ನವದೆಹಲಿ[ಜ.15]: ದಿಲ್ಲಿಯ ನಿರ್ಭಯಾ ಗ್ಯಾಂಗ್‌ರೇಪ್‌ ಪ್ರಕರಣದ ನಾಲ್ವರು ದೋಷಿಗಳಿಗೆ ಜ.22ರಂದು ನೇಣು ಹಾಕಲು ಉತ್ತರ ಪ್ರದೇಶದ ನೇಣುಗಾರ ಪವನ್‌ ಜಲ್ಲಾದ್‌ ನೇಮಕಗೊಂಡಿದ್ದಾನೆ ಎಂದು ತಿಹಾರ್‌ ಜೈಲಿನ ಮೂಲಗಳು ಮಂಗಳವಾರ ಹೇಳಿವೆ.

ಜನವರಿ 20ರಂದು ಈತ ತಿಹಾರ್‌ ಜೈಲಿಗೆ ಆಗಮಿಸಲಿದ್ದಾನೆ. ಜೈಲಿನ ಆವರಣದಲ್ಲಿಯೇ ಅಂದು ತಂಗಲಿದ್ದಾನೆ. ಪ್ರತಿ ನೇಣಿಗೆ 15 ಸಾವಿರ ರು. ನಂತೆ ಒಟ್ಟು 60 ಸಾವಿರ ರು. ಸಂಭಾವನೆಯನ್ನು ನೀಡಲಾಗುತ್ತದೆ ಎಂದು ಅವು ಹೇಳಿವೆ.

ಗಲ್ಲಿಗೇರಿಸುವ ಮುನ್ನ ಕೊನೆಯಾಸೆ ಕೇಳಲ್ಲ; ತಿಹಾರ್ ಜೈಲಿನ ಅಧಿಕಾರಿ

ಈ ನಡುವೆ, ಜನವರಿ 21ರಂದು ಈತ ಅಣಕು ನೇಣು ಕಾರ್ಯಾಚರಣೆ ನಡೆಸಲಿದ್ದಾನೆ.

ಉತ್ತರಪ್ರದೇಶದಿಂದ ನೇಣುಗಾರನನ್ನು ಕಳಿಸಿ ಎಂದು ತಿಹಾರ್‌ ಜೈಲು ಅಧೀಕ್ಷಕರು ಇತ್ತೀಚೆಗೆ ಉತ್ತರ ಪ್ರದೇಶ ಸರ್ಕಾರಕ್ಕೆ ಕೋರಿದ್ದರು. ಇದಾದ ಬೆನ್ನಲ್ಲೇ, ‘ನಾನು ನೇಣು ಹಾಕಲು ಸಿದ್ಧ’ ಎಂದು ಪವನ್‌ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದ.

ನಿರ್ಭಯಾ ರೇಪಿಸ್ಟ್‌ಗಳನ್ನು ಗಲ್ಲಿಗೇರಿಸುವ ಪವನ್‌ಗೆ ನಟ ಜಗ್ಗೇಶ್‌ರಿಂದ 1 ಲಕ್ಷ ರೂ!