'ಪ್ರವಾದಿ ನಿಂದಕರಿಗೆ ಶಿರಚ್ಛೇದನವೇ ಶಿಕ್ಷೆ': ಮಗನ ಸಾವಿನ ಗಂಟೆಗಳ ಮುಂಚೆ ತಂದೆಗೆ ಸಂದೇಶ
Crime News: ಜುಲೈ 24 ರ ಭಾನುವಾರ ಸಂಜೆ ಒಬೈದುಲ್ಲಗಂಜ್ ಪಟ್ಟಣದ ಬಳಿ ರೈಲ್ವೆ ಹಳಿಯಲ್ಲಿ ನಿಶಾಂತ್ ಎಂದು ಗುರುತಿಸಲಾದ ಕಾಲೇಜು ವಿದ್ಯಾರ್ಥಿಯ ಶವವನ್ನು ಮಧ್ಯಪ್ರದೇಶ ಪೊಲೀಸರು ಪತ್ತೆ ಮಾಡಿದ್ದಾರೆ
ಮಧ್ಯಪ್ರದೇಶ (ಜು. 25): ಜುಲೈ 24 ರ ಭಾನುವಾರ ಸಂಜೆ ಮಧ್ಯಪ್ರದೇಶದ ರೈಸನ್ ಜಿಲ್ಲೆಯ ಒಬೈದುಲ್ಲಗಂಜ್ ಪಟ್ಟಣದ ಬಳಿ ರೈಲ್ವೆ ಹಳಿಯಲ್ಲಿ ನಿಶಾಂತ್ ಎಂದು ಗುರುತಿಸಲಾದ ಕಾಲೇಜು ವಿದ್ಯಾರ್ಥಿಯ ಶವವನ್ನು ಮಧ್ಯಪ್ರದೇಶ ಪೊಲೀಸರು ಪತ್ತೆ ಮಾಡಿದ್ದಾರೆ. ಯುವಕನ ತಂದೆಗೆ ತನ್ನ ಮಗನ ಮೊಬೈಲ್‌ನಿಂದ “ನಿಮ್ಮ ಮಗ ಧೈರ್ಯಶಾಲಿ” ಎಂದು ವಾಟ್ಸಾಪ್ ಸಂದೇಶ ಬಂದಿತ್ತು. ಅಲ್ಲದೇ ಸಂದೇಶದಲ್ಲಿ, "ಗುಸ್ತಖ್-ಇ-ನಬಿ ಕಿ ಏಕ್ ಸಜಾ, ಸರ್ ತನ್ ಸೇ ಜುದಾ [ಪ್ರವಾದಿ ಮುಹಮ್ಮದ್ ಅವರನ್ನು ಅವಮಾನಿಸುವವರಿಗೆ ಶಿರಚ್ಛೇದನ ಮಾತ್ರ ಶಿಕ್ಷೆ]." ಎಂದು ಬರೆಯಲಾಗಿತ್ತು.
ನರ್ಮದಾಪುರಂ ಜಿಲ್ಲೆಯ ನಿವಾಸಿಯಾಗಿರುವ ಯುವಕನ ತಂದೆ ಉಮಾ ಶಂಕರ್ ರಾಥೋಡ್ ಅವರಿಗೆ ಭಾನುವಾರ ಸಂಜೆ 5.44 ಕ್ಕೆ ಈ ಸಂದೇಶ ಬಂದಿದೆ. ಅದನ್ನು ಓದಿದ ನಂತರ, ಅವರು ಭೋಪಾಲ್‌ನ ಓರಿಯಂಟಲ್ ಕಾಲೇಜಿನಲ್ಲಿ ಮೂರನೇ ವರ್ಷದ ವಿದ್ಯಾರ್ಥಿಯಾದ ತಮ್ಮ ಮಗ ನಿಶಾಂತ್ ರಾಥೋಡ್‌ನನ್ನು ಪತ್ತೆಹಚ್ಚಲು ಪ್ರಯತ್ನಿಸಿದ್ದಾರೆ.
ಕಾಣೆಯಾದ ಮಗ ರೈಲ್ವೇ ಟ್ರ್ಯಾಕ್‌ನಲ್ಲಿ ಪತ್ತೆ: ಆದರೆ ನಿಶಾಂತ್ ತನ್ನ ಕೊಠಡಿಯಿಂದ ನಾಪತ್ತೆಯಾಗಿದ್ದ. ನಿಶಾಂತ್ ತನ್ನ ಅಕ್ಕನನ್ನು ಭೇಟಿಯಾಗಲು ಹೋಗಿದ್ದ ಎಂದು ಮಗಳು ಉಮಾ ಶಂಕರ್‌ಗೆ ತಿಳಿಸಿದ್ದಾಳೆ. ನಂತರ ಸಂಜೆ ಮಧ್ಯಪ್ರದೇಶದ ರೈಸೇನ್ ಜಿಲ್ಲೆಯ ಒಬೈದುಲ್ಲಗಂಜ್‌ನಲ್ಲಿ ರೈಲು ಹಳಿಗಳ ಮೇಲೆ ನಿಶಾಂತ್ ಮೃತದೇಹ ಪತ್ತೆಯಾಗಿದೆ.
ನೂಪುರ್ ಕೊಲ್ಲಲು ಬಂದ ಪಾಕ್ ನುಸುಳುಕೋರ ಸರೆ
ಸೋಮವಾರ ಮಧ್ಯಾಹ್ನ ನಿಶಾಂತ್‌ನ ಮರಣೋತ್ತರ ಪರೀಕ್ಷೆಯನ್ನು ಭೋಪಾಲ್‌ನ ಏಮ್ಸ್‌ನಲ್ಲಿ ನಡೆಸಲಾಗಿದೆ. ಚಲಿಸುತ್ತಿರುವ ರೈಲು ಸಾವಿಗೆ ಕಾರಣ ಎಂದು ನರ್ಮದಾಪುರಂ ವ್ಯಾಪ್ತಿಯ ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ (ಐಜಿ) ದೀಪಿಕಾ ಸೂರಿ ತಿಳಿಸಿದ್ದಾರೆ ಎಂದು ಇಂಡೀಯಾ ಟುಡೇ ವರದಿ ಮಾಡಿದೆ.
“ಅವನು ಭೋಪಾಲ್‌ನಲ್ಲಿ ತನ್ನ ಕೋಣೆಯಿಂದ ಹೊರಬಂದ ಸಮಯದಿಂದ ನಾವು ಅವನ ಚಲನವಲನಗಳನ್ನು ಸಿಸಿಟಿವಿ ಕ್ಯಾಮೆರಾಗಳ ಮೂಲಕ ಪತ್ತೆಹಚ್ಚಿದ್ದೇವೆ. ಸಂಜೆ 5.09ಕ್ಕೆ ಪೆಟ್ರೋಲ್ ಪಂಪ್‌ನಲ್ಲಿ ಕಾಣಿಸಿಕೊಂಡಿದ್ದು, ಯಾರೂ ಜೊತೆಗಿರಲಿಲ್ಲ. ಚಲಿಸುತ್ತಿರುವ ರೈಲಿನ ಮುಂದೆ ಬಂದಿದ್ದರಿಂದ ಯುವಕ ಸಾವನ್ನಪ್ಪಿದ್ದಾನೆ ಎಂದು ಮರಣೋತ್ತರ ಪರೀಕ್ಷೆಯಿಂದ ತಿಳಿದುಬಂದಿದೆ" ಎಂದು ಐಜಿ ಸೂರಿ ತಿಳಿಸಿದ್ದಾರೆ ಎಂದು ವರದಿ ಹೇಳಿದೆ.
ಯುವಕನ ಇನ್‌ಸ್ಟಾಗ್ರಾಮ್‌ಗೂ ಪಠ್ಯ ಅಪ್‌ಲೋಡ್: ನಿಶಾಂತ್ ಇನ್‌ಸ್ಟಾಗ್ರಾಮ್ ಪ್ರೊಫೈಲನ್ನು ಸಹ ಅವರ ತಂದೆಗೆ ಕಳುಹಿಸಲಾದ ಸಂದೇಶದೊಂದಿಗೆ ನವೀಕರಿಸಲಾಗಿದೆ. ಅವರ ತಂದೆ ಸಂದೇಶವನ್ನು ಸ್ವೀಕರಿಸಿದ ಅದೇ ಸಮಯದಲ್ಲಿ ಇನ್‌ಸ್ಟಾಗ್ರಾಮ್ ಪ್ರೊಫೈಲ್ ಅಪ್‌ಡೇಟ್ ಮಾಡಲಾಗಿದೆ.
ದೇಶದ ಈಗಿನ ಪರಿಸ್ಥಿತಿ ನನಗೆ ಭಯ ಮೂಡಿಸಿದೆ ಎಂದ ಅಮರ್ತ್ಯ ಸೆನ್!
"ನಿಶಾಂತ್ ತಂದೆಗೆ ಸಂದೇಶ ಬಂದಿದೆ. ಅಲ್ಲದೆ, ಇನ್‌ಸ್ಟಾಗ್ರಾಮ್ ಪ್ರೊಫೈಲ್ ನವೀಕರಿಸಲಾಗಿದೆ. ಯುವಕ ಎಲ್ಲಾ ಸಮಯದಲ್ಲೂ ಒಬ್ಬಂಟಿಯಾಗಿದ್ದ, ಆದರೆ ನಾವು ಇನ್ನೂ ತನಿಖೆ ನಡೆಸುತ್ತಿದ್ದೇವೆ. ಆತನೇ ಇದನ್ನು ಮಾಡಿದ್ದಾನೋ ಅಥವಾ ಬೇರೆ ಯಾರಾದರೂ ಫೋನ್ ಬಳಸುತ್ತಿದ್ದಾರೋ ಎಂಬುದು ಸ್ಪಷ್ಟವಾಗಿಲ್ಲ. ರೈಸನ್ ಜಿಲ್ಲೆಯ ಬರ್ಕೆಡಾ ಪೊಲೀಸ್ ಠಾಣೆಯಲ್ಲಿ ಸಾವಿನ ಪ್ರಕರಣ ದಾಖಲಾಗಿದೆ" ಎಂದು ಐಜಿ ಪುರಿ ತಿಳಿಸಿದ್ದಾರೆ. ನಿಶಾಂತ್ ಶವ ಪತ್ತೆಯಾದ ಸ್ಥಳದಿಂದ ಪೊಲೀಸರು ಆತನ ಫೋನನ್ನು ವಶಪಡಿಸಿಕೊಂಡಿದ್ದಾರೆ.