Asianet Suvarna News Asianet Suvarna News

ಮ್ಯಾಟ್ರಿಮೋನಿಯಲ್ ಸೈಟ್‌ನಲ್ಲಿ ಭೇಟಿಯಾದ ಚೆಲುವೆ ನಂಬ್ಕೊಂಡು 92 ಲಕ್ಷ ಕಳ್ಕೊಂಡ ಟೆಕ್ಕಿ: ಮದ್ವೆನೂ ಆಗ್ಲಿಲ್ಲ, ಹಣನೂ ಇಲ್ಲ!

ಪುಣೆ ಮೂಲದ ಸಾಫ್ಟ್‌ವೇರ್ ಉದ್ಯೋಗಿಯೊಬ್ಬರು ಮ್ಯಾಟ್ರಿಮೋನಿಯಲ್ ವೆಬ್‌ಸೈಟ್ ಮೂಲಕ ಮಹಿಳೆಯನ್ನು ಭೇಟಿಯಾಗಿ ಆಕೆಯ ಸಲಹೆಯ ಮೇರೆಗೆ ಸುಮಾರು 92 ಲಕ್ಷ ರೂಪಾಯಿಗಳನ್ನು ಪಾವತಿಸಿದ್ದಾರೆ. ಮಹಿಳೆ ವಂಚಕಿಯಾಗಿ ಹೊರಹೊಮ್ಮಿದ್ದರಿಂದ ಟೆಕ್ಕಿ ತನ್ನ ಎಲ್ಲಾ ಹಣವನ್ನು ಕಳೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

pune based techie met a woman on matrimonial site she promised to marry him cheated about rs 92 lakhs ash
Author
First Published Jul 10, 2023, 1:46 PM IST

ಹೊಸದಿಲ್ಲಿ (ಜುಲೈ 10, 2023): ಸೈಬರ್‌ ವಂಚನೆ ಬಗ್ಗೆ ಮಾಧ್ಯಮಗಳು ಸಾಕಷ್ಟು ಎಚ್ಚರಿಕೆ ನೀಡುತ್ತಿದೆ. ಅದೇ ರೀತಿ, ನಿಮ್ಮ ಅಕೌಂಟ್‌ನಿಂದ ಹಣ ಕಳೆದುಕೊಳ್ಳದಂತೆ ಸಾಕಷ್ಟು ಮೆಸೇಜ್‌ಗಳು ನಿಮ್ಮನ್ನು ಎಚ್ಚರಿಸುತ್ತಿರುತ್ತದೆ. ಆದರೂ, ಜನ ವಂಚನೆಗೊಳಗಾಗುತ್ತಲೇ ಇದ್ದಾರೆ. ವಂಚನೆಗಳು ಮತ್ತು ಮೋಸದ ಚಟುವಟಿಕೆಗಳ ಪ್ರಕರಣಗಳು ಭಾರತದಲ್ಲಿ ಅಪಾಯಕಾರಿ ಪ್ರಮಾಣದಲ್ಲಿ ಹೆಚ್ಚಾಗ್ತಿದೆ. ಜನರು ಕಷ್ಟಪಟ್ಟು ದುಡಿದ ಹಣವನ್ನು ಕಳೆದುಕೊಳ್ತಿದ್ದಾರೆ ಎಂದು ನಾವು ಓದುತ್ತಿದ್ದೇವೆ. ಅಂತಹ ವಂಚನೆಗಳಿಗೆ ಬಲಿಯಾಗುವುದನ್ನು ತಡೆಯಲು ಸುಲಭವಾದ ಮಾರ್ಗವೆಂದರೆ ಅಪರಿಚಿತರ ಬಗ್ಗೆ ಎಚ್ಚರದಿಂದಿರುವುದು ಮತ್ತು ನೀವು ಆನ್‌ಲೈನ್‌ನಲ್ಲಿ ಸಂವಹನ ನಡೆಸುವ ಪ್ರತಿಯೊಬ್ಬರ ಬಗ್ಗೆ ವ್ಯಾಪಕವಾದ ಹಿನ್ನೆಲೆ ಪರಿಶೀಲನೆಗಳನ್ನು ಮಾಡುವುದು.

ಮತ್ತು ಹಣವನ್ನು ಹೂಡಿಕೆ ಮಾಡುವ ವಿಷಯಕ್ಕೆ ಬಂದಾಗ, ಒಬ್ಬರು ಅತ್ಯಂತ ಜಾಗರೂಕರಾಗಿರಬೇಕು ಮತ್ತು ಇನ್ನೊಬ್ಬ ವ್ಯಕ್ತಿಯ ಸಲಹೆಯ ಮೇರೆಗೆ ಹಾಗೆ ಮಾಡುವುದನ್ನು ತಪ್ಪಿಸಬೇಕು. ಅಪರಿಚಿತರಿಂದ ಹಣಕಾಸಿನ ಸಲಹೆಯು ಆಗಾಗ್ಗೆ ಹಾನಿಕಾರಕ ಫಲಿತಾಂಶಗಳನ್ನು ಉಂಟುಮಾಡಬಹುದು. ಪುಣೆ ಮೂಲದ ಸಾಫ್ಟ್‌ವೇರ್ ಉದ್ಯೋಗಿಯೊಬ್ಬರು ಮ್ಯಾಟ್ರಿಮೋನಿಯಲ್ ವೆಬ್‌ಸೈಟ್ ಮೂಲಕ ಮಹಿಳೆಯನ್ನು ಭೇಟಿಯಾಗಿ ಆಕೆಯ ಸಲಹೆಯ ಮೇರೆಗೆ ಸುಮಾರು 92 ಲಕ್ಷ ರೂಪಾಯಿಗಳನ್ನು ಪಾವತಿಸಿದ್ದಾರೆ. ಮಹಿಳೆ ವಂಚಕಿಯಾಗಿ ಹೊರಹೊಮ್ಮಿದ್ದರಿಂದ ಟೆಕ್ಕಿ ತನ್ನ ಎಲ್ಲಾ ಹಣವನ್ನು ಕಳೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನು ಓದಿ: ವಾಟ್ಸಾಪ್‌ ಕಾಲ್‌ನಲ್ಲಿ ಬೆತ್ತಲಾದ 78 ವರ್ಷದ ವೃದ್ಧ: ಮುತ್ತಿನ ನಗರಿಯಲ್ಲಿ ಸೈಬರ್‌ ವಂಚಕರಿಂದ 23 ಲಕ್ಷ ರೂ. ಪಂಗನಾಮ

ಅನೇಕ ಜನರು ತಮ್ಮ ಜೀವನ ಸಂಗಾತಿ ಕಂಡುಕೊಳ್ಳಲು ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ಗಳನ್ನು ಬಳಸುತ್ತಾರೆ. ಆದರೂ, ಈ ವೆಬ್‌ಸೈಟ್‌ಗಳಲ್ಲಿ ತೊಡಗಿಸಿಕೊಂಡಿರುವ ಬಳಕೆದಾರರು ಅಪರಿಚಿತರು ಮತ್ತು ಅವರು ಹಲವಾರು ಬಾರಿ ಅವರನ್ನು ಭೇಟಿ ಮಾಡದ ಹೊರತು ಮತ್ತು ಅವರ ಹಿನ್ನೆಲೆ ಪರಿಶೀಲನೆಗೆ ಒಳಗಾಗದ ಹೊರತು ನಂಬಬಾರದು ಎಂಬುದನ್ನು ಸಹ ಒಬ್ಬರು ನೆನಪಿನಲ್ಲಿಟ್ಟುಕೊಳ್ಳಬೇಕು. 

ಇದೇ ರೀತಿಯ ಪ್ರಕರಣವೊಂದರಲ್ಲಿ, ಮಹಿಳೆಯನ್ನು ಆನ್‌ಲೈನ್‌ನಲ್ಲಿ ಭೇಟಿಯಾಗಿದ್ದ ಪುಣೆ ಮೂಲದ ಐಟಿ ಉದ್ಯೋಗಿಯೊಬ್ಬರು 91.75 ಲಕ್ಷ ರೂಪಾಯಿ ವಂಚಿಸಿದ್ದಾರೆ ಎಂದು ತಿಳಿದುಬಂದಿದೆ. ಐಟಿ ಕಂಪನಿಯಲ್ಲಿ ಕೆಲಸ ಮಾಡುವ ವ್ಯಕ್ತಿಯೊಬ್ಬರು ಈ ವರ್ಷದ ಫೆಬ್ರವರಿಯಲ್ಲಿ ಮಹಿಳೆಯನ್ನು ಮದುವೆಯಾಗುವ ಉದ್ದೇಶದಿಂದ ಆನ್‌ಲೈನ್‌ನಲ್ಲಿ ಭೇಟಿಯಾದರು. ಆ ಮಹಿಳೆ ಒಟ್ಟು 91.75 ಲಕ್ಷ ರೂಪಾಯಿ ಹೂಡಿಕೆ ಮಾಡಲು ಪುರುಷನನ್ನು ಮನವೊಲಿಸಿದ್ದಾರೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ. 

ಇದನ್ನೂ ಓದಿ: ಆರ್‌ಬಿಐ ಪೊಲೀಸರ ಸೋಗು! ವೈದ್ಯೆಯಿಂದ ಕೋಟಿ ಕೋಟಿ ಪೀಕಿದ ಖದೀಮರು

ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ನಲ್ಲಿ ಭೇಟಿಯಾದ ನಂತರ ಮೊದಲು ಫೋನ್‌ನಲ್ಲಿ ಮಾತನಾಡುವಾಗ ಮಹಿಳೆ ಪುರುಷನಿಗೆ ಮದುವೆಯಾಗುವ ಭರವಸೆ ನೀಡಿದ್ದಾಳೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ, ಮದುವೆಯಾಗುವುದಾಗಿ ಹೇಳಿಕೊಂಡ ನಂತರ ಆಕೆ ನಮ್ಮ "ಉಜ್ವಲ ಭವಿಷ್ಯಕ್ಕಾಗಿ" "blescoin" ಟ್ರೇಡಿಂಗ್‌ನಲ್ಲಿ ಹೂಡಿಕೆ ಮಾಡಲು ಟೆಕ್ಕಿಯ ಮನವೊಲಿಸಿದ್ದಾಳೆ. 

ಮಹಿಳೆಯನ್ನು ನಂಬಿದ ಟೆಕ್ಕಿ ವಿವಿಧ ಬ್ಯಾಂಕ್‌ಗಳಿಂದ ಮತ್ತು ಲೋನ್‌ ಆ್ಯಪ್‌ಗಳಿಂದ ಸಾಲ ತೆಗೆದುಕೊಂಡಿದ್ದಾರೆ. ಹೂಡಿಕೆಗಾಗಿ ಒಟ್ಟು 71 ಲಕ್ಷ ರೂಪಾಯಿ ಸಾಲ ತೆಗೆದುಕೊಂಡಿದ್ದರು ಎಂದು ವರದಿಯಾಗಿದೆ. ಫೆಬ್ರವರಿಯಿಂದ ಮಹಿಳೆಯ ನಿರ್ದೇಶನಗಳನ್ನು ಅನುಸರಿಸುತ್ತಿದ್ದ್ದ ಟೆಕ್ಕಿ, ಆಕೆ ಹೇಳಿದಂತೆ ವಿವಿಧ ಬ್ಯಾಂಕ್ ಖಾತೆಗಳಿಗೆ ಒಟ್ಟು 86 ಲಕ್ಷ ರೂಪಾಯಿಗಳನ್ನು (ಸಾಲದಿಂದ ಹಿಂತೆಗೆದುಕೊಂಡ ಹಣ ಮತ್ತು ಅವರ ಸ್ವಂತ ಉಳಿತಾಯ ಸೇರಿದಂತೆ) ಹಾಕಿದ್ದಾನೆ. 

ಇದನ್ನೂ ಓದಿ: ಯೂಟ್ಯೂಬ್‌ನಲ್ಲಿ ಲೈಕ್ ಮಾಡಿ ಹಣ ಗಳಿಸ್ಬೋದು ಎಂದು ನಂಬಿ 1.3 ಕೋಟಿ ರೂ ಕಳೆದುಕೊಂಡ ಭೂಪ!

'blescoin' ಟ್ರೇಡಿಂಗ್ ಎಂಟರ್‌ಪ್ರೈಸ್‌ಗೆ ಹೂಡಿಕೆ ಮಾಡಲು ಹಣವನ್ನು ಬಳಸಲಾಗುತ್ತಿದೆ ಎಂದು ಟೆಕ್ಕಿ ನಂಬಿದ್ದ. ಆದರೆ, ಯಾವುದೇ ರಿಟರ್ನ್‌ ಬರದಿದ್ದಾಗ ಹೆಚ್ಚುವರಿಯಾಗಿ 10 ಲಕ್ಷ ರೂ. ಹೂಡಿಕೆ ಮಾಡುವಂತೆಯೂ ಮಹಿಳೆ ಸಲಹೆ ನೀಡಿದ್ದಾಳೆ. ಬಳಿಕ, ಆಕೆಯನ್ನು ನಂಬಿ ತನ್ನ ಹೂಡಿಕೆಯ ಮೇಲಿನ ಆದಾಯವನ್ನು ಪಡೆಯುವ ಸಲುವಾಗಿ, ಟೆಕ್ಕಿ ಅಂದಾಜು 3.95 ಲಕ್ಷ ರೂ.ಗಳನ್ನು ನಂತರ 1.8 ಲಕ್ಷ ರೂ. ಹೂಡಿಕೆ ಮಾಡಿದ್ದಾನೆ ಎಂದೂ ವರದಿಯಲ್ಲಿ ಹೇಳಲಾಗಿದೆ. ಆದರೂ, ಇದು ಕಾರ್ಯರೂಪಕ್ಕೆ ಬರದಿದ್ದಾಗ, ತಾನು ಮೋಸ ಹೋಗಿದ್ದೇನೆ ಎಂಬ ತೀರ್ಮಾನಕ್ಕೆ ಟೆಕ್ಕಿ ಬಂದಿದ್ದಾನೆ ಎಂದು ತಿಳಿದುಬಂದಿದೆ.  

ದೇಹು ರಸ್ತೆಯ ಆದರ್ಶ ನಗರದಲ್ಲಿ ವಾಸಿಸುವ ವ್ಯಕ್ತಿ ಈ ಘಟನೆಯನ್ನು ಪೊಲೀಸರಿಗೆ ತಿಳಿಸಿದ್ದು, ಅವರು ಅನಾಮಧೇಯ ಮಹಿಳೆ ಮತ್ತು ಆಕೆಯ ಸಹಚರರನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. 

ಇದನ್ನೂ ಓದಿ: ಓದಿರೋದು 12ನೇ ಕ್ಲಾಸ್‌: ದುಡಿಯೋದು ದಿನಕ್ಕೆ 3 - 5 ಕೋಟಿ ರೂ.; 5 ಸ್ಟಾರ್‌ ಹೋಟೆಲ್‌ನಲ್ಲಿ ವಾಸ!

Follow Us:
Download App:
  • android
  • ios