ವಾಟ್ಸಾಪ್ ಕಾಲ್‌ನಲ್ಲಿ ಬೆತ್ತಲಾದ 78 ವರ್ಷದ ವೃದ್ಧ: ಮುತ್ತಿನ ನಗರಿಯಲ್ಲಿ ಸೈಬರ್ ವಂಚಕರಿಂದ 23 ಲಕ್ಷ ರೂ. ಪಂಗನಾಮ
ಅಪರಿಚಿತ ನಂಬರ್‌ನಿಂದ ವಾಟ್ಸಾಪ್ ಕರೆಯನ್ನು ಸ್ವೀಕರಿಸಿದ 78 ವರ್ಷದ ವ್ಯಕ್ತಿ ಸೇರಿ ಇಬ್ಬರಿಗೆ ಸೈಬರ್ ವಂಚಕರು ಬ್ಲ್ಯಾಕ್‌ಮೇಲ್ ಮಾಡಿದ್ದು, ಬೆತ್ತಲಾದ ತಪ್ಪಿಗೆ 23 ಲಕ್ಷ ರೂ. ಹಣ ಕಳೆದುಕೊಂಡಿದ್ದಾರೆ.
ಹೈದರಾಬಾದ್ (ಜೂನ್ 22, 2023): ಸೈಬರ್ ವಂಚನೆ ಪ್ರಕರಣಗಳು ಆಗಾಗ್ಗೆ ಬೆಳಕಿಗೆ ಬರುತ್ತಲೇ ಇರುತ್ತವೆ. ನಿಮ್ಮ ಫೋನ್‌ಗೂ ನಕಲಿ ವಾಟ್ಸಾಪ್ ಕರೆಗಳ ಹಾವಳಿ ಹೆಚ್ಚುತ್ತಿರಬಹುದು. ಅಲ್ಲದೆ, ಫೇಸ್‌ಬುಕ್‌ನಲ್ಲಿ ಹಾಗೂ ಇತರೆ ಸಾಮಾಜಿಕ ಮಾಧ್ಯಮದಲ್ಲಿ ರಿಕ್ವೆಸ್ಟ್ ಕಳಿಸಿದ ನಿಮ್ಮ ಮೊಬೈಲ್ ನಂಬರ್‌ಗೆ ಬೆತ್ತಲೆ ಮಹಿಳೆ ಕಾಲ್ ಮಾಡುವ ಪ್ರಸಂಗವೂ ನಿಮ್ಮ ಗಮನಕ್ಕೆ ಬಂದಿರಬಹುದು. ಇಂತಹ ಪ್ರಕರಣಗಳ ಬಗ್ಗೆ ಎಚ್ಚರವಾಗಿರಿ ಎಂದು ಹಲವರು ಮನವಿ ಮಾಡಿಕೊಂಡರೂ ಜನರು ಈಗಲೂ ಮೋಸ ಹೋಗುತ್ತಿದ್ದಾರೆ.
ಇದೇ ರೀತಿ, ಅಪರಿಚಿತ ನಂಬರ್‌ನಿಂದ ವಾಟ್ಸಾಪ್ ಕರೆಯನ್ನು ಸ್ವೀಕರಿಸಿದ 78 ವರ್ಷದ ವ್ಯಕ್ತಿ ಸೇರಿ ಇಬ್ಬರಿಗೆ ಸೈಬರ್ ವಂಚಕರು ಬ್ಲ್ಯಾಕ್‌ಮೇಲ್ ಮಾಡಿದ್ದಾರೆ. ಮಹಿಳೆಯೊಬ್ಬರು ಬಟ್ಟೆ ಬಿಚ್ಚಲು ಆರಂಭಿಸಿದ ಬಳಿಕ 78 ವರ್ಷದ ವೃದ್ಧ ಸಹ ವಿವಸ್ತ್ರರಾದ ಹಿನ್ನೆಲೆ ಈ ನಗ್ನ ಕರೆಯನ್ನು ರೆಕಾರ್ಡ್ ಮಾಡಲಾಗಿದೆ ಮತ್ತು ಈ ಪುರುಷರಿಗೆ ಹಣ ನೀಡುವಂತೆ ಅಥವಾ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ವೈರಲ್ ಮಾಡಲಾಗುವುದು ಎಂದು ಬೆದರಿಕೆ ಹಾಕಲಾಗಿದೆ. ಈ ರೀತಿಯ 2 ಪ್ರಕರಣಗಳು ತೆಲಂಗಾಣ ರಾಜಧಾನಿ ಅಥವಾ ಮುತ್ತಿನ ನಗರಿ ಹೈದರಾಬಾದ್‌ನಲ್ಲಿ ನಡೆದಿದ್ದು, ಇಬ್ಬರು ವ್ಯಕ್ತಿಗಳು ಸೇರಿ ಸುಮಾರು 23 ಲಕ್ಷ ರೂ. ನೀಡಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನು ಓದಿ: ಹರ್ಷದ್ ಮೆಹ್ತಾನಂತೆ ವಂಚನೆ: 3 ತಿಂಗಳಲ್ಲಿ 4,672 ಕೋಟಿ ರೂ. ಅಕ್ರಮ ಷೇರು ವಹಿವಾಟು ಮಾಡಿದ ಸ್ಟಾಕ್ ಬ್ರೋಕರ್!
ಈ ಸಂಬಂಧ ಪೊಲೀಸರಿಗೆ ದೂರು ನೀಡಲಾಗಿದ್ದರೂ, ಆರೋಪಿಗಳು ಇನ್ನೂ ಸಿಕ್ಕಿಹಾಕಿಕೊಂಡಿಲ್ಲ ಎಂದು ತಿಳಿದುಬಂದಿದೆ. ಸೈಬರ್ ವಂಚಕರಿಗೆ ಸುಮಾರು 15 ಲಕ್ಷ ಪಾವತಿಸುವಂತೆ ತನ್ನನ್ನು ಬ್ಲ್ಯಾಕ್‌ಮೇಲ್ ಮಾಡಲಾಯ್ತು ಎಂದು ಮಂಗಳವಾರ ನಾರಾಯಣಗುಡಾದ 78 ವರ್ಷದ ವೃದ್ಧ ಹೈದರಾಬಾದ್ ಸೈಬರ್ ಅಪರಾಧಗಳ ಪೊಲೀಸ್ ಠಾಣೆಗೆ ದೂರು ನೀಡಿದ್ದರು. “ನಾನು ಅಪರಿಚಿತ ಸಂಖ್ಯೆಯಿಂದ ವಾಟ್ಸಾಪ್ ಕರೆಗೆ ಉತ್ತರಿಸಿದಾಗ, ಮಹಿಳೆ ಬಟ್ಟೆ ಬಿಚ್ಚುತ್ತಿರುವುದನ್ನು ನಾನು ನೋಡಿದೆ. ಕರೆ ಮಾಡಿದವರು ನನ್ನನ್ನೂ ವಿವಸ್ತ್ರಗೊಳಿಸಲು ಹೇಳಿದರು ಮತ್ತು ಅವರ ಸೂಚನೆಯಂತೆ ನಾನು ವಾಶ್‌ರೂಮ್‌ಗೆ ಹೋಗಿ ಬಟ್ಟೆ ಬಿಚ್ಚಿದೆ’’ ಎಂದು ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಬಳಿಕ ಆ ವಿಡಿಯೋ ಕರೆ ಶೀಘ್ರದಲ್ಲೇ ಸಂಪರ್ಕ ಕಡಿತಗೊಂಡಿತು ಮತ್ತು ದೂರುದಾರನು ತನ್ನದೇ ಆದ ನಗ್ನ ವಿಡಿಯೋ ಕ್ಲಿಪ್ ಅನ್ನು ಸ್ವೀಕರಿಸಿದನು. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳದಿರಲು ಹಣ ನೀಡುವಂತೆ ಬಳಿಕ ಅಪರಿಚಿತ ಮಹಿಳೆ ಕರೆ ಮಾಡಿದಳು. ಹಾಗೂ, ತಾನು ವಿವಿಧ ಬ್ಯಾಂಕ್ ಖಾತೆಗಳಿಗೆ ಹಣವನ್ನು ಕಳುಹಿಸಲು ಪ್ರಾರಂಭಿಸಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಲೈಂಗಿಕ ಕಿರುಕುಳಕ್ಕೆ ವಿರೋಧ: ಚಲಿಸುತ್ತಿದ್ದ ರೈಲಿನಿಂದ ಮಹಿಳೆ ತಳ್ಳಿದ ಐವರು ಕಾಮುಕರು!
ಅಲ್ಲದೆ, ಸ್ವಲ್ಪ ಹಣ ನೀಡಿದ ಬಳಿಕವೂ, ಕೆಲ ಸಮಯದ ನಂತರ ತನಗೆ ಅಶ್ಲೀಲ ವಿಡಿಯೋ ಚಾಟ್ ಮಾಡಿದ ಸಂಬಂಧ ಮಹಿಳೆಯೊಬ್ಬರು ನೀಡಿದ ದೂರಿನ ಕುರಿತು ದೆಹಲಿ ಮೂಲದ ಸೈಬರ್ ಕ್ರೈಂ ಇನ್ಸ್‌ಪೆಕ್ಟರ್ ಎಂದು ಹೇಳಿಕೊಳ್ಳುವ ವ್ಯಕ್ತಿಯಿಂದ ನಕಲಿ ಕರೆ ಬಂದಿತು. ಈ ಹಿನ್ನೆಲೆ ತಮ್ಮನ್ನು ಬಂಧಿಸಲಾಗುವುದು ಎಂಬ ಭಯದಿಂದ 78 ವರ್ಷದ ದೂರುದಾರ ವೃದ್ಧ
ವಂಚಕರನ್ನು ಸಂಪರ್ಕಿಸಿ ಪೊಲೀಸ್ ದೂರನ್ನು ಹಿಂಪಡೆಯುವಂತೆ ಮನವಿ ಮಾಡಿದರು ಮತ್ತು ಕೆಲವೇ ದಿನಗಳಲ್ಲಿ 15 ಲಕ್ಷವನ್ನು ಪಾವತಿಸಿದ್ದಾರೆ. ಆದರೆ, ಆರೋಪಿಗಳು ಹೆಚ್ಚಿನ ಹಣ ಕೇಳುವುದನ್ನು ಮುಂದುವರಿಸಿದ್ದರಿಂದ ಅವರು ಕೊನೆಗೆ ಪೊಲೀಸರ ಮೊರೆ ಹೋಗಿದ್ದಾರೆ ಎಂದೂ ತಿಳಿದುಬಂದಿದೆ.
ಇದಕ್ಕೂ ಮುನ್ನ ಸೋಮವಾರ, ಲಾಲಾಪೇಟ್‌ನ 59 ವರ್ಷದ ವಿಮಾ ಕಂಪನಿ ಉದ್ಯೋಗಿ ಕೂಡ ಪೊಲೀಸರನ್ನು ಸಂಪರ್ಕಿಸಿ, ಇದೇ ರೀತಿಯ ಪ್ರಕರಣದಲ್ಲಿ ವಂಚಕರಿಗೆ 8 ಲಕ್ಷ ರೂ. ಪಾವತಿಸಿದ್ದೇನೆ ಎಂದು ದೂರು ನೀಡಿದ್ದರು. "ನಾನು ವಂಚಕರಿಗೆ 8 ಲಕ್ಷ ಪಾವತಿಸಿದ್ದೇನೆ, ಆದರೆ ಅವರು ಹೆಚ್ಚಿನದನ್ನು ಕೇಳುತ್ತಿದ್ದರು" ಎಂದು ಆ ವ್ಯಕ್ತಿ ದೂರಿನಲ್ಲಿ ತಿಳಿಸಿದ್ದಾರೆ. ಈ ಸಂಬಂಧ ಐಪಿಸಿ ಸೆಕ್ಷನ್ 384, 419, 420 ಮತ್ತು ಐಟಿ ಕಾಯ್ದೆಯಡಿ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಸೈಬರ್ ಕ್ರೈಂ ಎಸಿಪಿ ಕೆವಿಎಂ ಪ್ರಸಾದ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಪತ್ನಿಯನ್ನೇ ವ್ಯಭಿಚಾರಿ ಮಾಡಿದ ಪತಿ: ಮಾದಕ ದ್ರವ್ಯ ನೀಡಿ 90ಕ್ಕೂ ಹೆಚ್ಚು ಜನರಿಂದ ರೇಪ್‌ಗೊಳಗಾದ ಮಹಿಳೆ!