ಆರ್‌ಬಿಐ ಪೊಲೀಸರ ಸೋಗು! ವೈದ್ಯೆಯಿಂದ ಕೋಟಿ ಕೋಟಿ ಪೀಕಿದ ಖದೀಮರು

ಆ ವೈದ್ಯೆಗೆ ಬ್ಯಾಂಕ್ ವಿವರಗಳನ್ನು ನೀಡಲು ಮತ್ತು ಅವರ ಸಂಪೂರ್ಣ ಹಣಕಾಸಿನ ವಿವರಗಳನ್ನು ಬಹಿರಂಗಪಡಿಸುವಂತೆ ಕೇಳಿದ್ದಾರೆ. ಅಷ್ಟೇ, ಅಲ್ಲದೆ ವಂಚಕ ಮಹಿಳೆಯ ಸೂಚನೆಯ ಮೇರೆಗೆ ವೈದ್ಯರು ತಮ್ಮ ಫಿಕ್ಸೆಡ್‌ ಡೆಪಾಸಿಟ್‌ ಬಗ್ಗೆಯೂ ವಿವರ ನೀಡಿದ್ದಾರೆ ಎಂದು ತಿಳಿದುಬಂದಿದೆ. 

posing as rbi cops crooks looted rs 4 5 crore from delhi lady doctor ash

ನವದೆಹಲಿ (ಮೇ 21, 2023): ಇತ್ತೀಚೆಗೆ ಸೈಬರ್‌ ವಂಚನೆ ಪ್ರಕರಣಗಳು ಹೆಚ್ಚಾಗ್ತಾನೇ ಇದೆ. ಈಗ ರಾಷ್ಟ್ರ ರಾಜಧಾನಿಯಲ್ಲಿ ದೇಶದ ಅತಿ ದೊಡ್ಡ ಸೈಬರ್‌ ವಂಚನೆ ಕೇಸೊಂದು ದಾಖಲಾಗಿದೆ. ಸೈಬರ್ ವಂಚನೆ ಆರೋಪದಡಿ ದೆಹಲಿಯ ಮಹಿಳಾ ವೈದ್ಯರೊಬ್ಬರಿಗೆ 4.47 ಕೋಟಿ ರೂ. ವಂಚಿಸಲಾಗಿದೆ ಎಂದು ತೀಳಿದುಬಂದಿದೆ.

4.47 ಕೋಟಿ ರೂ. ಮೌಲ್ಯದ MDMA ಡ್ರಗ್‌ನ ಕೊರಿಯರ್‌ ಅನ್ನು ಸೀಜ್‌ ಮಾಡಲಾಗಿದೆ ಎಂದು  ವಂಚಕ ಮಹಿಳೆಗೆ ತಿಳಿಸಿದ್ದಾರೆ. ಅಲ್ಲದೆ, ಆ ವಂಚಕರು ತಾವು ಆರ್‌ಬಿಐ ಅಧಿಕಾರಿಗಳು, ಮುಂಬೈನ ಅಂಧೇರಿ ಪೊಲೀಸ್ ಠಾಣೆಯ ಅಧಿಕಾರಿಗಳು, ಕಸ್ಟಮ್ಸ್ ಅಧಿಕಾರಿಗಳು, ಮುಂಬೈ ಪೊಲೀಸ್‌ನ ಡಿಸಿಪಿ ಮತ್ತು ನಾರ್ಕೋಟಿಕ್ಸ್ ವಿಭಾಗದ ಅಧಿಕಾರಿಗಳು - ಹೀಗೆ ನಾನಾ ಸರ್ಕಾರಿ ಇಲಾಖೆಗಳ ಸೋಗು ಹಾಕಿಕೊಂಡಿದ್ದಾರೆ ಎಂದೂ ತಿಳಿದುಬಂದಿದೆ. ಮಹಿಳೆಯನ್ನು ವಂಚಿಸುವ ಸಲುವಾಗಿ ಈ ಮಾಸ್ಟರ್‌ಪ್ಲ್ಯಾನ್‌ ಮಾಡಿದ್ದಾರೆ ಎಂದು ತಿಳಿದುಬಂದಿದೆ. 

ಇದನ್ನು ಓದಿ: ಯೂಟ್ಯೂಬ್‌ನಲ್ಲಿ ಲೈಕ್ ಮಾಡಿ ಹಣ ಗಳಿಸ್ಬೋದು ಎಂದು ನಂಬಿ 1.3 ಕೋಟಿ ರೂ ಕಳೆದುಕೊಂಡ ಭೂಪ!
 
ವಂಚಕರು ಆಕೆಗೆ ಕರೆ ಮಾಡಿ, ಆಕೆಗೆ ಸೇರಿದ ಪಾರ್ಸೆಲ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಪಾರ್ಸೆಲ್‌ನಲ್ಲಿ ಆಕೆಯ ಪಾಸ್‌ಪೋರ್ಟ್, ಬಟ್ಟೆಗಳು, ಶೂಗಳು, ಕೆಲವು ಬ್ಯಾಂಕ್ ದಾಖಲೆಗಳು ಮತ್ತು 140 ಗ್ರಾಂ ಎಂಡಿಎಂಎ ಇತ್ತು ಎಂದು ಕರೆ ಮಾಡಿದವರು ಹೇಳಿದ್ದಾರೆ. ಆದರೆ, ಆ ಪಾರ್ಸೆಲ್‌ಗೂ ನನಗೂ ಯಾವುದೇ ಸಂಬಂಧ ಇಲ್ಲ ಎಂದು ನಾನು ಆರಂಭದಲ್ಲಿ ನಿರಾಕರಿಸಿದ್ದೆ ಎಂದೂ ಮಹಿಳೆ ತಿಳಿಸಿದ್ದಾರೆ. 
 
ಬಳಿಕ, ಮಹಿಳೆ ದೆಹಲಿಯಲ್ಲಿರುವ ಕಾರಣ ಅಂಧೇರಿ ಪೊಲೀಸ್ ಠಾಣೆಗೆ ಆನ್‌ಲೈನ್‌ನಲ್ಲಿ ದೂರು ನೀಡುವಂತೆ ವಂಚಕರು ಹೇಳಿದರು ಮತ್ತು ಸ್ಕೈಪ್ ಡೌನ್‌ಲೋಡ್ ಮಾಡಲು ಕೇಳಿಕೊಂಡರು ಎಂದೂ ತಿಳಿದುಬಂದಿದೆ. ಆಗ ಮಹಿಳೆಯೊಬ್ಬಳು ತಾನು ಇನ್‌ಸ್ಪೆಕ್ಟರ್ ಎಂದು ಹೇಳಿಕೊಂಡು ಸ್ಕೈಪ್‌ನಲ್ಲಿ ಸಂಪರ್ಕ ಹೊಂದಿದ್ದಳು. ಅಲ್ಲದೆ, ಮಹಿಳೆ, ಸ್ಕೈಪ್‌ ಕರೆಯಲ್ಲಿದ್ದಾಗ ವೈದ್ಯರ ಆಧಾರ್ ಕಾರ್ಡ್ ಅನ್ನು ಬೇರೆ ಯಾವುದಾದರೂ ದುರುಪಯೋಗಕ್ಕಾಗಿ ಬಳಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ಬೇರೊಬ್ಬರೊಂದಿಗೆ ಮಾತನಾಡಲು ಪ್ರಾರಂಭಿಸಿದರು. ಇದಕ್ಕೆ ಉತ್ತರಿಸಿದ ಕರೆಯಲ್ಲಿದ್ದ ಇನ್ನೊಬ್ಬರು, 23 ಬ್ಯಾಂಕ್ ಖಾತೆಗಳನ್ನು ತೆರೆಯಲು ಆ ಮಹಿಳೆಯ ಆಧಾರ್ ಕಾರ್ಡ್ ಅನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಮತ್ತು ಇದು ಮನಿ ಲಾಂಡರಿಂಗ್ ಪ್ರಕರಣವಾಗಿದೆ ಎಂದು ಅವರು ಮಾತನಾಡಿರುವುದನ್ನು ಮಹಿಳಾ ವೈದ್ಯೆ ಕೇಳಿಸಿಕೊಂಡಿದ್ದಾರೆ.

ಇದನ್ನೂ ಓದಿ: ಓದಿರೋದು 12ನೇ ಕ್ಲಾಸ್‌: ದುಡಿಯೋದು ದಿನಕ್ಕೆ 3 - 5 ಕೋಟಿ ರೂ.; 5 ಸ್ಟಾರ್‌ ಹೋಟೆಲ್‌ನಲ್ಲಿ ವಾಸ!

ನಂತರ ಆ ವೈದ್ಯೆಗೆ ಬ್ಯಾಂಕ್ ವಿವರಗಳನ್ನು ನೀಡಲು ಮತ್ತು ಅವರ ಸಂಪೂರ್ಣ ಹಣಕಾಸಿನ ವಿವರಗಳನ್ನು ಬಹಿರಂಗಪಡಿಸುವಂತೆ ಕೇಳಿದ್ದಾರೆ. ಅಷ್ಟೇ, ಅಲ್ಲದೆ ವಂಚಕ ಮಹಿಳೆಯ ಸೂಚನೆಯ ಮೇರೆಗೆ ವೈದ್ಯರು ತಮ್ಮ ಫಿಕ್ಸೆಡ್‌ ಡೆಪಾಸಿಟ್‌ ಬಗ್ಗೆಯೂ ವಿವರ ನೀಡಿದ್ದಾರೆ. ಆಗ ಮತ್ತೊಬ್ಬ ಅಧಿಕಾರಿ ಆರ್‌ಬಿಐನಿಂದ ಬಂದವರು ಎಂದು ಹೇಳಿಕೊಂಡು ಆರ್‌ಟಿಜಿಎಸ್ ಫಾರ್ಮ್‌ಗಳನ್ನು ಭರ್ತಿ ಮಾಡಲು ಹೇಳಿದರು. ಮತ್ತೊಬ್ಬ ನಾರ್ಕೋಟಿಕ್ಸ್ ವಿಭಾಗದ ಅಧಿಕಾರಿ ಎಂದು ಹೇಳಿಕೊಂಡು ಕರೆಯಲ್ಲಿ ಸೇರಿಕೊಂಡಿದ್ದರು. ಈ ಮೂಲಕ ಸೈಬರ್ ವಂಚನೆಯಿಂದ ಮಹಿಳಾ ವೈದ್ಯೆ 4.47 ಕೋಟಿ ರೂ. ಕಳೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಈ ಸಂಬಂಧ ದೆಹಲಿ ಪೊಲೀಸರು ಈ ವಂಚಕರ ವಿರುದ್ಧ ದೂರು ದಾಖಲಿಸಿದ್ದಾರೆ ಮತ್ತು ಅವರ ವಿರುದ್ಧ ತನಿಖೆ ಆರಂಭಿಸಿದ್ದಾರೆ ಎಂದು ವರದಿಯಾಗಿದೆ. 

ಇದನ್ನೂ ಓದಿ: ಸೈಬರ್‌ ಕ್ರಿಮಿನಲ್ಸ್‌ ವಿರುದ್ಧ 5000 ಪೊಲೀಸರ ದಾಳಿ: ನೋಯ್ಡಾ ಬಳಿಯ 300 ಪ್ರದೇಶದಲ್ಲಿ ಕಾರ್ಯಾಚರಣೆ; 125 ವಂಚಕರ ವಶಕ್ಕೆ

Latest Videos
Follow Us:
Download App:
  • android
  • ios