ಕಲಘಟಗಿ‌ ಸರ್ಕಾರಿ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯ, ಹೆರಿಗೆಗೆ ಬಂದ ಗರ್ಭಿಣಿ ಸಾವು

*ಕಲಘಟಗಿ‌ ಸರ್ಕಾರಿ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯ
* ಹೆರಿಗೆಗೆ ಬಂದ ಗರ್ಭಿಣಿ ಸಾವು
* ಸ್ಥಳಕ್ಕೆ ಕಲಘಟಗಿ ತಹಸೀಲ್ದಾರ್ ಯಲ್ಲಪ್ಪ ಗೋಣೆನ್ನವರ್ ಭೇಟಿ

pregnant woman Dies From Kalaghatagi Govt Hospital Doctors negligence rbj

ಹುಬ್ಬಳ್ಳಿ, (ಮೇ.30):“ವೈದ್ಯೋ ನಾರಾಯಣೋ ಹರಿ" ಅಂತ ಕರಿತೇವೆ ಅಂದ್ರೆ ವೈದ್ಯರ ಜೀವ ಉಳಿಸುವ ದೈವಕ್ಕೆ ಸಮಾ ಅಂತ. ಆದ್ರೇ ಧಾರವಾಡ ಜಿಲ್ಲೆ ಕಲಘಟಗಿ‌ ತಾಲೂಕ ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿ ತೋರಿದ ನಿರ್ಲಕ್ಷ್ಯ ತುಂಬ ಗರ್ಭಿಣಿ ಹಾಗು ಆಕೆಯು ಹೊಟ್ಟೆಯಲ್ಲಿ ಇದ್ದ ಪುಟ್ಟ ಜೀವ ಎರಡು ಬಲಿಯಾಗಿವೆ.

ಧಾರವಾಡ ಜಿಲ್ಲೆಯ ಕಲಗಟಗಿ ತಾಲೂಕಿನ ಸಿಗ್ಗಟ್ಟಿ ತಾಂಡಾದ ತುಂಬು ಗರ್ಭಿಣಿ ಪಾರ್ವತಿ ಲಾಮಾಣಿ  ಹೆರಿಗೆಗೆಂದು ಕಲಘಟಗಿ‌ ತಾಲುಕಿನ ಸರ್ಕಾರಿ ಆಸ್ಪತ್ರೆಗೆ ಬಂದಿದ್ದರು.  ಈಗಾಗಲೇ ಮೂರು ಮಕ್ಕಳ ತಾಯಿಯಾಗಿರೋ ಮೃತ ಪಾರ್ವತಿ ನಾಲ್ಕನೇ ಮಗುವಿನ ಹೆರಿಗೆಗೆಂದು  ಕಲಗಟಗಿ ತಾಲೂಕಾಸ್ಪತ್ರೆಗೆ ಬಂದಿದ್ರು. 

ಈ ವೇಳೆ ತಾಲೂಕಾಸ್ಪತ್ರೆ ವೈದ್ಯರು ಗರ್ಭಿಣಿ ಮಹಿಳೆಗೆ ಚಿಕಿತ್ಸೆ ನೀಡಲು ನಾಲ್ಕೈದು ತಾಸು ವಿಳಂಬ ಮಾಡಿದ್ರಿಂದ. ಹೆರಿಗೆಗೂ‌ ಮುಂಚೆ ಬೆಳಗಿನ ಜಾವ ಗರ್ಭದಲ್ಲಿ  ಮಗು ಸಾವನ್ನಪ್ಪಿದೆ. ಇದಾದ ಬಳಿಕ ವೈದ್ಯರು ಚಿಕಿತ್ಸೆ ನೀಡಲು‌ ಮುಂದಾಗಿದ್ದರು. ಆದ್ರೆ, ಅಷ್ಟೋತ್ತಿಗಾಗಲೇ ಪಾರ್ವತಿಗೆ  ತೀವ್ರ ರಕ್ತಸ್ರಾವ ಉಂಟಾಗಿದ್ರಿಂದ ಕಲಘಟಗಿ‌ ತಾಲೂಕ ಆಸ್ಪತ್ರೆಯ ವೈದ್ಯರು, ಬಾಣಂತಿಯನ್ನು  ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರೆಫರ್  ಮಾಡಿದ್ದಾರೆ.   ಈ ವೇಳೆ ಮಾರ್ಗ ಮಧ್ಯೆಯೇ ಪಾರ್ವತಿ ಸಾವನ್ನಪ್ಪಿದ್ದಾಳೆ. ಅದಾದ ಬಳಿಕ ಮೃತ ಪಾರ್ವತಿ ಕುಟುಂಬಸ್ಥರು ಕಲಗಟಗಿ ತಾಲೂಕಾಸ್ಪತ್ರೆ ಎದುರು ಶವ ಇಟ್ಟು ಪ್ರತಿಭಟನೆ ಮಾಡಿದ್ರು. ಜೊತೆಗೆ ಸುಮಾರು ಇನ್ನೂರರಿಂದ ಮುನ್ನೂರು ಜನ ಸೇರಿ ಬೆಳಗ್ಗೆಯಿಂದ ಧರಣಿ ನಡೆಸಿ ನ್ಯಾಯಕ್ಕಾಗಿ ಬೇಡಿಕೆಯನ್ನಿಟ್ಟಿದ್ರು. 

ಮೊಣಕೈ ನೋವಿಗೆ ಆಸ್ಪತ್ರೆಗೆ ದಾಖಲಾದವಳು ಸಾವು, ಖಾಸಗಿ ಆಸ್ಪತ್ರೆ ವಿರುದ್ಧ ಎಫ್ ಐಆರ್ ದಾಖಲು

ಈ ವೇಳೆ ಘಟನಾ ಸ್ಥಳಕ್ಕೆ ಭೇಟಿ ನೀಡಿದ  ಕಲಘಟಗಿ ಶಾಸಕ ಸಿ ಎಂ ನಿಂಬಣ್ಣವರ್ 10 ಸಾವಿರ ಹಣ ನೀಡುತ್ತೇನೆ. ಶವ ಸಂಸ್ಕಾರ ಮಾಡಿ ಅಂತ ಮನವಿ ಮಾಡಿದ್ರು. ಅದಕ್ಕೂ ಜಗ್ಗದೇ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ತೀವ್ರ ಪ್ರತಿಭಟನೆ ಮುಂದುವರೆಸಿದ್ರು. ಪ್ರತಿಭಟನೆ ತೀವ್ರತೆ ಹೆಚ್ಚಾಗಿದ್ರಿಂದ ಘಟನಾ ಸ್ಥಳಕ್ಕೆ ಧಾರವಾಡ ಡಿಎಚ್ಓ ಕರಿಗೌಡರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಈ ವೇಳೆ ಡಿಎಚ್ಓ ಕರಿಗೌಡರ್ ಜೊತೆಗೆ ಗ್ರಾಮಸ್ಥರು ಸ್ಥಳದಲ್ಲೇ ಪರಿಹಾರ ನೀಡಬೇಕು ಅಂತ ಪಟ್ಟು ಹಿಡಿದ್ರು. ಇದನ್ನ ಗಮನಿಸಿದ ಡಿಎಚ್ಓ ಕರಿಗೌಡರ್ ಘಟನೆ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರುತ್ತೇನೆ. ಜೊತೆಗೆ ಘಟನೆ ಬಗ್ಗೆ ಒಂದು ತಂಡ ರಚಿಸಿ ಕೂಲಂಕುಷವಾಗಿ ತನಿಖೆ ನಡೆಸಿ ತಪ್ಪಿತಸ್ಥ ವೈದ್ಯರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳೋದಾಗಿ ಭರವಸೆ ನೀಡಿದ್ರು.

ಅಷ್ಟೇ ಅಲ್ಲದೆ ಘಟನಾ ಸ್ಥಳಕ್ಕೆ ಕಲಘಟಗಿ ತಹಸೀಲ್ದಾರ್ ಯಲ್ಲಪ್ಪ ಗೋಣೆನ್ನವರ್ ಕೂಡಾ ಭೇಟಿ ನೀಡಿ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ  ತಾಯಿ, ಮಗುವಿಗೆ ಆದ ಅನ್ಯಾಯಕ್ಕೆ ನ್ಯಾಯ ಒದಗಿಸುತ್ತೇವೆ ಅಂತ ಭರವಸೆ ನೀಡಿದರು.

Latest Videos
Follow Us:
Download App:
  • android
  • ios