ಪ್ರೇಮ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಕುಟುಂಬಗಳ ನಡುವೆ ಮಾರಾಮಾರಿ!
ಪ್ರೀತಿ ವಿಚಾರಕ್ಕಾಗಿ ಎರಡೂ ಕುಟುಂಬ ನಡುವೆ ದೊಡ್ಡ ಮಟ್ಟದ ಗಲಾಟೆ ನಡೆಸಿದೆ. ಯುವತಿಯ ಮನೆಯವರಿಂದ ಯುವಕನ ಸಂಬಂಧಿಕರ ಮೇಲೆ ಹಲ್ಲೆ ನಡೆಸಿದ್ದಾರೆ. ಮೂಲಗಳ ಪ್ರಕಾರ, ಯುವಕನ ಸಂಬಂಧಿಕರಿಗೆ ಯುವತಿಯ ಮನೆಯವರು ಚಪ್ಪಲಿಯಿಂದ ಹೊಡೆದು ಹಲ್ಲೆ ಮಾಡಿದ್ದಾರೆ ಎಂದು ಹೇಳಲಾಗಿದೆ.
ಕೊಪ್ಪಳ (ಜೂನ್ 13): ಪ್ರೇಮ ಪ್ರಕರಣಕ್ಕೆ (Love Casse) ಸಂಬಂಧಪಟ್ಟಂತೆ ಎರಡು ಕುಟುಂಬಗಳ ನಡುವೆ ಮಾರಾಮಾಡಿ ನಡೆದಿದ್ದು, 9 ವ್ಯಕ್ತಿಗಳ ವಿರುದ್ಧ ದೂರು ದಾಖಲಾಗಿರುವ ಘಟನೆ ಇಲ್ಲಿ ಯಲಬುರ್ಗಾ (Yalburga) ತಾಲೂಕಿನ ಗಾಣದಾಳ (Ganadhal) ಗ್ರಾಮದಲ್ಲಿ ನಡೆದಿದೆ.
ಪ್ರೀತಿ ವಿಚಾರಕ್ಕಾಗಿ ಎರಡೂ ಕುಟುಂಬ ನಡುವೆ ದೊಡ್ಡ ಮಟ್ಟದ ಗಲಾಟೆ ನಡೆಸಿದೆ. ಯುವತಿಯ ಮನೆಯವರಿಂದ ಯುವಕನ ಸಂಬಂಧಿಕರ ಮೇಲೆ ಹಲ್ಲೆ ನಡೆಸಿದ್ದಾರೆ. ಮೂಲಗಳ ಪ್ರಕಾರ, ಯುವಕನ ಸಂಬಂಧಿಕರಿಗೆ ಯುವತಿಯ ಮನೆಯವರು ಚಪ್ಪಲಿಯಿಂದ ಹೊಡೆದು ಹಲ್ಲೆ ಮಾಡಿದ್ದಾರೆ ಎಂದು ಹೇಳಲಾಗಿದೆ.
ಗ್ರಾಣದಾಳ ಗ್ರಾಮದವರೇ ಆದ ಕುರುಬ (Kuruba) ಸಮುದಾಯದ ಯುವತಿ ಹಾಗೂ ವಾಲ್ಮೀಕಿ (Valmiki) ಸಮುದಾಯದ ಯುವಕ ಕಳೆದ ಕೆಲ ವರ್ಷಗಳಿಂದ ಪರಸ್ಪರ ಪ್ರೀತಿ ಮಾಡುತ್ತಿದ್ದರು. ಆದರೆ, ಇದು ಯುವತಿಯ ಮನೆಯವರಿಗೆ ಇಷ್ಟವಿರಲಿಲ್ಲ.ಯುವಕ ಯುವತಿ ಮನೆಯವರ ವಿರೋಧದ ನಡುವೆಯೂ ಕೆಲ ಕಾಲ ಗ್ರಾಮ ತೊರೆದು ಓಡಿ ಹೋಗಿದ್ದರು.
ನಂತರ ರಾಜಿ ಪಂಚಾಯಿತಿ ಮಾಡಿ ಪ್ರಸ್ತುತ ಯುವಕ ಹಾಗೂ ಯುವತಿಯನ್ನು ಹುಡುಗಿಯ ಮನೆಯವರು ಬೇರೆ ಬೇರೆ ಮಾಡಿದ್ದರು. ಬೇರೆ ಸಮುದಾಯದ ಹುಡುಗ ಎನ್ನುವ ಕಾರಣಕ್ಕಾಗಿ ಸಿಟ್ಟಿನಿಂದ ಯುವತಿಯ ಮನೆಯವರು ಹಲ್ಲೆ ಮಾಡಿದ್ದಾರೆ. ವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾರೆಂದು ಆರೋಪಿಸಲಾಗಿದೆ. ಕೆಟ್ಟ ಕೆಟ್ಟ ಶಬ್ದಗಳಿಂದ ಬೈದಿದ್ದು ಮಾತ್ರವಲ್ಲದೆ, ಸಂಬಂಧಿಕರಿಗೆ ಚಪ್ಪಲಿಯಿಂದ ಹೊಡೆದು ಜೀವ ಬೆದರಿಕೆ ಹಾಕಿದ್ದಾರೆಂದು ಯುವಕನ ಕಡೆಯವರು ದೂರು ದಾಖಲಿಸಿದ್ದಾರೆ.
ಹೊಡೆದಾಟದ ದೃಶ್ಯ ಮೊಬೈಲ್ ನಲ್ಲಿ ಸೆರೆ: ಎರಡೂ ಕುಟುಂಬಗಳ ಸದಸ್ಯರು ಹೊಡೆದಾಟ ನಡೆಸುತ್ತಿರೋ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ. ಘಟನೆಯುಲ್ಲಿ ಹಲ್ಲೆಗೊಳಗಾದ ಹೊನ್ನಮ್ಮ ಎಂಬುವರಿಂದ ಪೊಲೀಸ್ ಸ್ಟೇಷನ್ ನಲ್ಲಿ ದೂರು ದಾಖಲಿಸಿದ್ದಾರೆ. ಬೇವೂರು ಪೊಲೀಸ್ ಠಾಣೆಯಲ್ಲಿ 9 ಜನರ ವಿರುದ್ಧ ದೂರು ದಾಖಲಾಗಿದೆ.
ಎರಡು ಕುಟುಂಬಗಳ ನಡುವಿನ ಗಲಾಟೆಯಲ್ಲಿ ಇಬ್ಬರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಇವರಿಗೆ ಕೊಪ್ಪಳ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬೇವೂರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 143,147,323,354,355,504,506 ಅಡಿಯಲ್ಲಿ ದೂರು ದಾಖಲಾಗಿದೆ.