ಯಾದಗಿರಿ: ಬಡವರ ಅಕ್ಕಿ ಕಾಳಸಂತೆಯ ಪಾಲು; ಪಡಿತರ ಕಳ್ಳಸಾಗಣೆ ತಡೆಯುವಲ್ಲಿ ಪೊಲೀಸ್ ಇಲಾಖೆ ವಿಫಲ
2 ಕೋಟಿ ಮೌಲ್ಯದ 6077 ಕ್ವಿಂಟಲ್ ಪಡಿತರ ಅಕ್ಕಿ ಕಳ್ಳತನ ಪ್ರಕರಣದ ತನಿಖೆ ನಡೆಯುತ್ತಿರುವ ವೇಳೆಯೇ ಮತ್ತೊಂದು ಅನ್ನಭಾಗ್ಯ ಅಕ್ಕಿ ಕಳ್ಳಸಾಗಣೆ ಬೆಳಕಿಗೆ ಬಂದಿದೆ.
ಯಾದಗಿರಿ (ಫೆ.4): 2 ಕೋಟಿ ಮೌಲ್ಯದ 6077 ಕ್ವಿಂಟಲ್ ಪಡಿತರ ಅಕ್ಕಿ ಕಳ್ಳತನ ಪ್ರಕರಣದ ತನಿಖೆ ನಡೆಯುತ್ತಿರುವ ವೇಳೆಯೇ ಮತ್ತೊಂದು ಅನ್ನಭಾಗ್ಯ ಅಕ್ಕಿ ಕಳ್ಳಸಾಗಣೆ ಬೆಳಕಿಗೆ ಬಂದಿದೆ.
ಅನ್ನಭಾಗ್ಯ ಅಕ್ಕಿ ಕಳ್ಳಸಾಗಣೆ ಮಾಡುತ್ತಿದ್ದ ಗೂಡ್ಸ್ ವಾಹನದ ಮೇಲೆ ಪೊಲೀಸರು ಮಿಂಚಿನ ದಾಳಿ ನಡೆಸಿ 69 ಸಾವಿರ ಮೌಲ್ಯದ ಪಡಿತರ ಅಕ್ಕಿ, ಒಂದು ಟಾಟಾ ಗೂಡ್ಸ್ ವಾಹನ ವಶಕ್ಕೆ ಪಡೆದ ಘಟನೆ ಯಾದಗಿರಿಯಲ್ಲಿ ನಡೆದಿದೆ.
ಯಾದಗಿರಿ: ಅನ್ನಭಾಗ್ಯ ಅಕ್ಕಿ ಕಳ್ಳತನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್..!
ಯಾದಗಿರಿ ಜಿಲ್ಲೆಯ ಸುರಪುರದಿಂದ ರಾಯಚೂರು ಜಿಲ್ಲೆಯ ಲಿಂಗಸೂರಿಗೆ ಸಾಗಾಟ ಮಾಡಲಾಗ್ತಿದ್ದ ಪಡಿತರ ಅಕ್ಕಿ. ಖಚಿತ ಮಾಹಿತಿ ಮೇರೆಗೆ ಸುರಪುರ ಪೊಲೀಸರು ದಾಳಿ ನಡೆಸಿದ್ದರು. ದಾಳಿ ಟಾಟಾ ಗೂಡ್ಸ್ ವಾಹನ ಬಿಟ್ಟು ಪರಾರಿಯಾಗಿರುವ ಚಾಲಕ. ಆರೋಪಿ ಚಾಲಕ ರಾಯಚೂರು ಜಿಲ್ಲೆಯ ಲಿಂಗಸೂರು ತಾಲೂಕಿನ ಗುರುಗುಂಟಾ ಗ್ರಾಮದ ನಂದೇಶ ಎಂದು ಗುರುತಿಸಲಾಗಿದೆ. 50 ಕೆ.ಜಿ. 45 ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿದ್ದ ಪಡಿತರ ಅಕ್ಕಿಯನ್ನ ಗೂಡ್ಸ್ ವಾಹನದಲ್ಲಿ ಸಾಗಿಸಲಾಗ್ತಿತ್ತು. ಪ್ರಕರಣ ದಾಖಲಿಸಿಕೊಂಡಿರುವ ಸುರಪುರ ಪೊಲೀಸರು, ಪರಾರಿಯಾಗಿರುವ ಚಾಲಕನನ್ನು ಬಂಧಿಸಲು ಜಾಲ ಬೀಸಿದ್ದಾರೆ.
ಪಡಿತರ ಅಕ್ಕಿ ಅಕ್ರಮ: ಸಿಐಡಿ ತನಿಖೆಗೆ ಸದನದಲ್ಲಿ ಶಾಸಕ ಕಂದಕೂರು ಆಗ್ರಹ
ಪಡಿತರ ದಂಧೆ ತಡೆಯುವಲ್ಲಿ ಪೊಲೀಸರು, ಅಧಿಕಾರಿಗಳು ವಿಫಲ
ಯಾದಗಿರಿ ಜಿಲ್ಲೆಯಲ್ಲಿ ಪಡಿತರ ಅಕ್ಕಿ ಕಳ್ಳಸಾಗಣೆ ಎಗ್ಗಿಲ್ಲದೆ ನಡೆಯುತ್ತಿದೆ ಹಗಲಿನಲ್ಲೇ ನಡೆಯುವ ಈ ಹಗರಣ ತಡೆಗಟ್ಟಲು ಪೊಲೀಸರು, ಅಧಿಕಾರಿಗಳು ವಿಫಲರಾಗಿದ್ದಾರೆ. ಕೆಲ ಅಧಿಕಾರಿಗಳೇ ಇದರಲ್ಲಿ ಶಾಮೀಲಾಗಿರುವ ಆರೋಪ ಕೇಳಿಬಂದಿದೆ. ಅಕ್ರಮ ಪಡಿತರ ಅಕ್ಕಿ ಸಾಗಾಟದಲ್ಲಿ ಪೊಲೀಸರದು ಪಾಲು ಇದೆ. ಪಡಿತರ ಅಕ್ಕಿ ಕಳ್ಳಸಾಗಣೆ ಯಾರು ಮಾಡುತ್ತಿದ್ದಾರೆಂಬುದು ಪೊಲೀಸರಿಗೆ ಗೊತ್ತಿಲ್ಲದ ವಿಚಾರವೇನಲ್ಲ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.