Asianet Suvarna News Asianet Suvarna News

ರಾತ್ರೋರಾತ್ರಿ ರಾಜ್ಯ ಪೊಲೀಸರ ಮೆಗಾ ಆಪರೇಷನ್, PFI ಗೆ ಮತ್ತೊಂದು ಶಾಕ್!

ರಾಜ್ಯದ ಹಲವು ಜಿಲ್ಲೆಗಳಲ್ಲಿ ಪಿಎಫ್‌ಐ ಸಂಘಟನೆ ಮೇಲೆ ಏಕಕಾಲಕ್ಕೆ ದಾಳಿ ನಡೆಸುವ ಮೂಲಕ ಉಗ್ರ ಕೃತ್ಯ, ಕೋಮುಗಲಭೆಗಳಲ್ಲಿ ತೊಡಗಿರುವ ಪಿಎಫ್‌ಐ ಸಂಘಟನೆಗೆ ರಾಜ್ಯ ಪೊಲೀಸರು ಶಾಕ್ ನೀಡಿದ್ದಾರೆ.

state police mega operation another shock for PFI Bengaluru rav
Author
First Published Sep 27, 2022, 7:19 AM IST

ಬೆಂಗಳೂರು (ಸೆ.27) : ರಾಜ್ಯದಲ್ಲಿ ಹಲವು ಜಿಲ್ಲೆಗಳಲ್ಲಿ ಪಿಎಫ್‌ಐ ಸಂಘಟನೆ ಮೇಲೆ ರಾಜ್ಯ ಪೊಲೀಸರು ಏಕಕಾಲಕ್ಕೆ ದಾಳಿ ನಡೆಸುವ ಮೂಲಕ ಉಗ್ರ ಕೃತ್ಯ, ಕೋಮುಗಲಭೆಗಳಲ್ಲಿ ತೊಡಗಿರುವ ಪಿಎಫ್‌ಐ ಸಂಘಟನೆಗೆ ಶಾಕ್ ನೀಡಿದ್ದಾರೆ. ದಕ್ಷಿಣ ಕನ್ನಡ, ಮಂಗಳೂರು, ಚಿತ್ರದುರ್ಗ, ಬೆಳಗಾವಿ, ವಿಜಯಪುರ ಜಮಖಂಡಿ, ಹುಬ್ಬಳ್ಳಿ, ಬಾಗಲಕೋಟೆ ಸೇರಿದಂತೆ ಹಲವು ಕಡೆಗಳಲ್ಲಿ ದಾಳಿ ನಡೆಸಲಾಗಿದೆ.. ಎನ್ ಐ ಎ ಮಾಹಿತಿ ಆಧರಿಸಿ ಪಿಎಫ್‌ಐ ಸಂಘಟನೆ ಮುಖಂಡರ ನಿವಾಸಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಲಾಗಿದೆ. ಇದುವರೆಗೂ 45 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಸಮಾಜದಲ್ಲಿ ಅಶಾಂತಿ ಸೃಷ್ಟಿಸುತ್ತಿದ್ದವರ ಮೇಲೆ ದಾಳಿ ಇದಾಗಿದೆ ಎಂದು ಏಷ್ಯಾನೆಟ್ ಸುವರ್ಣನ್ಯೂಸ್ ಗೆ ಎಡಿಜಿಪಿ ಅಲೋಕ್ ಕುಮಾರ್ ಅವರು ಕಾರ್ಯಾಚರಣೆ ಬಗ್ಗೆ ಮಾಹಿತಿ ನೀಡಿದ್ದಾರೆ.

NIA Raids on PFI: ದಾಳಿಗೂ ಮುನ್ನ 6 ತಿಂಗಳ ತಾಲೀಮು: ಕಂಟ್ರೋಲ್ ಮಾಡಿದ್ದು ಜೇಮ್ಸ್ ಬಾಂಡ್!

ಚಿತ್ರದುರ್ಗ: ಪಿಎಫ್‌ಐ ಮುಖಂಡ ಅಫನ್ ಅಲಿ ನಿವಾಸದ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು ಚಿಕ್ಕಪೇಟೆ ಬಡಾವಣೆ ನಿವಾಸಿ ಅಫನ್ ಅಲಿ ಪೊಲೀಸರು. ವಶಕ್ಕೆ ಪಡೆದಿದ್ದಾರೆ. ಬಳಿಕ ಚಿತ್ರದುರ್ಗ ನಗರದ ಕೋಟೆ ಠಾಣೆಯಲ್ಲಿ ಅಫನ್ ಅಲಿಯನ್ನು ಎಸ್‌ಪಿ ಕೆ.ಪರಶುರಾಮ್, ಡಿವೈಎಸ್‌ಪಿ ಅನಿಲ್ ಸಿಪಿಐ ತಿಪ್ಪೇಸ್ವಾಮಿ ನೇತೃತ್ವದಲ್ಲಿ ವಿಚಾರಣೆ ನಡೆಸಿದ್ದಾರೆ.

ವಿಜಯಪುರದಲ್ಲೂ ದಾಳಿ ನಡೆಸಿದ್ದು, ಜಿಲ್ಲೆಯ ಪಿಎಫ್‌ಐ ಅಧ್ಯಕ್ಷ ಆಶ್ಪಾಕ್ ಜಮಖಂಡಿಯನ್ನು ವಶಕ್ಕೆ ಪಡೆದಿದ್ದಾರೆ. ಸ್ಥಳೀಯ ಪೊಲೀಸರೊಂದಿಗೆ ಆಶ್ಪಾಕ್ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ. ಜೆ.ಎಂ.ರಸ್ತೆಯಲ್ಲಿರುವ ಆಶ್ಪಾಕ್ ನಿವಾಸದ ಮಾಹಿತಿ ಪಡೆದುಕೊಮಡು ದಾಳಿ ನಡೆಸಿ ತನಿಖಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಹುಬ್ಬಳ್ಳಿ,
ಬೆಳಗಾವಿ, ಜಮಖಂಡಿ, ಮೂರು ಕಡೆಗಳಲ್ಲಿ NIA  ದಾಳಿ ನಡೆದಿದೆ ಎಂಬ ಮಾಹಿತಿ ಸಿಕ್ಕಿದೆ.

ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯಲ್ಲಿ ಪಿಎಫ್‌ಐ ಕಾರ್ಯಕರ್ತರ ನಿವಾಸಗಳ ಮೇಲೆ ಎಸ್‌ಪಿ ಜಯಪ್ರಕಾಶ ನೇತೃತ್ವದಲ್ಲಿ ದಾಳಿ ನಡೆಸಿದ್ದು, ಶಾಂತಿ ಕದಡಿರುವ ಆರೋಪ ಹಿನ್ನೆಲೆ ಪಿಎಫ್‌ಐ ಜಿಲ್ಲಾಧ್ಯಕ್ಷ ಅಸ್ಗರ್ ಅಲಿ ಸೇರಿದಂತೆ 7 ಕಾರ್ಯಕರ್ತರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. PFI ಜಿಲ್ಲಾಧ್ಯಕ್ಷ, ಅಸ್ಗರ್ ಅಲಿ ಸೇರಿದಂತೆ ಇರ್ಫಾನ್, ಮಹಮ್ಮದ್, ರಾಜೇಸಾಬ್, ಮುರ್ತುಜ್, ಉಮರ್ ಫಾರೂಕ್, ಮುಸಾ ಎಂಬ ಕಾರ್ಯಕರ್ತರ ಬಂಧನ. ಜಮಖಂಡಿ, ಇಳಕಲ್, ಬನಹಟ್ಟಿಯಲ್ಲಿ ಒಟ್ಟು 7 ಜನರ ಬಂಧನ.. ಈ ಹಿಂದೆ ಪ್ರತಿಭಟನೆ ನೆಪದಲ್ಲಿ ಕೋಮುಗಲಭೆ ಸೃಷ್ಟಿಸಿ ಶಾಂತಿ ಸುವ್ಯವಸ್ಥೆ ಕದಡಲು ಯತ್ನಿಸಿದ್ದರು ಎಂಬ ಆರೋಪವಿದೆ. ಏಷಿಯಾನೆಟ್ ಸುವರ್ಣನ್ಯೂಸ್ ಗೆ ಬಾಗಲಕೋಟೆ ಎಸ್ಪಿ ಜಯಪ್ರಕಾಶ್ ಮಾಹಿತಿ.

ಬೀದರ್ : ಗಡಿ ಜಿಲ್ಲೆ ಬೀದರ್‌ನಲ್ಲಿ ಪೊಲೀಸ್ ಕಾರ್ಯಾಚರಣೆ. ಪಿಎಪ್ಐ ಜಿಲ್ಲಾಧ್ಯಕ್ಷ ಕರೀಮ್, ಎಸ್‌ಡಿಪಿಐ ಕಾರ್ಯದರ್ಶಿ ಮಕ್ಸುದ್ ಮನೆ ಮೇಲೆ ದಾಳಿ ನಡೆಸಿರುವ ಪೊಲೀಸರು, ಇಬ್ಬರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಹುಮನಾಬಾದ್ ಪಟ್ಟಣದಲ್ಲಿರುವ ಇಬ್ಬರ ಮನೆ ಮೇಲೆ ತಡರಾತ್ರಿ ದಾಳಿ ನಡೆಸಿರುವ ಪೊಲೀಸರು. ಬೆಳಗಿನ ಜಾವ 3 ಗಂಟೆಗೆ ದಾಳಿ ನಡೆಸಿ ವಶಕ್ಕೆ ಪಡೆದುಕೊಂಡಿದ್ದಾರೆ.

ಚಾಮರಾಜನಗರ: ನಗರದಲ್ಲಿ ತಡರಾತ್ರಿ ಕಾರ್ಯಾಚರಣೆ ನಡೆಸಿರುವ ಪೊಲೀಸರು ಇಬ್ಬರು ಪಿಎಫ್‌ಐ ಕಾರ್ಯಕರ್ತರನ್ನು ಬಂಧಿಸಿದ್ದಾರೆ. ಪಿಎಫ್‌ಐ ಜಿಲ್ಲಾಧ್ಯಕ್ಷ ಕಪಿಲ್, ಕಾರ್ಯದರ್ಶಿ ಸುಯೇಬ್ ಬಂಧನ.  ಬೆಳಗ್ಗೆ ನಾಲ್ಕು ಗಂಟೆಗೆ ನಿವಾಸಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದ್ದ ಪೊಲೀಸರು. ಇಬ್ಬರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ್ದಾರೆ.

ಶಿವಮೊಗ್ಗ: ಇತ್ತೀಚೆಗೆ ಕೋಮುಗಲಭೆಯಲ್ಲಿ ತೀವ್ರರೂಪದಲ್ಲಿ ಶಿವಮೊಗ್ಗದಲ್ಲಿ ಹಿಂಸಾಚಾರ ನಡೆದಿತ್ತು. ಈ ಹಿನ್ನೆಲೆ  ಶಿವಮೊಗ್ಗ, ಭದ್ರಾವತಿಯಲ್ಲಿ ರಾಜ್ಯ ಪೊಲೀಸರು ಪಿಎಫ್‌ಐ ಸಂಘಟನೆ ಕಾರ್ಯಕರ್ತರ ನಿವಾಸಗಳ ಮೇಲೆ ದಾಳಿ ನಡೆಸಿದ್ದು,  ಪಿಎಫ್ಐ ಸಂಘಟನೆ ಮತ್ತು ಎಸ್ ಡಿಪಿಐ ಸಂಘಟನೆಯಲ್ಲಿ ಗುರುತಿಸಿಕೊಂಡ ನಾಲ್ವರು ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ. ಶಿವಮೊಗ್ಗದಲ್ಲಿ ಮನ್ಸೂರ್ ಅಲಿಖಾನ್, ಮಹಮ್ಮದ್ ರಫಿಕ್ , ಭದ್ರಾವತಿಯಲ್ಲಿ ಸಮೀಯುಲ್ಲಾ ಖುರೇಷಿ ಹಾಗೂ ತಾಹೀರ್ ನಾಲ್ವರನ್ನು ಮುಂಜಾಗ್ರತಾ ಕ್ರಮವಾಗಿ ಬಂಧಿಸಿದ ಕರೆದೊಯ್ದಿರುವ ಪೋಲಿಸರು.

ದಕ್ಷಿಣ ಕನ್ನಡ: ಮೇಲಾಧಿಕಾರಿಗಳ ಸೂಚನೆ ಹಿನ್ನೆಲೆ, ಎಲ್ಲಾ ಮಾಹಿತಿ ಪಟ್ಟಿ ಸಿದ್ಧಪಡಿಸಿಕೊಂಡು ಏಕಕಾಲಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಕಾರ್ಯಾಚರಣೆ ನಡೆಸಿರುವ ರಾಜ್ಯ ಪೊಲೀಸರು, ಪಿಎಫ್‌ಐ, ಎಸ್‌ಡಿಪಿಐ ಕಾರ್ಯಕರ್ತರ ನಿವಾಸಗಳ ಮೇಲೆ ದಾಳಿ ನಡೆಸಿದ್ದಾರೆ. ಮಂಗಳೂರು ನಗರ ಸೇರಿದಂತೆ ಹಲವೆಡೆ ದಾಳಿ ನಡೆಸಿ, ಸಿಆರ್ ಪಿಸಿ 107 ಮತ್ತು 151ರಡಿ  8 ಪಿಎಫ್‌ಐ ಕಾರ್ಯಕರ್ತರನ್ನು ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ಪಡೆದಿದ್ದಾರೆ. 

ಪಿಎಫ್ ಐ ಜಿಲ್ಲಾಧ್ಯಕ್ಷ ಇಜಾಜ್ ಅಹ್ಮದ್, ಮುಖಂಡರಾದ ಫಿರೋಜ್ ಖಾನ್, ರಾಜಿಕ್, ಮುಜಾವರ್, ನೌಫಲ್ ಸೇರಿ 8 ಮಂದಿ ವಶಕ್ಕೆ ಮಂಗಳೂರಿನ ಉಳ್ಳಾಲ, ಕಾವೂರು, ಸುರತ್ಕಲ್, ಬಜಪೆ ಹಾಗೂ ಪುತ್ತೂರು ಭಾಗದಲ್ಲಿ ಏಕಕಾಲಕ್ಕೆ ಪಿಎಫ್‌ಐ ಕಾರ್ಯಕರ್ತರ ನಿವಾಸಗಳ ಮೇಲೆ ದಾಳಿ ನಡೆಸಿ ವಶಕ್ಕೆ ಪಡೆದುಕೊಂಡಿರುವ ಮಂಗಳೂರು ಪೊಲೀಸರು.

ಉಡುಪಿ: ಉಡುಪಿ ಜಿಲ್ಲೆಯಲ್ಲೂ ಮೇಲಾಧಿಕಾರಿಗಳ ಮಾಹಿತಿ ಆಧರಿಸಿ ಸ್ಥಳೀಯ ಪೊಲೀಸರು ಪಿಎಫ್‌ಐ ಮುಖಂಡರ ನಿವಾಸಗಳ ಮೇಲೆ ಕಾರ್ಯಾಚರಣೆ. ಉಡುಪಿ ಹೂಡೆ ಕುಂದಾಪುರ ಗಂಗೊಳ್ಳಿಯಲ್ಲಿ ದಾಳಿ ನಡೆಸಿ ಪಿ ಎಫ್ ಐ ಸ್ಥಳೀಯ ಮುಖಂಡರನ್ನು ವಶಕ್ಕೆ ಪಡೆದಿದ್ದಾರೆ. ಪೊಲೀಸರು.

ಬಳ್ಳಾರಿ : ರಾಜ್ಯದಾದ್ಯಂತ ಎನ್ಐಎ ದಾಳಿ ಭೀತಿ ಹಿನ್ನಲೆ. ಬಳ್ಳಾರಿಯ ಸ್ಥಳೀಯ ಪೊಲೀಸ್ ರಾತ್ರಿಯಿಡೀ ಫುಲ್ ಅಲಾರ್ಟ್ ಆಗಿದ್ದರು. ಪ್ರತ್ಯೇಕ ತಂಡ ಮಾಡಿಕೊಂಡು ನಗರ ಸಂಚಾರ ಮಾಡಿರುವ ಪೊಲೀಸರು. ಮೊದಲ ದಾಳಿ ನಡೆದಾಗ ಬಳ್ಳಾರಿಯಲ್ಲಿ ಪಿಎಫ್‌ಐ ಸಂಘಟನೆ ಪ್ರತಿಭಟನೆ ನಡೆಸಿತ್ತು. ಈ ಹಿನ್ನೆಲೆ ಸ್ಥಳೀಯ ಪೊಲೀಸರು ಈ ಬಾರಿ ಫುಲ್ ಅಲರ್ಟ್ ಆಗಿದ್ದಾರೆ. ಪ್ರತಿಭಟನೆಗೆ ಸಂಬಂಧಿಸಿದಂತೆ ನಾಲ್ವರು ಪಿಎಫ್‌ಐ ಕಾರ್ಯಕರ್ತರನ್ನು ವಶಕ್ಕೆ ಪಡೆದಿರುವ ಪೊಲೀಸರು. ಕೆಲವು ಮುಖಂಡರ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ. ಬಳ್ಳಾರಿಯಲ್ಲಿ ಯಾವುದೇ ದಾಳಿ ಆಗಿಲ್ಲ. ಎಸ್ಪಿ ಸೈದುಲ್ ಅಡಾವತ್ ಸ್ಪಷ್ಟನೆ ನೀಡಿದ್ದಾರೆ.

ಬೆಳಗಾವಿ: ಬೆಳಗಾವಿಯಲ್ಲಿ ಬೆಳಗ್ಗೆ 4 ಗಂಟೆಗೆ ಕಾರ್ಯಾಚರಣೆ ನಡೆಸಿರುವ ಪೊಲೀಸರು ಐವರು ಪಿಎಫ್‌ಐ ಕಾರ್ಯಕರ್ತರನ್ನು ಬಂಧಿಸಿದ್ದಾರೆ. ಪಿಎಫ್‌ಐ ಕಾರ್ಯಕರ್ತರ ಪಟ್ಟಿ ಮೊದಲೇ ಸಿದ್ಧಪಡಿಸಿಕೊಂಡು ಡಿಸಿಪಿ ರವೀಂದ್ರ ಗಡಾದಿ ನೇತೃತ್ವದಲ್ಲಿ ದಾಳಿ ನಡೆಸಿದ್ದರು. ಎಸಿಪಿ ನಾರಾಯಣ ಭರಮಣಿ, ಸದಾಶಿವ ಕಟ್ಟಿಮನಿ, ಮಾರ್ಕೆಟ್, ಎಪಿಎಂಸಿ, ಟಿಳಕವಾಡಿ, ಮಾಳಮಾರುತಿ ಠಾಣೆ ಸಿಪಿಐಗಳ ಸಾಥ್. ಪಿಎಫ್‌ಐ ಕಾರ್ಯಕರ್ತರನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದು ತೀವ್ರ ವಿಚಾರಣೆಗೊಳಪಡಿಸಿದ್ದಾರೆ. ಇತ್ತೀಚೆಗೆ ರಾಷ್ಟ್ರೀಯ ಹೆದ್ದಾರಿ ತಡೆದು ಪಿಎಫ್‌ಐ ಜಿಲ್ಲಾಧ್ಯಕ್ಷ ನವೀದ್ ಕಟಗಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದರು. ಅಲ್ಲದೇ ಜಿಲ್ಲೆಯಲ್ಲಿ ಆಕ್ರಮ ಚಟುವಟಿಕೆ ಮಾಡುವ ಹಿನ್ನೆಲೆ ‌ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ. ಒಟ್ಟು ಜಿಲ್ಲೆಯಲ್ಲಿ 15 ಜನ ಪೊಲೀಸರ ವಶಕ್ಕೆ ಆಯಾ ತಹಶೀಲ್ದರ್ ‌ಮುಂದೆ ಹಾಜರುಪಡಿಸಲಿರೋ ಪೊಲೀಸರು

ಕೋಲಾರ:  ಕೋಲಾರದಲ್ಲಿಯೂ ತಡರಾತ್ರಿ ಪಿಎಫ್‌ಐ ಕಾರ್ಯಕರ್ತರ ನಿವಾಸಗಳ ಮೇಲೆ ದಾಳಿ ನಡೆದಿದ್ದು, ಕೋಲಾರ ನಗರದಲ್ಲಿ ಆರು ಜನರನ್ನು ವಶಕ್ಕೆ ಪಡೆದಿದ್ದಾರೆ. ಕೋಲಾರ ನಗರ ಠಾಣೆಗೆ ಕರೆತಂದಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಕಲಬುರಗಿ: ಪಿ ಎಫ್ ಐ ಸಂಘಟನೆಗಳ ಮುಖಂಡರ ಮೇಲೆ ಮುಂದುವರಿದ ಪೊಲೀಸ್ ಬೇಟೆ.  ಕಲ್ಬುರ್ಗಿಯಲ್ಲಿ ಕಳೆದ ರಾತ್ರಿ ಮತ್ತೆ ಪಿಎಫ್‌ಐ ಮುಖಂಡರ ಮನೆಗಳ ಮೇಲೆ ದಾಳಿ ನಡೆಸಿದ್ದಾರೆ. ಕಲಬುರ್ಗಿಯ ಇಕ್ಬಾಲ್ ಕಾಲೋನಿಯ ಮಜಾರ್ ಹುಸೇನ್ ಮನೆ ಮೇಲೆ ದಾಳಿ. ಮಜರ ಹುಸೇನ್ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈತ PFI ಸಂಘಟನೆ ಮಾಧ್ಯಮ ವಕ್ತಾರ ಎನ್ನಲಾಗಿದೆ. ನಾಲ್ಕು ದಿನಗಳ ಹಿಂದೆ ಬಂಧಿತನಾದ PFI ಜಿಲ್ಲಾಧ್ಯಕ್ಷ ಎಜಾಜ್ ಅಲಿಯ ನಿಕಟವರ್ತಿ.

ಎನ್‌ಐಎ ದಾಳಿ: ರಾಜ್ಯಾದ್ಯಂತ ಪಿಎಫ್‌ಐ ಕಾರ್ಯಕರ್ತರಿಂದ ರಸ್ತೆತಡೆ

ರಾಯಚೂರು: ಬಿಸಿಲು ನಾಡು ರಾಯಚೂರಿಗೆ ತಗುಲಿದ ಶಂಕಿತ ಉಗ್ರರ ನಂಟು! ಮೇಲಾಧಿಕಾರಿಗಳ ಸೂಚನೆ ಹಿನ್ನೆಲೆ ನಗರ ಪೊಲೀಸರು ಪಿಎಫ್‌ಐ ಮುಖಂಡನ ನಿವಾಸದ ಮೇಲೆ ದಾಳಿ ನಡೆಸಿ ವಶಕ್ಕೆ ಪಡೆದುಕೊಂಡಿದ್ದಾರೆ. ರಾಯಚೂರು ಡಿವೈಎಸ್‌ಪಿ ವೆಂಕಟೇಶ್ ಉಗಿಬಂಡಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿರುವ ಪೊಲೀಸರು, ಪಿಎಫ್‌ಐ ಮಾಜಿ ಅಧ್ಯಕ್ಷ ಮಹಮದ್ ಇಸ್ಮಾಯಿಲ್ ಹಾಗೂ ಕಾರ್ಯದರ್ಶಿ ಆಸೀಂರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ. ಬೆಳಗಿನ ಜಾವ 5 ಗಂಟೆ ಸುಮಾರಿಗೆ ಪೊಲೀಸರು ದಾಳಿ ನಡೆಸಿದ್ದರು.

Follow Us:
Download App:
  • android
  • ios