ಮನೆಕೆಲಸಕ್ಕೆ ಅಪರಿಚಿತರ ಸೇರಿಸಿಕೊಳ್ಳುವ ಮುನ್ನ ಎಚ್ಚರ : ಬೆಂಗಳೂರಿನಲ್ಲಿ ಮುಂಬೈ ಗ್ಯಾಂಗ್ ಅಂದರ್

ಮನೆ ಕೆಲಸದವರ ಸೋಗಿನಲ್ಲಿ ಮನೆ ಸೇರಿಕೊಂಡು ಕೆಲವೇ ದಿನಗಳಲ್ಲಿ ತಮ್ಮ ಕೈ ಚಳಕ ತೋರುತ್ತಿದ್ದ ಮುಂಬೈ ಮೂಲದ ಮಹಿಳಾ ಗ್ಯಾಂಗೊಂದನ್ನು ಬೆಂಗಳೂರಿನ ಹೆಣ್ಣೂರು ಪೊಲೀಸರು ಬಂಧಿಸಿದ್ದಾರೆ. 

pretend as house maid Mumbai women gang theft in houses of the Banglore city arrested akb

ಬೆಂಗಳೂರು: ಪ್ರತಿನಿತ್ಯ ಕಳ್ಳರು ಹೊಸ ಹೊಸ ಐಡಿಯಾಗಳನ್ನು ಹುಡುಕುತ್ತಿರುತ್ತಾರೆ. ಅದೇ ರೀತಿ ಫೇಸ್‌ಬುಕ್‌ನಲ್ಲಿ ಮನೆಗೆಲಸಕ್ಕೆ ಲಭ್ಯವಿರುವುದಾಗಿ ಜಾಹೀರಾತು ನೀಡಿ ಸಂಪರ್ಕಿಸುತ್ತಿದ್ದ ಮಾಲೀಕರ ಮನೆಗಳಲ್ಲಿ ಕೆಲಸಕ್ಕೆ ಸೇರಿ ಕೆಲವೇ ದಿನಗಳಲ್ಲಿ ಮಾಲೀಕರು ಇಲ್ಲದಿರುವ ಸಮಯ ನೋಡಿ ಮನೆಗಳ್ಳತನ ಮಾಡುತ್ತಿದ್ದ ಕುಖ್ಯಾತ ಬಾಂಬೆ ಲೇಡಿ ಗ್ಯಾಂಗ್‌ನ್ನು‌  ಹೆಣ್ಣೂರು ಪೊಲೀಸರು ಬಂಧಿಸಿದ್ದಾರೆ. ಮಹಾರಾಷ್ಟ್ರ‌ ಮೂಲದ ವನಿತಾ, ಮಹಾದೇವಿ ಹಾಗೂ ಪ್ರಿಯಾಂಕ ಬಂಧಿತ ಕಳ್ಳಿಯರಾಗಿದ್ದು ಇವರಿಂದ 250 ಗ್ರಾಂ ಚಿನ್ನ, 100 ಗ್ರಾಂ ಬೆಳ್ಳಿ ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮುಂಬೈ ಮೂಲದ ಕಳ್ಳಿಯರ ವಿರುದ್ಧ ಮಹಾರಾಷ್ಟ್ರದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 37 ಪ್ರಕರಣ ದಾಖಲಾಗಿದ್ದು ಜೈಲಿಗೂ ಹೋಗಿ ಜಾಮೀನಿನ ಮೇರೆಗೆ ಬಿಡುಗಡೆಗೊಂಡಿದ್ದರು. ಜೈಲಿಗೆ ಹೋಗಿ ಬಂದ ನಂತರವೂ ಬುದ್ಧಿ ಕಲಿಯದ ಇವರು, ಮತ್ತೆ ಹಳೆ‌ ಚಾಳಿ ಮುಂದುವರೆಸಿದ್ದರು. ಕಳೆದ ತಿಂಗಳು ನಗರಕ್ಕೆ ಬಂದಿದ್ದ ಮಹಿಳೆಯರು ಫೇಸ್ಬುಕ್‌ ವೊಂದರ "ರೆಫರ್ ಹೌಸ್ ಮೇಡ್ಸ್ ಬೆಂಗಳೂರು" ಎಂಬ ಪಬ್ಲಿಕ್ ಗ್ರೂಪ್ ನಲ್ಲಿ ಸುಬ್ಬಲಕ್ಷಿ ಹೆಸರಿನಲ್ಲಿ ಮೊಬೈಲ್‌ ನಂಬರ್ ಹಾಕಿ ಮನೆಗೆಲಸಕ್ಕೆ ಲಭ್ಯವಿರುವುದಾಗಿ ಸಂದೇಶ ಕಳುಹಿಸಿದ್ದರು.

Bangalore Car Thieves: ಟೆಕ್ನಾಲಜಿ ಬಳಸಿ ಕಾರು ಎಗರಿಸುತ್ತಿದ್ದವ ಅಂದರ್‌

ಆರೋಪಿಗಳ‌ ಪೈಕಿ ಮಹಾದೇವಿ ಈ ಪೋಸ್ಟ್ ಹಾಕಿದ್ದಳು.‌ ಇದನ್ನು ನೋಡಿ ಹೆಣ್ಣೂರಿನ ಅರವಿಂದ್ ಎಂಬುವರು ಮಹಿಳೆಯನ್ನು ಸಂಪರ್ಕಿಸಿದ್ದರು. ಇದರಂತೆ ಮೂರು ದಿನ ಕೆಲಸ ಮಾಡಿದ ಬಳಿಕ ಮನೆಯಲ್ಲಿ ಯಾರು ಇಲ್ಲದಿರುವ ಸಮಯ ನೋಡಿ ಮಹಿಳೆ  ಮನೆಯಲ್ಲಿದ್ದ ಚಿನ್ನಾಭರಣ ಲಪಟಾಯಿಸಿ ಪರಾರಿಯಾಗಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಹೆಣ್ಣೂರು ಠಾಣೆ ಇನ್‌ಸ್ಪೆಕ್ಟರ್ ವಸಂತ್ ಕುಮಾರ್ (Vasanth kumar) ತಂಡ ಈ ಖತರ್ನಾಕ್‌ ಕಳ್ಳಿಯರನ್ನು ಬಲೆಗೆ ಕೆಡವಿದ್ದಾರೆ. 

ಮನೆಯ ಸಿಸಿಟಿವಿ ದೃಶ್ಯಾವಳಿ ಹಾಗೂ ಮೊಬೈಲ್ ನಂಬರ್ ಆಧಾರದ ಮೇರೆಗೆ ಮುಂಬೈನಲ್ಲಿ‌ ಈ ಖತರ್ನಾಕ್‌ ಕಳ್ಳಿಯರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ವಿಚಾರಣೆ ವೇಳೆ ಬಂಧಿತ ಮಹಿಳೆ ಫೇಸ್‌ಬುಕ್‌ ಗ್ರೂಪ್‌ನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯವಳು (Dakshina Kannada) ಎಂದು ನಕಲಿ ಆಧಾರ್ ಕಾರ್ಡ್ ಮಾಡಿಸಿರುವುದು ತಿಳಿದು ಬಂದಿದೆ.‌‌ ಪೋಸ್ಟ್‌ನಲ್ಲಿ ಹಾಕಿದ್ದ ಫೋನ್‌ ನಂಬರ್ ಕದ್ದ ಮೊಬೈಲೊಂದರ ನಂಬರ್ ಆಗಿತ್ತು ಎಂದು‌ ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ್ ಗುಳೇದ್ ಹೇಳಿದರು. 

ಬೆಂಗಳೂರು: ಅಂಗಡಿ ಮಾಲೀಕನ ಮೇಲೆ ಸಿಟ್ಟಿಗೆ 110 ಲ್ಯಾಪ್‌ಟಾಪ್‌ಗಳನ್ನೇ ಕದ್ದರು..!

ಮೊದಲಿಗೆ ಫೇಸ್‌ಬುಕ್‌ನಲ್ಲಿ ಅಕೌಂಟ್ ಕ್ರಿಯೇಟ್‌ ಮಾಡಿ‌ಕೊಳ್ಳುತ್ತಿದ್ದ ಇವರು ನಂತರ ಗ್ರೂಪ್ ಒಂದನ್ನು ಕ್ರಿಯೇಟ್ ಮಾಡಿಕೊಂಡು ಮನೆಕೆಲಸದವರು ಬೇಕಾದರೆ ಸಂಪರ್ಕಿಸಿ ಅಂತ ಹೇಳುತ್ತಿದ್ದರು. ನಂತರ ಮನೆಕೆಲಸಕ್ಕೆ ಸೇರಿ ಅದೇ ಮನೆಯಲ್ಲಿ ಕಳ್ಳತನ ಮಾಡುತ್ತಿದ್ದರು. ಹೆಣ್ಣೂರು ಪೊಲೀಸ್ ಠಾಣಾ (Hennur police station)  ವ್ಯಾಪ್ತಿಯಲ್ಲಿ ಮನೆಗಳ್ಳತನ ಮಾಡಿ ಎಸ್ಕೇಪ್ ಅಗಿದ್ದ ಈ ಗ್ಯಾಂಗ್, ಈ ಹಿಂದೆ ಬಾಂಬೆಯಲ್ಲಿ ಹಲವು ಕಡೆ ಕೈ ಚಳಕ ತೋರಿ ಅಂದರ್ ಆಗಿದ್ದರು. 

ಮನೆಕೆಲಸದವರಿಂದ ಕಳ್ಳತನವಾಯ್ತು ಅಂದ್ರೆ ಮುಂಬೈ ಪೊಲೀಸರು (Mumbai Police) ಮೊದಲು ಹುಡುಕುತ್ತಿದಿದ್ದು ಇವರನ್ನೆ ಅಂತ ಹೇಳಲಾಗ್ತಿದೆ. ಮುಂಬೈ ಒಂದರಲ್ಲಿಯೇ ಸುಮಾರು 37 ಪ್ರಕರಣ ಇವರ ಮೇಲಿದೆ. ಮುಂಬೈಯಲ್ಲಿ ಸೆಕ್ಯೂರಿಟಿ ಗಾರ್ಡ್‌ಗಳಿಗೆ ಕಮೀಷನ್ ಕೊಟ್ಟು ಮನೆಕೆಲಸಕ್ಕೆ ಸೇರುತ್ತಿದ್ದ ಗ್ಯಾಂಗ್ ಇಲ್ಲಿಯು ಸಹ ಅದೇ ಚಾಳಿಯನ್ನು ಮುಂದುವರೆಸಿತ್ತು ಅಂತ ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios