ವಿಜಯಪುರ, (ನ.02): ಭೀಮಾ ತೀರದ ಕುಖ್ಯಾತ ಮಹಾದೇವ ಭೈರಗೊಂಡನ ಮೇಲೆ ಇಂದು (ಸೋಮವಾರ) ಅಪರಿಚಿತರು ಗುಂಡಿನ ದಾಳಿ ಮಾಡಿ ಪರಾರಿಯಾಗಿದ್ದಾರೆ. ವಿಜಯಪುರ ಜಿಲ್ಲೆಯ ಅರಕೇರಿ ತಾಂಡಾ ಬಳಿ ನಡೆದ ಘಟನೆ

"

ಭೀಕರವಾಗಿ ಗಾಯಗೊಂಡಿರುವ ಮಹಾದೇವ ಹಾಗೂ ಬಾಬುರಾಯ ಎನ್ನುವವರನ್ನ ವಿಜಯಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪರಿಚಿತರ ತಂಡವೊಂದು ಮೊದಲು ಮಹಾದೇವ ಸಾಹುಕಾರ ಸಂಚರಿಸುತ್ತಿದ್ದ ಕಾರಿಗೆ ಟಿಪ್ಪರ್‌ನಿಂದ ಡಿಕ್ಕಿ ಗುದ್ದಿದ್ದಾರೆ. 

ಭೀಮಾ ತೀರದಲ್ಲಿ ಮತ್ತೆ ಧರ್ಮನ ಹೆಸರು, ವಸೂಲಿಗೆ ಇಳಿದ ತಂಡ ಸಿಕ್ಕಿಬಿತ್ತು!

ಬಳಿಕ ಏಕಾಏಕಿ ಗುಂಡಿನ ದಾಳಿ ಎಂದು ತಿಳಿದುಬಂದಿದೆ. ಗುಂಡಿನ ದಾಳಿ ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿರುವ ಚಡಚಣ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರತ್ಯಕ್ಷದರ್ಶಿ ಹೇಳಿಕೆ
ನೋಡನೋಡುತ್ತಿದ್ದಂತೆ 20 ಜನರ ತಂಡ ದಾಳಿ ನಡೆದಿದೆ. ಅವರ ಕಯ್ಯಲ್ಲಿ ಬಂದೂಕುಗಳಿದ್ದವು. ಎರೆಡು ಟಿಪ್ಪರ್ ಮೂಲಕ ಸಾಹುಕಾರ್ ಕಾರು ನಿಲ್ಲಿಸಿ ಪೈರಿಂಗ್ ಮಾಡಿದ್ದಾರೆ. ಕಳೆದ ಎರೆಡು ದಿನಗಳಿಂದ ಹೊಡೆಯೋದಕ್ಕೆ ಪ್ಲಾನ್ ಹಾಕಿದ್ದರು. ಊರಲ್ಲಿ ಸಾಹುಕಾರನ್ನ ವಾಚ್ ಮಾಡಿದ್ದರು ಎಂದು ಪ್ರತ್ಯಕ್ಷದರ್ಶಿ ತಮ್ಮಾರಾವ್ ಬೈರಗೊಂಡ ತಿಳಿಸಿದ್ದಾರೆ.