ಅಕ್ಕನಿಗೆ ಬಿಯರ್ ಕುಡಿಸಿ ತಂಗಿಯಿಂದ್ಲೇ ಕೊಲೆ? ಚಿನ್ನ, ಲಕ್ಷಾಂತರ ರೂ. ಹಣದೊಂದಿಗೆ ಬಾಯ್‌ಫ್ರೆಂಡ್ ಜತೆ ಪರಾರಿ!
ಮಹಿಳಾ ಟೆಕ್ಕಿಗೆ ವಿಷ ಹಾಕಿರಬಹುದು ಅಥವಾ ಕತ್ತು ಹಿಸುಕಿರಬಹುದು. ಈ ಬಗ್ಗೆ ಪೋಸ್ಟ್ ಮಾರ್ಟಂ ವರದಿ ಬಳಿಕ ಕಾರಣ ತಿಳಿದು ಬರಲಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಹೈದರಾಬಾದ್ (ಆಗಸ್ಟ್ 31, 2023): ತೆಲಂಗಾಣ ರಾಜಧಾನಿ ಹೈದರಾಬಾದ್‌ನ ಎಂಎನ್‌ಸಿಯೊಂದರಲ್ಲಿ ಕೆಲಸ ಮಾಡುತ್ತಿದ್ದ 22 ವರ್ಷದ ಸಾಫ್ಟ್‌ವೇರ್ ಇಂಜಿನಿಯರ್ ಮಂಗಳವಾರ ತೆಲಂಗಾಣದ ಜಗ್ತಿಯಾಲ್ ಜಿಲ್ಲೆಯ ಕೊರುಟ್ಲಾದಲ್ಲಿರುವ ತನ್ನ ಪೋಷಕರ ಮನೆಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಇನ್ನೊಂದೆಡೆ, ಮೇಡ್ಚಲ್‌ನಲ್ಲಿ ಬಿ. ಟೆಕ್ ಓದುತ್ತಿದ್ದ ಆಕೆಯ ತಂಗಿ ನಾಪತ್ತೆಯಾಗಿದ್ದು, 30 ತೊಲ ಚಿನ್ನ ಮತ್ತು 2 ಲಕ್ಷ ರೂ.ನಗದು ನಾಪತ್ತೆಯಾಗಿರುವ ಬಗ್ಗೆ ಕುಟುಂಬದವರು ದೂರು ನೀಡಿದ್ದಾರೆ.
ಸೋಮವಾರ ಪೋಷಕರು ಹೈದರಾಬಾದ್‌ನಲ್ಲಿ ಗೃಹಪ್ರವೇಶ ಕಾರ್ಯಕ್ರಮಕ್ಕೆ ಹಾಜರಾಗಿದ್ದರು. ಇನ್ನು ಟೆಕ್ಕಿ ಬಿ. ದೀಪ್ತಿ ಮನೆಯಿಂದಲೇ ಕೆಲಸ ಮಾಡ್ತಿದ್ದರು ಹಾಗೂ ಆಕೆಯ ತಂಗಿ ಬಿ. ಚಂದನಾ (20) ಕೂಡ ಮನೆಯಲ್ಲಿದ್ದಳು ಎಂದು ತಿಳಿದುಬಂದಿದೆ. ಬಳಿಕ, ಸೋಮವಾರ ರಾತ್ರಿ ಪೋಷಕರು ಇಬ್ಬರೂ ಸಹೋದರಿಯರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದಾರೆ.
ಇದನ್ನು ಓದಿ: ಡ್ಯೂಟಿಲೂ ಫುಲ್ ಟೈಟ್: ಸರ್ಕಾರಿ ಕಚೇರಿಯಲ್ಲೇ ಮದ್ಯ ಸೇವಿಸಿದ ಉದ್ಯೋಗಿ; ವಿಡಿಯೋ ವೈರಲ್
ಆದರೆ, ಮಂಗಳವಾರ ಮಧ್ಯಾಹ್ನ 12.15ಕ್ಕೆ ದೀಪ್ತಿಗೆ ಕರೆ ಮಾಡಿದಾಗ ಆಕೆ ಉತ್ತರಿಸಲಿಲ್ಲ. ಚಂದನಾ ಅವರ ಫೋನ್ ಕೂಡ ಸ್ವಿಚ್ ಆಫ್ ಆಗಿತ್ತು, ಈ ಹಿನ್ನೆಲೆ ಹೆಣ್ಣುಮಕ್ಕಳು ಏಕೆ ಪ್ರತಿಕ್ರಿಯಿಸುತ್ತಿಲ್ಲ ಎಂಬುದನ್ನು ಪರಿಶೀಲಿಸಲು ನಾವು ನಮ್ಮ ನೆರೆಹೊರೆಯವರನ್ನು ಕೇಳಿದ್ದೇವೆ ಎಂದು ಬಾಲಕಿಯ ತಂದೆ ಬಿ. ಶ್ರೀನಿವಾಸ್ ರೆಡ್ಡಿ ಹೇಳಿದರು. ಅಕ್ಕಪಕ್ಕದವರು ಅವರ ಮನೆಯ ಲಿವಿಂಗ್ ರೂಮ್ ಸೋಫಾ ಬಳಿ ದೀಪಾ ಶವವನ್ನು ಕಂಡುಕೊಂಡಿದ್ದಾರೆ ಮತ್ತು ಅಡುಗೆಮನೆಯಲ್ಲಿ ಕೆಲವು ಮದ್ಯದ ಬಾಟಲಿಗಳನ್ನು ಕಂಡುಕೊಂಡಿದ್ದಾರೆ. ನಂತರ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಆದರೆ, ದೀಪ್ತಿ ದೇಹದ ಮೇಲೆ ಯಾವುದೇ ಬಾಹ್ಯ ಗಾಯಗಳಿಲ್ಲ ಎಂದು ಡಿಎಸ್ಪಿ ರವೀಂದರ್ ರೆಡ್ಡಿ ತಿಳಿಸಿದ್ದಾರೆ. "ಅವಳಿಗೆ ವಿಷ ಹಾಕಿರಬಹುದು ಅಥವಾ ಉಸಿರುಗಟ್ಟಿ ಸಾಯಿಸಿರಬಹುದು. ಸಾವಿಗೆ ನಿಖರವಾದ ಕಾರಣವನ್ನು ಶವಪರೀಕ್ಷೆಯ ನಂತರವಷ್ಟೇ ದೃಢಪಡಿಸಲಾಗುವುದು" ಎಂದು ಅವರು ಹೇಳಿದರು. ಇನ್ನೊಂದೆಡೆ, ಫೇಲ್ ಆಧ ಬಳಿಕ ತರಗತಿಗಳಿಗೆ ಹಾಜರಾಗುವುದನ್ನು ನಿಲ್ಲಿಸಿದ ಚಂದನಾ ಮತ್ತು ಆಕೆಯ ಬಾಯ್ ಫ್ರೆಂಡ್‌ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ ಎಂದೂ ತಿಳಿದುಬಂದಿದೆ.
ಇದನ್ನೂ ಓದಿ: ಕೊನೆಯ ಆಸೆ ಎಂದು ರಸಗುಲ್ಲಾ ಕೊಟ್ಟು ಬಾಲಕನನ್ನು ಕೊಂದ ಮೂವರು ಅಪ್ರಾಪ್ತರು!
ಮಂಗಳವಾರ ರಾತ್ರಿ ಬೆಂಗಳೂರಿನಲ್ಲಿರುವ ತನ್ನ ಕಿರಿಯ ಸಹೋದರನಿಗೆ ಚಂದನಾ ಧ್ವನಿ ಸಂದೇಶ ಕಳುಹಿಸಿದ್ದು, ತನ್ನ ಸಹೋದರಿಗಾಗಿ ಸ್ನೇಹಿತನ ಸಹಾಯದಿಂದ ಮದ್ಯ ಖರೀದಿಸಿರುವುದಾಗಿ ಒಪ್ಪಿಕೊಂಡಿದ್ದಾಳೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಅರ್ಧ ಬಾಟಲಿ ಕುಡಿದ ಬಳಿಕ ಅಕ್ಕ ನಿದ್ದೆಗೆ ಜಾರಿದಳು. ಆಕೆಗೆ ವಿಷಯ ತಿಳಿಸಿದ ನಂತರವೇ ಹೊರಡುವ ಉದ್ದೇಶವಿತ್ತು, ಆದರೆ ದೀಪ್ತಿ ಏಳದೇ ಇದ್ದಾಗ ನಾನು ಹೊರಟು ಹೋದೆ ಎಂದು ಚಂದನಾ ಹೇಳಿದಳು. ಅಲ್ಲದೆ, ತನ್ನ ಸಹೋದರಿಯ ಸಾವಿನಲ್ಲಿ ತಾನು ಭಾಗಿಯಾಗಿಲ್ಲ ಎಂದು ಹೇಳಿದ್ದಾಳೆಂದೂ ತಿಳಿದುಬಂದಿದೆ.
ಇದನ್ನೂ ಓದಿ: ಪ್ರೇಮಿ ವಿರುದ್ಧ ಸಾಕ್ಷಿ ಹೇಳ್ಲಿಲ್ಲ ಅಂತ 8 ತಿಂಗಳ ಗರ್ಭಿಣಿಯನ್ನೇ ಕತ್ತು ಹಿಸುಕಿ ಕೊಂದ ಪೋಷಕರು