ಗುರುಗ್ರಾಮ(ಮಾ. 23)  ತಂದೆಯೇ  ಮಗಳ ಮೇಲೆ ಅತ್ಯಾಚಾರ ಎಸಗಿದ ಘೋರ ಪ್ರಕರಣ ವರದಿಯಾಗಿದೆ.   14 ವರ್ಷದ ಮಗಳ ಮೇಲೆ ತಂದೆಯೇ ಪದೇ ಪದೇ ಅತ್ಯಾಚಾರ ಮಾಡಿದ್ದು ಆರೋಪಿಯನ್ನು ಬಂಧಿಸಲಾಗಿದೆ.

ಸೋಮವಾರ ಆರೋಪಿಯನ್ನು ಬಂಧಿಸಲಾಗಿದ್ದು, ಮಕ್ಕಳ ಮೇಲೆ ಲೈಂಗಿಕ ಅಪರಾಧ ತಡೆಗಟ್ಟುವಿಕೆ (ಪೊಕ್ಸೊ) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.  ನೇಸರ್ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತನಗೆ ಆಗುತ್ತಿರುವ ದೌರ್ಜನ್ಯವನ್ನು ಮಗಳು ತಾಯಿ ಬಳಿ ಹೇಳಿಕೊಂಡಾಗ ಪ್ರಕರಣ ಬೆಳಕಿಗೆ ಬಂದಿದೆ.  ಇದಾದ ಮೇಲೆ ಪೊಲೀಸ್ ದೂರು ನೀಡಲಾಗಿದ್ದು ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ. ಆಕೆ ಮೇಲೆ ಲೈಂಗಿಕ ದೌರ್ಜನ್ಯ ಆಗಿದೆ ಎಂದು ವರದಿ ಬಂದಿದೆ.

ರೇಪ್ ಮಾಡಲು ಬಂದವನ ಗುಪ್ತಾಂಗವೇ ಕಟ್

ಬಿಹಾರ ಮೂಲದ ಬಾಲಕಿ ಗುರುಗ್ರಾಮದ ಸೆಕ್ಟರ್  81 ರಲ್ಲಿ ವಾಸವಿದ್ದಳು. ಪಾಪಿ ತಂದೆ ಆಟೋ ಚಾಲಕನಾಗಿದ್ದರೆ ತಾಯಿ ಮನೆಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಳು.

ಮಗಳು ಘೋರ ವಿಚಾರ ಹೇಳಿಕೊಂಡಾಗ ನನಗೆ ಆಘಾತ ಕಾದಿತ್ತು. ನಾನು ಮನೆಯಲ್ಲಿ ಇಲ್ಲದಿದ್ದಾಗ ಹಲವು ಸಾರಿ ಆಕೆ ಮೇಲೆ ದೌರ್ಜನ್ಯ ನಡೆದಿದೆ.  ಒಂದು ವೇಳೆ ಈ ವಿಚಾರ ಯಾರಿಗಾದರೂ ಹೇಳಿದರೆ  ಇಬ್ಬರು ಹೆಣ್ಣು ಮಕ್ಕಳನ್ನು ಕೊಲೆ ಮಾಡುತ್ತೇನೆ ಎಂದು ಪಾಪಿ ಬೆದರಿಕೆಯನ್ನೂ ಹಾಕಿದ್ದ ಎಂದು ನೊಂದ ತಾಯಿ ಹೇಳಿಕೆ ನೀಡಿದ್ದಾರೆ.

ಆರೋಪಿಯನ್ನು ಬಂಧಿಸಲಾಗಿದ್ದು ವಿಚಾರಣೆ ನಡೆಸಲಾಗುತ್ತಿದೆ. ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.