Bengaluru: ಪತಿಗೆ ಮದ್ಯ ಕುಡಿಸಿ, ಕಬಾಬ್ ತಿನ್ನಿಸಿ ಕತ್ತು ಹಿಸುಕಿ ಹತ್ಯೆ!
ಅಕ್ರಮ ಸಂಬಂಧ ಪ್ರಶ್ನಿಸಿ ಬೈಯುತ್ತಿದ್ದ ಪತಿಯ ಕೊಲೆ ಮಾಡಲು ಪ್ರಿಯಕರನ್ನು ಮನೆಯ ಸ್ಟೋರ್ ರೂಮಿನಲ್ಲಿ 9 ದಿನ ಬಚ್ಚಿಟ್ಟು, ನಂತರ ಪತಿಗೆ ಮದ್ಯ ಕುಡಿಸಿ ಮತ್ತಿನಲ್ಲಿದ್ದಾಗ ಉಸಿರುಗಟ್ಟಿಸಿ ಹತ್ಯೆ ಮಾಡಿದ ಪತ್ನಿ ಹಾಗೂ ಪ್ರಿಯಕರನನ್ನು ವಿದ್ಯಾರಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು (ನ.13): ಅಕ್ರಮ ಸಂಬಂಧ ಪ್ರಶ್ನಿಸಿ ಬೈಯುತ್ತಿದ್ದ ಪತಿಯ ಕೊಲೆ ಮಾಡಲು ಪ್ರಿಯಕರನ್ನು ಮನೆಯ ಸ್ಟೋರ್ ರೂಮಿನಲ್ಲಿ 9 ದಿನ ಬಚ್ಚಿಟ್ಟು, ನಂತರ ಪತಿಗೆ ಮದ್ಯ ಕುಡಿಸಿ ಮತ್ತಿನಲ್ಲಿದ್ದಾಗ ಉಸಿರುಗಟ್ಟಿಸಿ ಹತ್ಯೆ ಮಾಡಿದ ಪತ್ನಿ ಹಾಗೂ ಪ್ರಿಯಕರನನ್ನು ವಿದ್ಯಾರಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪಶ್ಚಿಮ ಬಂಗಾಳ ಮೂಲದ ದೇವಿ ತೋಮಾಂಗ್ (46) ಮತ್ತು ಆಕೆಯ ಪ್ರಿಯಕರ ಅಸ್ಸಾಂ ಮೂಲದ ಜೈನುಲ್ ಅಲಿ ಬಾಬು (28) ಬಂಧಿತರು. ಆರೋಪಿಗಳು ನ.6ರಂದು ವಡೇರಹಳ್ಳಿಯಲ್ಲಿ ರಾಕೇಶ್ ತೋಮಾಂಗ್ (52) ಎಂಬಾತನನ್ನು ಉಸಿರುಗಟ್ಟಿಸಿ ಹತ್ಯೆ ಮಾಡಿದ್ದರು.
ರಾಕೇಶ್ ತೋಮಾಂಗ್ 30 ವರ್ಷದಿಂದ ನಗರದಲ್ಲಿ ವಾಸಿಸುತ್ತಿದ್ದರು. ಇತ್ತೀಚೆಗೆ ವಡೇರಹಳ್ಳಿಯಲ್ಲಿ ವಾಸ್ತವ್ಯ ಮಾಡುತ್ತಿದ್ದರು. ರಾಕೇಶ್ ಸೆಕ್ಯೂರಿಟಿಗಾರ್ಡ್ ಆಗಿದ್ದರೆ, ಪತ್ನಿ ದೇವಿ ತೋಮಾಂಗ್ ಮನೆಗೆಲಸ ಮಾಡುತ್ತಿದ್ದಳು. ದೇವಿ ಪತಿಗೆ ಊಟ ನೀಡಲು ಹೋಗುವಾಗ, ಆರೋಪಿ ಜೈನುಲ್ ಅಲಿ ಪರಿಚಯವಾಗಿ, ನಂತರ ಅಕ್ರಮ ಸಂಬಂಧವಾಗಿ ಬೆಳೆದಿತ್ತು. ಈ ವಿಚಾರ ರಾಕೇಶ್‌ಗೂ ಗೊತ್ತಾಗಿ ಎಚ್ಚರಿಕೆ ನೀಡಿದ್ದ. ಜುಲೈನಲ್ಲಿ ದೇವಿ ಮತ್ತು ಪ್ರಿಯಕರ ಜೈನುಲ್ ಒಂದು ವಾರ ಓಡಿ ಹೋಗಿದ್ದರು. ವಾರದ ಬಳಿಕ ಮನೆಗೆ ಬಂದ ದೇವಿಗೆ ಬೈದು ಜೈನುಲ್ ಜತೆಗಿನ ಸಂಬಂಧ ಕಡಿದುಕೊಳ್ಳುವಂತೆ ಹೇಳಿದ್ದ. ಆದರೂ ಆಕೆ ಜೈನುಲ್ ಜತೆಗೆ ಅಕ್ರಮ ಸಂಬಂಧ ಮುಂದುವರೆಸಿದ್ದಳು.
Bengaluru: ಸ್ನೇಹಿತನನ್ನೇ ಬ್ಲ್ಯಾಕ್‌ಮೇಲ್ ಮಾಡಿ 16 ಲಕ್ಷ ಸುಲಿಗೆ!
ಪತಿಗೆ ಲೈಂಗಿಕಾಸಕ್ತಿ ಕಡಿಮೆ!: ಕೊಲೆಯಾದ ರಾಕೇಶ್‌ಗೆ ಮದ್ಯ ಸೇವಿಸುವ ಚಟವಿತ್ತು. ಲೈಂಗಿಕಾಸಕ್ತಿಯೂ ಕಡಿಮೆ ಇತ್ತು. ಹೀಗಾಗಿ 28 ವರ್ಷದ ಜೈನುಲ್ ಜತೆಗೆ ದೇವಿಗೆ ಅಕ್ರಮ ಸಂಬಂಧ ಇರಿಸಿಕೊಂಡಿದ್ದಳು. ರಾಕೇಶ್ ಮದ್ಯಸೇವಿಸಿ ಆಗಾಗ ದೇವಿಗೆ ಹಲ್ಲೆ ಮಾಡುತ್ತಿದ್ದ. ಇದರಿಂದ ಬೇಸತ್ತ ದೇವಿ, ರಾಕೇಶ್‌ಗೆ ಕೊಲೆಗೆ ಪ್ರಿಯಕರ ಜೈನುಲ್‌ಗೆ ಸುಪಾರಿ ನೀಡಿದ್ದಳು. ಅದರಂತೆ ದೇವಿ ನ.5ರ ರಾತ್ರಿ ರಾಕೇಶ್ ಮನೆಗೆ ಬಂದಾಗ ಕಂಠಪೂರ್ತಿ ಮದ್ಯ ಕುಡಿಸಿ, ಕಬಾನ್ ತಿನ್ನಿಸಿದ್ದಳು. ಮದ್ಯದ ಅಮಲಿನಲ್ಲಿ ರಾಕೇಶ್ ಮಲಗಿದ್ದಾಗ ಇಬ್ಬರೂ ಸೇರಿ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದರು. ಮಾರನೇ ದಿನ ದೇವಿಗೆ ಅತಿಯಾದ ಮದ್ಯಸೇವಿಸಿ ಪತಿ ರಾಕೇಶ್ ಮೃತಪಟ್ಟಿದ್ದಾರೆ ಎಂದು ನಾಟಕ ಮಾಡಿದ್ದಳು. ಆದರೆ, ಮರಣೋತ್ತರ ಪರೀಕ್ಷೆಯಲ್ಲಿ ಉಸಿರುಗಟ್ಟಿಸಿ ಕೊಲೆ ಮಾಡಿರುವುದು ದೃಢಪಟ್ಟಿತ್ತು.
ಗಂಡಸ್ತನಕ್ಕೆ ಸವಾಲು: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿ ರಾಕೇಶ್‌ನನ್ನು ಕೊಲೆ ಮಾಡಿದರೆ ಮಾತ್ರ ನನ್ನ ಜತೆ ಮಲಗಲು ಅವಕಾಶ ನೀಡುತ್ತೇನೆ. ನೀನು ಗಂಡಸು ಆಗಿದ್ದಲ್ಲಿ ಆತನನ್ನು ಕೊಲೆ ಮಾಡು ಎಂದು ದೇವಿ ತನ್ನ ಪ್ರಿಯಕರ ಜೈನುಲ್‌ಗೆ ಸವಾಲು ಹಾಕಿದ್ದಳು. ಇದರಿಂದ ರೊಚ್ಚಿಗೆದ್ದ ಜೈನುಲ್, ಮದ್ಯದ ಅಮಲಿನಲ್ಲಿ ಮಲಗಿದ್ದ ರಾಕೇಶ್‌ನನ್ನು ದೇವಿಯ ಸಹಾಯದಿಂದ ಕತ್ತು ಹಿಸುಕಿ ಕೊಲೆ ಮಾಡಿದ್ದ ಎಂಬುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.
9 ದಿನ ಸ್ಟೋರೂಂನಲ್ಲಿ ವಾಸಿದ್ದ ಪ್ರಿಯಕರ: ಆರೋಪಿ ದೇವಿ ಪತಿ ರಾಕೇಶ್ ಕೊಲೆಗೆ ಅ.29ರ ರಾತ್ರಿಯೇ ಪ್ರಿಯಕರ ಜೈನುಲ್‌ನನನ್ನು ಮನೆಗೆ ಕರೆಸಿಕೊಂಡು ಸ್ಟೋರ್ ರೂಮ್‌ನಲ್ಲಿ ಬಚ್ಚಿಟ್ಟಿದ್ದಳು. ಅಂದು ಇಬ್ಬರು ಸೇರಿ ರಾಕೇಶ್ ಕೊಲೆಗೆ ಸ್ಕೆಚ್ ಹಾಕಿ ಕಾರ್ಯಗತಗೊಳಿಸಲು ವಿಫಲರಾಗಿದ್ದರು. ನಂತರ ಸತತ 9 ದಿನ ಅದೇ ಮನೆಯಲ್ಲಿ ಬಚ್ಚಿಟ್ಟುಕೊಂಡು ಕೊನೆಗೆ ನ.6ರಂದು ಆರೋಪಿಗಳು ರಾಕೇಶ್‌ನನ್ನು ಕೊಲೆ ಮಾಡುವಲ್ಲಿ ಸಫಲರಾಗಿದ್ದರು ಎಂಬುದು ತನಿಖೆ ವೇಳೆ ಬಯಲಾಗಿದೆ.
ಉರುಸ್ ವೇಳೆ ದಲಿತ ಯುವಕನನ್ನ ಕಟ್ಟಿ ಹಾಕಿ ಥಳಿತ: 14 ಜನರ ಬಂಧನ
ಪತಿಯ ಹಣ ಪ್ರೇಮಿಗೆ ವರ್ಗ: ಪತಿಯ ಕೊಲೆಯಾದ ಮಾರನೇ ದಿನ ರಾಕೇಶ್ ಫೋನ್ ಪೇಯಿಂದ ಪ್ರಿಯಕರ ಜೈನುಲ್‌ಗೆ .50 ಸಾವಿರ ಕಳುಹಿಸಿದ್ದಳು. ಅಷ್ಟೇ ಅಲ್ಲದೆ, ತನ್ನದೇ ಹೆಸರಿನಲ್ಲಿ ಹೊಸ ಸಿಮ್ ಕಾರ್ಡ್ ತೆಗೆದು ಪ್ರಿಯಕರನಿಗೆ ಕೊಟ್ಟಿದ್ದಳು. ಬಳಿಕ ದೇವಿಯ ಕರೆಗಳು ಹಾಗೂ ಬ್ಯಾಂಕ್ ಅಕೌಂಟ್ ಮಾಹಿತಿ ಪಡೆದು ಪರಿಶೀಲಿಸಿದಾಗ ಆರೋಪಿ ಜೈನುಲ್ ಬಗ್ಗೆ ಮಾಹಿತಿ ಸಿಕ್ಕಿದೆ.