Shivamogga: ಕದ್ದ ಮೊಬೈಲ್ ಮಾರಾಟ, ಹಣಕಾಸಿನ ವಿಷಯದಲ್ಲಿ ನಡೆಯಿತು ಕೊಲೆ!
ಭದ್ರಾವತಿಯ ಸತ್ಯಸಾಯಿ ನಗರದಲ್ಲಿ ನಡೆದ ಯುವಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಲಾಗಿದೆ. ಹೊಸಮನೆ ಠಾಣೆಯ ಪೊಲೀಸರಿಂದ ಇಬ್ಬರು ಆರೋಪಿಗಳ ಬಂಧನವಾಗಿದೆ.
ಶಿವಮೊಗ್ಗ (ಏ.22): ಭದ್ರಾವತಿಯ ಸತ್ಯಸಾಯಿ ನಗರದಲ್ಲಿ ನಡೆದ ಯುವಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಲಾಗಿದೆ. ಹೊಸಮನೆ ಠಾಣೆಯ ಪೊಲೀಸರಿಂದ ಇಬ್ಬರು ಆರೋಪಿಗಳ ಬಂಧನವಾಗಿದೆ. ಬಂಧಿತರನ್ನು ಸುಹೇಲ್ ಮತ್ತು ಸಾದತ್ ಎಂದು ಗುರುತಿಸಲಾಗಿದೆ. ಕದ್ದ ಮೊಬೈಲ್ ಮಾರಾಟ ಮಾಡಿ ಹಣಕಾಸಿನ ಚೌಕಾಸಿ ಹಿನ್ನೆಲೆ ಕ್ಷುಲ್ಲಕ ಕಾರಣಕ್ಕೆ ನವೀನ್ (28) ಎಂಬ ಯುವಕನನ್ನು ಚಾಕುವಿನಿಂದ ಹಿಡಿದು ಕೊಲೆ ಮಾಡಲಾಗಿತ್ತು.
ಅರುಣ್ ಅಲಿಯಾಸ್ ಕೊಕ್ಕು ಮತ್ತು ನವೀನ್ ಎರಡು ಮೊಬೈಲ್ ಗಳನ್ನ ಕದ್ದಿದ್ದರು. ಒಂದು ಮೊಬೈಲ್ ನ್ನ ಸುಹೇಲ್ ಯಾನೆ ಕೊಲವೇರಿ ಎಂಬುವರಿಗೆ ಮಾರಿದ್ದರು. ಸುಹೇಲ್ ಹಣ ಬಾಕಿ ಉಳಿಸಿಕೊಂಡಿದ್ದ, ಹೀಗಾಗಿ ಹಣ ಕೇಳಲು ಬಂದ ಅರುಣ ಯಾನೆ ಕೊಕ್ಕು ಮತ್ತು ನವೀನ ಜೊತೆ ಜಗಳವಾಗಿತ್ತು.
BENGALURU: ಕಾಲೇಜು ಪ್ರವೇಶ ನೆಪದಲ್ಲಿ 104 ವಿದೇಶಿಯರಿಗೆ ಟೋಪಿ: ಆರೋಪಿ ಬಂಧನ
ಈ ಗಲಾಟೆ ತರಕ್ಕೇರಿ ಸಾದತ್, ಸುಹೇಲ್ ಇತರರು ಸೇರಿಕೊಂಡು ನವೀನ್ ಗೆ ಚಾಕುವಿನಿಂದ ಬೆನ್ನಿಗೆ ಇರಿದ್ದಾರೆ. ಈ ಸಮಯದಲ್ಲಿ ಅವನ ಜೊತೆ ಇದ್ದ ಅರುಣ್ ಗಾಬರಿಯಿಂದ ಓಡಿ ಹೋಗಿದ್ದಾನೆ. ಮರಳಿ ಬಂದು ನೋಡಿದಾಗ ನವೀನ ರಕ್ತದ ಮಡುವಿನಲ್ಲಿ ಬಿದಿದ್ದ. ತಕ್ಷಣ ನವೀನನನ್ನು ಬೈಕ್ ನಲ್ಲಿ ಭದ್ರಾವತಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ನವೀನ ಮಾರ್ಗ ಮಧ್ಯದಲ್ಲಿ ಸಾವನ್ನಪ್ಪಿದ್ದಾನೆ.
Bengaluru: ಚೆಕ್ ಬೌನ್ಸ್ ಪ್ರಕರಣದ ಸಂಧಾನಕ್ಕೆ ಒಪ್ಪದ ವಕೀಲನಿಗೆ ಇರಿದ ಮಹಿಳೆ!
ಪತ್ನಿಯ ಕೊಂದ ಮೌಲ್ವಿಗೆ ಜೀವಾವಧಿ ಶಿಕ್ಷೆ
ಕಲಬುರಗಿ: ವರದಕ್ಷಿಣೆ ತರುವಂತೆ ಪತ್ನಿಗೆ ಮಾನಸಿಕ ದೈಹಿಕ ಹಿಂಸೆ ನೀಡಿ,ಶೀಲ ಶಂಕಿಸಿ ಅವಳನ್ನು ಕೊಲೆ ಮಾಡಿದ ಮೌಲ್ವಿಗೆ ಯಾದಗಿರಿಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಮತ್ತು ದಂಡ ವಿಧಿಸಿದೆ. ಯಾದಗಿರಿ ಜಿಲ್ಲೆ ಶಹಪುರ ತಾಲೂಕಿನ ಅಣಬಿ ಗ್ರಾಮದ ಮಸೀದಿಯಲ್ಲಿ ಮೌಲ್ವಿಯಾಗಿದ್ದ ಜೇವರಗಿ ತಾಲೂಕಿನ ಬಿರಾಳ (ಕೆ) ಗ್ರಾಮದ ಈ ವ್ಯಕ್ತಿ ತನ್ನ ಪತ್ನಿ ಶಾಹಿನಾ ಬೇಗಂ ಎಂಬುವವರನ್ನು 2016 ರ ಏ. 15 ರಂದು ಕತ್ತು ಹಿಸುಕಿ ಕೊಲೆ ಮಾಡಿದ್ದ. ಈ ಕುರಿತು ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಯಾದಗಿರಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಜಿ ನಂಜುಡಯ್ಯ ಅವರು ಸಾಕ್ಷಾಧಾರಗಳನ್ನು ಪರಿಶೀಲಿಸಿ, ಕೊಲೆ ಆರೋಪ ಸಾಬೀತಾದ್ದರಿಂದ ಮೌಲ್ವಿಗೆ ಜೀವಾವಧಿ ಶಿಕ್ಷೆ ಮತ್ತು ದಂಡ ವಿಧಿಸಿ ತೀರ್ಪು ನೀಡಿದ್ದಾರೆ.ಅಭಿಯೋಜನೆಯ ಪರವಾಗಿ ಸಾರ್ವಜನಿಕ ಅಭಿಯೋಜಕ ವಿಶ್ವನಾಥ ಉಭಾಳೆ ಅವರು ವಾದ ಮಂಡಿಸಿದ್ದರು.