Asianet Suvarna News Asianet Suvarna News

ಹೆಂಡ್ತಿ ತಂಗಿಯನ್ನು ಮುಟ್ತಿದ್ದ ಅಪ್ರಾಪ್ತ ಬಾಲಕನ ಕೊಂದು ಬಾಡಿ ಪೀಸ್‌ ಪೀಸ್‌ ಮಾಡಿದ ಆಟೋ ಡ್ರೈವರ್!

ಕೊಲೆ ಆರೋಪದಡಿ ಜೈಲಿಗೆ ಹೋಗಿ ಬಂದಿದ್ದ ಹಾಗೂ ಕಳ್ಳತನ ಆರೋಪವನ್ನೂ ಹೊಂದಿರುವ ಆಟೋ ಚಾಲಕ ಅಪ್ರಾಪ್ತ ಬಾಲಕನಿಗೆ ಕೊಲೆ ಮಾಡಿ ಬಾಡಿ ಪೀಸ್‌ ಪೀಸ್‌ ಮಾಡಿದ್ದಾರೆ ಎಂದು ವರದಿಯಾಗಿದೆ. 

auto driver arrested in mumbai for killing 17 year old chopping his body into four pieces ash
Author
First Published Aug 31, 2023, 12:15 PM IST

ಮುಂಬೈ (ಆಗಸ್ಟ್‌ 31, 2023): 17 ವರ್ಷದ ಯುವಕನನ್ನು ಕೊಂದು ಆತನ ಮೃತದೇಹವನ್ನು ಆಟೋ ಚಾಲಕ ಕೊಂದು ಹಾಕಿರುವ ಘಟನೆ ಮಹಾರಾಷ್ಟ್ರ ರಾಜಧಾನಿ ಮುಂಬೈನಲ್ಲಿ ನಡೆದಿದೆ. ಬಂಧಿತ ಆಟೋ ಚಾಲಕನ ಪತ್ನಿ ಆ ಬಾಲಕನನ್ನು ಸಹೋದರ ಎಂದು ಪರಿಗಣಿಸಿದ್ದರು ಎಂದು ತಿಳಿದುಬಂದಿದೆ. ಈ ಆರೋಪ ಸಂಬಂಧ ಆರ್‌ಸಿಎಫ್ ಪೊಲೀಸರು ಬುಧವಾರ ಚೆಂಬೂರಿನಲ್ಲಿ ಬಂಧಿಸಿದ್ದಾರೆ ಎಂದು ವರದಿಯಾಗಿದೆ. 

ಮೃತ ಬಾಲಕ ತನ್ನ ಹೆಂಡತಿಯ ಬಗ್ಗೆ ಆಕ್ಷೇಪಾರ್ಹವಾಗಿ ಕಾಮೆಂಟ್‌ ಮಾಡಿದ್ದ ಹಾಗೂ ಆಕೆಯ ತಂಗಿಯನ್ನು ಅನುಚಿತವಾಗಿ ಮುಟ್ಟಿದ್ದಕ್ಕೆ ಕೊಲೆ ಮಾಡಲಾಗಿದೆ ಎಂದು ಶಂಕಿಸಲಾಗಿದೆ. ಬಾಲಕನ ಮೃತದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಶವದ ಭಾಗಗಳನ್ನು ಅಡುಗೆ ಮನೆಯಲ್ಲಿ ಬಚ್ಚಿಟ್ಟಿದ್ದ ಹಾಗೂ ಅವುಗಳನ್ನು ವಿಲೇವಾರಿ ಮಾಡಲು ಪ್ಲ್ಯಾಣ್‌ ಮಾಡ್ತಿದ್ದ. ಅಷ್ಟರ ವೇಳೆಗೆ ಆರೋಪಿ ಶಫೀಕ್ ಅಲಿಯಾಸ್ ಶಫಿ ಶೇಖ್‌ನನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ. 

ಇದನ್ನು ಓದಿ: ಅಕ್ಕನಿಗೆ ಬಿಯರ್ ಕುಡಿಸಿ ತಂಗಿಯಿಂದ್ಲೇ ಕೊಲೆ? ಚಿನ್ನ, ಲಕ್ಷಾಂತರ ರೂ. ಹಣದೊಂದಿಗೆ ಬಾಯ್‌ಫ್ರೆಂಡ್‌ ಜತೆ ಪರಾರಿ!

ಶೇಖ್‌ ಬಾಲಕನನ್ನು ಆಗಸ್ಟ್ 28 ರಂದು ಕೊಂದರು" ಎಂದು ಡಿಸಿಪಿ ಹೇಮರಾಜ್ ಸಿಂಗ್ ರಜಪೂತ್ ಹೇಳಿದ್ದಾರೆ. "ಈಶ್ವರ್ ಮಾರ್ವಾಡಿಯನ್ನು ಕುಡುಗೋಲಿನಿಂದ ಕೊಂದ ನಂತರ, ಶೇಖ್ ಅವನ ತಲೆಯನ್ನು ಸುತ್ತಿಗೆಯಿಂದ ಹೊಡೆಯುತ್ತಲೇ ಇದ್ದನು. ನಾವು ಕುಡುಗೋಲು ಮತ್ತು ಸುತ್ತಿಗೆಯನ್ನು ವಶಪಡಿಸಿಕೊಂಡಿದ್ದೇವೆ" ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ಇನ್ನೊಂದೆಡೆ, ಶೇಖ್ ಈ ಹಿಂದೆ ಉರಾನ್‌ನಲ್ಲಿ ವಾಸಿಸುತ್ತಿದ್ದರು ಮತ್ತು ಈಗ ಅವರ ಪತ್ನಿಯೊಂದಿಗೆ ಆರ್‌ಸಿಎಫ್ ಪ್ರದೇಶದಲ್ಲಿ ವಾಸಿಸುತ್ತಿದ್ದರು. ಈ ಹಿಂದೆ 2013 ರಲ್ಲಿ ಉರಾನ್‌ನಲ್ಲಿ ಜಯ್ ನಾರಾಯಣ್ ಕೋಲಿ ಎಂಬಾತನನ್ನು ಹತ್ಯೆ ಮಾಡಿದ ಆರೋಪದಲ್ಲಿ ಬಂಧಿಸಲಾಗಿತ್ತು ಮತ್ತು ದರೋಡೆ ಪ್ರಕರಣವೂ ಇವರ ಮೇಲಿದೆ. ಕೊಲೆ ಪ್ರಕರಣದಲ್ಲಿ ಹಲವು ವರ್ಷಗಳ ಕಾಲ ಜೈಲುವಾಸ ಅನುಭವಿಸಿ, ಬಿಡುಗಡೆಯಾದ ಬಳಿಕ ಗೋವಂಡಿಗೆ ತೆರಳಿದ್ದರು. 2013ರಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ತಾನು ಖುಲಾಸೆಗೊಂಡಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾರೆ ಎಂದೂ ಹೇಳಲಾಗಿದೆ. 

ಇದನ್ನು ಓದಿ: ಡ್ಯೂಟಿಲೂ ಫುಲ್‌ ಟೈಟ್‌: ಸರ್ಕಾರಿ ಕಚೇರಿಯಲ್ಲೇ ಮದ್ಯ ಸೇವಿಸಿದ ಉದ್ಯೋಗಿ; ವಿಡಿಯೋ ವೈರಲ್‌

ಇನ್ನೊಂದೆಡೆ, 2020 ರಲ್ಲಿ ಮನೆ ಕಳ್ಳತನ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಬಾಲಕನನ್ನು ಪೊಲೀಸರು ವಶಕ್ಕೆ ಪಡೆದು ಚೆಂಬೂರು ಪೊಲೀಸರು ವಶಕ್ಕೆ ಪಡೆದು ಡೋಂಗ್ರಿ ಮಕ್ಕಳ ಮನೆಗೆ ಕಳುಹಿಸಿದ್ದರು. ಆತ ಡ್ರಗ್ಸ್ ಸೇವನೆ ಆರಂಭಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಕೊನೆಯ ಆಸೆ ಎಂದು ರಸಗುಲ್ಲಾ ಕೊಟ್ಟು ಬಾಲಕನನ್ನು ಕೊಂದ ಮೂವರು ಅಪ್ರಾಪ್ತರು!

Follow Us:
Download App:
  • android
  • ios