Bengaluru: ಕಾಲೇಜು ಪ್ರವೇಶ ನೆಪದಲ್ಲಿ 104 ವಿದೇಶಿಯರಿಗೆ ಟೋಪಿ: ಆರೋಪಿ ಬಂಧನ

ನಗರದ ಖಾಸಗಿ ಕಾಲೇಜಿನಲ್ಲಿ ಪದವಿ ತರಗತಿಗೆ ಪ್ರವೇಶ ಕೊಡಿಸುವುದಾಗಿ ನಂಬಿಸಿ ಬಳಿಕ ಕಾಲೇಜಿನ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ 104 ವಿದೇಶಿ ಪ್ರಜೆಗಳನ್ನು ಭಾರತಕ್ಕೆ ಕರೆಸಿಕೊಂಡು ಪ್ರವೇಶ ಕೊಡಿಸದೆ ಅವರಿಗೆ ಅಕ್ರಮವಾಗಿ ನಗರದಲ್ಲಿ ನೆಲೆಸಲು ನೆರವಾಗಿದ್ದ ಎಂಬಿಎ ಪದವೀಧರನೊಬ್ಬನನ್ನು ಸಿಸಿಬಿ ಬಂಧಿಸಿದೆ.

Man arrested for defrauding 104 foreigners on the pretext of college admission at Bengaluru gvd

ಬೆಂಗಳೂರು (ಏ.22): ನಗರದ ಖಾಸಗಿ ಕಾಲೇಜಿನಲ್ಲಿ ಪದವಿ ತರಗತಿಗೆ ಪ್ರವೇಶ ಕೊಡಿಸುವುದಾಗಿ ನಂಬಿಸಿ ಬಳಿಕ ಕಾಲೇಜಿನ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ 104 ವಿದೇಶಿ ಪ್ರಜೆಗಳನ್ನು ಭಾರತಕ್ಕೆ ಕರೆಸಿಕೊಂಡು ಪ್ರವೇಶ ಕೊಡಿಸದೆ ಅವರಿಗೆ ಅಕ್ರಮವಾಗಿ ನಗರದಲ್ಲಿ ನೆಲೆಸಲು ನೆರವಾಗಿದ್ದ ಎಂಬಿಎ ಪದವೀಧರನೊಬ್ಬನನ್ನು ಸಿಸಿಬಿ ಬಂಧಿಸಿದೆ.

ಕಾವಲ್‌ ಭೈರಸಂದ್ರದ ಮುನೇಶ್ವರ ನಗರದ ನಿವಾಸಿ ಸಮೀರ್‌ ಖಾನ್‌ ಬಂಧಿತ. ಇತ್ತೀಚೆಗೆ ಸಂಜಯ ನಗರದ ಸವಿತಾ ಮಹರ್ಷಿ ಕಾಲೇಜಿನ ಪದವಿ ಪ್ರವೇಶ ಪಡೆದಿದ್ದ ವಿದೇಶಿ ವಿದ್ಯಾರ್ಥಿಗಳ ದಾಖಲೆಗಳನ್ನು ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿಯ (ಎಫ್‌ಆರ್‌ಓಓ) ಅಧಿಕಾರಿಗಳು ಪರಿಶೀಲಿಸಿದಾಗ ಈ ಅಕ್ರಮ ಬೆಳಕಿಗೆ ಬಂದಿದೆ. ಬಳಿಕ ಈ ಸಂಬಂಧ ಸಂಜಯ ನಗರ ಠಾಣೆಯಲ್ಲಿ ಎಫ್‌ಆರ್‌ಓಓ ಅಧಿಕಾರಿಗಳು ನೀಡಿದ ದೂರಿನ ಮೇರೆಗೆ ಎಫ್‌ಐಆರ್‌ ದಾಖಲಿಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಸಿಸಿಬಿ ತಿಳಿಸಿದೆ.

Bengaluru: ಚೆಕ್‌ ಬೌನ್ಸ್‌ ಪ್ರಕರಣದ ಸಂಧಾನಕ್ಕೆ ಒಪ್ಪದ ವಕೀಲನಿಗೆ ಇರಿದ ಮಹಿಳೆ!

ಹೇಗೆ ವಂಚನೆ?: ಹಲವು ವರ್ಷಗಳಿಂದ ಸಂಜಯ ನಗರದಲ್ಲಿ ಸವಿತಾ ಶಿಕ್ಷಣ ಸಂಸ್ಥೆ ಇದ್ದು, 2023-24ರ ಸಾಲಿಗೆ ಸವಿತಾ ಮಹರ್ಷಿ ಕಾಲೇಜಿಗೆ ಪದವಿ ತರಗತಿಗಳ ಆರಂಭಕ್ಕೆ ಸರ್ಕಾರದಿಂದ ಮಾನ್ಯತೆ ಸಿಕ್ಕಿತು. ಈ ಕಾಲೇಜಿನ ಆಡಳಿತ ಮಂಡಳಿಯ ಪ್ರಮುಖ ಕಿರಣ್‌ ಹಾಗೂ ಸಮೀರ್‌ ಸ್ನೇಹಿತರಾಗಿದ್ದು, ಈ ಗೆಳೆತನದಲ್ಲಿ ಕಿರಣ್‌ ಕಾಲೇಜಿಗೆ ವಿದೇಶಿ ವಿದ್ಯಾರ್ಥಿಗಳನ್ನು ದಾಖಲಿಸಲು ನೆರವು ನೀಡುವುದಾಗಿ ಆತ ಹೇಳಿದ್ದ. ಇದಕ್ಕೆ ಪೂರಕವಾದ ಸಹಕಾರ ನೀಡುವುದಾಗಿ ಆರೋಪಿಗೆ ಕಿರಣ್‌ ಅಭಯ ಸಿಕ್ಕಿತು. ಅಂತೆಯೇ ತನ್ನ ಪರಿಚಿತ ಅಲಾಂ ಮೂಲಕ ವಿದೇಶದ ಏಜೆಂಟರನ್ನು ಸಂಪರ್ಕಿಸಿ ಬೆಂಗಳೂರಿನಲ್ಲಿ ಶಿಕ್ಷಣ ಪಡೆಯಲಿಚ್ಛಿಸಿದ್ದ ವಿದ್ಯಾರ್ಥಿಗಳಿಗೆ ಸಮೀರ್‌ ಗಾಳ ಹಾಕಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸವಿತಾ ಮಹರ್ಷಿ ಪದವಿ ಕಾಲೇಜಿನ ಹೆಸರಿನಲ್ಲಿ ಗಲ್‌್ಫ ರಾಷ್ಟ್ರಗಳಾದ ಯಮನ್‌, ಸೌದಿ ಅರೇಬಿಯಾ ಹಾಗೂ ಇರಾನ್‌ ಸೇರಿದಂತೆ ಮುಂತಾದ ರಾಷ್ಟ್ರಗಳ ಸುಮಾರು 104 ವಿದ್ಯಾರ್ಥಿಗಳಿಗೆ ಬಿಕಾಂ, ಬಿಬಿಎಂ ಹಾಗೂ ಬಿಎಸ್ಸಿ ಸೇರಿ ಇತರೆ ಪದವಿ ಕೋರ್ಸುಗಳಿಗೆ ದಾಖಲಾತಿ ಮಾಡಿಸುವುದಾಗಿ ಸಮೀರ್‌ ಹೇಳಿದ್ದ. ಈ ಸಂಬಂಧ ವಿದ್ಯಾರ್ಥಿಗಳಿಗೆ ಕಾಲೇಜಿನ ಹೆಸರಿನಲ್ಲಿ ದಾಖಲು ಪತ್ರಗಳನ್ನು ನೀಡಿ ಅವರು ಭಾರತದ ವೀಸಾ ಪಡೆಯಲು ಸಮೀರ್‌ ನೆರವಾಗಿದ್ದ. ಬಳಿಕ ಭಾರತಕ್ಕೆ ಬಂದ 104 ವಿದ್ಯಾರ್ಥಿಗಳಿಗೆ ಕಾಲೇಜಿನ ಹೆಸರಿನಲ್ಲಿ ಬೋನಾಫೈಡ್‌ ಸರ್ಟಿಫಿಕೇಟ್‌ಗಳನ್ನು ಆತ ವಿತರಿಸಿದ್ದ.

ಆದರೆ ಕಾಲೇಜಿನಲ್ಲಿ ಅಡ್ಮಿಷನ್‌ ಮಾಡಿಸದೆ ವಿದೇಶಿ ಪ್ರಜೆಗಳು ಅಕ್ರಮವಾಗಿ ನೆಲಸಲು ನೆರವಾಗಿದ್ದ. ಈ ವಿದೇಶಿ ವಿದ್ಯಾರ್ಥಿಗಳ ದಾಖಲಾತಿ ಸಂಬಂಧ ಸವಿತಾ ಮಹರ್ಷಿ ಪದವಿ ಕಾಲೇಜಿನ ಹೆಸರಿನಲ್ಲಿ ಎಫ್‌ಆರ್‌ಆರ್‌ಓ ಕಚೇರಿಯಲ್ಲಿ ಎಫ್‌ಎಸ್‌ಐಎಸ್‌ ಐಡಿ ಪಡೆದು ಕಾಲೇಜಿನ ಪರವಾಗಿ ಸಮೀರ್‌ ವ್ಯವಹರಿಸುತ್ತಿದ್ದ. ಕಾಲೇಜಿನ ಪರವಾಗಿ 104 ವಿದೇಶಿ ವಿದ್ಯಾರ್ಥಿಗಳಿಗೆ ಅಡ್ಮಿಷನ್‌ ಮತ್ತು ಬೋನಾಫೈಡ್‌ ಲೆಟರ್‌ಗಳನ್ನು ಕಾಲೇಜಿನ ಲೆಟರ್‌ ಹೆಡ್‌ನಲ್ಲಿ ವಿತರಿಸಿದ್ದ. ಹೀಗಾಗಿ ಈ ಪ್ರಕರಣದಲ್ಲಿ ಸವಿತಾ ಮಹರ್ಷಿ ಪದವಿ ಕಾಲೇಜಿನ ಪಾತ್ರ ಹಾಗೂ ಸಮೀರ್‌ಗೆ ನೆರವಾದವರ ಬಗ್ಗೆ ತನಿಖೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರು ಬಿಜೆಪಿ ಕಚೇರಿ ಬಳಿ ಸ್ಫೋಟ: ಉಗ್ರಬ್ಬರಿಗೆ 7 ವರ್ಷ ಜೈಲು ಶಿಕ್ಷೆ

ತಾಂತ್ರಿಕ ತೊಂದರೆ ವಿದೇಶಿಗರು ಅತಂತ್ರ: ಪದವಿ ತರಗತಿಗಳ ಆರಂಭಕ್ಕೆ ಸವಿತಾ ಮಹರ್ಷಿ ಪದವಿ ಕಾಲೇಜಿಗೆ ಸರ್ಕಾರದಿಂದ ಮಾನ್ಯತೆ ಸಿಕ್ಕಿದೆ. ಆದರೆ ವಿದೇಶಿ ವಿದ್ಯಾರ್ಥಿಗಳ ಪ್ರವೇಶಾತಿ ಸಂಬಂಧ ತಾಂತ್ರಿಕ ತೊಂದರೆ ಉಂಟಾಗಿ ವಿದ್ಯಾರ್ಥಿಗಳು ಅತಂತ್ರರಾಗಿದ್ದಾರೆ ಎಂದು ಸಿಸಿಬಿ ಅಧಿಕಾರಿಗಳು ಹೇಳಿದ್ದಾರೆ. ಶೈಕ್ಷಣಿಕ ವೀಸಾ ಪಡೆಯುವ ಮುನ್ನ ತಾವು ಪ್ರವೇಶ ಪಡೆಯುವ ಶಿಕ್ಷಣ ಸಂಸ್ಥೆಯಿಂದ ಪ್ರಮಾಣ ಪತ್ರವನ್ನು ವಿದೇಶಿ ವಿದ್ಯಾರ್ಥಿಗಳು ಸಲ್ಲಿಸಬೇಕಿದೆ. ಬಳಿಕ ಯಾವ ಕಾಲೇಜಿನಿಂದ ಪ್ರಮಾಣ ಪಡೆಲಾಗುತ್ತದೆಯೋ ಅದೇ ಕಾಲೇಜಿಗೆ ಅವರು ದಾಖಲಾಗಬೇಕು. ಹೀಗಾಗಿ ಸವಿತಾ ಮಹರ್ಷಿ ಕಾಲೇಜಿನಲ್ಲಿ ಸಮಸ್ಯೆಯಾದ ಬಳಿಕ ಬೇರೆ ಕಾಲೇಜಿನಲ್ಲಿ ಪ್ರವೇಶ ಪಡೆಯಲು ವಿದ್ಯಾರ್ಥಿಗಳಿಗೆ ತಾಂತ್ರಿಕ ತೊಂದರೆ ಉಂಟಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದಾಖಲಾತಿಗೆ ವಿದೇಶಿಯರ ಪೋರ್ಟಲ್‌ ತೆರೆಯಲು ತಾಂತ್ರಿಕ ಸಮಸ್ಯೆ ಎದುರಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದೆ, ಹೊರತು ಬೇರೇನು ಇಲ್ಲ ಎಂದು ವಿಚಾರಣೆ ವೇಳೆ ಆರೋಪಿ ಸಹ ಹೇಳಿಕೆ ನೀಡಿರುವುದಾಗಿ ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios