Asianet Suvarna News Asianet Suvarna News

ಕೊಟ್ಟ ಸಾಲ ವಸೂಲಿ ಮಾಡಲಾಗದೇ ಬ್ಯಾಂಕ್ ಮ್ಯಾನೇಜರ್ ನೇಣಿಗೆ ಶರಣು

ಇದುವರೆಗೆ ಸಾಲ ಮಾಡಿ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಗಳನ್ನು ಕೇಳಿರಬಹುದು. ಆದರೆ ಇಲ್ಲೊಂದು ಕಡೆ ಕೊಟ್ಟ ಸಾಲವನ್ನು ವಾಪಸ್ ಮರು ಪಾವತಿ ಮಾಡಲಾಗದೆ ಬ್ಯಾಂಕ್ ಮ್ಯಾನೇಜರ್ ಓರ್ವ ನೇಣಿಗೆ ಶರಣಾಗಿದ್ದಾನೆ.

Puducherry Yanam branch UCO Bank Manager hanged himself after unable to recover the loans from defaulters akb
Author
First Published Oct 13, 2022, 9:59 PM IST

ಪುದುಚೇರಿ/ಕಾಕಿನಾಡ್: ಇದುವರೆಗೆ ಸಾಲ ಮಾಡಿ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಗಳನ್ನು ಕೇಳಿರಬಹುದು. ಆದರೆ ಇಲ್ಲೊಂದು ಕಡೆ ಕೊಟ್ಟ ಸಾಲವನ್ನು ವಾಪಸ್ ಮರು ಪಾವತಿ ಮಾಡಲಾಗದೆ ಬ್ಯಾಂಕ್ ಮ್ಯಾನೇಜರ್ ಓರ್ವರು ನೇಣಿಗೆ ಶರಣಾಗಿದ್ದಾರೆ. ಪುದುಚೇರಿಯಲ್ಲಿ ಈ ಅವಘಡ ಸಂಭವಿಸಿದೆ. ಹೀಗೆ ಸಾವಿಗೆ ಶರಣಾದ ಬ್ಯಾಂಕ್ ಮ್ಯಾನೇಜರ್‌ನನ್ನು ಸಾಯಿರತ್ನ ಶ್ರೀಕಾಂತ್ ಎಂದು ಗುರುತಿಸಲಾಗಿದೆ. ಇವರು ಆಂಧ್ರಪ್ರದೇಶದ ಕಾಕಿನಾಡು ಜಿಲ್ಲೆಯ ಪಿಥಪುರಂ ಜಿಲ್ಲೆಯ ನಿವಾಸಿ ಎಂದು ಪೊಲೀಸರು ಹೇಳಿದ್ದಾರೆ. 

ಶ್ರೀಕಾಂತ್  (Sayiratna Srikanth) ಪುದುಚೇರಿಯ (Puducherry) ಯನಂನಲ್ಲಿ ಯುಕೋ ಬ್ಯಾಂಕ್‌ನ ಶಾಖಾ ಮ್ಯಾನೇಜರ್ (bank manager) ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಹಿರಿಯ ಅಧಿಕಾರಿಗಳು ನೀಡಿದ ಟಾರ್ಗೆಟ್ ರೀಚ್ ಆಗಲು  ಇವರು ಅನೇಕರಿಗೆ ಬ್ಯಾಂಕ್‌ನಿಂದ ಸಾಲ (loans) ನೀಡಿದ್ದರು. ಸಾಲ ನೀಡಿದ ಬಳಿಕ ಸಾಲ ಮರು ಪಾವತಿ ಮಾಡಲು ಜನರಿಗೆ ಕೇಳುವಂತೆ ಮೇಲಾಧಿಕಾರಿಗಳು ಇವರಿಗೆ ಒತ್ತಡ ಹೇರಿದ್ದರು ಎನ್ನಲಾಗಿದೆ.

ಯುವತಿ ಜೊತೆ ಪತಿಯ ಫೋಟೋ ನೋಡಿ ಪತ್ನಿ ಆತ್ಮಹತ್ಯೆ

ಆದರೆ, ಮೇಲಾಧಿಕಾರಿಗಳ ಒತ್ತಡಕ್ಕೆ ಮಣಿದು ಸಾಲ ವಸೂಲಿ (Loan Recovery) ಮಾಡಲು ಸಾಧ್ಯವಾಗದೆ ಇದ್ದಾಗ ತಾವೇ ಸಾಲ ಪಡೆದು ವಸೂಲಾತಿಯನ್ನು ಸ್ವಲ್ಪ ಮಟ್ಟಿಗೆ ಇತ್ಯರ್ಥಪಡಿಸಲು ಯತ್ನಿಸಿದ್ದರು. ಇತ್ತ ಈತ ತೆಗೆದುಕೊಂಡ ವೈಯಕ್ತಿಕ ಸಾಲಗಳ ಬಡ್ಡಿದರವೂ ಗಗನಕ್ಕೇರುತ್ತಿತ್ತು. ಇದರಿಂದ ತನಗೆ ಬರುತ್ತಿದ್ದ ಸಂಬಳದಲ್ಲಿ ಕನಿಷ್ಠ ತನ್ನ ಹಾಗೂ ಕುಟುಂಬದ ಹೊಟ್ಟೆ ತುಂಬಿಸಿಕೊಳ್ಳಲು ಕೂಡ ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿತ್ತು. ಹಣಕಾಸಿನ ಅಸಮತೋಲನ ಸಂಪೂರ್ಣ ಬದುಕನ್ನೇ ಅಡಿಮೇಲು ಮಾಡಿತ್ತು. ಇದರೊಂದಿಗೆ ಇತ್ತ ಕೊಟ್ಟ ಸಾಲವೂ ವಾಪಸ್ ಬಾರದೇ ಅತ್ತ ಅಧಿಕಾರಿಗಳ ಒತ್ತಡವೂ ಹೆಚ್ಚಿದ ಹಿನ್ನೆಲೆಯಲ್ಲಿ ಮಾನಸಿಕ ಒತ್ತಡ ತಡೆದುಕೊಳ್ಳಲಾಗದೇ ಶ್ರೀಕಾಂತ್ ಖಿನ್ನತೆಗೆ (depression) ಒಳಗಾಗಿದ್ದರು. ಪರಿಣಾಮ ಪತ್ನಿ ಗಾಯತ್ರಿ ಹಾಗೂ ಪುಟ್ಟ ಮಕ್ಕಳನ್ನು ಬಿಟ್ಟು ನೇಣಿಗೆ ಶರಣಾಗಿದ್ದಾರೆ. ಈ ಪುಟ್ಟ ಕುಟುಂಬ ಯಾನಂನ ಗೋಪಾಲ್‌ ನಗರದಲ್ಲಿ (Gopal Nagar)  ನೆಲೆಸಿತ್ತು.

ಈ ಹಿಂದೆ ಶ್ರೀಕಾಂತ್ ಮಚಲಿಪಟ್ಟಣ ಬ್ರಾಂಚ್‌ನ (Machilipatnam branch) ಮ್ಯಾನೇಜರ್ ಆಗಿ ಮೂರು ವರ್ಷಗಳ ಕಾಲ ಕಾರ್ಯ ನಿರ್ವಹಿಸಿದ್ದರು. ಆ ಸಮಯದಲ್ಲಿ ಅವರು ತಮ್ಮ ಗ್ರಾಹಕರಿಗೆ ಬ್ಯಾಂಕ್‌ನ ಮೇಲಾಧಿಕಾರಿಗಳ ನಿರ್ದೇಶನದಂತೆ ಸಾಲ ನೀಡಿದ್ದರು ಎನ್ನಲಾಗಿದೆ. ಆದರೆ ಸಾಲ ಪಡೆದವರು ವಾಪಸ್ ಬ್ಯಾಂಕ್‌ಗೆ ಹಿಂದಿರುಗಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಶ್ರೀಕಾಂತ್ ವೈಯಕ್ತಿಕವಾಗಿ ತಮ್ಮ ಹೆಸರಿನಲ್ಲಿ 60 ಲಕ್ಷ ರೂ ಸಾಲ ಮಾಡಿ ಆ ಸಾಲವನ್ನು ಪಾವತಿಸಿದ್ದರು ಎನ್ನಲಾಗಿದೆ. ಇದಾದ ನಂತರ ಅವರು ಯಾನಂ ಬ್ರಾಂಚ್‌ಗೆ ವರ್ಗಾವಣೆಯಾಗಿ ಬಂದಿದ್ದು, ಇಲ್ಲಿಗೆ ಬಂದ ಮೇಲೆ ಅವರಿಗೆ ಅಲ್ಲಿ ಸಾಲ ಮರುಪಾವತಿ ಮಾಡದ ವ್ಯಕ್ತಿ ಇಲ್ಲೂ  37 ಲಕ್ಷ ರೂ ಸಾಲ ಮಾಡಿರುವುದು ತಿಳಿದು ಬಂದಿದೆ.  ಇದು ಶ್ರೀಕಾಂತ್‌ಗೆ ಮಾನಸಿಕ ಆಘಾತ ನೀಡಿದೆ. 

ಸರ್ವೀಸ್ ರಿವಾಲ್ವರ್‌ನಿಂದ ಗುಂಡು ಹಾರಿಸಿಕೊಂಡು ಸಾವಿಗೆ ಶರಣಾದ ಬಿಜೆಪಿ ಘಟಕಾಧ್ಯಕ್ಷ

ಪರಿಣಾಮ ಪತ್ನಿ ಗಾಯತ್ರಿ ಮಕ್ಕಳನ್ನು ಶಾಲೆಗೆ ಕರೆದೊಯ್ದ ವೇಳೆ ಈತ ಮನೆಯಲ್ಲೇ ಫ್ಯಾನ್‌ಗೆ ನೇಣು ಬಿಗಿದು ಸಾವಿಗೆ ಶರಣಾಗಿದ್ದಾರೆ. ನನ್ನ ಪತಿ ಯಾವಾಗಲೂ ಕರ್ತವ್ಯದ ಒತ್ತಡದಲ್ಲಿರುತ್ತಿದ್ದರು. ನಮ್ಮ ಕಷ್ಟಗಳೆಲ್ಲ ಸದ್ಯದಲ್ಲೇ ಕೊನೆಯಾಗಲಿದೆ ಎಂದಿದ್ದರು. ಆದರೆ ಈಗ ಜೀವ ಬಿಟ್ಟಿದ್ದಾರೆ ಎಂದು ಪತ್ನಿ ಗಾಯತ್ರಿ ಹೇಳಿದ್ದಾರೆ.

Follow Us:
Download App:
  • android
  • ios