ರಾಗಿಣಿ ಸೇವಿಸುತ್ತಿದ್ದ 1 ಡ್ರಗ್ಸ್ ಮಾತ್ರೆಗೆ 3000..! ಹೊರಬಿತ್ತು ಮತ್ತಷ್ಟು ಸೀಕ್ರೇಟ್ಸ್
ನಟಿ ರಾಗಿಣಿ ಸೇವಿಸುತ್ತಿದ್ದ ಒಂದೇ ಒಂದು ಡ್ರಗ್ ಮಾತ್ರೆಗೆ ಬರೋಬ್ಬರಿ 3 ಸಾವಿರ ರು. ಕೊಡುತ್ತಿದ್ದರು ಎನ್ನುವ ವಿಚಾರ ಹೊರಬಿದ್ದಿದೆ. ಅಲ್ಲದೇ ಇದರ ಜೊತೆ ಇನ್ನಷ್ಟು ಸೀಕ್ರೇಟ್ಸ್ ಕೂಡ ಹೊರ ಬಿದ್ದಿದೆ.
ಬೆಂಗಳೂರು (ಸೆ.08): ಮಾದಕ ವಸ್ತು ಖರೀದಿಗೆ ರಾಗಿಣಿ ಲಕ್ಷಾಂತರ ಹಣ ವ್ಯಯಿಸಿದ್ದು, ಆಫ್ರಿಕಾ ಮೂಲದ ಪೆಡ್ಲರ್‌ನಿಂದ ಎಲ್‌ಎಸ್‌ಡಿ ಮಾತ್ರೆಗೆ ತಲಾ 3 ಸಾವಿರ ಕೊಟ್ಟು ಖರೀದಿಸುತ್ತಿದ್ದರು ಎಂಬ ಸಂಗತಿ ಸಿಸಿಬಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎನ್ನಲಾಗಿದೆ.
"
ಐಷಾರಾಮಿ ಪಾರ್ಟಿಗಳಲ್ಲಿ ಡ್ರಗ್ಸ್ ವ್ಯಸನ ಶುರುವಾದ ಬಳಿಕ ರಾಗಿಣಿ ತಾನೇ ನೇರವಾಗಿ ಪೆಡ್ಲರ್‌ಗಳಿಂದ ಡ್ರಗ್ಸ್ ಖರೀದಿಸುತ್ತಿದ್ದರು. ಮೊದಮೊದಲು ಆಕೆಗೆ ಸ್ನೇಹಿತ ಸಾರಿಗೆ ಇಲಾಖೆ ನೌಕರ ರವಿಶಂಕರ್ ಡ್ರಗ್ಸ್ ಪೂರೈಸುತ್ತಿದ್ದ. ಆದರೆ ಪಾರ್ಟಿಯೊಂದರಲ್ಲಿ ರಾಗಿಣಿಗೆ ಆಫ್ರಿಕಾದ ಲೂಮ್ ಪೆಪ್ಪರ್ ಪರಿಚಯವಾಯಿತು. ಆನಂತರ ನೇರವಾಗಿ ತಾನೇ ಲೂಮ್‌ಗೆ ವಾಟ್ಸ್‌ಆಪ್ ಮೆಸೇಜ್ ಕಳುಹಿಸಿ ಡ್ರಗ್ಸ್ ಖರೀದಿಸುತ್ತಿದ್ದರು ಎಂದು ಮೂಲಗಳು ಹೇಳಿವೆ.
ತನಿಖೆಗೆ ಸಹಕರಿಸುತ್ತಿಲ್ಲ ರಾಗಿಣಿ, ವಾಟ್ಸಾಪ್ ರಿಟ್ರೀವ್ ಮಾಡಿ ತನಿಖೆ: ಕೋರ್ಟ್‌ನಲ್ಲಿ ಸಿಸಿಬಿ ವಾದ ...
ಡ್ರಗ್ಸ್ ಖರೀದಿ ಸಂಬಂಧ ರಾಗಿಣಿ ಮತ್ತು ಲೂಮ್ ಮಧ್ಯೆ ನಡೆದಿರುವ ವಾಟ್ಸ್ ಆಪ್ ಚಾಟಿಂಗ್ ಸಿಸಿಬಿಗೆ ಲಭ್ಯವಾಗಿದೆ. ಅದರಲ್ಲಿ ‘ಐ ನೀಡ್ ಮೋರ್’ ಎಂದು ರಾಗಿಣಿ ತನ್ನ ಹುಟ್ಟುಹಬ್ಬದ ಆಚರಣೆಗೂ ಮುನ್ನ ಕಳುಹಿಸಿರುವ ಸಂದೇಶವು ಡ್ರಗ್ಸ್ ಖರೀದಿಗೆ ಸಂಬಂಧಿಸಿದ್ದಾಗಿರಬಹುದು ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.
ಆ.24ರಂದು ರಾಗಿಣಿ ಹುಟ್ಟಹಬ್ಬವಿತ್ತು. ಆಗ ಸ್ನೇಹಿತರಿಗೆ ಪಾರ್ಟಿ ಆಯೋಜಿಸಿದ್ದರು. ಇದಕ್ಕಾಗಿ ಆ.22, 23 ಹಾಗೂ 24ರಂದು ಆಕೆ ಡ್ರಗ್ಸ್ ಖರೀದಿಸಿದ್ದರು ಎನ್ನಲಾಗಿದೆ.
CCB ನಂತರ ರಾಗಿಣಿಗೆ NCB ಡ್ರಿಲ್; ಇನ್ನು 5 ಸ್ಟಾರ್‌ಗಳಿದ್ದಾರೆ ಲಿಸ್ಟ್‌ನಲ್ಲಿ..!
ಅಲ್ಲದೆ, ಕೆಲ ದಿನಗಳ ಹಿಂದೆ ಉದ್ಯಮಿಯೊಬ್ಬರ ಮೊಮ್ಮಗನ ಬರ್ತ್ ಡೇ ಸಲುವಾಗಿ 13 ಎಲ್‌ಎಸ್‌ಡಿ ಮಾತ್ರೆಗಳನ್ನು ರಾಗಿಣಿ ಖರೀದಿಸಿದ್ದರು.
ಡ್ರಗ್ಸ್ ಖರೀದಿಗೆ ರಾಗಿಣಿ ಲಕ್ಷಾಂತರ ಹಣ ಕಳೆದುಕೊಂಡಿದ್ದಾರೆ. ತಲಾ ಎಲ್‌ಎಸ್‌ಡಿ ಮಾತ್ರೆ ಬೆಲೆ 3 ಸಾವಿರಕ್ಕೆ ಲೂಪ್ ಮಾರುತ್ತಿದ್ದ. ವಾರ, ಹದಿನೈದು ದಿನ ಹಾಗೂ ತಿಂಗಳಿಗೊಮ್ಮೆ ಹೀಗೆ ರಾಗಿಣಿ ಡ್ರಗ್ಸ್ ಖರೀದಿಸುತ್ತಿದ್ದರು ಎಂಬ ಮಾತುಗಳು ಕೇಳಿಬಂದಿವೆ.