ಲೈಸೆನ್ಸ್‌ಡ್‌ ಸರ್ವೀಸ್ ರಿವಾಲ್ವರ್‌ನಿಂದ ಗುಂಡು ಹಾರಿಸಿಕೊಂಡು ಭಾಗೀರಥ್ ಬಿಯಾನಿ ಸಾವಿಗೆ ಶರಣಾಗಿದ್ದು, ಆತ್ಮಹತ್ಯೆ ನಿಖರ ಕಾರಣ ತಿಳಿದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಬೀಡ್‌: ಮಹಾರಾಷ್ಟ್ರದ ಬೀಡ್ ನಗರ ಘಟಕದ ಮುಖ್ಯಸ್ಥರೋರ್ವರು ಗುಂಡು ಹಾರಿಸಿಕೊಂಡು ಸಾವಿಗೆ ಶರಣಾಗಿದ್ದಾರೆ. ಲೈಸೆನ್ಸ್‌ಡ್‌ ಸರ್ವೀಸ್ ರಿವಾಲ್ವರ್‌ನಿಂದ ಗುಂಡು ಹಾರಿಸಿಕೊಂಡು ಭಾಗೀರಥ್ ಬಿಯಾನಿ ಸಾವಿಗೆ ಶರಣಾಗಿದ್ದು, ಆತ್ಮಹತ್ಯೆ ನಿಖರ ಕಾರಣ ತಿಳಿದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಭಾಗೀರಥ್ ಬಿಯಾನಿ ಬೀಡ್ ನಗರ ಘಟಕದ ಬಿಜೆಪಿ ಅಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದರು. ಸರ್ವೀಸ್ ರಿವಾಲ್ವರ್‌ನಿಂದ ತಲೆಗೆ ಗುಂಡು ಹಾರಿಸಿಕೊಂಡು ಅವರು ಸಾವಿಗೆ ಶರಣಾಗಿದ್ದಾರೆ.

Add Asianetnews Kannada as a Preferred SourcegooglePreferred

ಪೇಠಬೀಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಮೀರಾನಗರ (Meera Nagar) ಪ್ರದೇಶದಲ್ಲಿನ ತನ್ನ ಮನೆಯಲ್ಲಿ ಈ ದುರಂತ ಸಂಭವಿಸಿದೆ. ಬಿಯಾನಿ (Bhagirath Biyani) ಅವರ ಕುಟುಂಬ ಸದಸ್ಯರು ಮಧ್ಯಾಹ್ನದ ವೇಳೆ ಅವರು ನಿಶ್ಚಲವಾಗಿ ಬಿದ್ದಿರುವುದನ್ನು ನೋಡಿ ಕೂಡಲೇ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಅಷ್ಟರಲ್ಲಾಗಲೇ ಅವರು ಸಾವನ್ನಪ್ಪಿದ್ದರು. ಪ್ರಾಥಮಿಕ ವರದಿಯಂತೆ ಇದು ಆತ್ಮಹತ್ಯೆಯಂತೆಯೇ ಕಂಡು ಬರುತ್ತಿದೆ. ಆದರೆ ಪೊಲೀಸರು ಎಲ್ಲಾ ಕೋನಗಳಿಂದ ಈ ಬಗ್ಗೆ ತನಿಖೆ ನಡೆಸುವರು ಎಂದು ಬೀಡ್ ಸೂಪರಿಟೆಂಡೆಂಟ್ ಆಫ್ ಪೊಲೀಸ್ ನಂದ ಕುಮಾರ್ ಠಾಕೂರ್ (Nand Kumar Thakur) ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ. 

ಸುಶಾಂತ್ ಸಿಂಗ್ ಸಾವಿನ ನಂತರ ಮೊದಲ ಬಾರಿಗೆ ಸಹೋದರನೊಂದಿಗೆ ಕಾಣಿಸಿಕೊಂಡ ರಿಯಾ ಚಕ್ರವರ್ತಿ

ಕಿವಿಯಿಂದ (Ear) ಮೇಲ್ಭಾಗದಲ್ಲಿ ಬುಲೆಟ್ (Bullet) ಹೊಕ್ಕಿದ ಗಾಯದ ಗುರುತಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ. ಎಂದು ಪೊಲೀಸರು ತಿಳಿಸಿದ್ದಾರೆ. ಮೃತ ಭಾಗೀರಥ್ ಬಿಯಾನಿ ತಮ್ಮ 50ರ ಪ್ರಾಯದಲ್ಲಿದ್ದು, ಕೆಲ ಆರೋಗ್ಯ ಸಮಸ್ಯೆಯಿಂದಲೂ ಅವರು ಬಳಲುತ್ತಿದ್ದರು ಎಂದು ಕೆಲ ವರದಿಗಳು ಹೇಳಿವೆ. ಸೋಮವಾರ ರಾತ್ರಿ ಮಲಗಲು ಹೋದ ಅವರು ಇಂದು ಮುಂಜಾನೆ ಹೊರ ಬಂದಿರಲಿಲ್ಲ. ಹೀಗಾಗಿ ಅವರ ಕುಟುಂಬ ಸದಸ್ಯರು ಅವರು ಮಲಗಿದ್ದ ಕೋಣೆಯನ್ನು ಬಲವಂತವಾಗಿ ಮುರಿದು ಒಳ ನುಗ್ಗಿದಾಗ ಅವರು ನಿರ್ಜೀವವಾಗಿ ಮಲಗಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಉಕ್ರೇನ್‌ ವಿರುದ್ಧ ಯುದ್ಧ ಮಾಡಲು ತಯಾರಿಲ್ಲ ಎಂದು ಆತ್ಮಹತ್ಯೆ ಮಾಡಿಕೊಂಡ Russia ರ‍್ಯಾಪ್‌ ಗಾಯಕ