*  ಧಾರವಾಡ ಜಿಲ್ಲೆಯ ಅಣ್ಣಿಗೇರಿಯಲ್ಲಿ ನಡೆದ ಘಟನೆ*  ಪೊಲೀಸ್‌ ಜೀಪ್‌ ಚಲಾಯಿಸಬೇಕೆಂಬ ಕ್ರೇಜ್‌ ಹೊಂದಿದ್ದ ವ್ಯಕ್ತಿಯಿಂದ ಕೃತ್ಯ*  ಜೈಲುಪಾಲಾದ ಆರೋಪಿ  

ಅಣ್ಣಿಗೇರಿ(ಫೆ.03): ಪೊಲೀಸ್‌ ಜೀಪ್‌ ಚಲಾಯಿಸಬೇಕೆಂಬ ಕ್ರೇಜ್‌ನಿಂದಾಗಿ ವ್ಯಕ್ತಿಯೋರ್ವ ಕುಡಿದ ಮತ್ತಿನಲ್ಲಿ ಜೀಪನ್ನು ಕಳ್ಳತನ(Theft) ಮಾಡಿ ಪೊಲೀಸರನ್ನೇ(Police) ಇಕ್ಕಟ್ಟಿಗೆ ಸಿಲುಕಿದ ಅಪರೂಪದ ಘಟನೆ ಅಣ್ಣಿಗೇರಿಯಲ್ಲಿ(Annigeri) ನಡೆದಿದೆ.

ಆರಂಭದಲ್ಲಿ ಪೊಲೀಸರಿಗೂ ಈ ವಿಷಯ ಗೊತ್ತಾಗಿರಲಿಲ್ಲ. ಅಮಾವಾಸ್ಯೆ ಪೂಜೆಗಾಗಿ ಜೀಪನ್ನು ಒಯ್ದಿರಬೇಕೆಂದು ಸುಮ್ಮನಿದ್ದರು. ಬಳಿಕ ಬೇರೆ ಜಿಲ್ಲೆಯ ಪೊಲೀಸರು ಆರೋಪಿಯನ್ನು(Accused) ಬಂಧಿಸಿದ(Arrest) ಮೇಲೆಯೇ ತಮ್ಮ ವಾಹನ ಕಳ್ಳತನವಾಗಿರುವುದು ಈ ಪೊಲೀಸರಿಗೆ ಗೊತ್ತಾಗಿದೆ. ಸದ್ಯ ಆರೋಪಿ ಜೈಲುಪಾಲಾಗಿದ್ದಾನೆ.

Bank Theft Case: ಸಾಲ ತೀರಿಸಲು ಬ್ಯಾಂಕಿಗೇ ಕನ್ನ ಹಾಕಿದ್ದ ಖದೀಮನ ಬಂಧನ

ಆಗಿರುವುದೇನು?:

ಅಣ್ಣಿಗೇರಿ ಅಂಬಿಕಾನಗರದ ನಾಗಪ್ಪ(45) ಎಂಬಾತನೇ ಪೊಲೀಸ್‌ ಜೀಪ್‌(Police Jeep) ಕಳ್ಳತನ ಮಾಡಿ ಸಿಕ್ಕು ಬಿದ್ದವನು. ಈತ ವೃತ್ತಿಯಿಂದ ಚಾಲಕನಾಗಿದ್ದಾನೆ(Driver). ಕೆಲ ವರ್ಷಗಳ ಹಿಂದೆ ಪ್ರತಿಷ್ಠಿತ ಖಾಸಗಿ ಸಾರಿಗೆ ಸಂಸ್ಥೆಯೊಂದರಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಇತ್ತೀಚೆಗೆ ಕೆಲಸ ಬಿಟ್ಟಿದ್ದ. ಊರಲ್ಲಿ ಯಾರಾದರೂ ವಾಹನ ಚಲಾಯಿಸುವುದಿದ್ದರೆ ಈತನನ್ನು ಕರೆಯಿಸುತ್ತಿದ್ದರಂತೆ. ಈತನಿಗೆ ಪೊಲೀಸ್‌ ಜೀಪ್‌ ಚಲಾಯಿಸಬೇಕೆಂಬ ಕ್ರೇಜ್‌ ಇತ್ತಂತೆ. ಕುಡಿತದ ಚಟಕ್ಕೆ ಅಂಟುಕೊಂಡಿದ್ದ ಈತ ಮಂಗಳವಾರ ರಾತ್ರಿ ಕುಡಿದ ಮತ್ತಿನಲ್ಲಿ, ಪೊಲೀಸ್‌ ಠಾಣೆಯ ಪ್ರಾಂಗಣದಲ್ಲಿನ ಇಲಾಖೆ ಜೀಪ್‌ ನೋಡಿದ್ದಾನೆ. ಠಾಣೆಯ ಎದುರು ಯಾರೂ ಇರಲಿಲ್ಲ. ಜತೆಗೆ ಜೀಪ್‌ನಲ್ಲಿ ಕೀ ಕೂಡ ಹಾಗೆ ಇತ್ತು. ಕೂಡಲೇ ಅದನ್ನು ಚಲಾಯಿಸಿಕೊಂಡು ಪುಣೆ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಮೂಲಕ ಹಾಗೆ ತೆರಳಿದ್ದಾನೆ.

ಹಾಗೇ ಹೆದ್ದಾರಿಯಲ್ಲಿ ಹಾವೇರಿ(Haveri) ದಾಟಿ ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರಿನತ್ತ ತೆರಳುತ್ತಿದ್ದಾಗ ಬಾರೊಂದು ಕಂಡು, ಮತ್ತೆ ಮದ್ಯಪಾನ(Alcohol) ಮಾಡುವ ಆಸೆಯಾಗಿ ವಾಹನ ಅಲ್ಲಿ ನಿಲ್ಲಿಸಿದ್ದಾನೆ. ಆತನ ನಡತೆ, ಹಾವಭಾವ ಕಂಡು ಅಲ್ಲಿನ ಜನರಿಗೆ ಸಂಶಯ ಬಂದು ತಕ್ಷಣ ಬ್ಯಾಡಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.

ತಕ್ಷಣ ಪೊಲೀಸರು ಬಂದು ವಿಚಾರಿಸಿದಾಗ ಆತ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ. ಅಣ್ಣಿಗೇರಿ ಪೊಲೀಸ್‌ ಠಾಣೆಯಿಂದ ಇದನ್ನು ಕದ್ದು ತಂದಿರುವುದಾಗಿಯೂ ಹೇಳಿಕೊಂಡಿದ್ದಾನೆ. ಆಶ್ಚಯವೆಂದರೆ ಬ್ಯಾಡಗಿ ಪೊಲೀಸರು ವಿಷಯ ತಿಳಿಸುವ ತನಕವೂ ಅಣ್ಣಿಗೇರಿ ಠಾಣೆಯಲ್ಲಿ ತಮ್ಮ ವಾಹನ ಕಳುವಾದ ವಿಚಾರವೇ ಗೊತ್ತಿಲ್ಲ. ತಮ್ಮ ಇಲಾಖೆಯ ಸಿಬ್ಬಂದಿಯೇ ಅಮಾವಾಸ್ಯೆ ಪೂಜೆಗಾಗಿ ವಾಹನವನ್ನು ತೊಳೆದುಕೊಂಡು ಬರಲು ಹೋಗಿರಬಹುದು ಎಂದು ಭಾವಿಸಿ ಸುಮ್ಮನಾಗಿದ್ದಾರೆ
ಬ್ಯಾಡಗಿ ಪೊಲೀಸರು ಮಾಹಿತಿ ನೀಡುತ್ತಿದ್ದಂತೆಯೇ ರಾತ್ರಿಯೇ ಅಲ್ಲಿಗೆ ತೆರಳಿದ ಅಣ್ಣಿಗೇರಿ ಪೊಲೀಸರು ಆತನನ್ನು ಬಂಧಿಸಿ ವಾಹನವನ್ನು ಮರಳಿ ತಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸದ್ಯ ಈತನನ್ನು ನ್ಯಾಯಾಂಗ ವಶಕ್ಕೆ(Judicial Custody) ಒಪ್ಪಿಸಲಾಗಿದೆ. ಈ ಕುರಿತು ಅಣ್ಣಿಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಒಟ್ಟಿನಲ್ಲಿ ಪೊಲೀಸ್‌ ಠಾಣೆ ಪ್ರಾಂಗಣದಲ್ಲಿದ್ದ ಇಲಾಖೆ ಜೀಪ್‌ನ್ನೇ ಕದ್ದೊಯ್ದರೂ ಪೊಲೀಸರಿಗೆ ಬೇಗನೆ ಗೊತ್ತಾಗದಿರುವುದಕ್ಕೆ ಇದೀಗ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಅಲ್ಲದೇ ಚರ್ಚೆಗೆ ಗ್ರಾಸವನ್ನುಂಟು ಮಾಡಿದೆ.

Davanagere: 6 ಫೈಟರ್ ಕೋಳಿ ಕದ್ದೊಯ್ದ ಕಳ್ಳರು: ಕೈಚಳಕ ಸಿಸಿಟಿವಿಯಲ್ಲಿ ಸೆರೆ

ಯಾರ್ದೋ ದುಡ್ಡು ಯಲ್ಲಮ್ಮನ ಜಾತ್ರೆ: ಬೈಕ್‌ ಕದ್ದು ಪತ್ನಿ, ಸಂಬಂಧಿಕರಿಗೆ ಗಿಫ್ಟ್‌ ಕೊಡ್ತಿದ್ದ ಭೂಪ..!

ಬೆಂಗಳೂರು: ನಕಲಿ ಕೀ ಬಳಸಿ ದ್ವಿಚಕ್ರ ವಾಹನ ಕದ್ದು ಹೆಂಡತಿ ಸೇರಿದಂತೆ ಸಂಬಂಧಿ​ಕ​ರಿಗೆ ಉಡು​ಗೊರೆ(Gift) ನೀಡಿದ್ದ ಚಾಲಾಕಿ ಚೋರನನ್ನು ರಾಜಾಜಿನಗರ ಠಾಣೆ ಪೊಲೀಸರು(Police) ಬಂಧಿಸಿದ್ದ ಘಟನೆ ಜ.23 ರಂದು ನಡೆದಿತ್ತು.

ರಾಜಾಜಿನಗರದ ಭರತ್‌(32) ಬಂ​ಧಿತ(Arrest). ಆರೋಪಿಯಿಂದ(Accused) ಏಳು ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿತ್ತು. ರಾಜಾಜಿನಗರ ನಿವಾಸಿ ನರೇಶ್‌ಎಂಬುವವರು ಜ.16ರಂದು ರಾತ್ರಿ 10 ಗಂಟೆಗೆ ತಮ್ಮ ಮನೆ ಮುಂದೆ ದ್ವಿಚಕ್ರ ವಾಹನ ನಿಲುಗಡೆ ಮಾಡಿದ್ದರು. ಮಾರನೇ ದಿನ ಎದ್ದು ನೋಡಿದಾಗ ದ್ವಿಚಕ್ರ ವಾಹನ ಇರಲಿಲ್ಲ. ಈ ಸಂಬಂಧ ನೀಡಿದ್ದ ದೂರಿನ ಮೇರೆಗೆ ಸಿಸಿಟಿವಿ(CCTV) ಕ್ಯಾಮರಾ ದೃಶ್ಯಾವಳಿ ಆಧರಿಸಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು.