Asianet Suvarna News Asianet Suvarna News

ಯೂಟ್ಯೂಬ್‌ನಲ್ಲಿ ಲೈಕ್ ಮಾಡಿ ಹಣ ಗಳಿಸ್ಬೋದು ಎಂದು ನಂಬಿ 1.3 ಕೋಟಿ ರೂ ಕಳೆದುಕೊಂಡ ಭೂಪ!

ಯೂಟ್ಯೂಬ್ ವಿಡಿಯೋಗಳನ್ನು ವೀಕ್ಷಿಸಲು ಮತ್ತು ಲೈಕ್ ಮಾಡಲು ಹೆಚ್ಚಿನ ಆದಾಯದ ಭರವಸೆ ನೀಡುವ ಮೂಲಕ ಸೈಬರ್‌ ವಂಚಕ 47 ವರ್ಷದ ವ್ಯಕ್ತಿಗೆ ಆಮಿಷವೊಡ್ಡಿದ್ದಾನೆ ಎಂದು ತಿಳಿದುಬಂದಿದೆ. 

mumbai man loses rs 1 3 crore to like on you tube and earn job fraud ash
Author
First Published May 4, 2023, 1:50 PM IST

ಮುಂಬೈ (ಮೇ 4, 2023): ಮಾರ್ಕೆಟಿಂಗ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ 47 ವರ್ಷದ ವ್ಯಕ್ತಿಯೊಬ್ಬರಿಗೆ 1.33 ಕೋಟಿ ರೂಪಾಯಿ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಮಹಾರಾಷ್ಟ್ರ ರಾಜಧಾನಿ ಮುಂಬೈನ ಪಶ್ಚಿಮ ವಲಯದ ಸೈಬರ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ರೀತಿಯ ಅರೆಕಾಲಿಕ ಉದ್ಯೋಗ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ನಿಮಗೂ ಇಂತಹ ಆಫರ್‌ ಬಂದಿದ್ರೆ ನೀವು ಎಚ್ಚರವಾಗಿರಬೇಕು. 

ಯೂಟ್ಯೂಬ್ ವೀಡಿಯೋಗಳನ್ನು ವೀಕ್ಷಿಸಲು ಮತ್ತು ಲೈಕ್ ಮಾಡಲು ಹೆಚ್ಚಿನ ಆದಾಯದ ಭರವಸೆ ನೀಡುವ ಮೂಲಕ ಸೈಬರ್‌ ವಂಚಕ 47 ವರ್ಷದ ವ್ಯಕ್ತಿಗೆ ಆಮಿಷವೊಡ್ಡಿದ್ದಾನೆ ಎಂದು ತಿಳಿದುಬಂದಿದೆ. ಅಲ್ಲದೆ, ಈ ವರ್ಷದ ಜನವರಿ ಮತ್ತು ಮಾರ್ಚ್ ನಡುವೆ 25 ವಿವಿಧ ಬ್ಯಾಂಕ್ ಖಾತೆಗಳಲ್ಲಿ ಹಣವನ್ನು ವರ್ಗಾಯಿಸಲು ದೂರುದಾರನಿಗೆ ಮನವರಿಕೆ ಮಾಡಿದ್ದಾನೆ ಎಂದೂ ದೂರಿನಲ್ಲಿ ಹೇಳಲಾಗಿದೆ. 

ಇದನ್ನು ಓದಿ: ಓದಿರೋದು 12ನೇ ಕ್ಲಾಸ್‌: ದುಡಿಯೋದು ದಿನಕ್ಕೆ 3 - 5 ಕೋಟಿ ರೂ.; 5 ಸ್ಟಾರ್‌ ಹೋಟೆಲ್‌ನಲ್ಲಿ ವಾಸ!

"ದೂರುದಾರನಿಗೆ ದಿನಕ್ಕೆ 5,000 ರಿಂದ 7,000 ರೂಪಾಯಿಗಳವರೆಗೆ ಗಳಿಸುವ ಅರೆಕಾಲಿಕ ಉದ್ಯೋಗದಲ್ಲಿ ಆಸಕ್ತಿ ಇದೆಯೇ ಎಂಬ ವಾಟ್ಸಾಪ್ ಸಂದೇಶವನ್ನು ಸೈಬರ್ ವಂಚಕನು ಮೊದಲು ಕಳಿಸಿದ್ದನು. ಅಲ್ಲದೆ, ಚಾಟ್ ಸಮಯದಲ್ಲಿ, ಸಂದೇಶ ಕಳುಹಿಸುವವರು ಯೂಟ್ಯೂಬ್ ವಿಡಿಯೋಗಳನ್ನು ಕಳುಹಿಸುವುದಾಗಿ ಮತ್ತು ಆ ವಿಡಿಯೋಗಳನ್ನು ವೀಕ್ಷಿಸಿ, ಲೈಕ್ ಮಾಡಿ ಮತ್ತು ಅದರ ಸ್ಕ್ರೀನ್‌ಶಾಟ್ ತೆಗೆದುಕೊಂಡು ಅದೇ ವಾಟ್ಸಾಪ್ ಸಂಖ್ಯೆಗೆ ಕಳುಹಿಸಬೇಕು ಎಂದು ಅವರ ಕೆಲಸದ ಬಗ್ಗೆ ವಿವರಿಸಿದ್ದಾರೆ. 

ಇನ್ನು, ಈ ಕೆಲಸ ಪಡೆಯಲು ನೋಂದಣಿ ಮತ್ತು ಇತರ ಶುಲ್ಕವಾಗಿ ಮೊದಲು 5,000 ರೂ. ಪಾವತಿಸಲು ಹೇಳಲಾಯಿತು. ನಂತರ ಆ ವ್ಯಕ್ತಿ ಯೂಟ್ಯೂಬ್ ವಿಡಿಯೋ ಲಿಂಕ್ ಅನ್ನು ಸ್ವೀಕರಿಸಿದರು ಮತ್ತು ಅದರಲ್ಲಿದ್ದ ಸೂಚನೆಗಳನ್ನು ಅನುಸರಿಸಿದರು. ಹಾಗೆ, 10,000 ರೂ. ಹಣವನ್ನು ಬ್ಯಾಂಕ್‌ ಅಕೌಂಟ್‌ನಲ್ಲಿ ಪಡೆದೆ" ಎಂದೂ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: ಸೈಬರ್‌ ಕ್ರಿಮಿನಲ್ಸ್‌ ವಿರುದ್ಧ 5000 ಪೊಲೀಸರ ದಾಳಿ: ನೋಯ್ಡಾ ಬಳಿಯ 300 ಪ್ರದೇಶದಲ್ಲಿ ಕಾರ್ಯಾಚರಣೆ; 125 ವಂಚಕರ ವಶಕ್ಕೆ

ನಂತರ ಆರೋಪಿಯು ದೂರುದಾರನನ್ನು ತನ್ನ ಟೆಲಿಗ್ರಾಮ್ ಗ್ರೂಪ್‌ಗೆ ಸೇರುವಂತೆ ಕೇಳಿಕೊಂಡನು ಮತ್ತು ಅವನಿಗೆ ದೊಡ್ಡ ಗಳಿಕೆಯನ್ನು ಗಳಿಸುವ ವಿವಿಧ ಕಾರ್ಯಗಳನ್ನು ಪೂರ್ಣಗೊಳಿಸಲು ನೀಡುವುದಾಗಿ ಹೇಳಿದನು. ದೂರುದಾರ ಈ ಗುಂಪಿಗೆ ಸೇರಿದ ಬಳಿಕ "ಹಣವನ್ನು ಹೂಡಿಕೆಯಾಗಿ ಠೇವಣಿ ಮಾಡಲು ಅವರನ್ನು ಕೇಳಲಾಯಿತು ಮತ್ತು ಪೂರ್ಣಗೊಳಿಸಲು ವಿವಿಧ ಕಾರ್ಯಗಳನ್ನು ನೀಡಲಾಯಿತು. ಅವರು ಕಾರ್ಯಗಳನ್ನು ಪೂರ್ಣಗೊಳಿಸಿದ ನಂತರ ಅವರು ಉತ್ತಮ ಲಾಭ ಗಳಿಸುತ್ತಾರೆ ಎಂದು ಆರೋಪಿಯು ಹೇಳಿದ್ದಾನೆ" ಎಂದೂ ದೂರುದಾರ ತಿಳಿಸಿದ ಬಗ್ಗೆ ಪೊಲೀಸ್ ಮೂಲಗಳು ತಿಳಿಸಿವೆ.

ಇನ್ನು, ಈ ಬಗ್ಗೆ ನಾಗರಿಕರಿಗೆ ಸಲಹೆ ನೀಡಿದ ಅಪರಾಧ ವಿಭಾಗದ ಸೈಬರ್ ಕ್ರೈಂ ವಿಭಾಗದ ಡಿಸಿಪಿ ಬಾಲ್ಸಿಂಗ್ ರಜಪೂತ್ ಅವರು ಅಪರಿಚಿತ ವ್ಯಕ್ತಿ/ಮೂಲದಿಂದ ಸ್ವೀಕರಿಸಿದ ಯಾವುದೇ ಸಂದೇಶ ಅಥವಾ ಲಿಂಕ್ ಅನ್ನು ಅನುಸರಿಸದಂತೆ ಮನವಿ ಮಾಡಿದ್ದಾರೆ. "ಸಾಮಾನ್ಯವಾಗಿ, ಇಂತಹ ವಂಚನೆ ಪ್ರಕರಣಗಳಲ್ಲಿ ಆರೋಪಿಗಳು ಪ್ರತಿ ಬಾರಿ ವಿಭಿನ್ನ ಬ್ಯಾಂಕ್ ಖಾತೆ ಸಂಖ್ಯೆಗಳನ್ನು ನೀಡುತ್ತಾರೆ; ಇದು ಅನುಮಾನವನ್ನು ಹುಟ್ಟುಹಾಕುತ್ತದೆ. ಮೇಲಾಗಿ, ಅಂತಹ ಪ್ರಕರಣಗಳಲ್ಲಿ ಆರಂಭಿಕ ಲಾಭವು ಮೂರನೇ ವ್ಯಕ್ತಿ ಅಥವಾ ಬೇರೆ ಖಾತೆಯಿಂದ ಬಲಿಪಶುವಿಗೆ ಬರುತ್ತದೆ. ಇವುಗಳು ವಂಚನೆಯ ಚಿಹ್ನೆಗಳು. ಯಾರಾದರೂ ಅರೆಕಾಲಿಕ ಉದ್ಯೋಗ ಸಂದೇಶವನ್ನು ಪಡೆದರೆ ಎಚ್ಚರದಿಂದಿರಿ. ಹಾಗೂ, ತಕ್ಷಣ ಪೊಲೀಸರನ್ನು ಸಂಪರ್ಕಿಸಬೇಕು" ಎಂದೂ ಬಾಲ್ಸಿಂಗ್ ರಜಪೂತ್ ಹೇಳಿದರು.

ಇದನ್ನೂ ಓದಿ: ಯುವತಿಯರಿಗೆ ಯಾಮಾರಿಸಿದ ಮನೆ ಮಾಲೀಕ: ಬೆಡ್‌ರೂಮ್‌, ಬಾತ್ರೂಮ್‌ನಲ್ಲಿ ಸ್ಪೈ ಕ್ಯಾಮೆರಾ ಇಟ್ಟ ವಂಚಕ

Follow Us:
Download App:
  • android
  • ios