Crime News ನಿಗೂಢವಾಗಿ ಕಾಣೆಯಾಗಿದ್ದ ಸಾಗರದ ಪ್ರಕಾಶ್ ಟ್ರಾವೆಲ್ಸ್ ಮಾಲೀಕ ಶವವಾಗಿ ಪತ್ತೆ

* ಸಾಗರದ ಪ್ರಕಾಶ್ ಟ್ರಾವೆಲ್ಸ್ ಮಾಲೀಕ ಶವವಾಗಿ ಪತ್ತೆ
* ಪ್ರಕಾಶ್ ಟ್ರಾವೆಲ್ಸ್ ಮಾಲೀಕ ಪ್ರಕಾಶ್ ಅವರ ಶವ ಪಟಗುಪ್ಪೆ ಹೊಳೆಯಲ್ಲಿ ಪತ್ತೆ
* ಎರಡು ದಿನಗಳ ಹಿಂದೆ ನಿಗೂಢವಾಗಿ ನಾಪತ್ತೆಯಾಗಿದ್ದ ಸಾಗರದ ಪ್ರಕಾಶ್ ಟ್ರಾವೆಲ್ಸ್ ಮಾಲೀಕ

prakash travels owner prakash dead Body found in- Lake near hosanagara rbj

ಶಿವಮೊಗ್ಗ, (ಜ.24): ಕಳೆದ ಮೂರು ದಿನಗಳ ಹಿಂದೆ ನಿಗೂಢವಾಗಿ ನಾಪತ್ತೆಯಾಗಿದ್ದ ಶಿವಮೊಗ್ಗ ಜಿಲ್ಲೆಯ ಸಾಗರದ ಪ್ರಕಾಶ್ ಟ್ರಾವೆಲ್ಸ್(Sagara Prakash Travels)  ಮಾಲೀಕ ಪ್ರಕಾಶ್ (54) ಇಂದು ಶವವಾಗಿ ಪತ್ತೆಯಾಗಿದ್ದಾರೆ.

ಹೊಸನಗರ ತಾಲ್ಲೂಕಿನ ಪಟಗುಪ್ಪ ಹೊಳೆಯಲ್ಲಿ ಪ್ರಕಾಶ್ ಶವ ಸೋಮವಾರ ಪತ್ತೆಯಾಗಿದೆ. ಶುಕ್ರವಾರ ನಾಪತ್ತೆಯಾಗಿದ್ದ ಪ್ರಕಾಶ್ ಅವರ ಮೊಬೈಲ್ ಹಾಗೂ ಕಾರು ಶನಿವಾರ ಪಟಗುಪ್ಪೆ ಸೇತುವೆ ಬಳಿ ಪತ್ತೆಯಾಗಿತ್ತು. ಘಟನೆ ಸಂಬಂಧ ಸಾಗರ ನಗರ ಪೊಲೀಸ್ ಠಾಣೆಯಲ್ಲಿ ಕುಟುಂಬಸ್ಥರು ಪ್ರಕರಣ ದಾಖಲಿಸಿದ್ದರು.

Asianet Suvarna FIR: ಡೆತ್ ನೋಟ್ ಬರೆದಿಟ್ಟು ಇಬ್ಬರು ಮಕ್ಕಳೊಂದಿಗೆ ನಾಲೆಗೆ ಹಾರಿದ ಮಹಿಳೆಯ ಹಿಂದಿನ ಕಥೆ

ದೂರು ದಾಖಲಾದ ನಂತರ ಪತ್ತೆ ಕಾರ್ಯಾಚರಣೆ ಶುರು ಮಾಡಿದ್ದ ಪೊಲೀಸರಿಗೆ, ಶನಿವಾರ ಸಂಜೆ ಪ್ರಕಾಶ್ ಅವರ ಕಾರು, ಮೊಬೈಲ್ ಪಟಗುಪ್ಪೆ ಸೇತುವೆ ಮೇಲೆ ಪತ್ತೆಯಾಗಿತ್ತು. ಕಾರಿನಿಂದ ಸ್ವಲ್ಪ ದೂರದಲ್ಲಿ ಸೇತುವೆ ಮೇಲೆ ಚಪ್ಪಲಿಗಳು ಸಹ ಪತ್ತೆಯಾಗಿವೆ. ಈ ಆಧಾರದಿಂದ ಪ್ರಕಾಶ್ ಅವರ ಪತ್ತೆಗಾಗಿ ನಿರಂತರವಾಗಿ ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರು ಶೋಧ ಕಾರ್ಯ ನಡೆಸಿದ್ದರು. ಅಂತಿಮವಾಗಿ ಇಂದು (ಸೋಮವಾರ) ಪ್ರಕಾಶ್ ಮೃತದೇಹ ಪತ್ತೆಯಾಗಿದೆ. 

ಸುಮಾರು 50 ಕ್ಕೂ ಅಧಿಕ ಬಸ್ ಗಳೊಂದಿಗೆ ಅತ್ಯುತ್ತಮ ರೀತಿಯಲ್ಲಿ ಟ್ರಾವೆಲ್ಸ್ ನಡೆಸುತ್ತಿದ್ದ ಯುವ ಉದ್ಯಮಿ ಪ್ರಕಾಶ್ ,ಕೊರೋನಾ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ ಎನ್ನಲಾಗಿದೆ. 

ಕಳಡದ ಎರಡು ವರ್ಷದಿಂದ ಬಸ್ಸಗಳು ನಿಂತಲ್ಲೇ ನಿಂತು ತುಕ್ಕು ಹಿಡಿದವು. ಕೋಟ್ಯಂತರ ರುಪಾಯಿ ವ್ಯವಹಾರ ನಿಂತು ಹೋಯಿತು.  ಆರ್ಥಿಕ ಮುಗ್ಗಟ್ಟು ಎದುರಾಗಿದೆ ಎಂದು ತಿಳಿದುಬಂದಿದೆ.

ಶಿವಮೊಗ್ಗ ಜಿಲ್ಲೆಯ ಸಾಗರ ಭಾಗದಲ್ಲಿ ಪ್ರಕಾಶ್ ಟ್ರಾವೆಲ್ಸ್ ಚಿರಪರಿಚಿತವಾಗಿದೆ. ಸುಮಾರು 20 ವರ್ಷಗಳಿಂದ ಬಸ್‌ಗಳ ಸೇವೆ ಒದಗಿಸುತ್ತಿದ್ದಾರೆ. ಪ್ರಕಾಶ್ ಟ್ರಾವೆಲ್ಸ್ ಮಾಲೀಕ ಪ್ರಕಾಶ್ ಸಾವಿಗೆ ಇನ್ನೂ ನಿಖರ ಕಾರಣ ತಿಳಿದಿಲ್ಲ. ಈ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆ.

ನಾಲ್ಕು ದಿನಗಳ ಹಿಂದೆ ಬೀದರ್ (Bidar) ಜಿಲ್ಲೆ ‌ಭಾಲ್ಕಿ ತಾಲೂಕಿನ ಚಂದಾಪುರ ಗ್ರಾಮದಿಂದ ನಾಪತ್ತೆಯಾಗಿದ್ದ ಯುವಕನೊಬ್ಬ ಶನಿವಾರದಂದು ಇದೇ ಜಿಲ್ಲೆಯ ಔರಾದ್ (Aurad) ತಾಲೂಕಿನ ಕೌಠಾದಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. 24-ವರ್ಷ ವಯಸ್ಸಿನ ಸುನಿಲ್ ಪೌಲ್ (Sunil Paul) ದೇಹ ಕೌಠಾದ ಮೂಲಕ ಹರಿಯುವ ಮಾಂಜ್ರಾ ನದಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸುದ್ದಿ ಗೊತ್ತಾದ ಮೇಲೆ ಸ್ಥಳಕ್ಕೆ ಧಾವಿಸಿದ ಮೃತನ ಕುಟುಂಬದ ಸದಸ್ಯರು ರೋದಿಸುತ್ತಿದ್ದ ದೃಶ್ಯ ಸ್ಥಳದಲ್ಲಿ ನೆರೆದಿದ್ದ ಜನರ ಕಣ್ಣಲ್ಲೂ ನೀರು ತರಿಸಿತ್ತು. ಸುನೀಲ್ ಈಜಲು ಹೋಗಿ ನೀರು ಪಾಲಾದನೋ ಅಥವಾ ಯಾರಾದರೂ ಕೊಲೆಮಾಡಿ ದೇಹವನ್ನು ನದಿಯಲ್ಲಿ ಬಿಸಾಡಿದರೋ ಅನ್ನುವುದು ಪೊಲೀಸರ ತನಿಖೆಯಿಂದ ಗೊತ್ತಾಗಬೇಕಿದೆ. ನಮಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಜನವಾಡ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮನೆ ಮತ್ತು ಕಚೇರಿಗಳನ್ನು ಪೇಂಟ್ ಮಾಡುವಾಗ ಅಪಾಯಕಾರಿ ಅವಗಢಗಳು ಸಂಭವಿಸುವುದು ಆಗಾಗ ವರದಿಯಾಗುತ್ತಿರುತ್ತವೆ. ಇಂಥದೊಂದು ದಾರುಣ ಘಟನೆ ಶಿವಮೊಗ್ಗದಿಂದ ನಮಗೆ ಲಭ್ಯವಾಗಿದೆ. ಜಿಲ್ಲೆಯ ಶಿವಮೊಗ್ಗ ತಾಲೂಕಿನ ಹಾರನಹಳ್ಳಿ ಹೆಸರಿನ ಗ್ರಾಮದಲ್ಲಿ 39 ವರ್ಷ ವಯಸ್ಸಿನ ಮಾಲತೇಶ್ ಎಂಬ ಪೇಂಟರ್ ತನ್ನ ಕೆಲಸದಲ್ಲಿ ನಿರತನಾಗಿದ್ದಾಗ ವಿದ್ಯುತ್ ಪ್ರವಹಿಸಿ ಮರಣವನ್ನಿಪ್ಪಿದ್ದಾನೆ. ತಿಪ್ಪೇಸ್ವಾಮಿ ಹೆಸರಿನ ವ್ಯಕ್ತಿಗೆ ಸೇರಿದ ಬಾರ್ ಮತ್ತು ರೆಸ್ಟುರಾಂಟ್ನಲ್ಲಿ ಬಣ್ಣ ಬಳಿಯುವಾಗ 11 ಕೆವಿ ವಿದ್ಯುತ್ ಕೇಬಲ್ ತಗುಲಿ ಮಾಲತೇಶ್ ಎಲೆಕ್ಟ್ರೋಕ್ಯೂಟ್ ಆಗಿದ್ದಾನೆ. ಪೇಂಟರ್ ಸಾವಿಗೆ ಸಂಬಂಧಿಸಿದಂತೆ ಶಿವಮೊಗ್ಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Latest Videos
Follow Us:
Download App:
  • android
  • ios