'ಕನಸಿನ ರಾಜ' ಅಂದ್ಕೊಂಡು ಆರೋಪಿ ಸುಕೇಶ್ ಜೊತೆ ಮದುವೆಗೆ ಸಜ್ಜಾಗಿದ್ದ ಜಾಕ್ವೆಲಿನ್; ಶಾಕಿಂಗ್ ವಿಚಾರ ಬಹಿರಂಗ
200 ಕೋಟಿ ರೂಪಾಯಿಗೂ ಅಧಿಕ ಹಣ ವಂಚನೆ ಆರೋಪದಲ್ಲಿ ಜೈಲು ಸೇರಿರುವ ಸುಕೇಶ್ ಚಂದ್ರಶೇಖರ್ ವಿರುದ್ಧ ತನಿಖೆ ನಡೆಯುತ್ತಿದೆ. ವಂಚನೆ ಆರೋಪಿ ಸುಕೇಶ್ ಚಂದ್ರಶೇಖರ್ ಅವರನ್ನು ಜಾಕ್ವೆಲಿನ್ ಫರ್ನಾಂಡಿಸ್ ಮದುವೆ ಆಗಲು ನಿರ್ಧರಿಸಿದ್ದರು ಎಂಬ ವಿಚಾರ ಬಹಿರಂಗವಾಗಿದೆ.
200 ಕೋಟಿ ರೂಪಾಯಿಗೂ ಅಧಿಕ ಹಣ ವಂಚನೆ ಆರೋಪದಲ್ಲಿ ಜೈಲು ಸೇರಿರುವ ಸುಕೇಶ್ ಚಂದ್ರಶೇಖರ್ ವಿರುದ್ಧ ತನಿಖೆ ನಡೆಯುತ್ತಿದೆ. ಈ ಪ್ರಕರಣದಲ್ಲಿ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಮತ್ತು ನೋರಾ ಫತೇಹಿ ಹೆಸರು ಕೇಳಿಬರುತ್ತಿದ್ದು ಈ ಇಬ್ಬರೂ ಸ್ಟಾರ್ ನಟಿಯರು ಸಹ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸುಕೇಶ್ ಜೊತೆ ಸಂಪರ್ಕದಲ್ಲಿ ಇದ್ದರು ಎಂಬ ಕಾರಣಕ್ಕೆ ಬಾಲಿವುಡ್ ನಟಿಯರಾದ ಜಾಕ್ವೆಲಿನ್ ಫರ್ನಾಂಡಿಸ್ ಮತ್ತು ನೋರಾ ಫತೇಹಿ ಅವರನ್ನು ವಿಚಾರಣೆ ನಡೆಸಲಾಗುತ್ತಿದೆ. ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ. ಇದೀಗ ಜಾಕ್ವೆಲಿನ್ ಬಗ್ಗೆ ಮತ್ತೊಂದು ಶಾಕಿಂಗ್ ಸತ್ಯ ಬಹಿರಂಗವಾಗಿದೆ. ವಂಚನೆ ಆರೋಪಿ ಸುಕೇಶ್ ಚಂದ್ರಶೇಖರ್ ಅವರನ್ನು ಜಾಕ್ವೆಲಿನ್ ಫರ್ನಾಂಡಿಸ್ ಮದುವೆ ಆಗಲು ನಿರ್ಧರಿಸಿದ್ದರು ಎಂಬ ವಿಚಾರ ಬಹಿರಂಗವಾಗಿದೆ.
ಜಾಕ್ವೆಲಿನ್ ಫರ್ನಾಂಡಿಸ್ ಮತ್ತು ಸುಕೇಶ್ ಚಂದ್ರಶೇಖರ್ ಇಬ್ಬರು ತುಂಬಾ ಆಪ್ತರಾಗಿದ್ದರು. ಇದಕ್ಕೆ ಸಾಕ್ಷಿ ಎಂಬಂತೆ ಇಬ್ಬರು ತುಂಬಾ ಕ್ಲೋಸ್ ಆಗಿ ಕ್ಲಿಕ್ಕಿಸಿಕೊಂಡ ಫೋಟೋಗಳು. ಸುಕೇಶ್ ಜೊತೆ ತೀರಾ ಆಪ್ತವಾಗಿದ್ದ ಜಾಕ್ವೆಲಿನ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಇನ್ನು ಸುಕೇಶ್ ಅವರಿಂದ ದುಬಾರಿ ಗಿಫ್ಟ್‌ಗಳನ್ನು ಸಹ ಜಾಕ್ವೆಲನ್ ಪಡೆದದ್ದಾರೆ ಎನ್ನುವುದು ತನಿಖೆಯಲ್ಲಿ ಪತ್ತೆಯಾಗಿದೆ. ಇಬ್ಬರು ತಮ್ಮ ಸಂಬಂಧವನ್ನು ಮತ್ತೊಂದು ಹಂತಕ್ಕೆ ಅಂದರೆ ಮದುವೆ ಹಂತಕ್ಕೆ ತೆಗೆದುಕೊಂಡು ಹೋಗಲು ನಿರ್ಧರಿಸಿದ್ದರು ಎನ್ನುವ ಸತ್ಯ ಬಹಿರಂಗವಾಗಿದೆ. ‘ಸುಕೇಶ್ ಚಂದ್ರಶೇಖರ್ ತನ್ನ ಕನಸಿನ ಹುಡುಗ ಎಂದು ಜಾಕ್ವೆಲಿನ್ ಅಂದುಕೊಂಡಿದ್ದರು. ಹಾಗಾಗಿ ಅವರನ್ನೇ ಮದುವೆ ಆಗಲು ಜಾಕ್ವೆಲಿನ್ ನಿರ್ಧರಿಸಿದ್ದರು. ಈ ಬಗ್ಗೆ ತನ್ನ ಸ್ನೇಹಿತರ ಬಳಿ ಹೇಳಿಕೊಂಡಿದ್ದು ಶೀಘ್ರದಲ್ಲೇ ಅಧಿಕೃತವಾಗಿ ಬಹಿರಂಗ ಪಡಿಸುವ ನಿರ್ಧಾರ ಮಾಡಿದ್ದರು’ ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಎಎನ್ಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ ಎಂದು ಪಿಂಕ್ವಿಲ್ಲಾ ವರದಿ ಮಾಡಿದೆ.
ಸುಕೇಶ್ ಚಂದ್ರಶೇಖರ್ ನಿಜ ಬಣ್ಣ ನೋರಾ ಫತೇಹಿಗೆ ಗೊತ್ತಾದ ಬಳಿಕ ಅವರಿಂದ ಅಂತರ ಕಾಯ್ದು ಕೊಂಡರು. ಆದರೆ ಜಾಕ್ವೆಲಿನ್ ಫರ್ನಾಂಡಿಸ್ ಸುಖೇಶ್ ಜೊತೆ ತುಂಬಾ ಕ್ಲೋಸ್ ಆಗಿದ್ದರು ಎನ್ನುವ ಮಾಹಿತಿ ವಿಚಾರಣೆ ವೇಳೆ ತಿಳಿದುಬಂದಿದೆ.
ಸೆಪ್ಟಂಬರ್ 14ರಂದು ಜಾಕ್ವೆಲಿನ್ ಫರ್ನಾಂಡಿಸ್ ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗಿದ್ದರು. ಜಾಕ್ವೆಲಿನ್ ಅವರನ್ನು ಸತತ 9 ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಿದ್ದರು. ಈ ವೇಳೆ ಅನೇಕ ವಿಷಯಗಳ ಹೊರಬಂದಿವೆ. ಜಾಕ್ವೆಲಿನ್ ಮ್ಯಾನೇಜರ್ಗೆ ಸುಕೇಶ್ ನೀಡಿದ್ದ 8 ಲಕ್ಷ ರೂಪಾಯಿ ಬೆಲೆಯ ಬೈಕ್ ವಶಪಡಿಸಿಕೊಳ್ಳಲಾಗಿದೆ. ನೋರಾ ಫತೇಹಿ ಅವರನ್ನು ಸುಕೇಶ್ ಚಂದ್ರಶೇಖರ್ ಎಂದಿಗೂ ನೇರವಾಗಿ ಭೇಟಿ ಆಗಿಲ್ಲ. ಬದಲಿಗೆ ಎರಡು ಬಾರಿ ವಾಟ್ಸಪ್ ಮೂಲಕ ಸಂಪರ್ಕಿಸಿದ್ದರು. ಚೆನ್ನೈನ ಸ್ಟುಡಿಯೋಗೆ ಗೆಸ್ಟ್ ಆಗಿ ಬರುವಂತೆ ನೋರಾಗೆ ಸುಕೇಶ್ ಆಹ್ವಾನ ನೀಡಿದ್ದರು. ಜೊತೆಗೆ ಬಿಎಂಡಬ್ಲ್ಯು ಕಾರನ್ನು ಗಿಫ್ಟ್ ಕೊಡುವುದಾಗಿಯೂ ಆಸೆ ತೋರಿಸಿದ್ದರು ಎನ್ನಲಾಗಿದೆ.
ಜಾಕ್ವೆಲಿನ್ ಕಾಸ್ಟ್ಯೂಮ್ ಡಿಸೈನರ್ ವಿಚಾರಣೆ
ಜಾಕ್ವೆಲಿನ್ ಫರ್ನಾಂಡಿಸ್ ಅವರ ಕಾಸ್ಟ್ಯೂಮ್ ಡಿಸೈನರ್ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಸುಕೇಶ್ ಚಂದ್ರಶೇಖರ್, ಜೀಕ್ವೆಲಿನ್ ಡ್ರೆಸ್ ಡಿಸೈನ್ ಮಾಡಲು ಭಾರಿ ಮೊತ್ತದ ಹಣ ನೀಡಿದ್ದರು ಎನ್ನುವ ಮಾಹಿತಿ ವಿಚಾರಣೆ ವೇಳೆ ಬಹಿರಂಗವಾಗಿದೆ.
ಸುಕೇಶ್ ಚಂದ್ರಶೇಖರ್‌ಗೆ ಮಾಡೆಲ್ ಮತ್ತು ನಟಿಯರನ್ನು ಸಂಪರ್ಕಿಸುತ್ತಿದ್ದ ಪಿಂಕಿ ಇರಾನಿ
ಭಾವನಾತ್ಮಕವಾಗಿ ಸುಕೇಶ್‌ಗೆ ಕನೆಕ್ಟ್ ಆಗಿದ್ದ ಜಾಕ್ವೆಲಿನ್
ಜಾಕ್ವೆಲಿನ್ ಫರ್ನಾಂಡಿಸ್ ಆರೋಪಿ ಸುಕೇಶ್ ಜೊತೆ ಭಾವನಾತ್ಮಕವಾಗಿ ಕನೆಕ್ಟ್ ಆಗಿದ್ದರು ಎನ್ನಲಾಗಿದೆ. ಜಾಕಾಕ್ವೆಲಿನ್ ಹೇರ್ ಸ್ಟೈಲಿಸ್ಟ್ ಸುಕೇಶ್ ಬಗ್ಗೆ ಪ್ರಕಟವಾಗಿದ್ದ ಆರೋಪದ ಸುದ್ದಿಯನ್ನು ತೋರಿಸಿದ್ದಕ್ಕೆ ಜಾಕ್ವೆಲಿನ್ ಸಿಕ್ಕಾಪಟ್ಟೆ ಕೋಪಮಾಡಿಕೊಂಡಿದ್ದರು ಎನ್ನುವ ಸತ್ಯ ಬಹಿರಂಗವಾಗಿದೆ.
ಪಿಂಕಿ ಇರಾನಿ ವಿಚಾರಣೆ
ಜಾಕ್ವೆಲಿನ್ ಫರ್ನಾಂಡಿಸ್ ಅವರನ್ನು ಸುಕೇಶ್‌ಗೆ ಪರಿಚಯಿಸಲು ಪಿಂಕಿ ಇರಾಗೆ ಕೋಟಿಗಟ್ಟಲೆ ಹಣ ನೀಡಲಾಗಿತ್ತು ಎನ್ನುವ ಆರೋಪ ಕೇಳಿಬಂದಿದೆ. ಜಾಕ್ವೆಲಿನ್ನನ್ನು ಸುಕೇಶ್‌ಗೆ ಪರಿಚಯಿಸಿವು ಟಾಸ್ಕ್ ಪಡೆದಿದ್ದ ಪಿಂಕಿ ಇರಾನಿಯನ್ನು ಕೂಡ ವಿಚಾರಣೆ ನಡೆಸಲಾಗಿದೆ. ಸುಕೇಶ್ ಇತಿಹಾಸ ಗೊತ್ತಾಗಿ ಪಿಂಕಿ ಇರಾನಿ ಬಳಿ ಕೇಳಿದ್ದಕ್ಕೆ ಜಾಕ್ವೆಲಿನ್ ಅವರನ್ನು ಒಪ್ಪಿಸಿದ್ದಾರೆ ಎನ್ನುವ ಮಾಹಿತಿ ರಿವೀಲ್ ಆಗಿದೆ.
Rs 225 Crore Fraud Case: ಸುಕೇಶ್ ಚಂದ್ರಶೇಖರ್ ಪ್ರಕರಣ: ನೋರಾ ಫತೇಹಿಗೆ ಮತ್ತೆ ಸಮನ್ಸ್
ಸಿನಿಮಾಗಳು
ಜಾಕ್ವೆಲಿನ್ ಫರ್ನಾಂಡಿಸ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಶ್ರೀಲಂಕಾದ ಈ ಸುಂದರಿ ಕೊನೆಯದಾಗಿ ಕನ್ನಡದ ವಿಕ್ರಾಂತ್ ರೋಣ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನಿಮಾದ ರಾ..ರಾ.. ರಕ್ಕಮ್ಮ ಹಾಡು ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿದೆ. ಸುದೀಪ್ ಜೊತೆ ಮೊದಲ ಬಾರಿಗೆ ಹೆಜ್ಜೆ ಹಾಕುವ ಮೂಲಕ ಜಾಕ್ವೆಲಿನ್ ಸ್ಯಾಂಡಲ್ ವುಡ್‌ಗೆ ಕಾಲಿಟ್ಟಿದ್ದರು. ಸದ್ಯ ಜಾಕ್ವೆಲಿನ್ ಸರ್ಕಸ್, ರಾಮ್ ಸೇತು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.