ಮಗಳಿಗೆ ಲೈಂಗಿಕ ಕಿರುಕುಳ: ವಿರೋಧಿಸಿದ ಪತ್ನಿಯನ್ನೇ ಹೊಡೆದು ಕೊಂದ ಪಾಪಿ ಪತಿ!
ಆರೋಪಿ ವ್ಯಕ್ತಿ ತನ್ನ ಹೆಂಡತಿಯ ತಲೆಯನ್ನು ಗೋಡೆಗೆ ಹೊಡೆದನು. ಅಲ್ಲದೆ, ದೊಣ್ಣೆಯಿಂದ ಥಳಿಸಿದ್ದಾರೆ. ಬಳಿಕ, ಆಕೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಪ್ರಯತ್ನಿಸಿದನು, ಆದರೆ ಅವಳು ಸತ್ತಿದ್ದಾಳೆಂದು ಅರಿತುಕೊಂಡ ನಂತರ ಸುಮ್ಮನಾಗಿದ್ದಾನೆ ಎಂದು ತಿಳಿದುಬಂದಿದೆ.
ಪುಣೆ (ಸೆಪ್ಟೆಂಬರ್ 1, 2023): ತಂದೆಯೇ ಮಗಳಿಗೆ ಲೈಂಗಿಕ ಕಿರುಕುಳ ನೀಡಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದ ಪುಣೆಯ ಲೋಣಿಕಂಡ್‌ನ ಅವ್ಹಲವಾಡಿಯಲ್ಲಿ ನಡೆದಿದೆ. ಅಷ್ಟೇ ಅಲ್ಲದೆ, ಈ ಬಗ್ಗೆ ವಿಚಾರಿಸಿದ ಪತ್ನಿಯ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿದ್ದು, ಈ ಗಾಯಗಳಿಂದ ಆಕೆ ಮೃತಪಟ್ಟಿದ್ದಾಳೆ ಎಂದು ತಿಳಿದುಬಂದಿದೆ.
ಲೋಣಿಕಂಡ್‌ನ ಅವ್ಹಲವಾಡಿಯಲ್ಲಿರುವ ತಮ್ಮ ಮನೆಯಲ್ಲಿ ಬುಧವಾರ ಮತ್ತು ಗುರುವಾರ ಮಧ್ಯರಾತ್ರಿಯಲ್ಲಿ ತಮ್ಮ ಮಗಳಿಗೆ (17) ಕಿರುಕುಳ ನೀಡಿದ್ದಕ್ಕಾಗಿ 41 ವರ್ಷದ ಪತಿಯನ್ನು ಪ್ರಶ್ನಿಸಿದ ಮಹಿಳೆ (38) ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ್ದು, ಬಳಿಕ ಆಕೆ ಮೃತಪಟ್ಟಿದ್ದಾರೆ. ಆರೋಪಿ ವ್ಯಕ್ತಿ ತನ್ನ ಹೆಂಡತಿಯ ತಲೆಯನ್ನು ಗೋಡೆಗೆ ಹೊಡೆದನು. ಅಲ್ಲದೆ, ದೊಣ್ಣೆಯಿಂದ ಥಳಿಸಿದ್ದಾರೆ. ಬಳಿಕ, ಆಕೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಪ್ರಯತ್ನಿಸಿದನು, ಆದರೆ ಅವಳು ಸತ್ತಿದ್ದಾಳೆಂದು ಅರಿತುಕೊಂಡ ನಂತರ ನಿಲ್ಲಿಸಿದನು’’ ಎಂದು ಪೊಲೀಸ್ ಉಪ ಆಯುಕ್ತ (ವಲಯ IV) ಶಶಿಕಾಂತ್ ಬೊರಾಟೆ ತಿಳಿಸಿದ್ದಾರೆ.
ಇದನ್ನು ಓದಿ: ಅಣ್ಣನಿಗೆ ರಾಖಿ ಕಟ್ಟಲು ಹೋಗ್ತಿದ್ದ ತಂಗಿ ಬಲಿ: ಬಸ್ ಕಿಟಕೀಲಿ ಬಗ್ಗಿ ವಾಂತಿ ಮಾಡ್ತಿದ್ದೋಳ ತಲೆ ಪೀಸ್‌ಪೀಸ್!
ಅವರ ಮಗಳು ಮತ್ತು ಇಬ್ಬರು ಗಂಡು ಮಕ್ಕಳು (15 ಮತ್ತು 13) ತಮ್ಮ ತಾಯಿಯನ್ನು ಹೊಡೆಯುವುದನ್ನು ತಡೆಯಲು ಪ್ರಯತ್ನಿಸಿದಾಗ, ಆರೋಪಿ ಅವರನ್ನು ಪಕ್ಕದ ಕೋಣೆಯಲ್ಲಿ ಕೂಡಿ ಹಾಕಿ ಬೀಗ ಹಾಕಿದರು ಎಂದು ಅವರ ಹೇಳಿಕೆಗಳನ್ನು ಉಲ್ಲೇಖಿಸಿ ಪೊಲೀಸರು ತಿಳಿಸಿದ್ದಾರೆ. ನಂತರ, ವ್ಯಕ್ತಿ ಅವರನ್ನು ಕೊಠಡಿಯಿಂದ ಬಿಡುಗಡೆ ಮಾಡಿ ಮತ್ತು ವಿಷಯವನ್ನು ಯಾರಿಗೂ ಹೇಳದಂತೆ ಬೆದರಿಕೆ ಹಾಕಿದರು ಎಂದೂ ಹೇಳಲಾಗಿದೆ.
ಆದರೂ, ಅವರ ಮಗಳು ಧೈರ್ಯ ತುಂಬಿಕೊಂಡು ತಾಯಿಯ ಕಡೆಯ ಸಂಬಂಧಿಕರನ್ನುಸಂಪರ್ಕಿಸಿ ಘಟನೆಯನ್ನು ವಿವರಿಸಿದಳು. ನಂತರ ಪೊಲೀಸರಿಗೆ ದೂರು ನೀಡಲಾಯಿತು. ರೈತನಾಗಿರುವ ವ್ಯಕ್ತಿಯನ್ನು ಗುರುವಾರ ಆತನ ಮನೆಯಿಂದ ಬಂಧಿಸಲಾಗಿದೆ ಎಂದು ತಿಳಿದುಬಂದಿದೆ. ಶಂಕಿತನ ವೈದ್ಯಕೀಯ ಪರೀಕ್ಷೆಯ ವರದಿಗಾಗಿ ನಾವು ಕಾಯುತ್ತಿದ್ದೇವೆ, ಅವರು ಮದ್ಯದ ವ್ಯಸನಿಯಾಗಿರುವುದು ತನಿಖೆಯಿಂದ ತಿಳಿದುಬಂದಿದೆ ಎಂದು ಹಿರಿಯ ಇನ್ಸ್‌ಪೆಕ್ಟರ್ ವಿಶ್ವಜೀತ್ ಕೈಂಗಡೆ ಹೇಳಿದರು.
ಇದನ್ನೂ ಓದಿ: ಹೆಂಡ್ತಿ ತಂಗಿಯನ್ನು ಮುಟ್ತಿದ್ದ ಅಪ್ರಾಪ್ತ ಬಾಲಕನ ಕೊಂದು ಬಾಡಿ ಪೀಸ್ ಪೀಸ್ ಮಾಡಿದ ಆಟೋ ಡ್ರೈವರ್!
''ಆಗಸ್ಟ್ 28ರ ಮಧ್ಯಾಹ್ನ ತಂದೆ ಕುಡಿದು ಮನೆಗೆ ಬಂದು ಕಿರುಕುಳ ನೀಡಿದ್ದಾಗಿ ಮಗಳು ಹೇಳಿಕೆ ನೀಡಿದ್ದು, ಬುಧವಾರ ರಾತ್ರಿ ಮಲಗಿದ್ದ ವೇಳೆ ಮತ್ತೆ ಕಿರುಕುಳ ನೀಡಿದ್ದು, ಕೃತ್ಯವನ್ನು ಗಮನಿಸಿದ ತಾಯಿ ತಂದೆಯೊಂದಿಗೆ ಜಗಳವಾಡಿದ್ದಾರೆ. ನಂತರ ಹಲ್ಲೆ ಮಾಡಲಾಗಿದೆ ಎಂದು ಅವರು ಹೇಳಿದರು. ಕೊಲೆ, ಸಾಕ್ಷ್ಯ ನಾಶ, ಅಕ್ರಮ ತಡೆ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆಯಡಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿ: ಅಕ್ಕನಿಗೆ ಬಿಯರ್ ಕುಡಿಸಿ ತಂಗಿಯಿಂದ್ಲೇ ಕೊಲೆ? ಚಿನ್ನ, ಲಕ್ಷಾಂತರ ರೂ. ಹಣದೊಂದಿಗೆ ಬಾಯ್‌ಫ್ರೆಂಡ್ ಜತೆ ಪರಾರಿ!