್ಪು ನಡೆದಿದೆ ಎಂದು ಹಸಾಬುಲ್ಲಾ ಪೊಲೀಸರ ಮುಂದೆ ಹೇಳಿದ್ದಾನೆ.

ಹಸಾಬುಲ್ಲಾ ಗೆಳೆಯನ ಮದುವೆ ಖುಷಿಯಲ್ಲಿ ಅತೀಯಾಗಿ ಸಂಭ್ರಮಿಸಿದ್ದಾರೆ. ರಸ್ತೆಯನ್ನೇ ಬ್ಲಾಕ್ ಮಾಡಿ ಸಂಭ್ರಮಿಸಲಾಗಿದೆ. ಸ್ಟಂಟ್ ಪ್ರದರ್ಶಿಸಲಾಗಿದೆ. ಇತ್ತ ಇತರ ವಾಹನ ಚಾಲಕರಿಗೂ ಕಿರಿಕಿ ಮಾಡಿದ್ದಾನೆ. ಸೋಶಿಯಲ್ ಮೀಡಿಯಾ ಸ್ಟಾರ್ ರಷ್ಯಾದಲ್ಲಿ ಫುಲ್ ಟ್ರೋಲ್ ಆಗಿದ್ದಾನೆ. ಟ್ರಾಫಿಕ್ ನಿಯಮ ಉಲ್ಲಂಘನೆ ಇದೀಗ ಹಸಾಬುಲ್ಲಾ ಸಾಮಾಜಿಕ ಜಾಲಾತಾಣದ ಜನಪ್ರಿಯತೆಗೆ ಕಡಿವಾಣ ಹಾಕಿದೆ. ನೋಡಲು ಮಗುವಿನಂತಿದ್ದರೂ, ಪ್ರವೃತ್ತಿ ಹದ್ದು ಮೀರಿದ ಎಂದು ಹಲವರು ಕಮೆಂಟ್ ಮಾಡಿದ್ದಾರೆ.

Social Media ಸ್ಟಾರ್‌ಗಳಿಗೆ ಸರ್ಕಾರದ ಶಾಕ್: ರೆಡಿಯಾಗ್ತಿದೆ ಹೊಸ ಮಾರ್ಗಸೂಚಿ

ಹಸಾಬುಲ್ಲಾ ಹಾರ್ಮೋನ್ ಕೊರತೆಯಿಂದ ಬೆಳವಣಿಗೆಯಾಗಿಲ್ಲ. ಈತನ ದೇಹ, ಮುಖ ಮಗುವಿನ ರೀತಿ. ಹಲವರು ಈತನನನ್ನು ಅಪಹಾಸ್ಯ ಮಾಡಿದ್ದಾರೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಹಸಾಬುಲ್ಲಾ ಹೊಸ ಸಂಚಲನ ಸೃಷ್ಟಿಸಿದ್ದಾನೆ. ಈತನ ವಿಡಿಯೋಗಳು ಮಿಲಿಯನ್ ಲೈಕ್ಸ್ ಹಾಗೂ ಕಮೆಂಟ್ ಪಡೆದಿದೆ. ಅಲ್ಪ ಸಮಯದಲ್ಲಿ ಹಸಾಬುಲ್ಲಾ ಸೋಶಿಯಲ್ ಮೀಡಿಯಾ ಸ್ಟಾರ್ ಆಗಿ ಬದಲಾಗಿದ್ದಾನೆ. ಸೋಶಿಯಲ್ ಮೀಡಿಯಾ ಜನಪ್ರಿಯತೆಯಿಂದಲೇ ಆದಾಯವೂ ಡಬಲ್ ಆಗಿದೆ.