ಮೊಣಕೈ ನೋವಿಗೆ ಆಸ್ಪತ್ರೆಗೆ ದಾಖಲಾದವಳು ಸಾವು, ಖಾಸಗಿ ಆಸ್ಪತ್ರೆ ವಿರುದ್ಧ ಎಫ್ ಐಆರ್ ದಾಖಲು
ಬಾತ್ ರೂಮ್‌ನಲ್ಲಿ ಕಾಲು ಜಾರಿ ಬಿದ್ದು, ಮೊಣಕೈ ಗಾಯ ಮಾಡಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದ ಯುವತಿ ಸಾವನ್ನಪ್ಪಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆ ವಿರುದ್ಧ ಎಫ್ ಐಆರ್ ದಾಖಲಾಗಿದೆ.
ವರದಿ: ಕಿರಣ್.ಕೆ.ಎನ್. / ಪ್ರದೀಪ್ ಕಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್
ಬೆಂಗಳೂರು (ಮೇ.30): ಬಾತ್ ರೂಮ್ ನಲ್ಲಿ ಆಯತಪ್ಪಿ ಬಿದ್ದು ಆಪರೇಷನ್ (operation) ಬಳಿಕ ಯುವತಿ ತೇಜಸ್ವಿನಿ (Tejaswini) ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ ಎಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೋಷಕರ ದೂರಿನ ಅನ್ವಯ ಐಪಿಸಿ ಸೆಕ್ಷನ್ ,304A, ಅಡಿಯಲ್ಲಿ ಅಂದ್ರೆ ನಿರ್ಲಕ್ಷ್ಯದಡಿ ಕೇಸ್ ದಾಖಲಿಸಲಾಗಿದೆ. ವೈದ್ಯರಾದ ಅಶೋಕ್ ರೆಡ್ಡಿ. ಶರತ್. ವಿರುದ್ದ ಕೇಸ್ ದಾಖಲಾಗಿದೆ. ಆದರೆ ಮರಣೋತ್ತರ ಪರೀಕ್ಷೆ ವರದಿ (Post-mortem Report), ಹಾಗೂ ಇಂಡಿಯನ್ ಮೆಡಿಕಲ್ ಕೌನ್ಸಿಲ್ (Indian Medical Council) ನಿಂದ ವರದಿ ಬಂದ ಬಳಿಕ ನಿರ್ಲಕ್ಷ್ಯವಹಿಸಿದ ವೈದ್ಯರ (Doctor ) ಮೇಲೆ ಕ್ರಮವಾಗಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಮೃತ ಯುವತಿ ತೇಜಸ್ವಿನಿ ಖಾಸಗಿ ಕಾಲೇಜಿನಲ್ಲಿ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡುತ್ತಿದ್ದು, ಮೂಲತಃ ಬಾಗೇಪಲ್ಲಿಯವಳೆಂದು ತಿಳಿದುಬಂದಿದೆ.
ಪ್ರಕರಣದ ವಿವರ : ನಗರದ ಮಾರತಹಳ್ಳಿ ಬಳಿಯ ಪಿಜಿಯಲ್ಲಿ ವಾಸವಿದ್ದ ತೇಜಸ್ವಿನಿ ಬಾತ್ ರೂಮ್‌ನಲ್ಲಿ ಸ್ಕಿಡ್ ಆಗಿ ಬಿದ್ದಿದ್ದರು. ಯುವತಿ ಮೊಣಕೈ ಗಾಯ ಮಾಡಿಕೊಂಡು ಖಾಸಗಿ ಆಸ್ಪತ್ರೆ (Hospital) ಸೇರಿದ್ಳು. ಆಸ್ಪತ್ರೆ ಸೇರಿದ ಕೆಲವೇ ಗಂಟೆಗಳಲ್ಲಿ ಯುವತಿ ಸಾವನ್ನಪ್ಪಿರೋ ಘಟನೆ ಹೆಚ್.ಎ.ಎಲ್ ಠಾಣಾ ವ್ಯಾಪ್ತಿಯ ಜೀವಿಕಾ ಆಸ್ಪತ್ರೆಯಲ್ಲಿ ನಡೆದಿದೆ. ಬೆಳಗ್ಗೆ 4ಗಂಟೆ ಸುಮಾರಿಗೆ ಮೊಣಕೈ ಗಾಯಕ್ಕೆ ಚಿಕಿತ್ಸೆಗೆ ತೇಜಸ್ವಿನಿ ಅನ್ನೋ 21 ವರ್ಷದ ಯುವತಿಯನ್ನ ದಾಖಲಿಸಲಾಗಿತ್ತು. ಮಧ್ಯಾಹ್ನ 12ಗಂಟೆಗೆ ಸರ್ಜರಿ ಮಾಡ್ಬೇಕು ಅಂತಾ ಹೇಳಿದ್ದ ವೈದ್ಯರು 3 ಗಂಟೆಗೆ ಸಾವಿನ ಸುದ್ದಿ ತಿಳಿಸಿದ್ದಾರೆ ಅಂತಾ ಯುವತಿಯ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಸ್ಪತ್ರೆಯಲ್ಲಿ ವೈದ್ಯರೇ ಏನೋ ಮಾಡಿದ್ದಾರೆ ಅಂತಾ ಜೀವಿಕಾ ಆಸ್ಪತ್ರೆ ಮತ್ತು ವೈದ್ಯರ ವಿರುದ್ಧ ಗಂಭೀರ ಆರೋಪ ಮಾಡಿದ್ರು.
UDUPIಯ ಈ ಗ್ರಾಮಕ್ಕೆ ಬಂದರೆ ಮದ್ಯ -ತಂಬಾಕು ಸಿಗುವುದಿಲ್ಲ!
ಆಸ್ಪತ್ರೆ ಮಂಡಳಿ ಮತ್ತು ಆಸ್ಪತ್ರೆ ವೈದ್ಯರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ಯುವತಿಯ ಪೋಷಕರು ಆಸ್ಪತ್ರೆ ಬಳಿ ಧರಣಿ ನಡೆಸಿದ್ರು. ನಮಗೆ ನ್ಯಾಯ ಸಿಗೋವರೆಗೂ ಇಲ್ಲಿಂದ ಕದಲೋದಿಲ್ಲ ಅಂತಾ ಪಟ್ಟು ಹಿಡಿದಿದ್ರು. ಸಂಜೆ 4ಗಂಟೆಯಿಂದ ರಾತ್ರಿ 8ಗಂಟೆವರೆಗೂ ಆಸ್ಪತ್ರೆ ಎಂಟರೆನ್ಸ್ ನಲ್ಲಿ ಧರಣಿ ಮಾಡಿದ್ರು. ಪೋಷಕರ ಪಟ್ಟು ಜಾಸ್ತಿಯಾಗ್ತಿದ್ದಂತೆಯೇ ಹೆಚ್ ಎ ಎಲ್ ಪೊಲೀಸರು ಘಟನಾ ಸ್ಥಳಕ್ಕೆ ಬಂದ್ರು. ಪೊಲೀಸರು ಮನವೋಲಿಕೆ ಯತ್ನಿಸಿದ್ರೂ ಕೇಳದ ಪೋಷಕರು ಮತ್ತಷ್ಟು ಹಠವಿಡಿದಿದ್ರು. ನಂತರ ಮಾಜಿ ಶಾಸಕ ಬಂದು ಯುವತಿಯ ಪೋಷಕರ ಮನವೋಲಿಸಿದ್ರು. ಧರಣಿ ಕುಂತ ಸ್ಥಳದಲ್ಲಿಯೇ ಯುವತಿಯ ತಂದೆಯಿಂದ ಎಸಿಪಿಗೆ ದೂರು ನೀಡಿಸಿದ್ರು. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರೋ ಹೆಚ್.ಎ.ಎಲ್ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ನಿರ್ಲಕ್ಷ್ಯ ಪ್ರಕರಣದಲ್ಲಿ ವೈದ್ಯರನ್ನು ಬಂಧಿಸುವಂತಿಲ್ಲ: ವೈದ್ಯರ ನಿರ್ಲಕ್ಷ್ಯಕ್ಕೆ ಯುವತಿ ತೇಜಸ್ವಿನಿ ಸಾವು ಪ್ರಕರಣ ಕುರಿತು ಹೆಚ್.ಎಎಲ್ ಠಾಣೆಯಲ್ಲಿ ನಿರ್ಲಕ್ಷ್ಯದಡಿ ಪ್ರಕರಣ ದಾಖಲಾಗಿದೆ. 304 A ಅಡಿ ಪ್ರಕರಣ ದಾಖಲಿಸಿರುವ ಪೊಲೀಸರು ಈ ಬಗ್ಗೆ ತನಿಖೆ ನಡೆಸಲಿದ್ದಾರೆ. ಈ ಬಗ್ಗೆ ಆಪರೇಷನ್ ಮಾಡಿದ ವೈದ್ಯರಿಗೆ ನೊಟೀಸ್ ಕೊಟ್ಟು ಕರಸಿ ವಿಚಾರಣೆ ನಡೆಸುತ್ತಾರೆ. ಆದರೆ ಯಾವುದೇ ಕಾರಣಕ್ಕೂ ಬಂಧಿಸುವಂತಿಲ್ಲ. ಮರಣೋತ್ತರ ವರದಿಯನ್ನು ಮೆಡಿಕಲ್ ಕೌನ್ಸಿಲ್ ಗೆ ಪೊಲೀಸರು ಕಳಿಸಿಕೊಡಲಿದ್ದಾರೆ.
PM CARES For Children ದಾವಣಗೆರೆಯ ಅನಾಥ ಮಕ್ಕಳಿಗೆ 10 ಲಕ್ಷ ಬಾಂಡ್
ಮೆಡಿಕಲ್ ಕೌನ್ಸಿಲ್ ನಲ್ಲಿ ಕಮಿಟಿ ಮಾಡಲಾಗುತ್ತೆ: ಮೆಡಿಕಲ್ ಕೌನ್ಸಿಲ್ ಮುಖ್ಯಸ್ಥರು ಡೀನ್ ವರದಿ ಪರೀಶಿಲನೆ ನಡೆಸುತ್ತಾರೆ. ಬಳಿಕ ಆಪರೇಷನ್ ಮಾಡಿದ ವೈದ್ಯರನ್ನು ಕರೆಸಿ ವಿಚಾರಣೆ ಮಾಡುತ್ತಾರೆ. ವಿಚಾರಣೆ ಬಳಿಕ ವೈದ್ಯರ ನಿರ್ಲಕ್ಷ್ಯ ಕಂಡು ಬಂದ್ರೆ ವೈದ್ಯರ ಮೇಲೆ ಕ್ರಮ ಕೈಗೊಳ್ಳಲು ಸೂಚನೆ ನೀಡುತ್ತಾರೆ. ಅದುವರೆಗೂ ಯಾವುದೇ ಕ್ರಮ ವೈದ್ಯರ ಮೇಲೆ ಇಲ್ಲ. ಮೆಡಿಕಲ್ ನೆಗ್ಲೇಜೆನ್ಸಿ ಕೇಸ್ ನಲ್ಲಿ ಕೂಡಲೇ ವೈದ್ಯರನ್ನು ಬಂಧಿಸುವಂತಿಲ್ಲ. ಈ ಬಗ್ಗೆ ಸುಪ್ರೀಂ ಕೋರ್ಟ್, ಜೇಕಬ್ ಮ್ಯಾಥ್ಯಾ ಹಾಗೂ ಸ್ಟೇಟ್ ಆಪ್ ಪಂಜಾಬ್ ಕೇಸ್ ನಲ್ಲಿ ಉಲ್ಲೇಖ ಮಾಡಿತ್ತು. ಮೆಡಿಕಲ್ ಕೌನ್ಸಿಲ್ ವರದಿಯಲ್ಲಿ ವೈದ್ಯರ ನಿರ್ಲಕ್ಷ್ಯ ಕಂಡು ಬಂದ್ರೆ ವೈದ್ಯರ ಬಂಧನ ಮಾಡಬಹುದಾಗಿದೆ.