*   ಮದ್ಯ ಸೇವಿಸಲು ಹಣ ನೀಡುವಂತೆ ಒತ್ತಾಯ*   ಆರೋಪಿಯಿಂದ ಕೃತ್ಯಕ್ಕೆ ಬಳಸಿದ್ದ ಚಾಕು ಜಪ್ತಿ *   ರಿಯಲ್‌ ಎಸ್ಟೇಟ್‌ ಕಂಪನಿಯಲ್ಲಿ ಮೇಲ್ವಿಚಾರಕನಾಗಿ ಕೆಲಸ ಮಾಡುತ್ತಿದ್ದ ಆರೋಪಿ 

ಬೆಂಗಳೂರು(ಫೆ.03):  ಮದ್ಯ(Alcohol) ಸೇವನೆಗೆ ಹಣ ಕೊಡಲಿಲ್ಲವೆಂದು ಏಕಾಏಕಿ ದಾರಿಯಲ್ಲಿ ಹೋಗುತ್ತಿದ್ದ ಖಾಸಗಿ ಕಂಪನಿ ಉದ್ಯೋಗಿಯೊಬ್ಬರಿಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದ ದುಷ್ಕರ್ಮಿಯನ್ನು ಮಹದೇವಪುರ ಠಾಣೆ ಪೊಲೀಸರು(Police) ಬಂಧಿಸಿದ್ದಾರೆ.

ಕೆ.ಆರ್‌.ಪುರದ ನಿವಾಸಿ ಅಕ್ಮಲ್‌ಖಾನ್‌ ಬಂಧಿತನಾಗಿದ್ದು, ಆರೋಪಿಯಿಂದ(Accused) ಕೃತ್ಯಕ್ಕೆ ಬಳಸಿದ್ದ ಚಾಕು ಜಪ್ತಿ ಮಾಡಲಾಗಿದೆ. ಘಟನೆಯಲ್ಲಿ ಗಾಯಗೊಂಡಿದ್ದ ರಿಯಲ್‌ ಎಸ್ಟೇಟ್‌ ಕಂಪನಿಯ ಮೇಲ್ವಿಚಾರಕ ರಂಜಿತ್‌ ಕುಮಾರ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಪ್ರಾಣಾಪಾಯದಿಂದ ಅವರು ಪಾರಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

Dharwad: ಕುಡಿದ ಮತ್ತಿನಲ್ಲಿ ಪೊಲೀಸರ ಜೀಪನ್ನೇ ಕಳವು ಮಾಡಿದ ಭೂಪ...!

ಮಹದೇವಪುರ ಬಸ್‌ ನಿಲ್ದಾಣದ ಸಮೀಪ ಜ.20ರ ರಾತ್ರಿರ ಪುಟ್‌ಪಾತ್‌ನಲ್ಲಿ ರಂಜಿತ್‌ಕುಮಾರ್‌ ನಡೆದುಕೊಂಡು ಹೋಗುತ್ತಿದ್ದರು. ಆಗ ಅವರನ್ನು ಹಿಂಬಾಲಿಸಿ ಬಂದ ಆರೋಪಿ, ರಸ್ತೆಯಲ್ಲಿ ಅಡ್ಡಗಟ್ಟಿ ಹಣ(Money) ಕೊಡುವಂತೆ ಕೇಳಿದ್ದಾನೆ. ಆಗ ‘ನಿನಗೆ ನಾನೇಕೆ ಹಣ ಕೊಡಬೇಕು’ ಎಂದು ಪ್ರಶ್ನಿಸಿ ರಂಜಿತ್‌ ಮುಂದೆ ಸಾಗಿದ್ದಾರೆ. ಈ ಮಾತಿಗೆ ಕೆರಳಿದ ಆರೋಪಿ, ಹಿಂದಿನಿಂದ ಅವರ ಬೆನ್ನು ಮತ್ತು ಕುತ್ತಿಗೆ ಬಳಿ ಚಾಕುವಿನಿಂದ ಇರಿದು ಪರಾರಿಯಾಗಿದ್ದ. ಬಳಿಕ ಸಿಸಿಟಿವಿ(CCTV) ಕ್ಯಾಮೆರಾ ದೃಶ್ಯಾವಳಿ ಆಧರಿಸಿ ಆರೋಪಿಯನ್ನು ಪತ್ತೆ ಹಚ್ಚಲಾಯಿತು.

ರಂಜಿತ್‌ಕುಮಾರ್‌ ಮೂಲತಃ ಜಾರ್ಖಂಡ್‌ ರಾಜ್ಯದವರಾಗಿದ್ದು, ಬಿ.ನಾರಾಯಣಪುರದಲ್ಲಿ ನೆಲೆಸಿದ್ದರು. ರಿಯಲ್‌ ಎಸ್ಟೇಟ್‌ ಕಂಪನಿಯಲ್ಲಿ ಮೇಲ್ವಿಚಾರಕನಾಗಿ ಕೆಲಸ ಮಾಡುತ್ತಿದ್ದ ಅವರು, ಜ.20ರಂದು ರಾತ್ರಿ ಹೋಟೆಲ್‌ನಲ್ಲಿ ಊಟ ಮಾಡಿ ಮನೆಗೆ ಮರಳುತ್ತಿದ್ದರು. ಆ ವೇಳೆ ಅದೇ ಹೋಟೆಲ್‌ ಮುಂದೆ ನಿಂತಿದ್ದ ಅಕ್ಮಲ್‌, ಕೌಂಟರ್‌ನಲ್ಲಿ ಊಟದ ಬಿಲ್‌ ಪಾವತಿಸಿ ಚಿಲ್ಲರೆ ಪಡೆಯುತ್ತಿದ್ದ ರಂಜಿತ್‌ ಅವರ ಬಳಿ ಹಣವಿದೆ ಎಂದು ಭಾವಿಸಿ ಆತ ಸುಲಿಗೆಗೆ ಯತ್ನಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಮದ್ಯವ್ಯಸನಿ ಅಕ್ಮಲ್‌, ಮೊದಲು ನಿರ್ಮಾಣ ಹಂತದ ಕಟ್ಟಡಗಳಲ್ಲಿ ಕೆಲಸ ಮಾಡುತ್ತಿದ್ದ. ಇತ್ತೀಚೆಗೆ ಎಲ್ಲೂ ಕೆಲಸ ಮಾಡದೆ ರಾತ್ರಿ ವೇಳೆ ಜನರಿಗೆ ಬೆದರಿ ಸುಲಿಗೆ ಮಾಡುವುದನ್ನು ಕಾಯಕ ಮಾಡಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಗಾಂಜಾ ಮಾರುತ್ತಿದ್ದ ತ್ರಿಪುರದ ವ್ಯಕ್ತಿ ಸೆರೆ

ಚಿಕ್ಕಬಳ್ಳಾಪುರ(Chikkaballapur): ನಗರದ ಹೊರವಲಯದ ವಾಪಸಂದ್ರ ಪ್ಲೈ-ಒವರ್‌ ಕೆಳಗೆ ಸ್ಥಳೀಯರಿಗೆ ಗಾಂಜಾ(Marijuana) ಮಾರಾಟ ಮಾಡುತ್ತಿದ್ದ ತ್ರಿಪುರ ಮೂಲದ ವ್ಯಕ್ತಿಯನ್ನು ಆತನ ಬಳಿ ಇದ್ದ 4 ಕೆಜಿ ಗಾಂಜಾ ಸೊಪ್ಪಿನ ಸಮೇತ ಚಿಕ್ಕಬಳ್ಳಾಪುರ ನಗರ ಠಾಣೆ ಪೊಲೀಸರು ಡಿವೈಎಸ್‌ಪಿ ಮುಂದಾಳತ್ವದಲ್ಲಿ ಕಾರ್ಯಾರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Shivamogga Rape Case: 4 ವರ್ಷಗಳಿಂದ ಮಗಳ ಮೇಲೆಯೇ ರೇಪ್‌ ಮಾಡಿದ ಕಾಮುಕ ತಂದೆ

ಬಂಧಿತ ವ್ಯಕ್ತಿಯನ್ನು ಬೆಂಗಳೂರಿನ ಹೆಬ್ಬಾಳ ಬಳಿ ಇರುವ ಕಾಗ್ಜೆಂಟ್‌ ಈ-ಸವೀರ್‍ಸ್‌ ಪ್ರೈ. ಲಿಮಿಟೆಡ್‌ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ತ್ರಿಪುರ ರಾಜ್ಯದ ಬಿನೋಯ್‌ ಕಲಾಯ್‌ ಬಿನ್‌ ಲೇಟ್‌ ರಬಿ ಕುಮಾರ್‌ ಕಲಾಯ… (32) ಎಂದು ಗುರುತಿಸಲಾಗಿದೆ.

ಇದೇ ವೇಳೆ ಬಿನೋಯ್‌ ಕಲಾಯ್‌ ಎಂಬಾತನಿಂದ ಗಾಂಜಾ ಖರೀದಿ ಮಾಡುತ್ತಿದ್ದ ಆರೋಪದ ಹಿನ್ನಲೆಯಲ್ಲಿ ಶಿಡ್ಲಘಟ್ಟತಾಲೂಕಿನ ವರಸಂದ್ರದ ನಿವಾಸಿ ಲಕ್ಷ್ಮಯ್ಯ ಬಿನ್‌ ನಾರಾಯಣಪ್ಪ (30), ಬಾಗೇಪಲ್ಲಿ ಥಾಲೂಕಿನ ಭತ್ತರೋಲಹಳ್ಳಿ ಗ್ರಾಮದ ನಿವಾಸಿ ಪಾಪಿರೆಡ್ಡಿ ಬಿನ್‌ ತಿಮ್ಮಣ್ಣ (35), ಚಿಂತಾಮಣಿ ಥಾಲೂಕಿನ ಗಡಿಗವಾರಹಳ್ಳಿ ಗ್ರಾಮದ ನಿವಾಸಿಗಳಾದ ಜಮಾಲ್‌ ಸಾಬ್‌ ಬಿನ್‌ ಹೈದರ್‌ ಸಾಬ್‌ (55) ಹಾಗೂ ಆದಿಲ್‌ ಬಿನ್‌ ಸುಭಾನ… ( 27) ಸಹ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಚಿಕ್ಕಬಳ್ಳಾಪುರ ಆರಕ್ಷಕ ವೃತ್ತ ನಿರೀಕ್ಷಕ ಪ್ರಶಾಂತ್‌ ಹಾಗೂ ಸಿಬ್ಬಂದಿ ಡಿವೈಎಸ್‌ಪಿ ವಿ.ಕೆ.ವಾಸುದೇವ್‌ ಮಾರ್ಗದರ್ಶನದಲ್ಲಿ ದಾಳಿ ನಡೆಸಿದ್ದರು.