ತುಂಗಾ ನದಿ ತೀರದಲ್ಲಿ ಬ್ಲಾಸ್ಟ್ ಪ್ರಕರಣ, ರಾಜ್ಯದಲ್ಲಿ ವಿಧ್ವಂಸಕ ಕೃತ್ಯಕ್ಕೆ ಮುಂದಾಗಿದ್ದ ಇಬ್ಬರ ವಿರುದ್ಧ ಚಾರ್ಚ್ ಶೀಟ್

ಶಿವಮೊಗ್ಗ ತುಂಗಾ ನದಿ ತೀರದಲ್ಲಿ ಟ್ರಯಲ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳ ವಿರುದ್ಧ ಎನ್ಐಎ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದೆ. ಮಾಜ್ ಮುನೀರ್ ಅಹಮದ್ ಹಾಗೂ ಸೈಯದ್ ಯಾಸೀನ್ ವಿರುದ್ಧ ವಿಶೇಷ ನ್ಯಾಯಾಲಯಕ್ಕೆ  ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿದೆ.

Shivamogga youth trial explosion case NIA charge sheet against suspected terror gow

ಬೆಂಗಳೂರು (ಮಾ.17): 2022ರ ಆ.26ರಂದು  ಶಿವಮೊಗ್ಗ ತುಂಗಾ ನದಿ ತೀರದಲ್ಲಿ ಟ್ರಯಲ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳ ವಿರುದ್ಧ ಎನ್ಐಎ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದೆ. ಮಾಜ್ ಮುನೀರ್ ಅಹಮದ್ ಹಾಗೂ ಸೈಯದ್ ಯಾಸೀನ್ ವಿರುದ್ಧ ವಿಶೇಷ ನ್ಯಾಯಾಲಯಕ್ಕೆ  ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿದೆ. ಐಪಿಸಿ 120ಬಿ, 121ಎ ಮತ್ತು 122, 1860, ಯುಎಪಿಎ ಕಾಯ್ದೆ 18, 18ಬಿ, 20 ಮತ್ತು 38 ರ ಅಡಿಯಲ್ಲಿ ದೋಷಾರೋಪಣ ಪಟ್ಟಿ ಸಲ್ಲಿಸಲಾಗಿದೆ. ಐಸಿಸ್ ಚಟುವಟಿಕೆಗಳನ್ನ ರಾಜ್ಯದಲ್ಲಿ ವಿಸ್ತರಿಸಲು ಮತ್ತು ರಾಜ್ಯದಲ್ಲಿ ವಿಧ್ವಂಸಕ ಕೃತ್ಯಗಳು ಹಾಗೂ ಹಿಂಸಾಚಾರ ನಡೆಸಲು  ಈ ಆರೋಪಿಗಳು ಸಂಚು ರೂಪಿಸಿದ್ದರು. ಬಿ ಟೆಕ್ ಪದವೀಧರರಾಗಿರುವ ಈ ಇಬ್ಬರು ಆರೋಪಿಗಳು  ಆಗಸ್ಟ್ 15 2022 ರಂದು ಶಿವಮೊಗ್ಗದಲ್ಲಿ ಪ್ರೇಮ್ ಸಿಂಗ್ ಗೆ ಚಾಕು ಇರಿದಿದ್ದರು. ಇದಲ್ಲದೆ ಗೋದಾಮುಗಳು, ಮದ್ಯದ ಮಳಿಗೆಗಳು, ಹಾರ್ಡ್‌ವೇರ್ ಅಂಗಡಿಗಳು, ವಾಹನಗಳು, ಸಾರ್ವಜನಿಕ ಮತ್ತು ಖಾಸಗಿ ಆಸ್ತಿಗಳ ಹಾನಿಗೆ ಸಂಚು ರೂಪಿಸಿದ್ದರು.

ಆರೋಪಿಗಳಾದ ಮಾಜ್ ಮತ್ತು ಯಾಸೀನ್ ವಿದೇಶಿ ಮೂಲದ ಹ್ಯಾಂಡ್ಲರ್‌ ಗಳಿಂದ ಪ್ರೇರೇಪಿತರಾಗಿದ್ದರು.   25 ಕ್ಕೂ ಹೆಚ್ಚು ಬೆಂಕಿ ಮತ್ತು ವಿಧ್ವಂಸಕ ಕೃತ್ಯಗಳಲ್ಲಿ ಭಾಗಿಯಾಗಿದ್ದರು. ಶಿವಮೊಗ್ಗ ಜಿಲ್ಲೆಯ ಆಗುಂಬೆ ಮತ್ತು ವಾರಾಹಿ ನದಿ ಹಿನ್ನೀರಿನ ಅರಣ್ಯ ಪ್ರದೇಶದಲ್ಲಿ ಸ್ಫೋಟಕಗಳನ್ನು ಸಂಗ್ರಹಿದ್ದರು. ಅದೇ ಸ್ಥಳದಲ್ಲಿ ಐಇಡಿಯನ್ನು ತಯಾರಿಸಲು  ಆರೋಪಿಗಳು ಮುಂದಾಗಿದ್ದರು.

ಯುಟ್ಯೂಬರ್‌ನ ಕಂಬಿ ಹಿಂದೆ ಕಳುಹಿಸಿದ ಹಳೇ ವಿಡಿಯೋ

ವಾರಾಹಿ ನದಿ ದಡದಲ್ಲಿ ಐಇಡಿ ಪ್ರಾಯೋಗಿಕ ಸ್ಫೋಟ ನಡೆಸಿದ್ದರು. ಈ ವೇಳೆ ಭಾರತದ ರಾಷ್ಟ್ರೀಯ ಧ್ವಜವನ್ನು ಸುಟ್ಟು ಹಾಕಿದ್ದರು.  ಮಾತ್ರವಲ್ಲ ಧ್ವಜ ಸುಟ್ಟು ವೀಡಿಯೋ ರೆಕಾರ್ಡ್ ಮಾಡಿದ್ದರು. ತನಿಖೆ ವೇಳೆ ವಿದೇಶಿ ಹ್ಯಾಂಡ್ಲರ್ ಗಳಿಂದ ಕ್ರಿಪ್ಟೋ ಕರೆನ್ಸಿ ರೂಪದಲ್ಲಿ ಹಣ ಪಡೆದಿರುವುದು ಪತ್ತೆಯಾಗಿತ್ತು. ತನ್ನ ಸ್ನೇಹಿತರ ಖಾತೆಗಳಿಗೆ 1.5 ಲಕ್ಷ ಕ್ರಿಪ್ಟೋ ಕರೆನ್ಸಿ ಪಡೆದಿದ್ದ ಮಾಜ್. ಸೈಯದ್ ಯಾಸಿನ್ ಸ್ನೇಹಿತನ ಖಾತೆಗೆ 62 ಸಾವಿರ ಹಣ ಜಮೆ‌ಯಾಗಿತ್ತು.

ನೀರಿನ ಡ್ರಮ್‌ನಲ್ಲಿ ಮಹಿಳೆ ಡೆಡ್ ಬಾಡಿ, ಕಲಾಸಿಪಾಳ್ಯದ ಗಲ್ಲಿಯಲ್ಲಿ ಡೆಡ್ಲಿ ಮರ್ಡರ್..!

ಇದರ ಮುಂದುವರಿದ ಭಾಗವಾಗಿ ಶಾರಿಕ್ ಬಾಂಬ್‌ ಬ್ಲಾಸ್ಟ್ ಗೆ ಪ್ಲಾನ್ ಮಾಡಿದ್ದ.ನವೆಂಬರ್ 19, 2022 ರಂದು ಮಂಗಳೂರಿನ ಕದ್ರಿ ದೇವಸ್ಥಾನದಲ್ಲಿ ಐಇಡಿ ಸ್ಫೋಟಕ್ಕೆ ಪ್ಲಾನ್ ಮಾಡಿದ್ದ,  ದಾರಿ ಮಧ್ಯೆ ಟೈಮರ್ ಅಸಮರ್ಪಕ ಕಾರ್ಯದಿಂದ ಐಇಡಿ ಸ್ಪೋಟಗೊಂಡಿತ್ತು. ಸಂಪೂರ್ಣ ಪ್ರಕರಣ ಸಂಬಂಧ ಆರು ಆರೋಪಿಗಳ ವಿರುದ್ಧ ಎನ್ಐಎ ತನಿಖೆ ಮುಂದುವರಿಸಿದೆ. 

Latest Videos
Follow Us:
Download App:
  • android
  • ios