* ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡಿದ್ದ ಪತ್ರಕರ್ತ ಶಂಕರ್ ಮನೆಗೆ ನುಗ್ಗಿದ್ದ ಕಳ್ಳ* ಟಾರ್ಚ್ ಬೆಳಕು ಕಂಡು ಹೌಹಾರಿದ ಸ್ಥಳೀಯರು* ಬಾಗಿಲು ಮುರಿದು ಒಳ ನುಗ್ಗಿದಾಗ ಕಳ್ಳ ಸಿಕ್ಕಿಬಿದ್ದ
ಬೆಂಗಳೂರು(ಫೆ.06): ಆರು ತಿಂಗಳ ಹಿಂದಷ್ಟೇ ಒಂದೇ ಕುಟುಂಬದ ಐವರು ಆತ್ಮಹತ್ಯೆಗೆ(Suicide) ಶರಣಾಗಿದ್ದ ಘಟನೆ ನಡೆದ ಮನೆ ಬಗ್ಗೆ ಕುತೂಹಲದಿಂದ ನಡುರಾತ್ರಿ ಮದ್ಯದ ಅಮಲಿನಲ್ಲಿ ಯುವಕನೊಬ್ಬ ನುಗ್ಗಿದ. ಇತ್ತ ಪಾಳು ಬಿದ್ದ ಮನೆಯಲ್ಲಿ ಮಧ್ಯರಾತ್ರಿ ಬೆಳಕು ಕಂಡು ‘ದೆವ್ವ’ ಎಂದು ಭಯಭೀತರಾದ ಸ್ಥಳೀಯರೆಲ್ಲ ಒಟ್ಟಾಗಿ ಆ ಮನೆ ಬಾಗಿಲು ಮುರಿದು ಒಳ ಪ್ರವೇಶಿಸಿದಾಗ ಸಿಕ್ಕಿದ್ದವನು ಯುವಕ! ಕೊನೆಗೆ ಭೂತ ಬಂಗಲೆ ನುಗ್ಗಿದ ತಪ್ಪಿಗೆ ಆತ ಸಾರ್ವಜನಿಕರಿಂದ ಹಿಗ್ಗಾಮುಗ್ಗಾ ಗೂಸು ತಿಂದು ಕಳ್ಳತನ(Theft) ಯತ್ನ ಆರೋಪದ ಮೇರೆಗೆ ಜೈಲು ಸೇರಿದ ಪ್ರಸಂಗ ನಡೆದಿದೆ.
ದೊಡ್ಡಬಳ್ಳಾಪುರದ ಭರತ್ (28) ಬಂಧಿತನಾಗಿದ್ದು(Arrest), ಕಳೆದ ಗುರುವಾರ ಆಂದ್ರಹಳ್ಳಿ ಮುಖ್ಯರಸ್ತೆಯ ತಿಗಳರಪಾಳ್ಯದಲ್ಲಿ ಪತ್ರಕರ್ತ ಹಲ್ಲೆಗೆರೆ ಶಂಕರ್ ಮನೆಗೆ ಗುರುವಾರ ರಾತ್ರಿ ನುಗ್ಗಿದ ಆತನನ್ನು ಹಿಡಿದು ಹಿಗ್ಗಾಮುಗ್ಗಾ ಗೂಸ ಕೊಟ್ಟು ಬ್ಯಾಡರಹಳ್ಳಿ ಪೊಲೀಸರಿಗೆ(Police) ಸ್ಥಳೀಯರು ಒಪ್ಪಿಸಿದ್ದಾರೆ. ಅತಿಕ್ರಮ ಪ್ರವೇಶ ಹಾಗೂ ಕಳ್ಳತನ ಯತ್ನ ಆರೋಪದಡಿ ಎಫ್‌ಐಆರ್(FIR) ದಾಖಲಿಸಿ ಆರೋಪಿಯನ್ನು(Accused) ಪೊಲೀಸರು ಬಂಧನಕ್ಕೊಳಪಡಿಸಿ ಜೈಲಿಗೆ(Jail) ಕಳುಹಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
Bengaluru Crime: ಮದ್ಯ ಸೇವಿಸಲು ಹಣ ನೀಡದ್ದಕ್ಕೆ ಚಾಕು ಇರಿದವ ಅರೆಸ್ಟ್
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ 2021ರ ಸೆಪ್ಟೆಂಬರ್‌ನಲ್ಲಿ ಪತ್ರಕರ್ತ ಶಂಕರ್ ಅವರ ಪತ್ನಿ ಹಾಗೂ ಮೂವರು ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆಗೂ ಮುನ್ನ ಶಂಕರ್ ಅವರ ಮಗಳು, ತಮ್ಮ ಪುಟ್ಟಮಗುವನ್ನು ಕೊಂದಿದ್ದಳು. ಅದೃಷ್ಟವಾಶಾತ್ ಮತ್ತೊಂದು ಹೆಣ್ಣು ಮಗುವೊಂದು ಪ್ರಾಣಾಪಾಯದಿಂದ ಪಾರಾಗಿತ್ತು. ಈ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇರೆಗೆ ಶಂಕರ್ ಹಾಗೂ ಅವರ ಇಬ್ಬರು ಅಳಿಯಂದಿರು ಜೈಲು ಸೇರಿದ್ದಾರೆ. ಈ ಭೀಕರ ಘಟನೆ ಬಳಿಕ ಶಂಕರ್ ಮನೆಗೆ ವಿದ್ಯುತ್ ಸಂಪರ್ಕ ಕಡಿತವಾಗಿದ್ದು, ಯಾರೊಬ್ಬರೂ ಆ ಮನೆಗೆ ಹೋಗದೆ ಪಾಳು ಬಿದ್ದಿದೆ. ಸಾಮೂಹಿಕ ಆತ್ಮಹತ್ಯೆಯಿಂದ ಆ ಮನೆ ಬಗ್ಗೆ ಸ್ಥಳೀಯರು ಭಯ ಸಹ ಮೂಡಿದೆ.
ಕುತೂಹಲಕ್ಕೆ ಹೋಗಿದ್ದೆ: ಆರೋಪಿ
ದೊಡ್ಡಬಳ್ಳಾಪುರದ ಭರತ್, ಹೆಗ್ಗನಹಳ್ಳಿ ಕ್ರಾಸ್‌ನ ಗಾರ್ಮೆಂಟ್ಸ್‌ನಲ್ಲಿ ನೌಕರಿಯಲ್ಲಿದ್ದ. ಬ್ಯಾಡರಹಳ್ಳಿ ಸಮೀಪ ನೆಲೆಸಿದ್ದ ಆತ, ಪ್ರತಿ ದಿನ ಕೆಲಸಕ್ಕೆ ಹೋಗುವಾಗ ಶಂಕರ್ ಮನೆ ಮುಂದೆ ಹಾದು ಹೋಗುತ್ತಿದ್ದ. ಆತ್ಮಹತ್ಯೆ ಘಟನೆ ವಿಚಾರ ತಿಳಿದಿದ್ದ ಆತ, ಆ ಮನೆಯೊಳಗೆ ಏನಿರಬಹುದು ಎಂಬ ಕುತೂಹಲ ಮೂಡಿತ್ತು. ಹೀಗಾಗಿ ಗುರುವಾರ ರಾತ್ರಿ ಮನೆ ಮಹಡಿಯ ಬಾಗಿಲು ಮುರಿದು ಒಳ ಪ್ರವೇಶಿಸಿದ್ದಾನೆ. ಟಾರ್ಚ್ ಹಾಕಿಕೊಂಡು ಮನೆಯೊಳಗೆ ಆತ ಹುಡುಕಾಟ ನಡೆಸಿದ್ದಾನೆ. ಭೂತ ಬಂಗಲೆಯಲ್ಲಿ ಬೆಳಕು ಕಂಡು ಬೆಚ್ಚಿಬಿದ್ದ ನೆರೆಹೊರೆ ನಿವಾಸಿಗಳು, ಕೂಡಲೇ ಶಂಕರ್ ಅವರ ಸಂಬಂಧಿಕರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.
Dharwad: ಕುಡಿದ ಮತ್ತಿನಲ್ಲಿ ಪೊಲೀಸರ ಜೀಪನ್ನೇ ಕಳವು ಮಾಡಿದ ಭೂಪ...!
ಆಗ ಶಂಕರ್ ಸಂಬಂಧಿಕರು, ‘ಯಾರೋ ಕಳ್ಳ ಬಂದಿರಬೇಕು ನೋಡಿ. ದೆವ್ವ ಭೂತ ಏನೂ ಇಲ್ಲ’ ಎಂದಿದ್ದಾರೆ. ಈ ಮಾತಿನಿಂದ ಧೈರ್ಯ ತಗೊಂಡು ಸ್ಥಳೀಯರು ಒಟ್ಟಾಗಿ ಮನೆ ಮುಂದೆ ಜಮಾಯಿಸಿದ್ದಾರೆ. ಬಳಿಕ ಮುಂಬಾಗಿಲು ಮುರಿದು ಒಳ ಪ್ರವೇಶಿಸಿದಾಗ ಭರತ್ ಸಿಕ್ಕಿಬಿದ್ದಿದ್ದಾನೆ. ಅನಿರೀಕ್ಷಿತವಾಗಿ ಜನರನ್ನು ನೋಡಿ ತಪ್ಪಿಸಿಕೊಳ್ಳಲು ಯತ್ನಿಸಿದ ಆತನನ್ನು ಹಿಡಿದು ಜನರು ಗೂಸಾ ಕೊಟ್ಟಿದ್ದಾರೆ. ಬಳಿಕ ಘಟನೆ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಬ್ಯಾಡರಹಳ್ಳಿ ಠಾಣೆ ಹೊಯ್ಸಳ ವಾಹನದ ಸಿಬ್ಬಂದಿಗೆ ಭರತ್‌ನನ್ನು ಸಾರ್ವಜನಿಕರು ಒಪ್ಪಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ನಾನು ಕಳ್ಳತನಕ್ಕೆ ಮನೆಗೆ ಹೋಗಿರಲಿಲ್ಲ. ಒಂದು ಕುಟುಂಬದ ಅಷ್ಟು ಜನರು ಮೃತಪಟ್ಟಿದ್ದ ಮನೆಯೊಳಗೆ ಏನಿದೆ ಎನ್ನುವುದನ್ನು ನೋಡಲು ಹೋಗಿದ್ದಾಗಿ ವಿಚಾರಣೆ ವೇಳೆ ಆರೋಪಿ ಹೇಳಿಕೆ ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
