Shivamogga: ಲಾಂಗು-ಮಚ್ಚುಗಳೊಂದಿಗೆ ವಿಡಿಯೋ ಚಿತ್ರೀಕರಿಸಿದ ಯುವಕನ ಬಂಧನ

ಲಾಂಗು-ಮಚ್ಚುಗಳೊಂದಿಗೆ ವಿಡಿಯೋ ಚಿತ್ರೀಕರಿಸಿದ ಯುವಕನನ್ನು ಶಿವಮೊಗ್ಗದ  ತುಂಗಾನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಶಿವಮೊಗ್ಗ ತಾಲೂಕಿನ ಅಗಸವಳ್ಳಿಯ ಗೌಳಿ ಕ್ಯಾಂಪ್‌ನ ಇಸ್ಮಾಯಿಲ್ (20) ಬಂಧಿತ ಆರೋಪಿಯಾಗಿದ್ದಾನೆ.

Shivamogga youth arrested for shooting video of weapons gvd

ಶಿವಮೊಗ್ಗ (ಅ.06): ಲಾಂಗು-ಮಚ್ಚುಗಳೊಂದಿಗೆ ವಿಡಿಯೋ ಚಿತ್ರೀಕರಿಸಿದ ಯುವಕನನ್ನು ಶಿವಮೊಗ್ಗದ  ತುಂಗಾನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಶಿವಮೊಗ್ಗ ತಾಲೂಕಿನ ಅಗಸವಳ್ಳಿಯ ಗೌಳಿ ಕ್ಯಾಂಪ್‌ನ ಇಸ್ಮಾಯಿಲ್ (20) ಬಂಧಿತ ಆರೋಪಿಯಾಗಿದ್ದು, ಈತ ಸಾಮಾಜಿಕ ಜಾಲತಾಣದಲ್ಲಿ ಲಾಂಗು-ಮಚ್ಚುಗಳೊಂದಿಗೆ ಇರುವ ವಿಡಿಯೋ ಹರಿಬಿಟ್ಟು ಸಾರ್ವಜನಿಕರಲ್ಲಿ ಭಯ ಉಂಟು ಮಾಡಿದ್ದ. 

ಮಾತ್ರವಲ್ಲದೇ ಈತ ಫೇಸ್‌ಬುಕ್‌ನಲ್ಲಿ ಇಸ್ಮಾಯಿಲ್ ಇಸ್ಮಾಯಿಲ್ ಎಂಬ ಖಾತೆ ಹೊಂದಿದ್ದ. ಜೊತೆಗೆ ಐದಾರು ಮಚ್ಚು ಮತ್ತು ತಲ್ವಾರ್‌ಗಳ ನಡುವೆ ಕಾಣಿಸಿಕೊಳ್ಳುವ ತನ್ನದೇ ವಿಡಿಯೋ ಮಾಡಿ ಹರಿಬಿಟ್ಟಿದ್ದ. ಈ ಬಗ್ಗೆ ಸುಮೋಟೋ ಪ್ರಕರಣವನ್ನು ತುಂಗಾನಗರ ಠಾಣೆ ಪೊಲೀಸರು ದಾಖಲಿಸಿಕೊಂಡಿದ್ದರು. ಇನ್ನು ಇಸ್ಮಾಯಿಲ್ ತಮಿಳುನಾಡಿಗೆ ಹೋದಾಗ ಈ ಕೃತ್ಯವೆಸಗಿದ್ದಾನೆ ಎನ್ನಲಾಗಿದೆ.

ರಸ್ತೆ ಡಿವೈಡರ್‌ಗೆ ಕಾರು ಡಿಕ್ಕಿ; ಶಾಸಕ ಅರವಿಂದ್ ಬೆಲ್ಲದ್ ಚಿಕ್ಕಪ್ಪನ ಸ್ಥಿತಿ ಗಂಭೀರ

ಅಬಕಾರಿ ಅಧಿಕಾರಿಗಳ ದಾಳಿ: ಅಕ್ರಮ ಮದ್ಯ ಮಾರಾಟಕ್ಕೆ ಸಂಬಂಧಿಸಿ ಅಬಕಾರಿ ಜಿಲ್ಲಾಧಿಕಾರಿ ಕಾರ್ಯಾಲಯದ ತಂಡ ಮತ್ತು ವಿಜಯಪುರ ಉಪವಿಭಾಗದ ಹಾಗೂ ವಲಯ ಅಧಿಕಾರಿಗಳ ತಂಡ ಸೋಮವಾರ ಸಂಜೆ ಮಿಣಜಗಿ ಗ್ರಾಮದ ಅಕ್ರಮ ಸಾರಾಯಿ ಮಾರಾಟದ ಅಂಗಡಿಗಳ ಮೇಲೆ ದಾಳಿ ಇಬ್ಬರನ್ನು ಬಂಧಿಸಿ, ಅಕ್ರಮ ಸಾರಾಯಿ ವಶಕ್ಕೆ ಪಡೆದ ಘಟನೆ ಮಿಜಣಗಿ ಗ್ರಾಮದಲ್ಲಿ ನಡೆದಿದೆ.

ಮಿಣಜಗಿ ಗ್ರಾಮದಲ್ಲಿ ಅಕ್ರಮ ಸಾರಾಯಿ ಮಾರಾಟಕ್ಕೆ ಸಂಬಂಧಿಸಿ ಮಹಿಳೆಯರು ಹಾಗೂ ಹಿರಿಯರು ಮಿಣಜಗಿ ಗ್ರಾಮಕ್ಕೆ ಭೇಟಿ ನೀಡಿದ್ದ ಜನಪ್ರತಿನಿಧಿ ಬಳಿ ಸಮಸ್ಯೆಯನ್ನು ಅವಲತ್ತುಕೊಂಡಿದ್ದರು. ಅದೇ ಸಮಯದಲ್ಲಿ ಶಾಸಕರು ಜಿಲ್ಲಾ ಅಬಕಾರಿ ಇಲಾಖೆಯ ಅಧಿಕಾರಿಗಳಿಗೆ ಸೂಕ್ತ ಕ್ರಮಕ್ಕೆ ಕಡಕ್ಕಾಗಿ ಸೂಚಿಸಿದ್ದರು. ಶಾಸಕ ನಡಹಳ್ಳಿ ಅವರು ಸೂಚಿಸಿದ 1 ಘಂಟೆಯೊಳಗೆ ದಾಳಿ ಮಾಡಿರುವ ಅಬಕಾರಿ ಅಧಿಕಾರಿಗಳು ಅಕ್ರಮ ಸರಾಯಿಯ ಜೊತೆ ಕಳ್ಳಬಟ್ಟಿಸಾರಾಯಿಯು ದೊರೆತ್ತಿದ್ದು ಅವುಗಳಲ್ಲಿಯ ಕೆಲವನ್ನು ಸ್ಥಳದಲ್ಲಿಯೇ ನಾಶ ಪಡಿಸಿದ್ದರೆ ಇನ್ನು ಕೆಲವಿಷ್ಟುಕಳ್ಳಬಟ್ಟಿತುಂಬಿದ ಬಾಟಲಿಗಳನ್ನು ವಶಕ್ಕೆ ಪಡೆದುಕೊಂಡು ತೆರಳಿದರು.

ಮಿಣಜಗಿ ಗ್ರಾಮದಲ್ಲಿ ಅಧಿಕಾರಿಗಳು ದಾಳಿ ನಡೆಸುತ್ತಿದ್ದಾಗ ಕೆಲವು ಚಿಕ್ಕ ಚಿಕ್ಕ ಮಕ್ಕಳು ಮತ್ತು ಮಹಿಳೆಯರೇ ಮುಂದೆ ಬಂದು ಯಾವ ಯಾವ ಮನೆಯಲ್ಲಿ ಅಂಗಡಿಯಲ್ಲಿ ಸಾರಾಯಿ ಮಾರುತ್ತಾರೆ ಎಲ್ಲಿ ಇಟ್ಟಿದ್ದಾರೆಂಬುದುನ್ನು ಧೈರ್ಯದಿಂದ ತೋರಿಸುತ್ತಿದ್ದರೂ ತಾಲೂಕಿನ ಅಬಕಾರಿ ಅಧಿಕಾರಿ ಜ್ಯೋತಿಬಾ ಮೇತ್ರಿ ಅವರು ಮುಂದೆ ಮುಂದೆ ಹೋಗುತ್ತಿರುವುದು ಅನುಮಾನ ಹುಟ್ಟಿಸುವಂತೆ ಕಾಣುತ್ತಿತ್ತು. ಕೆಲವರು ಮನೆಯಲ್ಲಿಯ ಬ್ಯಾರಲ್‌ಗಳಲ್ಲಿ ಮುಚ್ಚಿಟ್ಟಿದ್ದರೆ ಇನ್ನೂ ಕೆಲವರು ನೀರಿನ ಟಾಕಿ ಮತ್ತು ಕೊಡಗಳಲ್ಲಿ, ಜೋಳದ ಚೀಲಗಳಲ್ಲಿ ಮುಚ್ಚಿಟ್ಟು ಮಾರಾಟ ಮಾಡುತ್ತಿರುವುದು ದಾಳಿಯ ವೇಳೆ ಸಿಕ್ಕಿ ಬಿದ್ದಾಗ ಬಯಲಿಗೆ ಬಂದಿತು.

ಮೈದುನನ ಜತೆ ಸಂಬಂಧ: ಕೊಲೆ ಯತ್ನ ಕೇಸಲ್ಲಿ ತಲೆಮರಿಸಿಕೊಂಡಿದ್ದ ಪತ್ನಿಯನ್ನು ಕೊಂದ ಪತಿ

ಅಬಕಾರಿ ಜಿಲ್ಲಾಧಿಕಾರಿ ಕಾರ್ಯಾಲಯದ ಸಿಬ್ಬಂದಿ ಮಹಾದೇವ ಪೂಜಾರಿ, ಉಪ ವಿಭಾಗದ ಮಂಜುನಾಥ ಶಿರಹಟ್ಟಿತಮ್ಮ ಸಿಬ್ಬಂದಿ ಜೊತೆಗೆ ಅಕ್ರಮವಾಗಿ ಮಾರಲು ಇಟ್ಟಿದ್ದ ಸಾರಾಯಿಯನ್ನು ವಶಕ್ಕೆ ಪಡೆದುಕೊಂಡರಲ್ಲದೇ ಇಬ್ಬರನ್ನು ಬಂಧಿಸಿದರು.

Latest Videos
Follow Us:
Download App:
  • android
  • ios