ಯುವತಿ ಮೇಲೆ ದೌರ್ಜನ್ಯಕ್ಕೆ ಮುಂಧಾದ ಜಿಮ್ ಟ್ರೇನರ್/ಪುಣೆಯಿಂದ ಪ್ರಕರಣ ದಾಖಲು/ ಮನೆಯಲ್ಲಿಯೇ ಬಾಕ್ಸಿಂಗ್ ತರಬೇತಿ ನಡೆಯುತ್ತಿತ್ತು/ ಅನುಚಿತವಾಗಿ ಯುವತಿಯನ್ನು ಸ್ಪರ್ಶಿಸಲು ಮುಂದಾದ ತರಬೇತುದಾರ

ಪುಣೆ (ಮಾ. 24) ಜಿಮ್ ತರಬೇತುದಾರನೊಬ್ಬ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಯತ್ನಿಸಿದ ಪ್ರಕರಣ ವರದಿಯಾಗಿದೆ. ಪುಣೆಯ ಕೊಂಡ್ವಾ ಪ್ರದೇಶದ ತನ್ನ ಫ್ಲಾಟ್‌ನಲ್ಲಿ ತರಬೇತಿ ಪಡೆಯುತ್ತಿದ್ದ ವೇಳೆ 19 ವರ್ಷದ ಯುವತಿಯನ್ನು ಅಸಭ್ಯವಾಗಿ ಸ್ಪರ್ಶಿಸಲು ಯತ್ನಿಸಿದ್ದಾನೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮೊದಲ ವರ್ಷದ ಬಿಎ ವಿದ್ಯಾರ್ಥಿನಿ ಆರು ತಿಂಗಳಿನಿಂದ ಜಿಮ್‌ಗೆ ಬರುತ್ತಿದ್ದಳು. ಆಕೆಯ ಸಹೋದರ ಕೂಡ ಅದೇ ಜಿಮ್‌ಗೆ ಹೋಗುತ್ತಾನೆ. ಅವರು ಜಿಮ್ ಬೋಧಕ ರಾಬಿನ್ ಆಂಥೋನಿ ಅವರ ಅಡಿಯಲ್ಲಿ ಬಾಕ್ಸಿಂಗ್ ತರಬೇತಿ ಆರಂಭಿಸಿದ್ದರು. ಕೊರೋನಾ ಕಾರಣಕ್ಕೆ ಮನೆಯಲ್ಲೇ ತರಬೇತಿ ನೀಡುತ್ತೇನೆ ಎಂದು ತರಬೇತುದಾರ ಹೇಳಿದ್ದ.

ಹೆತ್ತ ಮಗಳ ಮೇಲೆ ತಂದೆಯಿಂದ ಪೈಶಾಚಿಕ ಕೃತ್ಯ

ಮಾರ್ಚ್ 19 ರಂದು ತರಬೇತಿ ನೀಡುವ ವೇಳೆ ಆಂಟನಿ 19 ವರ್ಷದ ವಿದ್ಯಾರ್ಥಿಯನ್ನು ಕೆಟ್ಟ ರೀತಿಯಲ್ಲಿ ಸ್ಪರ್ಶಿಸಲು ಯತ್ನಿಸಿದ್ದಾನೆ. ಟೆರೆಸ್ ನಲ್ಲಿ ಈ ಘಟನೆ ಆಗಿದೆ.

ತಕ್ಷಣ ಆತನಿಂದ ಬಿಡಿಸಿಕೊಂಡ ಯುವತಿ ಲಿಫ್ಟ್ ನಲ್ಲಿ ತನ್ನ ಫ್ಲಾಟ್ ಕಡೆಗೆ ಬರಲು ನೋಡಿದ್ದಾಳೆ. ಅಲ್ಲಿಗೂ ಹಿಂಬಾಲಿಸಿಕೊಂಡು ಬಂದ ಆಂಟನಿ ಆಕೆಯ ಮೈಮೇಲೆ ಕೈಹಾಕಿದ್ದಾನೆ. ಪೊಲೀಸರಿಗೆ ಯುವತಿ ಮಾಹಿತಿ ನಿಡಿದ್ದು ಆರೋಪಿಯ ಮೇಲೆ ಪ್ರಕರಣ ದಾಖಲಾಗಿದೆ.