ದೇಶದ ಈಗಿನ ಪರಿಸ್ಥಿತಿ ನನಗೆ ಭಯ ಮೂಡಿಸಿದೆ ಎಂದ ಅಮರ್ತ್ಯ ಸೆನ್‌!

ನೊಬೆಲ್‌ ಪ್ರಶಸ್ತಿ ಪುರಸ್ಕೃತ ಹಾಗೂ ಖ್ಯಾತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೆನ್‌ ದೇಶದಲ್ಲಿನ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಮಾತನಾಡುತ್ತಾ, ಪ್ರಸ್ತುತ ದೇಶದ ಪರಿಸ್ಥಿತಿ ಭಯ ಮೂಡಿಸಿದೆ ಎಂದು ಹೇಳಿದ್ದಾರೆ. ಅದಲ್ಲದೆ, ದೇಶದ ಜನರು ಏಕತೆಯನ್ನು ಸ್ಥಾಪಿಸುವ ನಿಟ್ಟಿನಲ್ಲಿ ಮುಂದುವರಿಯಬೇಕು ಎಂದು ಹೇಳಿದ್ದಾರೆ.
 

Nobel laureate and economist Amartya Sen says India Not for Hindus Only Current Situation Cause for Fear san

ಕೋಲ್ಕತ (ಜುಲೈ 1): ನೊಬೆಲ್ ಪ್ರಶಸ್ತಿ (Nobel laureate) ಪುರಸ್ಕೃತ ಅಮರ್ತ್ಯ ಸೇನ್ ( Amartya Sen) ಭಾರತದ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಜನರು ಒಗ್ಗಟ್ಟು ಕಾಪಾಡುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಮನವಿ ಮಾಡಿದ್ದು,  ಧಾರ್ಮಿಕ ನೆಲೆಯಲ್ಲಿ ಮತ್ತೆ ವಿಭಜನೆ ಮಾಡಬಾರದು ಎಂದು ಹೇಳಿದ್ದಾರೆ.

ಶುಕ್ರವಾರ ಕೋಲ್ಕತ್ತದ (Kolkatta) ಸಾಲ್ಟ್‌ ಲೇಕ್‌ನಲ್ಲಿ (Salt Lake) ನಿರ್ಮಾಣವಾಗಿರುವ ಅಮರ್ತ್ಯ ಸೇನ್‌ ಸಂಶೋಧನಾ ಕೇಂದ್ರದ (Amartya Sen Research Centre) ಉದ್ಘಾಟನೆಗೆ ಆಗಮಿಸಿದ್ದ ಅವರು, ಪ್ರಸ್ತುತ ಸನ್ನಿವೇಶದಲ್ಲಿ ನನಗೆ ಏನಾದರೂ ಭಯವಿದೆಯೇ ಎಂದು ಯಾರಾದರೂ ನನ್ನನ್ನು ಕೇಳಿದರೆ, ಖಂಡಿತಾ ನಾನು ಹೇಳುತ್ತೇನೆ. ಭಯಪಡಲು ನನಗೆ ಕಾರಣವೂ ಇದೆ. ದೇಶದ ಇಂದಿನ ಪರಿಸ್ಥಿತಿ ನನ್ನ ಭಯಕ್ಕೆ ಕಾರಣವಾಗಿದೆ ಎಂದು ಹೇಳಿದ್ದಾರೆ.

ದೇಶ ಒಗ್ಗಟ್ಟಿನಿಂದ ಇರಬೇಕೆಂದು ನಾನು ಬಯಸುತ್ತೇನೆ. ಐತಿಹಾಸಿಕವಾಗಿ ಉದಾರವಾದಿಯಾಗಿರುವ ದೇಶದ ವಿಭಜನೆಯನ್ನು ನಾನು ಬಯಸುವುದಿಲ್ಲ. ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಭಾರತ ಕೇವಲ ಹಿಂದೂಗಳು ಅಥವಾ ಮುಸ್ಲಿಮರಿಗೆ ಮಾತ್ರ ಸೇರಿದ ದೇಶವಲ್ಲ ಎಂದು ಹೇಳಿದರು. ದೇಶದ ಸಂಪ್ರದಾಯಗಳ ಪ್ರಕಾರ ನಾವು ಒಗ್ಗಟ್ಟಾಗಿ ಉಳಿಯಬೇಕು ಎಂದಿದ್ದಾರೆ. ಭಾರತ ಕೇವಲ ಹಿಂದೂಗಳಿಗೆ ಸೇರಲು ಸಾಧ್ಯವಿಲ್ಲ ಎಂದರು. ಕೇವಲ ಮುಸ್ಲಿಮರೂ ಭಾರತವನ್ನು ಮಾಡಲು ಸಾಧ್ಯವಿಲ್ಲ. ಎಲ್ಲರೂ ಒಗ್ಗೂಡಿ ಕೆಲಸ ಮಾಡಬೇಕು ಎಂದಿದ್ದಾರೆ.

"ಸಹಿಷ್ಣುತೆಯು ಭಾರತೀಯ ಸಂಸ್ಕೃತಿ ಮತ್ತು ಭಾರತೀಯ ಶಿಕ್ಷಣ ಎರಡರ ಭಾಗವಾಗಿದೆ, ಆದರೆ ಸಹಿಷ್ಣುತೆಗಿಂತ ಹೆಚ್ಚಾಗಿ, ಪ್ರಸ್ತುತ ಪರಿಸ್ಥಿತಿಯಲ್ಲಿ ಭಾರತಕ್ಕೆ ಏಕತೆಯ ಅಗತ್ಯವಿದೆ' ಎಂದರು. 'ಬ್ಯಾಕ್ ಟು ಸ್ಕೂಲ್' ಚರ್ಚೆಯಲ್ಲಿ ಪ್ಯಾನೆಲಿಸ್ಟ್‌ಗಳಲ್ಲಿ ಒಬ್ಬರಾಗಿದ್ದ ಸೇನ್ - ಇತರರು ಅನಿತಾ ರಾಂಪಾಲ್, ಕೆ ಶ್ರೀನಾಥ್ ರೆಡ್ಡಿ, ಎಕೆ ಶಿವಕುಮಾರ್ ಮತ್ತು ಜೀನ್ ಡ್ರೆಜ್ - ವೈವಿಧ್ಯಮಯ ಭಾರತದ ಏಕತೆ ಮತ್ತು ಸಂಪ್ರದಾಯದ ಬಗ್ಗೆ ಸುದೀರ್ಘವಾಗಿ ಮಾತನಾಡಿದರು.

"ನಮ್ಮ ಸುತ್ತಲಿನ ಪರಿಸರವು ಇತಿಹಾಸವನ್ನು ಬದಲಾಯಿಸಲು ಮತ್ತು ಮುಸ್ಲಿಂ ಪ್ರಭಾವವನ್ನು ತೆಗೆದುಹಾಕಲು ಪ್ರಯತ್ನಿಸಿದರೂ, ಸತ್ಯವನ್ನು ಮುಚ್ಚಿಹಾಕಲು ಸಾಧ್ಯವಿಲ್ಲ ಎಂದು ನಮಗೆಲ್ಲರಿಗೂ ತಿಳಿದಿದೆ" ಎಂದು ಸೇನ್ ಹೇಳಿದರು.ಭಾರತೀಯ ಇತಿಹಾಸದ ಅಧ್ಯಯನದಲ್ಲಿ ಮೊಘಲ್ ಪ್ರಭಾವವು ಹೇಗೆ ಪ್ರಮುಖ ಪ್ರಾಮುಖ್ಯತೆಯನ್ನು ಹೊಂದಿದೆ ಎಂಬುದರ ಕುರಿತು ಸೇನ್ ಮಾತನಾಡಿದರು. “ಭಾರತ ಆರ್ಯಭಟನ ಭಾರತ. ವಿಜ್ಞಾನದ ಅಭ್ಯಾಸದಲ್ಲಿ ಭಾರತ ಇಡೀ ವಿಶ್ವಕ್ಕೆ ಮಾದರಿಯಾಗಿರುವ ದೇಶವಾಗಿದೆ,'' ಎಂದು ಹೇಳಿದರು.

ಕೋವಿಡ್ ಹೆಚ್ಚಳಕ್ಕೆ ಮಾನಸಿಕ ಸ್ಥಿಮಿತ ಕಳೆದುಕೊಂಡ ಮೋದಿ ಸರ್ಕಾರ ಕಾರಣ; ಅಮರ್ತ್ಯ ಸೇನ್!

ಆಧುನಿಕ ಭಾರತದ ಬಗ್ಗೆ ಮಾತನಾಡುತ್ತಾ ಸೇನ್ ಅವರು, ಹಿಂದೆ ಇದ್ದ ಭಾರತದ ನೆರಳು ಈಗ ಕಾಣುತ್ತಿಲ್ಲ ಎಂದು ಹೇಳಿದರು.  'ಪ್ರಸ್ತುತ ನೀವು ಯಾವುದಕ್ಕಾದರೂ ಹೆದರುತ್ತೀರಾ ಎಂದು ಯಾರಾದರೂ ನನ್ನನ್ನು ಕೇಳಿದರೆ, ಖಂಡಿತವಾಗಿ ನಾನು ಹೌದು ಎಂದು ಹೇಳುತ್ತೇನೆ. ನಾನು ಭಯದಿಂದ ಇರಲು ಈಗ ಬೇಕಾದಷ್ಟು ಕಾರಣಗಳಿವೆ. ಏಕೆಂದರೆ ದೇಶ ಒಗ್ಗಟ್ಟಿನಿಂದ ಇರಬೇಕೆಂದು ನಾನು ಬಯಸುತ್ತೇನೆ. ಇದು ಸಹನೆಯ ವಿಷಯವಲ್ಲ. ದೇಶವು ಮೊದಲಿನಂತೆ ಒಗ್ಗಟ್ಟಾಗಿ ಉಳಿಯಬೇಕೆಂದು ನಾನು ಬಯಸುತ್ತೇನೆ. ಜನರು ಇದನ್ನು ಹೆಚ್ಚು ಅರ್ಥಮಾಡಿಕೊಳ್ಳಬೇಕು ಎಂದರು.

ಶ್ರೀರಾಮನ ಹೆಸರು ಜನರನ್ನು ಬಡಿಯಲು ಬಳಕೆ: ಸೇನ್!

ನರೇಂದ್ರ ಮೋದಿ ಸರ್ಕಾರದ ಕುರಿತಾಗಿ ಸೇನ್‌ ಟೀಕೆ ಮಾಡಿದ್ದು ಇದೆ ಮೊದಲೇನಲ್ಲ. 2021 ರಲ್ಲಿ, 88 ವರ್ಷ ವಯಸ್ಸಿನ ಸೆನ್‌ "ಗೊಂದಲಕ್ಕೊಳಗಾದ" ಭಾರತ ಸರ್ಕಾರವು ಕೋವಿಡ್‌ ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸುವ ಪ್ರಯತ್ನಗಳನ್ನು ಮಾಡುವುದಕ್ಕಿಂತ ಹೆಚ್ಚಾಗಿ ತನ್ನ ಕಾರ್ಯಗಳಿಗೆ ಕ್ರೆಡಿಟ್ ತೆಗೆದುಕೊಳ್ಳುವಲ್ಲಿ ಹೆಚ್ಚು ಗಮನಹರಿಸಿದೆ, ಇದರ ಪರಿಣಾಮವಾಗಿ "ಸ್ಕಿಜೋಫ್ರೇನಿಯಾವು ಭಾರಿ ತೊಂದರೆಗಳಿಗೆ ಕಾರಣವಾಯಿತು" ಎಂದು ಹೇಳಿದರು. 2019 ರಲ್ಲಿ, ಖಾಸಗಿ ಟಿವಿಯಲ್ಲಿ ಮಾತನಾಡುತ್ತಾ ಕೇಂದ್ರವು ಕಾಶ್ಮೀರದಲ್ಲಿ 370 ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಭಾರತೀಯನಾಗಿ ನನಗೆ ಹೆಮ್ಮೆಯಿಲ್ಲ ಎಂದು ಹೇಳಿದ್ದರು.

Latest Videos
Follow Us:
Download App:
  • android
  • ios