Asianet Suvarna News Asianet Suvarna News

Delhi Shraddha Murder Case: ಮಹಿಳಾ ಹಕ್ಕು ಹೋರಾಟದ ಸೋಗು, ಗರ್ಲ್‌ಫ್ರೆಂಡನ್ನು 35 ಪೀಸ್‌ ಮಾಡಿದ ಪಾತಕಿ ಅಫ್ತಾಬ್‌

Delhi Crime Shraddha Murder Case: ರಾಷ್ಟ್ರ ರಾಜಧಾನಿಯಲ್ಲಿ ತನ್ನ ಗರ್ಲ್‌ಫ್ರೆಂಡ್‌ ಅನ್ನು 35 ಪೀಸ್‌ ಮಾಡಿದ್ದ ಪಾತಕಿ ಅಫ್ತಾಬ್‌ ಮಹಿಳಾ ಹಕ್ಕುಗಳ ಹೋರಾಟದ ಸೋಗು ಹಾಕಿದ್ದ ಎಂದು ತಿಳಿದುಬಂದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಎಲ್‌ಜಿಬಿಟಿ, ಮಹಿಳೆಯರ ಪೋಸ್ಟ್‌ ಅನ್ನು ಮಾಡುತ್ತಿದ್ದ ಎಂದು ತಿಳಿದುಬಂದಿದೆ. 

shraddha walker murder case accused aftab poonawala acted as pro women activist ash
Author
First Published Nov 15, 2022, 10:16 AM IST

ನವದೆಹಲಿ: ತನ್ನ ಸಂಗಾತಿ ಶ್ರದ್ಧಾಳನ್ನು (Shraddha) ಭೀಕರವಾಗಿ ಕೊಲೆ ಮಾಡಿದ ಅಫ್ತಾಬ್‌ ಪೂನಾವಾಲ (Aftab Poonawala), ಸಾಮಾಜಿಕ ಜಾಲತಾಣಗಳಲ್ಲಿ (Social Media) ಮಾತ್ರ ಪುಂಖಾನುಪುಂಖವಾಗಿ ಲೈಂಗಿಕ ಅಲ್ಪಸಂಖ್ಯಾತರು (Sexual Minorities) ಮತ್ತು ಮಹಿಳಾ ಪರ ಹೋರಾಟಗಾರ (Pro Women Activist) ಎಂದು ಬಿಂಬಿಸಿಕೊಂಡಿದ್ದ. ಆತನ ಹಲವು ಜಾಲತಾಣ ಪೋಸ್ಟ್‌ಗಳಲ್ಲಿ ಮಹಿಳೆಯರ ಹಕ್ಕುಗಳು, ಅವುಗಳ ರಕ್ಷಣೆ, ಅವರ ಗೌರವ ಕಾಪಾಡುವ ಬಗ್ಗೆ ದೊಡ್ಡದಾಗಿ ಭಾಷಣ ಬಿಗಿದಿದ್ದು, ಮಹಿಳೆಯರ ಕುರಿತ ಹಲವು ಪೋಸ್ಟ್‌ಗಳನ್ನು ಹಂಚಿಕೊಂಡು ತನ್ನನ್ನು ಸಭ್ಯನೆಂದು ಬಿಂಬಿಸಿಕೊಂಡಿದ್ದು ಆತನ ಜಾಲತಾಣಗಳಲ್ಲಿ ಕಂಡುಬಂದಿದೆ.

ಹತ್ಯೆ ಬಳಿಕ ಊಟ: ಪ್ರೇಯಸಿ ಅಫ್ತಾಬ್‌ ಪೂನಾವಾಲಾ ಶ್ರದ್ಧಾ ಕೊಲೆ ಬಳಿಕ ಊಟ ಆರ್ಡರ್‌ ತಿಂದಿದ್ದ. ಯಾರಿಗೂ ಅನುಮಾನ ಬರಬಾರದೆಂದು ಮನೆಯಿಂದ ಹೊರಗೆ ಬರುತ್ತಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನು ಓದಿ: ಮದ್ವೆ ಆಗು ಎಂದಿದ್ದೇ ತಪ್ಪಾಯ್ತು: ಗೆಳತಿಯ ಕೊಂದು 35 ಪೀಸ್ ಮಾಡಿದ ಪಾಪಿ

ಫುಡ್‌ಬ್ಲಾಗರ್‌:
ಅಫ್ತಾಬ್‌ ಅಮೀನ್‌ ಪೂನಾವಾಲಾ ಮುಂಬೈನ ವಸಾಯ್‌ನ ನಿವಾಸಿ. ಸ್ಥಳೀಯ ಸೆಂಟ್‌ ಫ್ರಾನ್ಸಿಸ್‌ ಶಾಲೆಯಲ್ಲಿ ಪ್ರೌಢ ಶಿಕ್ಷಣ ಮುಗಿಸಿ, ಬಳಿಕ ಎಲ್‌ಎಸ್‌ ರಹೇಜಾ ಕಾಲೇಜಿನಲ್ಲಿ ಬಿಎಂಎಸ್‌ ಪದವಿ ಶಿಕ್ಷಣ ಪಡೆದಿದ್ದ. ನಂತರ ಫುಡ್‌ ಬ್ಲಾಗರ್‌ ಆಗಿಯೂ ಗುರುತಿಸಿಕೊಂಡಿದ್ದು, ಇನ್‌ಸ್ಟಾಗ್ರಾಂನಲ್ಲಿ ‘ಹಂಗ್ರಿ ಛೋಕ್ರೋ ಹೆಸರಲ್ಲಿ ಆಹಾರದ ಕುರಿತು ವಿಡಿಯೋಗಳನ್ನು ಪ್ರದರ್ಶಿಸುತ್ತಿದ್ದ.

ಮಗಳೆಂದು ಮರೆತು ಬಿಡಿ..! ಪೋಷಕರಿಗೆ ಸೆಡ್ಡು ಹೊಡೆದು ಪ್ರಿಯಕರನ ಜೊತೆ ಪರಾರಿ
ಪ್ರಿಯಕರನಿಂದಲೇ ಹತ್ಯೆಗೀಡಾದ ಶ್ರದ್ಧಾ ವಾಕರ್‌ ಮನೆ ಬಿಟ್ಟು ಹೋಗುವ ಮುನ್ನ ತನ್ನ ಪಾಲಕರಿಗೆ ‘ನಾನು ನಿಮ್ಮ ಮಗಳೆಂಬುದನ್ನೇ ಮರೆತು ಬಿಡಿ ಎಂದಿದ್ದಳು’ ಎಂದು ಆಕೆಯ ತಂದೆ ವಿಕಾಸ್‌ ವಾಕರ್‌ ಹೇಳಿದ್ದಾರೆ.

ಇದನ್ನೂ ಓದಿ: ಮಗಳ ಕೈಯಲ್ಲಿ ಡೆತ್‌ನೋಟ್‌ ಬರೆಸಿ ಕೊಲೆ ಮಾಡಿದ ತಂದೆ..!

‘2019ರಲ್ಲಿ ಶ್ರದ್ಧಾ ತನ್ನ ಪಾಲಕರಿಗೆ ತಾನು ಅಫ್ತಾಬ್‌ ಪೂನಾವಾಲಾನನ್ನು ಪ್ರೇಮಿಸುತ್ತಿರುವುದಾಗಿ ತಿಳಿಸಿದ್ದಳು. ನಾವು ಹಿಂದೂ ಕೋಲಿ ಸಮುದಾಯಕ್ಕೆ ಸೇರಿದ್ದು, ಯುವಕ ಮುಸ್ಲಿಂ ಆಗಿದ್ದ ಕಾರಣ ನಾವು ಇದಕ್ಕೆ ಅನುಮತಿ ಕೊಡಲಿಲ್ಲ. ಹೀಗಾಗಿ ಸಿಟ್ಟಿಗೆದ್ದ ಶ್ರದ್ಧಾ ತಾನು 25 ವರ್ಷದ ಯುವತಿಯಾಗಿದ್ದು, ನನ್ನ ಎಲ್ಲ ನಿರ್ಧಾರಗಳನ್ನು ನಾನೇ ತೆಗೆದುಕೊಳ್ಳುವ ಹಕ್ಕನ್ನು ಹೊಂದಿದ್ದೇನೆ. 

ನಾನು ಆಫ್ತಾಬ್‌ ಜತೆಗೆ ಲಿವ್‌-ಇನ್‌ನಲ್ಲಿ ಇರುತ್ತೇನೆ. ಇಂದಿನಿಂದ ನಾನು ನಿಮ್ಮ ಮಗಳೆಂಬುದನ್ನೇ ಮರೆತುಬಿಡಿ ಎಂದು ತನ್ನ ಬಟ್ಟೆಗಳನ್ನು ತೆಗೆದುಕೊಂಡು ಆಫ್ತಾಬ್‌ ಜತೆಯಿರಲು ಹೋಗಿದ್ದಳು’ ಎಂದು ವಿಕಾಸ್‌ ನೋವಿನಿಂದ ಹೇಳಿದ್ದಾರೆ.

ಇದನ್ನೂ ಓದಿ: Bengaluru: ಪತಿಗೆ ಮದ್ಯ ಕುಡಿಸಿ, ಕಬಾಬ್‌ ತಿನ್ನಿಸಿ ಕತ್ತು ಹಿಸುಕಿ ಹತ್ಯೆ!

ಘಟನೆ ಬೆಳಕಿಗೆ ಬಂದಿದ್ದು ಹೇಗೆ..?
ಇತ್ತೀಚಿನ ಕೆಲ ದಿನಗಳಿಂದ ಶ್ರದ್ಧಾಳ ಫೇಸ್‌ಬುಕ್ ಪೇಜ್‌ನಿಂದ ಯಾವುದೇ ಪೋಸ್ಟ್‌ಗಳು ಅಪ್‌ಡೇಟ್ ಆಗಿರಲಿಲ್ಲ. ಹೀಗಾಗಿ ಶ್ರದ್ಧಾ ಪೋಷಕರಿಗೆ ಅವಳು ಏನಾಗಿರಬಹುದು ಎಂಬ ಬಗ್ಗೆ ಅನುಮಾನ ಮೂಡಿತ್ತು. ನಂತರ ಆಕೆಯ ತಂದೆ ಐದು ತಿಂಗಳ ಹಿಂದೆ ದೆಹಲಿಗೆ ಭೇಟಿ ನೀಡಿ ಮಗಳು ವಾಸವಿದ್ದ ಸ್ಥಳಕ್ಕೆ ಭೇಟಿ ನೀಡಿದಾಗ ಆ ಸ್ಥಳ ಬೀಗ ಹಾಕಿತ್ತು ಎಂಬುದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಶ್ರದ್ಧಾ ಪೋಷಕರು  ನಾಪತ್ತೆ ಪ್ರಕರಣ ದಾಖಲಿಸಿಕೊಂಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಐದು ತಿಂಗಳ ನಂತರ ಆರೋಪಿಯನ್ನು ಬಂಧಿಸಿದ್ದಾರೆ. 
ಶ್ರದ್ಧಾ ನಿರಂತರವಾಗಿ ತನ್ನನ್ನು ಮದುವೆಯಾಗು ಎಂದು ಒತ್ತಾಯಿಸುತ್ತಿದ್ದಳು ಈ ಕಾರಣಕ್ಕೆ ಆಕೆಯನ್ನು ಹತ್ಯೆ ಮಾಡಿದ್ದಾಗಿ ಆತ ತಪ್ಪಿಪ್ಪಿಕೊಂಡಿದ್ದಾನೆ. 

Follow Us:
Download App:
  • android
  • ios