ಸಿಎಂ ಸಿದ್ದರಾಮಯ್ಯರ ಕನಸಿನ ಯೋಜನೆಗೆ ಶಿಕ್ಷಕನಿಂದಲೇ ಕನ್ನ! ಬಡ ವಿದ್ಯಾರ್ಥಿಗಳ ಹೊಟ್ಟೆ ಸೇರಬೇಕಾದ ಹಾಲು ಕಿರಾಣಿ ಅಂಗಡಿ ಪಾಲು!
ಬಡ ವಿದ್ಯಾರ್ಥಿಗಳಿಗೆ ನೀಡಲಾಗಿರುವ ಕ್ಷೀರಭಾಗ್ಯ ಯೋಜನೆಯ ಹಾಲಿನ ಪೌಡರನ್ನು ಶಿಕ್ಷಕನೋರ್ವ ಹಣದಾಸೆಗೆ ಕಿರಾಣಿ ಅಂಗಡಿಗೆ ಮಾರಾಟ ಮಾಡಿದ ಘಟನೆ ಯಾದಗಿರಿ ತಾಲೂಕಿನ ಲಿಂಗೇರಿ ತಾಂಡಾದ ಸರ್ಕಾರಿ ಶಾಲೆಯಲ್ಲಿ ನಡೆದಿದೆ.
ಯಾದಗಿರಿ (ಫೆ.8): ಬಡ ವಿದ್ಯಾರ್ಥಿಗಳಿಗೆ ನೀಡಲಾಗಿರುವ ಕ್ಷೀರಭಾಗ್ಯ ಯೋಜನೆಯ ಹಾಲಿನ ಪೌಡರನ್ನು ಶಿಕ್ಷಕನೋರ್ವ ಹಣದಾಸೆಗೆ ಕಿರಾಣಿ ಅಂಗಡಿಗೆ ಮಾರಾಟ ಮಾಡಿದ ಘಟನೆ ಯಾದಗಿರಿ ತಾಲೂಕಿನ ಲಿಂಗೇರಿ ತಾಂಡಾದ ಸರ್ಕಾರಿ ಶಾಲೆಯಲ್ಲಿ ನಡೆದಿದೆ.
ಸೂರ್ಯಕಾಂತ್, ಹಾಲಿನ ಪೌಡರ್ ಮಾರಾಟ ಮಾಡಿದ ಧನದಾಹಿ ಮುಖ್ಯಶಿಕ್ಷಕ. ಸ್ವತಃ ತನ್ನ ಕಾರಿನಲ್ಲಿ ಹಾಲಿನ ಪಾಕೆಟ್‌ಗಳನ್ನು ತೆಗೆದುಕೊಂಡು ಬಂದು ಯಾದಗಿರಿ ನಗರದ ಬಿವಿ ಸ್ವಾಮಿ ಕಿರಾಣಿ ಹಾಗೂ ಜನರಲ್ ಸ್ಟೋರ್ ಅಂಗಡಿಗೆ ಮಾರಾಟ ಮಾಡಿರುವ ಆರೋಪಿ. ಹಲವು ವರ್ಷಗಳಿಂದ ಈ ರೀತಿ ಮಾರಾಟ ಅಕ್ರಮವಾಗಿ ಕ್ಷೀರಭಾಗ್ಯ ಯೋಜನೆಯ ಹಾಲಿನ ಪೌಡರ್ ಮಾರಾಟ ಮಾಡುತ್ತಿರುವ ಶಿಕ್ಷಕ ಸೂರ್ಯಕಾಂತ. ಹಾಲಿನ ಪೌಡರ್ ಮಾರಾಟ ಮಾಡುವ ವಿಡಿಯೋ ಇದೀಗ ಬಹಿರಂಗವಾಗಿದೆ.
ಯಾದಗಿರಿ: ಬಡವರ ಅಕ್ಕಿ ಕಾಳಸಂತೆಯ ಪಾಲು; ಪಡಿತರ ಕಳ್ಳಸಾಗಣೆ ತಡೆಯುವಲ್ಲಿ ಪೊಲೀಸ್ ಇಲಾಖೆ ವಿಫಲ
ಬಡಮಕ್ಕಳಿಗೆ ಕೆನೆಭರಿತ ಹಾಲನ್ನು ನೀಡುವ ಕ್ಷೀರಭಾಗ್ಯ ಯೋಜನೆ ಮುಖ್ಯಮಂತ್ರಿ ಸಿದ್ದರಾಮಯ್ಯರ ಕನಸಿನ ಯೋಜನೆಗಳಲ್ಲೊಂದಾಗಿದೆ. ಗ್ರಾಮೀಣಮಟ್ಟದ ಶಾಲಾ ಮಕ್ಕಳ ಅಪೌಷ್ಟಿಕತೆ ನಿವಾರಣೆ ಮಾಡಲು ಕರ್ನಾಟಕ ಸರಕಾರ ಕ್ಷೀರಭಾಗ್ಯ ಯೋಜನೆ ತಂದಿದೆ. ಕೆನೆಭರಿತ ಹಾಲನ್ನು ನಿತ್ಯ ಮಕ್ಕಳಿಗೆ ಉಚಿತವಾಗಿ ನೀಡಲಾಗುತ್ತಿದೆ. ಸರ್ಕಾರಿ ಶಾಲೆಗಳಿಗೆ ಹಾಲಿನ ಪೌಡರ್ ರೂಪದಲ್ಲಿ ಪಾಕೆಟ್‌ಗಳನ್ನು ವಿತರಿಸುತ್ತಿದೆ. ಆದರೆ ಮಕ್ಕಳ ಹೊಟ್ಟೆ ಸೇರಬೇಕಾದ ಹಾಲು ಧನದಾಹಿ ಮುಖ್ಯ ಶಿಕ್ಷಕನಿಂದ ಕಿರಾಣಿ ಅಂಗಡಿಗಳ ಪಾಲಾಗಿರುವುದು ದುರ್ದೈವದ ಸಂಗತಿಯಾಗಿದೆ.