ಚಿಕ್ಕಬಳ್ಳಾಪುರದಲ್ಲಿ, ಸಂದೀಪ್ ಎಂಬ ಯುವಕನನ್ನು ಪ್ರೀತಿಸಿ ಮದುವೆಯಾದ ಯುವತಿಯೊಬ್ಬಳು ಎರಡೇ ದಿನದಲ್ಲಿ ಆತನಿಂದ ದೂರವಾಗಿದ್ದಾಳೆ. ಪೊಲೀಸ್ ಠಾಣೆಯಲ್ಲಿ ಪ್ರಿಯಕರನ ಮೇಲಿದ್ದ ಪೋಕ್ಸೋ ಪ್ರಕರಣ ಹಾಗೂ ಇತರ ಮೋಸದ ಜಾಲ ಬಯಲಾಗುತ್ತಿದ್ದಂತೆ, ಯುವತಿ ತಾಳಿ ಕಿತ್ತೆಸೆದು ಪೋಷಕರೊಂದಿಗೆ ಮರಳಿದ್ದಾಳೆ.
ಚಿಕ್ಕಬಳ್ಳಾಪುರ: ಪ್ರೀತಿಸಿ ಮದುವೆಯಾದ ಎರಡನೇ ದಿನಕ್ಕೆ ಯುವತಿ ತಾಳಿ ಕಿತ್ತೆಸೆದಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಪೊಲೀಸ್ ಠಾಣೆಯಲ್ಲಿ ಕುಟುಂಬಸ್ಥರ ಮುಂದೆ ಯುವಕನ ಜೊತೆಗಿನ ಮದುವೆಯನ್ನು ಮುರಿದುಕೊಂಡಿದ್ದಾಳೆ. ಯುವಕನಿಂದ ದೂರವಾಗಿ ಪೋಷಕರೊಂದಿಗೆ ಯುವತಿ ಮರಳಿದ್ದಾಳೆ. ಮದುವೆಯಾದ ಎರಡನೇ ದಿನಕ್ಕೆ ಆಗಿದ್ದೇನು? ಯುವತಿ ತಾಳಿ ಕಳಚಿದ್ಯಾಕೆ ಎಂಬುದನ್ನು ನೋಡೋಣ ಬನ್ನಿ.
ಎರಡು ದಿನಗಳ ಹಿಂದೆ ಎಸ್ಕೇಪ್!
ಸಂದೀಪ್ ಎಂಬಾತ ಚಿಕ್ಕಬಳ್ಳಾಪುರ ತಾಲೂಕಿನ ನಾಯನಹಳ್ಳಿ ಗ್ರಾಮದ ಅಪ್ರಾಪ್ತೆಯನ್ನು ಪ್ರೀತಿಸುತ್ತಿದ್ದನು. ಎರಡು ದಿನಗಳ ಹಿಂದೆಯಷ್ಟೇ ಅಪ್ರಾಪ್ತೆಯೊಂದಿಗೆ ಜೂಟ್ ಆಗಿದ್ದ ಸಂದೀಪ್, ಚಿಕ್ಕಬಳ್ಳಾಪುರದ ಚಿಂತಾಮಣಿಯ ದೇವಸ್ಥಾನದಲ್ಲಿ ಮದುವೆಯಾಗಿದ್ದನು. ಮದುವೆ ಬಳಿಕ ಅಪ್ರಾಪ್ತೆ ಜೊತೆ ಸಂದೀಪ್ ಚಿಕ್ಕಬಳ್ಳಾಪುರಕ್ಕೆ ಬರುತ್ತಿದ್ದದ್ದನು. ಶಿಡ್ಲಘಟ್ಟ ನಗರಕ್ಕೆ ಬರುತ್ತಿದ್ದಂತೆ ಕಾರ್ ಅಡ್ಡಗಟ್ಟಿದ ಅಪ್ರಾಪ್ತೆ ಪೋಷಕರು ಇಬ್ಬರನ್ನು ಮಹಿಳಾ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿದ್ದಾರೆ.
ಪೊಲೀಸ್ ಠಾಣೆಗೆ ಬರುತ್ತಿದ್ದಂತೆ ಸಂದೀಪ್ ಒಂದೊಂದೇ ಮುಖವಾಡ ಬೆಳಕಿಗೆ ಬಂದಿದೆ. ಆರಂಭದಲ್ಲಿ ನಾವಿಬ್ಬರು ಪ್ರೀತಿಸಿ ಮದುವೆಯಾಗಿದ್ದು, ನಮ್ಮಿಬ್ಬರನ್ನು ಬಿಟ್ಟುಬಿಡಿ ಎಂದು ಸಂದೀಪ್ ಮನವಿ ಮಾಡಿಕೊಂಡಿದ್ದನು. ಈ ವೇಳೆಗಾಗಲೇ ಸಂದೀಪ್‌ನ ಪ್ರೇಮ ಪ್ರಕರಣಗಳು ಬಯಲಾಗಿವೆ. ಪೊಲೀಸ್ ಠಾಣೆಯಲ್ಲಿ ಪ್ರಿಯಕರ ಸಂದೀಪ್‌ನ ಬಂಡವಾಳ ಬಯಲಾಗ್ತಿದ್ದಂತೆ ಅಪ್ರಾಪ್ತೆ ಶಾಕ್ ಆಗಿದ್ದಳು.
ಇದನ್ನೂ ಓದಿ: ಆನ್‌ಲೈನ್ ಬೆಟ್ಟಿಂಗ್‌ಗೆ ಹಣ ನೀಡದ ಹೆಂಡ್ತಿ, ಆಕೆಯ ಬೆತ್ತ*ಲೆ ಫೋಟೋ ಸೋಶಿಯಲ್ ಮೀಡಿಯಾಗೆ ಹಾಕಿ ವಿಕೃತಿ!
ಬೆಂಗಳೂರಿನಲ್ಲಿ ಪೋಕ್ಸೋ ಕೇಸ್ ದಾಖಲು
ಪ್ರೇಮಿ ಸಂದೀಪ್ ನವರಂಗಿ ಆಟ ತಿಳಿಯುತ್ತಿದ್ದಂತೆ ಅಪ್ರಾಪ್ತೆ ಪೊಲೀಸರು ಮತ್ತು ಪೋಷಕರ ಮುಂದೆಯೇ ತಾಳಿ ಕಿತ್ತು ಎಸೆದಿದ್ದಾಳೆ. ಇದೇ ವೇಳೆ ಈ ಹಿಂದೆ ಸಂದೀಪ್‌ನಿಂದ ಮೋಸಕ್ಕೊಳಗಾಗಿದ್ದ ಅಪ್ರಾಪ್ತೆ ಪೊಲೀಸ್ ಠಾಣೆಗೆ ಬಂದು ಸಾಕ್ಷಿ ಹೇಳಿದ್ದಾಳೆ. ಪ್ರಶಾಂತ್ ನಗರದಲ್ಲಿಯೂ ಮಹಿಳೆಯೊಬ್ಬರಿಗೆ ಸಂದೀಪ್ ಮೋಸ ಮಾಡಿದ್ದನು. ಈ ಸಂಬಂಧ ಬೆಂಗಳೂರಿನ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ: ಮತ್ತೊಂದು ಧಾರಾವಾಹಿ ಜೋಡಿಗೆ ಡಿವೋರ್ಸ್; ಹಾಸ್ಯ ನಟನ ಬಿಟ್ಟು ದುಬೈಗೆ ಹಾರಿದ ಹೆಂಡತಿ!


