ಚಿನ್ನ ಕಳ್ಳತನ ಮಾಡುತ್ತಿದ್ದ ಸೋಷಿಯಲ್ ಮೀಡಿಯಾ ಸ್ಟಾರ್ ಬೆಂಗಳೂರಿನಲ್ಲಿ ಬಂಧನ!

ಸೋಷಿಯಲ್ ಮೀಡಿಯಾದಲ್ಲಿ ಹೀರೋನಂತೆ ಪೋಸ್ ಕೊಟ್ಟು ರೀಲ್ಸ್  ಮಾಡಿಕೊಂಡು ಶೋಕಿ ಮಾಡುತ್ತಿದ್ದ ಚಿನ್ನ ಕಳ್ಳನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಈತ ಮುಂಬೈ ಮೂಲದ ಸೋಶಿಯಲ್ ಮೀಡಿಯಾ ಸ್ಟಾರ್.

gold stolen mumbai based social media star arrested in bengaluru gow

ಬೆಂಗಳೂರು (ಏ.4): ಸೋಷಿಯಲ್ ಮೀಡಿಯಾದಲ್ಲಿ ಹೀರೋನಂತೆ ಪೋಸ್ ಕೊಟ್ಟು ರೀಲ್ಸ್  ಮಾಡಿಕೊಂಡು ಶೋಕಿ ಮಾಡುತ್ತಿದ್ದ ಚಿನ್ನ ಕಳ್ಳನನ್ನು ಪೊಲೀಸರು ಬಂಧಿಸಿದ್ದಾರೆ.  ಸೋಷಿಯಲ್ ಮೀಡಿಯಾ ಸ್ಟಾರ್ ಎಂದು ಬರೆದುಕೊಂಡಿದ್ದ ಈತ ಮಾಡುತ್ತಿದ್ದದು ಮಾತ್ರ ಗೋಲ್ಡ್ ಕಳ್ಳತನ‌. ಇದೀಗ ಈತನನ್ನು ಬಂಧಿಸಿರುವ ಅಮೃತಹಳ್ಳಿ ಪೊಲೀಸರು ಬಂಧಿತನಿಂದ  ಒಂದು ಕೆ.ಜಿಗೂ ಅಧಿಕ ಚಿನ್ನ ಜಪ್ತಿ ಮಾಡಿದ್ದಾರೆ. ಬಂಧಿತನನ್ನು ಸಲೀಂ  @ಸಾಹಿಲ್  ಎಂದು ಗುರುತಿಸಲಾಗಿದೆ. ಅಷ್ಟಕ್ಕೂ ಆ ಐಷಾರಾಮಿ ಕಳ್ಳ ಯಾರು ಗೊತ್ತಾ? ಈತ ಮುಂಬೈ ಮೂಲದ ಸೋಷಿಯಲ್ ಮೀಡಿಯಾ ಸ್ಟಾರ್. ಈತ ಒಂದು ವರ್ಷದ ಹಿಂದೆಯೂ ಜೈಲಿಗೆ ಹೋಗಿ ಹೊರಗಡೆ ಬಂದಿದ್ದ. ಈ ಹಿಂದೆ ಬಸವನಗುಡಿ ಪೊಲೀಸರಿಂದ ಈತ ಅರೆಸ್ಟ್ ಆಗಿದ್ದ. 3.5 ಕೆ.ಜಿಗೂ ಅಧಿಕ‌ ಚಿನ್ನದ ಜೊತೆ ಅಂದು ಸಿಕ್ಕಿ ಬಿದ್ದಿದ್ದ. ಜೈಲಿನಿಂದ‌ ಹೊರ ಬಂದು ಮತ್ತದೇ ಹಳೇ ಚಾಳಿ ಮುಂದುವರೆಸಿದ್ದಾನೆ. ಈಗ ಮತ್ತೆ ಪೊಲೀಸರಿಗೆ ಸಿಕ್ಕಿಬಿದ್ದಿರುವ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ.

ಬೆದರಿಸಿ ಗೂಗಲ್‌ ಪೇ ಮೂಲಕ ಹಣ ವರ್ಗಾವಣೆ, ಸ್ಕೂಟರ್‌ ಕಳವು
ಮಂಗಳೂರು :ಬೆಳ್ತಂಗಡಿ ತಾಲೂಕಿನ ಪಡಂಗಡಿಯಲ್ಲಿ ತಂಡವೊಂದು ವ್ಯಕ್ತಿಯನ್ನು ಕಟ್ಟಿಹಾಕಿ ಬೆದರಿಸಿ ಗೂಗಲ್‌ ಪೇ ಮೂಲಕ ಹಣ ವರ್ಗಾವಣೆ ಮಾಡಿ ಮನೆಯಂಗಳದಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನವನ್ನು ಕದ್ದು ಪರಾರಿಯಾದ ಘಟನೆ ನಡೆದಿದೆ.

ಮನೆಯ ಕೀ ಬಳಸಿ ಲಕ್ಷಾಂತರ ರೂ. ಚಿನ್ನಾಭರಣ ದೋಚಿದಾತ ಅರೆಸ್ಟ್!

ಪಡಂಗಡಿ ಗ್ರಾಮದ ಜಾನೆ ಬೈಲು ಎಂಬಲ್ಲಿನ ನಿವಾಸಿ ಜುವಾಮ್‌ ಗೋವಿಯಸ್‌ ಎಂಬವರ ಮನೆಯಲ್ಲಿಯೇ ಕಳ್ಳತನ ನಡೆದಿದೆ. ಇವರ ಮನೆಯಲ್ಲಿ ಈ ಹಿಂದೆ ಕೆಲಸ ಮಾಡುತ್ತಿದ್ದ ಪರಿಚಯದವರಾದ ರಿಯಾಜ್‌ ಮತ್ತು ಫೈಸಲ್‌ ಕಳ್ಳತನ ಮಾಡಿದ ಆರೋಪಿಗಳು ಎಂದು ಗೋವಿಯಸ್‌ ಅವರು ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ.

ಡಿಜೆ ಸದ್ದು ಕಡಿಮೆ ಮಾಡು ಎಂದ ಗರ್ಭಿಣಿ ಮೇಲೆ ಗುಂಡಿನ ದಾಳಿ: ಗರ್ಭಪಾತ

ಗೋವಿಯಸ್‌ ಅವರು ಮನೆಯ ಸಮೀಪದ ರಬ್ಬರ್‌ ಶೆಡ್‌ ಬಳಿ ನಿಂತು ಮೊಬೈಲ್‌ನಲ್ಲಿ ಮಾತನಾಡುತ್ತಿದ್ದ ವೇಳೆ ಅಲ್ಲಿಗೆ ಬಂದ ಆರೋಪಿಗಳು ಅವರ ಮೇಲೆ ಹಲ್ಲೆ ನಡೆಸಿದ್ದು ನೆಲಕ್ಕೆ ಬಿದ್ದ ಗೋವಿಯಸ್‌ ಅವರ ಕುತ್ತಿಗೆ ಬಿಗಿದು ಬೆದರಿಸಿ ಗೂಗಲ್‌ ಪಿನ್‌ ಕೇಳಿ ಅವರ ಮೊಬೈಲ್‌ ನಿಂದ ರೂ 82 ಸಾವಿರ ರು. ನಗದನ್ನು ವರ್ಗಾಯಿಸಿದ್ದಾರೆ. ಬಳಿಕ ಆ ಮೊಬೈಲ್‌ ಮತ್ತು ಅಂಗಳದಲ್ಲಿ ನಿಲ್ಲಿಸಿದ್ದ ಇಲೆಕ್ಟ್ರಿಕ್‌ ದ್ವಿಚಕ್ರ ವಾಹನವನ್ನು ಕಳವು ಗೈದು ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Latest Videos
Follow Us:
Download App:
  • android
  • ios