ಮಂಗಳೂರು ನಗರದ ಮುಳಿಹಿತ್ಲು ಜಂಕ್ಷನ್‌ ನಲ್ಲಿರುವ ಜನರಲ್‌ ಸ್ಟೋರ್‌ ಹಿಂಭಾಗದಲ್ಲಿ ಈ ಘಟನೆ ನಡೆದಿದೆ. ತನ್ನ ಬಳಿಯಲ್ಲಿ ಕೆಲಸ ಮಾಡುತ್ತಿದ್ದ ಗಜ್ಞಾನ ಎಂಬಾತನನ್ನು ಕ್ಷುಲ್ಲಕ ಕಾರಣಕ್ಕೆ ಕೊಲೆ ಮಾಡುವ ಉದ್ದೇಶದಿಂದ ಬೆಂಕಿ ಕೊಟ್ಟು ಸುಟ್ಟು ನಂತರ ಸಾಕ್ಷಿ ನಾಶ ಮಾಡುವ ಹಾಗೂ ಪ್ರಕರಣದಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ಅಂಗಡಿಯ ಸುತ್ತಮುತ್ತಲಿನ ಸಾರ್ವಜನಿಕರಿಗೆ ವಿದ್ಯುತ್‌ ಸ್ಪರ್ಶವಾಗಿರುವುದಾಗಿ ಮಾಹಿತಿ ನೀಡಿದ ಆರೋಪಿ. 

ಮಂಗಳೂರು(ಜು.09): ನಗರದ ಮುಳಿಹಿತ್ಲುನಲ್ಲಿ ಅಂಗಡಿ ಮಾಲೀಕನೋರ್ವ ತನ್ನಲ್ಲಿ ಕೆಲಸ ಮಾಡುತ್ತಿದ್ದ ಯುವಕನನ್ನು ನಿನ್ನೆ(ಶನಿವಾರ) ಬೆಂಕಿ ಹಾಕಿ ಸುಟ್ಟು ಕೊಲೆ ಮಾಡಿದ ಘಟನೆ ಸಂಭವಿಸಿದೆ. ಆರೋಪಿಯನ್ನು ಪಾಂಡೇಶ್ವರ ಪೊಲೀಸರು ಬಂಧಿಸಿದ್ದಾರೆ. ಉತ್ತರ ಭಾರತದ ಕಾರ್ಮಿಕ ಗಜ್ಞಾನ ಯಾನೆ ಜಗ್ಗು ಕೊಲೆಯಾದ ಯುವಕ. ಪಾಂಡೇಶ್ವರ ಸತ್ಯಶ್ರೀ ಅಪಾರ್ಚ್‌ಮೆಂಟ್‌ ನಿವಾಸಿ ತೌಸಿಫ್‌ ಹುಸೈನ್‌ (32) ಕೊಲೆ ಆರೋಪಿ.

ಮಂಗಳೂರು ನಗರದ ಮುಳಿಹಿತ್ಲು ಜಂಕ್ಷನ್‌ ನಲ್ಲಿರುವ ಜನರಲ್‌ ಸ್ಟೋರ್‌ ಹಿಂಭಾಗದಲ್ಲಿ ಈ ಘಟನೆ ನಡೆದಿದೆ. ತನ್ನ ಬಳಿಯಲ್ಲಿ ಕೆಲಸ ಮಾಡುತ್ತಿದ್ದ ಗಜ್ಞಾನ ಎಂಬಾತನನ್ನು ಕ್ಷುಲ್ಲಕ ಕಾರಣಕ್ಕೆ ಕೊಲೆ ಮಾಡುವ ಉದ್ದೇಶದಿಂದ ಬೆಂಕಿ ಕೊಟ್ಟು ಸುಟ್ಟು ನಂತರ ಸಾಕ್ಷಿ ನಾಶ ಮಾಡುವ ಹಾಗೂ ಪ್ರಕರಣದಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ಅಂಗಡಿಯ ಸುತ್ತಮುತ್ತಲಿನ ಸಾರ್ವಜನಿಕರಿಗೆ ವಿದ್ಯುತ್‌ ಸ್ಪರ್ಶವಾಗಿರುವುದಾಗಿ ಮಾಹಿತಿ ನೀಡಿದ್ದಾನೆ.

ಬೆಳಗಾವಿ ಜೈನಮುನಿಗೆ ಕರೆಂಟ್‌ ಶಾಕ್‌ ಕೊಟ್ಟು ಕೊಲೆ: ದೇಹ ತುಂಡರಿಸಿ ಗದ್ದೆಗೆ ಬೀಸಾಡಿದರು

ಬಳಿಕ ಗಜ್ಞಾನನನ್ನು ವೆನ್ಲಾಕ್‌ ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದುಕೊಂಡು ಹೋಗಿದ್ದು, ಆತನನ್ನು ಪರೀಕ್ಷಿಸಿದ ವೈದ್ಯಾಧಿಕಾರಿ, ಗಜ್ಞಾನ್‌ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ.

ಮಂಗಳೂರು ದಕ್ಷಿಣ ಪೊಲೀಸ್‌ ಪೊಲೀಸರು ತನಿಖೆಯನ್ನು ಆರಂಭಿಸಿ ಪರಿಸರದ ಸಾರ್ವಜನಿಕರನ್ನು ವಿಚಾರಿಸಿದಾಗ ಸಾಕ್ಷ್ಯಗಳು ಲಭ್ಯವಾಗಿದ್ದು, ಇದೊಂದು ಕೊಲೆ ಪ್ರಕರಣವೆಂದು ದೃಢಪಟ್ಟಿತ್ತು. ಆರೋಪಿ ತೌಸಿಫ್‌ ಹುಸೈನ್‌ ನನ್ನು ಪೊಲೀಸರು ಬಂಧಿಸಿದ್ದಾರೆ.