Rowdy Sheeter Murder: ಭೀಮಾತೀರದಲ್ಲಿ ಮತ್ತೆ ಹರಿದ ನೆತ್ತರು, ಪಪಂ ಮಾಜಿ ಸದಸ್ಯನ ಬರ್ಬರ ಹತ್ಯೆ
* ವಿಜಯಪುರ ಜಿಲ್ಲೆಯ ಆಲಮೇಲದ ಯುಕೆಪಿ ಕ್ಯಾಂಪ್ ಬಳಿ ನಡೆದ ಘಟನೆ
* ಹಳೇ ವೈಷಮ್ಯಕ್ಕೆ ಆಲಮೇಲ ಪಪಂ ಮಾಜಿ ಸದಸ್ಯ, ರೌಡಿ ಶೀಟರ್ ಕೊಲೆ
* ಆರೋಪಿಗಳನ್ನು ಆದಷ್ಟು ಬೇಗ ಬಂಧಿಸಲಾಗುವುದು: ಎಸ್‌ಪಿ
ವಿಜಯಪುರ(ಡಿ.04): ಭೀಮಾ ತೀರದಲ್ಲಿ(Bheema Teera) ಮತ್ತೆ ನೆತ್ತರು ಹರಿದಿದ್ದು, ಹಳೇ ವೈಷಮ್ಯದಿಂದ ಪಪಂ ಮಾಜಿ ಸದಸ್ಯನನ್ನು ಭೀಕರವಾಗಿ ಹತ್ಯೆ(Murder) ಮಾಡಿರುವ ಘಟನೆ ವಿಜಯಪುರ(Vijayapura) ಜಿಲ್ಲೆಯ ಆಲಮೇಲದ ಯುಕೆಪಿ ಕ್ಯಾಂಪ್ ಬಳಿಯ ಸರ್ಕಾರಿ ಶಾಲೆ ಆವರಣದಲ್ಲಿ ಗುರುವಾರ ತಡರಾತ್ರಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 13 ಜನರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ವಿಜಯಪುರ ಪೊಲೀಸ್ ವರಿಷ್ಠಾಧಿಕಾರಿ ಆನಂದ ಕುಮಾರ್(Anand Kumar) ತಿಳಿಸಿದ್ದಾರೆ.
ಆಲಮೇಲದ ರೌಡಿ ಶೀಟರ್(Rowdy Sheeter ) ಆಗಿದ್ದ ಪಪಂ ಮಾಜಿ ಸದಸ್ಯ ಪ್ರದೀಪ ಯಂಟಮಾನ(37)(Pradeep Yentamana) ಕೊಲೆಯಾದ ವ್ಯಕ್ತಿ. ಗುರುವಾರ ತಡರಾತ್ರಿ ಒಂದು ಗಂಟೆ ಸುಮಾರಿಗೆ ಆಲಮೇಲ(Almel) ಪಟ್ಟಣದ ಯುಕೆಪಿ ಕ್ಯಾಂಪ್ ಬಳಿಯ ಸರ್ಕಾರಿ ಶಾಲೆಯ ಆವರಣದಲ್ಲಿ ಪ್ರದೀಪ ಯಂಟಮಾನನನ್ನು ಹತ್ಯೆ ಮಾಡಲಾಗಿದೆ. ಬಡಿಗೆ, ಕಲ್ಲುಗಳಿಂದ ದಾಳಿ ನಡೆಸಿರುವ ಹಂತಕರು, ತಲೆಗೆ ಬಲವಾಗಿ ಹೊಡೆದು ಕೊಲೆ ಮಾಡಿದ್ದಾರೆ.
Suvarna FIR; ಭೀಮಾ ತೀರದಲ್ಲಿ ಶುರುವಾಗಿದೆ ಕಿಡ್ನಾಪ್ ದಂಧೆ.. ಎಚ್ಚರ!
2016ರ ಪಟ್ಟಣ ಪಂಚಾಯತ ಚುನಾವಣೆಯಲ್ಲಿ ಪ್ರದೀಪ ಯಂಟಮಾನ ಗೆಲವು ಸಾಧಿಸಿದ್ದ. ನಂತರ ಈಗ ಮತ್ತೆ ಚುನಾವಣೆಯಲ್ಲಿ(Election) ಸ್ಪರ್ಧೆ ಮಾಡಲು ನಿರ್ಧಾರ ಮಾಡಿದ್ದು ಈ ಬಾರಿ ಡಿ.27 ರಂದು ನಡೆಯುವ ಪಪಂ ಚುನಾವಣೆಯಲ್ಲಿ ಗೆಲುವು ಸಾಧಿಸಬಹುದು ಎಂದು ಹತ್ಯೆ ಮಾಡಲಾಗಿದೆ ಎಂದು ಕುಟುಂಬಸ್ಥರು ಆರೋಪಿಸಿ ಪ್ರಕರಣ ದಾಖಲಿಸಿದ್ದಾರೆ.
ಕಳೆದ ಬಾರಿ ವಾರ್ಡ್ ನಂ.13ರಲ್ಲಿ ಗೆಲವು ಸಾಧಿಸಿದ ಪ್ರದೀಪ ಈ ಬಾರಿ ವಾರ್ಡ್ ನಂ.17ರಲ್ಲಿ ಸ್ಪರ್ಧೆಗೆ ತಯಾರಿ ಮಾಡಿಕೊಂಡಿದ್ದ ಎನ್ನಲಾಗಿದೆ. ಈ ಕುರಿತು ಆಲಮೇಲ ಪೊಲೀಸ್ ಠಾಣೆಯಲ್ಲಿ(Police) ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಜಿಲ್ಲಾ ಹೆಚ್ಚುವರಿ ಎಸ್‌ಪಿ, ಇಂಡಿ ಡಿಎಸ್‌ಪಿ, ಸಿಂದಗಿ ಸಿಪಿಐ ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ
ರಾಜಕೀಯ ದ್ವೇಷವೇ ಕೊಲೆಗೆ ಕಾರಣ: ಎಸ್ಪಿ
ತಡರಾತ್ರಿ ರೌಡಿಶೀಟರ್ ಪ್ರದೀಪ ಯಂಟಮಾನ ಕೊಲೆ ಮಾಡಲಾಗಿದೆ. ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ ಎದುರಾಳಿಗಳು ಆತನ ಕೊಲೆ ಮಾಡಿದ್ದಾರೆ. ಈಗಾಗಲೇ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಒಟ್ಟು 13 ಜನ ಆರೋಪಿಗಳ(Accused) ವಿರುದ್ಧ ಮೃತನ ಕುಟುಂಬಸ್ಥರು ನೀಡಿದ್ದಾರೆ ಎಂದು ವಿಜಯಪುರ ಎಸ್‌ಪಿ ಆನಂದ ಕುಮಾರ ತಿಳಿಸಿದರು.
ಭೀಮಾ ತೀರದಲ್ಲಿ ಮತ್ತೆ ಗುಂಡಿನ ಸದ್ದು: ಇನ್ನೂ ಮುಗಿಯದ ರಕ್ತ ಚರಿತ್ರೆ..!
ಆಲಮೇಲ ಪಪಂ ಮಾಜಿ ಸದಸ್ಯ, ರೌಡಿ ಶೀಟರ್ ಪ್ರದೀಪ ಹತ್ಯೆ ಸಂಬಂಧಿಸಿದಂತೆ ನಗರದಲ್ಲಿ ಶುಕ್ರವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸೋಮನಾಥ ಮೇಲಿನಮನಿ ಸೇರಿದಂತೆ 13 ಜನರ ವಿರುದ್ಧ ದೂರು ನೀಡಲಾಗಿದೆ. ಮೃತ ಪ್ರದೀಪ ಯಂಟಮಾನ ಈ ಹಿಂದೆ ಆಲಮೇಲ ವಾರ್ಡ್ ನಂಬರ್ 13ರ ಪಪಂ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ. ಈ ಸಲ 17ನೇ ವಾರ್ಡ್‌ಗೆ ಅಭ್ಯರ್ಥಿಯಾಗಿ ತಯಾರಿ ನಡೆಸಿದ್ದ. ಗುರುವಾರ ರಾತ್ರಿ ಪಟ್ಟಣದಲ್ಲಿ ಯಲ್ಲಮ್ಮನ ಚೌಡಕಿ ಪದ ಕಾರ್ಯಕ್ರಮ ನಡೆಯುತ್ತಿತ್ತು. ಈ ಕಾರ್ಯಕ್ರಮಕ್ಕೆ ಪ್ರದೀಪ ಯಂಟಮಾನ 10 ಸಾವಿರ ಹಣ ನೀಡಿದ್ದ. ಇದು ವಿರೋಧಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಯಲ್ಲಮ್ಮನ ಚೌಡಕಿ ಪದ ಹಾಡುತ್ತಿದ್ದ ಕಾರ್ಯಕ್ರಮದಲ್ಲಿ ಗಾಯಕಿಗೆ .501 ಬಹುಮಾನ ಸಹ ನೀಡಿದ್ದ. .501 ಬಹುಮಾನ ನೀಡದಕ್ಕೆ ಆತನ ಜೊತೆ ವಿರೋಧಿಗಳು ಗಲಾಟೆ ಮಾಡಿದ್ದರು. ನಮ್ಮ ವಾರ್ಡ್‌ನಲ್ಲಿ ಬಂದು ಯಾಕೆ ಹಣ ನೀಡುತ್ತಿಯಾ? ಎಂದು ಗಲಾಟೆ ನಡೆಸಿದ್ದರು. ಬಳಿಕ ತಡರಾತ್ರಿ ಏಳೆಂಟು ಜನರಿಂದ ಪ್ರದೀಪ ಯಂಟಮಾನ ಮೇಲೆ ಕಲ್ಲು ಬಡಿಗೆಯಿಂದ ಹಲ್ಲೆ ಮಾಡಿ ಕೊಲೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಇದು ವೈಯಕ್ತಿಕ ಹಾಗೂ ರಾಜಕೀಯದಿಂದ ಕೂಡಿದ ಕೊಲೆಯಾಗಿದೆ. ಯಾವುದೇ ಭೀಮಾತೀರದ ಗ್ಯಾಂಗ್ ಇದರಲ್ಲಿ ಭಾಗಿಯಾಗಿಲ್ಲ. ಕೊಲೆಯಾದ ಪ್ರದೀಪ್ ವಿರುದ್ಧ ಈ ಹಿಂದಿನ ಚುನಾವಣೆಯಲ್ಲಿ ಸೋಮನಾಥ ಮೇಲಿನಮನಿ ಸೋಲು ಕಂಡಿದ್ದ. ಈ ಸಲದ ಚುನಾವಣೆಯಲ್ಲೂ ಇಬ್ಬರು ಎದುರಾಳಿಗಳಾಗಿದ್ದರು. ಹಳೇ ದ್ವೇಷ ಹಾಗೂ ಚುನಾವಣೆ ವೈಷಮ್ಯವೇ ಈ ಕೊಲೆಗೆ ಕಾರಣವಾಗಿದೆ. ಪ್ರಕರಣ ಬಗ್ಗೆ ತನಖೆ ನಡೆಯುತ್ತಿದ್ದು, ಆರೋಪಿಗಳನ್ನು ಆದಷ್ಟು ಬೇಗ ಬಂಧಿಸಲಾಗುವುದು ಎಂದು ತಿಳಿಸಿದರು.