SDPI, ನಿಷೇಧಿತ PFI ಕಾರ್ಯಕರ್ತರಿಗೆ ಜಾಮೀನು ಮಂಜೂರು

ಇತ್ತೀಚೆಗೆ ಎನ್‌ಐಎ ಸೂಚನೆ ಮೇರೆಗೆ ಬೆಳಗಿನ ಜಾವ ನಾಲ್ಕು ಗಂಟೆ ಸುಮಾರಿಗೆ ದಾಳಿ ನಡೆಸಿ ವಶಕ್ಕೆ ಪಡೆದಿದ್ದ 7 ಜನ ಎಸ್‌ಡಿಪಿಐ, ‌ನಿಷೇಧಿತ ಪಿಎಫ್ಐ ಕಾರ್ಯಕರ್ತರಿಗೆ ಡಿಸಿಪಿ ರವೀಂದ್ರ ಗಡಾದಿ ಷರತ್ತು ಬದ್ದ ಜಾಮೀನು ಮಂಜೂರು ಮಾಡಿದ್ದಾರೆ.

SDPI PFI activists granted bail belagavi dcp raveendra gadadi rav

ಬೆಳಗಾವಿ (ಅ.4) : ಇತ್ತೀಚೆಗೆ ಎನ್‌ಐಎ ಸೂಚನೆ ಮೇರೆಗೆ ಬೆಳಗಿನ ಜಾವ ನಾಲ್ಕು ಗಂಟೆ ಸುಮಾರಿಗೆ ದಾಳಿ ನಡೆಸಿ ವಶಕ್ಕೆ ಪಡೆದಿದ್ದ 7 ಜನ ಎಸ್‌ಡಿಪಿಐ, ‌ನಿಷೇಧಿತ ಪಿಎಫ್ಐ ಕಾರ್ಯಕರ್ತರಿಗೆ ಡಿಸಿಪಿ ರವೀಂದ್ರ ಗಡಾದಿ ಷರತ್ತು ಬದ್ದ ಜಾಮೀನು ಮಂಜೂರು ಮಾಡಿದ್ದಾರೆ. ಬೆಳಗಾವಿ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಆಗಿರುವ ರವೀಂದ್ರ ಗಡಾದಿ, ತಲಾ ಒಬ್ಬರಿಂದ 50 ಸಾವಿರ ಬಾಂಡ್ ಪಡೆದು ಜಾಮೀನು ಮಂಜೂರು ಮಾಡಿದ್ದಾರೆ.

 ಆಜಂ ನಗರ ನಿವಾಸಿ ನಿಷೇಧಿತ PFI ಮಾಜಿ ಜಿಲ್ಲಾಧ್ಯಕ್ಷ ಝಕೀವುಲ್ಲಾ ಫೈಜಿ, ಎಸ್‌ಡಿಪಿಐ ಬೆಳಗಾವಿ ಜಿಲ್ಲಾಧ್ಯಕ್ಷ ಅಬೀದ್ ಖಾನ್ ಕಡೋಲಿ, ಶಿವಾಜಿ ನಗರ ನಿವಾಸಿ ಸಲಾವುದ್ದೀನ್ ಖಿಲೆವಾಲೆ, ಬದ್ರುದ್ದೀನ್ ಪಟೇಲ್, ಅಮನ್ ನಗರ ನಿವಾಸಿ ಸಮೀವುಲ್ಲಾ ಪೀರ್ಜಾದೆ, ಬೆಳಗಾವಿಯ ಬಾಕ್ಸೈಟ್ ರೋಡ್ ನಿವಾಸಿ ಜಹೀರ್ ಘೀವಾಲೆ, ಬೆಳಗಾವಿಯ ವಿದ್ಯಾಗಿರಿ ನಿವಾಸಿ ರೆಹಾನ್ ಅಜೀಜ್‌ ಜಾಮೀನು ಪಡೆದಿರುವ ನಿಷೇಧಿತ ಸಂಘಟನೆಯ ಕಾರ್ಯಕರ್ತರು.

ಸೆ.27ರಂದು ಡಿಸಿಪಿ ರವೀಂದ್ರ ಗಡಾದಿ ನೇತೃತ್ವದಲ್ಲಿ ಬೆಳಗಿನ ಜಾವ ದಾಳಿ ನಡೆಸಿ ಏಳು ಜನರನ್ನು ವಶಕ್ಕೆ ಪಡೆಯಲಾಗಿತ್ತು. ತೀವ್ರ ವಿಚಾರಣೆಗೊಳಪಡಿಸಿ ಬಳಿಕ ಸಿಆರ್‌ಪಿಸಿ 110 ಸೆಕ್ಷನ್ ಅಡಿ 7 ಜನರನ್ನು ಬಂಧಿಸಿ ಜೈಲಿಗಟ್ಟಿದ ಪೊಲೀಸರು. ಸಮಾಜ ಸ್ವಾಸ್ಥ್ಯ ಕಾಪಾಡುವುದಕ್ಕಾಗಿ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದ ಪೊಲೀಸರು. ದಾಳಿ ವೇಳೆ ಎಸ್ಕೇಪ್ ಆಗಿದ್ದ ನಿಷೇಧಿತ ಪಿಎಫ್ಐ ‌ಜಿಲ್ಲಾಧ್ಯಕ್ಷ ನವೀದ್ ‌ಕಟಗಿ. ಒಂದು ವಾರ ಕಳೆದರೂ ಇನ್ನೂ ಬೆಳಗಾವಿ ಪೊಲೀಸರ ಕೈಗೆ ಸಿಗದ ನವೀದ್ ಕಟಗಿ. 

ರಾತ್ರೋರಾತ್ರಿ ರಾಜ್ಯ ಪೊಲೀಸರ ಮೆಗಾ ಆಪರೇಷನ್, PFI ಗೆ ಮತ್ತೊಂದು ಶಾಕ್!

Latest Videos
Follow Us:
Download App:
  • android
  • ios