Asianet Suvarna News Asianet Suvarna News
breaking news image

ಕೊಲೆಗೆ ಸಂಚು ರೂಪಿಸಿದ ಪವಿತ್ರಾ ಗೌಡ ನೇರವಾಗಿ ಕೃತ್ಯದಲ್ಲಿ ಭಾಗಿ, ರಿಮ್ಯಾಂಡ್ ಕಾಪಿ ಬಿಚ್ಚಿಟ್ಟ ರಹಸ್ಯ!

ನಟ ದರ್ಶನ್ ಅಂಡ್ ಗ್ಯಾಂಗ್ ನಡೆಸಿದ ಕೊಲೆ ಪ್ರಕರಣದ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ರೇಣುಕಾಸ್ವಾಮಿ ಹತ್ಯೆಗೆ ಸಂಚು ರೂಪಿಸಿದ್ದೇ ಪವಿತ್ರಾ ಗೌಡ. ಇಷ್ಟೇ ಅಲ್ಲ ಈಕೆ ಈ ಕೃತ್ಯದಲ್ಲಿ ನೇರವಾಗಿ ಭಾಗಿಯಾಗಿದ್ದಾರೆ. ಪೊಲೀಸ್ ರಿಮ್ಯಾಂಡ್ ಕಾಪಿಯಲ್ಲಿ ಬಯಲಾದ ಸ್ಫೋಟಕ ಮಾಹಿತಿ ಇಲ್ಲಿದೆ.
 

Renukaswamy murder case Police Remand copy reveals Pavitra Gowda conspired to murder with Darshan ckm
Author
First Published Jun 21, 2024, 1:32 PM IST

ಬೆಂಗಳೂರು(ಜೂ.21)  ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ತನಿಖಾ ಪೊಲೀಸ್ ತಂಡ ಕೋರ್ಟ್‌ಗೆ ಸಲ್ಲಿಸಿದ ರಿಮ್ಯಾಂಡ್ ಕಾಪಿ ಹಲವು ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದೆ. ನಟ ದರ್ಶನ್ ಹಾಗೂ ಆತನ ಗ್ಯಾಂಗ್ ನಡೆಸಿದ ಭೀಕರ ಕೊಲೆ ಪ್ರಕರಣದ ತನಿಖೆಯಲ್ಲಿ ಹಲವು ಕರಾಳ ಮುಖಗಳು ಬಯಲಾಗಿದೆ. ಪ್ರಮುಖವಾಗಿ ರೇಣುಕಾಸ್ವಾಮಿ ಹತ್ಯೆ ಪ್ರಕರಣ ಸಂಚು ರೂಪಿಸಿ, ನಟ ದರ್ಶನ್ ಹಾಗೂ ಇತರ ಆರೋಪಿಗಳಿಗೆ ಪ್ರಚೋದನೆ ನೀಡಿದ್ದೇ ಪವಿತ್ರಾ ಗೌಡ ಅನ್ನೋ ಸ್ಫೋಟಕ ಮಾಹಿತಿ ಪೊಲೀಸ್ ರಿಮ್ಯಾಂಡ್ ಕಾಪಿಯಲ್ಲಿ ಬಯಲಾಗಿದೆ.

ಆರೋಪಿಗಳ ಹೆಚ್ಚಿನ ವಿಚಾರಣೆಗಾಗಿ ಪೊಲೀಸರು ಕೋರ್ಟ್‌ಗೆ ಸಲ್ಲಿಸಿದ್ದ ರಿಮ್ಯಾಂಡ್ ಕಾಪಿಯಲ್ಲಿ ತನಿಖೆಯಯಲ್ಲಿ ಬಯಲಾಗಿರುವ ಮಾಹಿತಿಗಳನ್ನು ಉಲ್ಲೇಖಿಸಿದ್ದಾರೆ. ರೇಣುಕಾಸ್ವಾಮಿ ಬರ್ಬರಿ ಹತ್ಯೆಗೆ ಸಂಚು ರೂಪಿಸಿದ್ದೇ ಇದೇ ಪವಿತ್ರಾ ಗೌಡ. ಮರ್ಡರ್ ಕೃತ್ಯಕ್ಕೆ ಪವಿತ್ರಾ ಗೌಡ ಪ್ರಮುಖ ಕಾರಣಕರ್ತೆಯಾಗಿದ್ದಾರೆ. ಈಕೆ ನಟ ದರ್ಶನ್ ಹಾಗೂ ಇತರ ಆರೋಪಿಗಳಿಗೆ ಪ್ರಚೋದನೆ ನೀಡಿ ಕೊಲೆಗೆ ಸಂಚು ರೂಪಿಸಿರುವುದು ಹಾಗೂ ಕೃತ್ಯದಲ್ಲಿ ನೇರವಾಗಿ ಭಾಗಿಯಾಗಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ ಎಂದು ರಿಮ್ಯಾಂಡ್ ಕಾಪಿಯಲ್ಲಿ ಉಲ್ಲೇಖಿಸಲಾಗಿದೆ.

ರೇಣುಕಾಸ್ವಾಮಿ ಮರ್ಡರ್‌ ಕೇಸ್‌: ದರ್ಶನ್ ವಿರುದ್ಧ ನಾಲ್ವರು ಆಪ್ತರಿಂದಲೇ ಸಾಕ್ಷ್ಯ, ನಟನಿಗೆ ಮತ್ತಷ್ಟು ಕಂಟಕ..!

ಈ ಆರೋಪಿಗಳಿಗೆ ಕಾನೂನಿನ ಮೇಲೆ ಕಿಂಚಿತ್ ಗೌರವವೇ ಇಲ್ಲ ಅನ್ನೋದು ಸಾಕ್ಷ್ಯಾಧಾರಗಳಲ್ಲಿ ದೃಢಪಟ್ಟಿರುವುದಾಗಿ ಪೊಲೀಸರು ರಿಮ್ಯಾಂಡ್ ಕಾಪಿಯಲ್ಲಿ ಹೇಳಿದ್ದಾರೆ. ಹತ್ಯೆ ಘಟನೆ ಬಳಿಕ ಬೆಂಗಳೂರಿನ ಪಟ್ಟಣಗೆರೆ ಶೆಡ್‌ನ ಕಾವಲುಗಾರರಿಗೆ ಪೊಲೀಸರ ಮುಂದೆ ಸಾಕ್ಷ್ಯ ನುಡಿಯದಂತೆ ದರ್ಶನ್ ಗ್ಯಾಂಗ್ ಪರವಾಗಿ ಕೆಲವರು ಹಣದಾಸೆ ತೋರಿಸಿದ್ದಾರೆ’ ಎಂಬ ಮಾಹಿತಿ ನೀಡಿದ್ದಾರೆ. ಆದರೆ ನಿರ್ದಿಷ್ಟವಾಗಿ ಯಾರಿಂದ ಹಣದ ಆಮಿಷ ಬಂದಿದೆ ಎಂಬುದನ್ನು ಪೊಲೀಸರು ಖಚಿತಪಡಿಸಿಲ್ಲ.

ಈ ನಡುವೆ ಪ್ರಕರಣದಿಂದ ಬಚಾವ್‌ ಆಗಲು ದರ್ಶನ್‌ ತಮ್ಮ ಮನೆಯಲ್ಲಿ 40 ಲಕ್ಷ ರೂ ಸಂಗ್ರಹಿಸಿ ಇಟ್ಟಿದ್ದ ವಿಷಯವೂ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಕೊಲೆ ಪ್ರಕರಣ ಸಂಬಂಧ ಎರಡನೇ ಬಾರಿಗೆ ಪೊಲೀಸ್ ಕಸ್ಟಡಿಗೆ ಪಡೆದು ದರ್ಶನ್‌ ಅವರನ್ನು ವಿಚಾರಣೆಗೊಳಪಡಿಸಿದಾಗ 40 ಲಕ್ಷ ರು. ಹಣದ ಬಗ್ಗೆ ಬಾಯ್ಬಿಟ್ಟಿದ್ದಾರೆ. ಆನಂತರ ಆರ್‌.ಆರ್‌.ನಗರದ ಐಡಿಯಲ್‌ ಹೋಮ್‌ ಲೇಔಟ್‌ನಲ್ಲಿರುವ ದರ್ಶನ್ ಮನೆಯಲ್ಲಿ ಪಿಂಕ್ ಬ್ಯಾಗ್‌ನಲ್ಲಿದ್ದ 37.40 ಲಕ್ಷ ರು. ಹಣವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಉಳಿದ ಹಣವನ್ನು ಆರ್‌.ಆರ್‌.ನಗರದಲ್ಲಿರುವ ಅವರ ಮನೆ ಹಾಗೂ ಅವರ ಪತ್ನಿ ವಿಜಯಲಕ್ಷ್ಮೀ ಅವರ ಬಳಿಯಿಂದ ಜಪ್ತಿ ಮಾಡಲಾಗಿದೆ. 

ರೇಣುಕಾಸ್ವಾಮಿ ಹತ್ಯೆ ಪ್ರಕರಣ: ದರ್ಶನ್ ಗ್ಯಾಂಗ್‌ಗೆ ಡಿಎನ್‌ಎ ಟೆಸ್ಟ್‌..!
 

Latest Videos
Follow Us:
Download App:
  • android
  • ios