ಮದ್ವೆ ಆಗು ಎಂದಿದ್ದೇ ತಪ್ಪಾಯ್ತು: ಗೆಳತಿಯ ಕೊಂದು 35 ಪೀಸ್ ಮಾಡಿದ ಪಾಪಿ

ಮದುವೆಯಾಗು ಎಂದಿದ್ದಕ್ಕೆ ವ್ಯಕ್ತಿಯೊಬ್ಬ ತನ್ನೊಂದಿಗೆ ಸಹಬಾಳ್ವೆ ನಡೆಸುತ್ತಿದ್ದ ಯುವತಿಯೊಬ್ಬಳನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ತನ್ನ ಲೀವಿಂಗ್ ಟುಗೆದರ್ ಜೊತೆಗಾತಿಯನ್ನು ಕೊಂದ ಯುವಕ ನಂತರ ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ ದೆಹಲಿಯ ವಿವಿಧೆಡೆ ಎಸೆದಿದ್ದಾನೆ. ದೆಹಲಿ ಮೆಹ್ರುಲಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ. 

man killed her living partner for asking marriage in National capital Delhi and cut body into 35 pieces akb

ನವದೆಹಲಿ: ಮದುವೆಯಾಗು ಎಂದಿದ್ದಕ್ಕೆ ವ್ಯಕ್ತಿಯೊಬ್ಬ ತನ್ನೊಂದಿಗೆ ಸಹಬಾಳ್ವೆ ನಡೆಸುತ್ತಿದ್ದ ಯುವತಿಯೊಬ್ಬಳನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ತನ್ನ ಲೀವಿಂಗ್ ಟುಗೆದರ್ ಜೊತೆಗಾತಿಯನ್ನು ಕೊಂದ ಯುವಕ ನಂತರ ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ ದೆಹಲಿಯ ವಿವಿಧೆಡೆ ಎಸೆದಿದ್ದಾನೆ. ದೆಹಲಿ ಮೆಹ್ರುಲಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ. 26 ವರ್ಷ ಪ್ರಾಯದ ಯುವತಿ ಶ್ರದ್ಧಾ ಕೊಲೆಯಾದ ನತದೃಷ್ಟೆ. ಶ್ರದ್ಧಾ ತನ್ನ ಜೊತೆ ಸಹಜೀವನ (Living Together) ನಡೆಸುತ್ತಿದ್ದ ಅಫ್ತಾಬ್ ಎಂಬಾತನನ್ನು ಮದುವೆಯಾಗುವಂತೆ ಒತ್ತಾಯಿಸುತ್ತಿದ್ದಳು. ಇದರಿಂದ ಒತ್ತಡಕ್ಕೊಳಗಾದ ಆತ ಆಕೆಯನ್ನು ಹೀಗೆ ಬರ್ಬರವಾಗಿ ಹತ್ಯೆಗೈದಿದ್ದಾನೆ. ಮೇ 18 ರಂದು ಅಫ್ತಾಬ್ ಹಾಗೂ ಶ್ರದ್ಧಾ ಮಧ್ಯೆ ಮದುವೆಯ ವಿಚಾರಕ್ಕೆ ದೊಡ್ಡ ಗಲಾಟೆ ನಡೆದಿದೆ. ಗಲಾಟೆಯ ವೇಳೆ ಶ್ರದ್ಧಾ ಜೋರಾಗಿ ಬೊಬ್ಬೆ ಹೊಡೆದಿದ್ದಾಳೆ. ಇದರಿಂದ ಸುತ್ತಮುತ್ತಲು ವಾಸಿಸುತ್ತಿರುವವರಿಗೆ ಶ್ರದ್ಧಾಳ ಧ್ವನಿ ಕೇಳಿದೆ. ಹೀಗಾಗಿ ಆಕೆಯ ಬಾಯಿ ಮುಚ್ಚಿಸುವ ಸಲುವಾಗಿ ಅಫ್ತಾಬ್ ಆಕೆಯ ಬಾಯನ್ನು ಗಟ್ಟಿಯಾಗಿ ಮುಚ್ಚಿ ಹಿಡಿದಿದ್ದಾನೆ. ಪರಿಣಾಮ ಆಕೆ ಸಾವನ್ನಪ್ಪಿದ್ದಾಳೆ. 

ಆದರೆ ಶ್ರದ್ಧಾ ಸಾವಿನಿಂದ ವಿಚಲಿತನಾಗಿ ಭಯಗೊಂಡ ಆತ ತಾನು ಮಾಡಿದ ಅಪರಾಧವನ್ನು ಮುಚ್ಚಿಡಲು ಆಕೆಯ ದೇಹವನ್ನು ಗರಗಸದಿಂದ 35 ಪೀಸುಗಳಾಗಿ ಕತ್ತರಿಸಿದ್ದಾನೆ. ಬಳಿಕ ಆಕೆಯ ದೇಹದ ಒಂದೊಂದೇ ಭಾಗವನ್ನು ಒಟ್ಟು 18 ದಿನಗಳ ಕಾಲ ಸ್ವಲ್ಪ ಸ್ವಲ್ಪವೇ ಮೆಹ್ರುಲಿ ಸಮೀಪದ ಕಾಡಿನಲ್ಲಿ ಎಸೆದು ಬಂದಿದ್ದಾನೆ. ಅಲ್ಲದೇ ಆತ ಈ ಮೃತದೇಹದ ತುಣುಕು 18 ದಿನಗಳ ಕಾಲ ಕೊಳೆಯದಂತೆ ಇಡುವ ಸಲುವಾಗಿಯೇ ದೊಡ್ಡದಾದ ಫ್ರಿಡ್ಜ್‌ನ್ನು ಖರೀದಿಸಿದ್ದಾನೆ. ಬಳಿಕ 18 ದಿನಗಳ ಕಾಲ ಪ್ರತಿದಿನ  ರಾತ್ರಿ ಮೆಹ್ರುಲಿಯ (Mehrauli) ಕಾಡಿಗೆ ತೆರಳುತ್ತಿದ್ದ ಆತ ನಿರಂತರವಾಗಿ ಸ್ವಲ್ಪ ಸ್ವಲ್ಪವೇ ಮೃತದೇಹದ ಭಾಗಗಳನ್ನು ಅಲ್ಲಿ ಎಸೆದು ಬರುತ್ತಿದ್ದ. ಹೀಗೆ ಎಸೆದರೆ ಪ್ರಾಣಿಗಳು ಆ ದೇಹವನ್ನು ತಿನ್ನಬಹುದು ಎಂಬ ಉದ್ದೇಶದಿಂದ ಆತ ಹೀಗೆ ಮಾಡಿದ್ದ.

Bengaluru: ಪತಿಗೆ ಮದ್ಯ ಕುಡಿಸಿ, ಕಬಾಬ್‌ ತಿನ್ನಿಸಿ ಕತ್ತು ಹಿಸುಕಿ ಹತ್ಯೆ!

ಆರೋಪಿ ಅಫ್ತಾಬ್ (Aaftab) ಹಾಗೂ ಶ್ರದ್ಧಾ (Shradha) ಮುಂಬೈಯಲ್ಲಿ (Mumbai) ಒಂದೇ ಕಾಲ್ ಸೆಂಟರೊಂದರಲ್ಲಿ (call centre) ಕೆಲಸ ಮಾಡುತ್ತಿದ್ದರು. ಆದರೆ ಶ್ರದ್ಧಾ ಪೋಷಕರು ಶ್ರದ್ಧಾಳ ಈ ಸಂಬಂಧದ ಬಗ್ಗೆ ಅಸಮಾಧಾನಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಶ್ರದ್ಧಾ ಹಾಗೂ ಅಫ್ತಾಬ್ ದೆಹಲಿಗೆ ಆಗಮಿಸಿ ಬಾಡಿಗೆ ಮನೆಯೊಂದರಲ್ಲಿ ಜೊತೆಯಾಗಿ ಸಹಬಾಳ್ವೆ ನಡೆಸುತ್ತಿದ್ದರು. ಶ್ರದ್ಧಾ ಆಗಾಗ ತನ್ನ ಫೋಟೋಗಳನ್ನು ಫೇಸ್‌ಬುಕ್‌ನಲ್ಲಿ (Facebook) ಪೋಸ್ಟ್ ಮಾಡುತ್ತಿರುತ್ತಿದ್ದಳು. ಇದರಿಂದ ಆಕೆಯ ಕುಟುಂಬಸ್ಥರು ಆಕೆ ಎಲ್ಲಿದ್ದಾಳೆ ಎಂಬ ಬಗ್ಗೆ ತಿಳಿದುಕೊಂಡು ಸುಮ್ಮನಿದ್ದರು. ಆದರೆ ಇತ್ತೀಚಿನ ಕೆಲ ದಿನಗಳಿಂದ ಶ್ರದ್ಧಾಳ ಫೇಸ್‌ಬುಕ್ ಪೇಜ್‌ನಿಂದ ಯಾವುದೇ ಪೋಸ್ಟ್‌ಗಳು ಅಪ್‌ಡೇಟ್ ಆಗಿರಲಿಲ್ಲ. ಹೀಗಾಗಿ ಶ್ರದ್ಧಾ ಪೋಷಕರಿಗೆ ಅವಳು ಏನಾಗಿರಬಹುದು ಎಂಬ ಬಗ್ಗೆ ಅನುಮಾನ ಮೂಡಿತ್ತು. 

ಮಗಳ ಕೈಯಲ್ಲಿ ಡೆತ್‌ನೋಟ್‌ ಬರೆಸಿ ಕೊಲೆ ಮಾಡಿದ ತಂದೆ..!

ನಂತರ ಆಕೆಯ ತಂದೆ ಐದು ತಿಂಗಳ ಹಿಂದೆ ದೆಹಲಿಗೆ ಭೇಟಿ ನೀಡಿ ಮಗಳು ವಾಸವಿದ್ದ ಸ್ಥಳಕ್ಕೆ ಭೇಟಿ ನೀಡಿದಾಗ ಆ ಸ್ಥಳ ಬೀಗ ಹಾಕಿತ್ತು. ಈ ಹಿನ್ನೆಲೆಯಲ್ಲಿ ಶ್ರದ್ಧಾ ಪೋಷಕರು  ನಾಪತ್ತೆ ಪ್ರಕರಣ ದಾಖಲಿಸಿಕೊಂಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಐದು ತಿಂಗಳ ನಂತರ ಆರೋಪಿಯನ್ನು ಬಂಧಿಸಿದ್ದಾರೆ. ಶ್ರದ್ಧಾ ನಿರಂತರವಾಗಿ ತನ್ನನ್ನು ಮದುವೆಯಾಗು ಎಂದು ಒತ್ತಾಯಿಸುತ್ತಿದ್ದಳು ಈ ಕಾರಣಕ್ಕೆ ಆಕೆಯನ್ನು ಹತ್ಯೆ ಮಾಡಿದ್ದಾಗಿ ಆತ ತಪ್ಪಿಪ್ಪಿಕೊಂಡಿದ್ದಾನೆ. 
 

Latest Videos
Follow Us:
Download App:
  • android
  • ios