Asianet Suvarna News Asianet Suvarna News

2 ತಿಂಗಳ ಬಳಿಕ ಬಯಲಾಯ್ತು ಮಹಿಳೆಯರಿಬ್ಬರ ಮರ್ಡರ್ ಮಿಸ್ಟರಿ: ಸವಾಲಾಗಿದ್ದ ಪ್ರಕರಣ ಭೇದಿಸಿದ ಪೊಲೀಸರು

ರುಂಡವಿಲ್ಲದ ಸ್ಥಿತಿಯಲ್ಲಿ ಸಿಕ್ಕ ಮಹಿಳೆಯರಿಬ್ಬರ ಮೃತ ದೇಹಗಳು ಇಡೀ ಮಂಡ್ಯ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿತ್ತು. ಅವೆರಡು ಕೊಲೆ ಪ್ರಕರಣ ಪೊಲೀಸ್ ಇಲಾಖೆಗೂ ದೊಡ್ಡ ಸವಾಲಾಗಿತ್ತು. ಸಣ್ಣ ಸುಳಿವನ್ನೂ ಬಿಡದೆ ಕೃತ್ಯ ಎಸೆಗಿದ್ದ ಹಂತಕರ ಹೆಡಮುರಿಕಟ್ಟಲು ಖಾಕಿ ಪಡೆ ಹಗಲಿರುಳು ಪ್ರಯತ್ನಿಸಿದ್ರೂ ಸಿಕ್ಕಿರಲಿಲ್ಲ. 

police solved murder mystery of two women in mandya two arrested gvd
Author
Bangalore, First Published Aug 5, 2022, 5:08 PM IST

ವರದಿ: ನಂದನ್ ರಾಮಕೃಷ್ಣ, ಏಷ್ಯಾನೆಟ್ ಸುವರ್ಣ ನ್ಯೂಸ್, ಮಂಡ್ಯ

ಮಂಡ್ಯ (ಆ.05): ರುಂಡವಿಲ್ಲದ ಸ್ಥಿತಿಯಲ್ಲಿ ಸಿಕ್ಕ ಮಹಿಳೆಯರಿಬ್ಬರ ಮೃತ ದೇಹಗಳು ಇಡೀ ಮಂಡ್ಯ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿತ್ತು. ಅವೆರಡು ಕೊಲೆ ಪ್ರಕರಣ ಪೊಲೀಸ್ ಇಲಾಖೆಗೂ ದೊಡ್ಡ ಸವಾಲಾಗಿತ್ತು. ಸಣ್ಣ ಸುಳಿವನ್ನೂ ಬಿಡದೆ ಕೃತ್ಯ ಎಸೆಗಿದ್ದ ಹಂತಕರ ಹೆಡಮುರಿಕಟ್ಟಲು ಖಾಕಿ ಪಡೆ ಹಗಲಿರುಳು ಪ್ರಯತ್ನಿಸಿದ್ರೂ ಸಿಕ್ಕಿರಲಿಲ್ಲ. ಬರೋಬ್ಬರಿ 2 ತಿಂಗಳ ಬಳಿಕ ಪಾತಕಿಗಳು ಬಲೆಗೆ ಬಿದ್ದಿದ್ದು, ಕೊಲೆಗೆ ಕಾರಣ ಕೇಳಿ ಪೊಲೀಸರೇ ಬೆಚ್ಚಿ ಬಿದ್ದಿದ್ದಾರೆ. ಅಲ್ಲದೆ ಹಂತಕರು ಮಾಡಿದ್ದು ಕೇವಲ 2 ಮರ್ಡರ್ ಅಲ್ಲ 3 ಎಂಬ ಸತ್ಯವೂ ಬಯಲಾಗಿದೆ. 

ಜೂನ್ ರಂದು ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಬೇಬಿ ಗ್ರಾಮದ ಕೆರೆ ಹಾಗೂ ಶ್ರೀರಂಗಪಟ್ಟಣ ತಾಲೂಕಿನ ಅರಕೆರೆ ಸಮೀಪದ ಹಳ್ಳದಲ್ಲಿ ಮಹಿಳೆಯರ ಸೊಂಟದಿಂದ ಕೆಳಭಾಗ ದೇಹ ಪತ್ತೆಯಾಗಿತ್ತು. ರುಂಡವಿಲ್ಲದ ದೇಹಗಳು ಪತ್ತೆಯಾಗಿದ್ರಿಂದ ಸಾಮಾನ್ಯ ಜನರು ಮಾತ್ರವಲ್ಲ ಪೊಲೀಸರೇ ಬೆಚ್ಚಿ ಬಿದ್ದಿದ್ರು. ತನಿಖೆ ಆರಂಭಿಸಿ ಹಲವೆಡೆ ತಲಾಶ್ ನಡೆಸಿದ್ರೂ ಮೃತ ದೇಹದ ಮೇಲ್ಭಾಗ ಪತ್ತೆಯಾಗಿರಲಿಲ್ಲ. ಅಲ್ಲದೆ ರಾಜ್ಯ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ಮಿಸ್ಸಿಂಗ್ ಕಂಪ್ಲೈಂಟ್ ಪರಿಶೀಲಿಸಿದ್ರೂ ಕೊಲೆಯಾದ ಮಹಿಳೆಯರ ಗುರುತು ಪತ್ತೆಯಾಗಿರಲಿಲ್ಲ. 

ರಂಗನತಿಟ್ಟು ಪಕ್ಷಿಧಾಮಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಥಾನ: ರಾಮ್ಸರ್ ಪಟ್ಟಿಗೆ ಸೇರ್ಪಡೆ

ಇದರಿಂದ ಪ್ರಕರಣ ಬೇಧಿಸಲು ಪೊಲೀಸರಿಗೆ ಕಗ್ಗಂಟಾಗಿತ್ತು. ಎರಡು ತಿಂಗಳ ಬಳಿಕ ಹಂತಕರು ಸೆರೆ ಸಿಕ್ಕಿದ್ದು, ಪ್ರೇಯಸಿ ಜತೆ ಸೇರಿ ಸೈಕೋ ಕಿಲ್ಲರ್ ಮಹಿಳೆಯರನ್ನ ಕೊಂದಿರೊ ವಿಚಾರ ಬಯಲಾಗಿದೆ. ಬೆಂಗಳೂರು ಮೂಲದ ಸಿದ್ದಲಿಂಗಪ್ಪ ಹಾಗೂ ಮಂಡ್ಯದ ಹರವು ಗ್ರಾಮದ ಚಂದ್ರಕಲಾ ಎಂಬ ಖತರ್ನಾಕ್ ಜೋಡಿಯೇ ಭೀಕರ ಕೃತ್ಯವೆಸಗಿದ ಹಂತಕರು. ಬೆಂಗಳೂರಿನ ಟೂಲ್ಸ್ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡ್ತಿದ್ದ ಸಿದ್ದಲಿಂಗಪ್ಪ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡ್ತಿದ್ದ, ಜಯಲಕ್ಷ್ಮಿ ಎಂಬಾಕೆಯನ್ನ ಮದುವೆಯಾಗಿದ್ದ. ಈ ನಡುವೆ ಪತ್ನಿ ಜಯಲಕ್ಷ್ಮಿ ಸಂಬಂಧಿಯಾದ ಚಂದ್ರಕಲಾ ಜತೆ ಸಿದ್ದಲಿಂಗಪ್ಪ ಲವ್ವಿ ಡವ್ವಿ ಶುರು ಮಾಡಿದ್ದ. 

ಮೈಸೂರಿನ ಹೆಬ್ಬಾಳದಲ್ಲಿ ಪ್ರತ್ಯೇಕ ಮನೆ ಮಾಡಿಕೊಂಡು ವಾಸವಿದ್ದ. ಇನ್ನೊಂದು ಇಂಟ್ರಸ್ಟಿಂಗ್ ವಿಚಾರ ಅಂದ್ರೆ ಚಂದ್ರಕಲಾಗೆ ವೇಶ್ಯೆಯರ ಲಿಂಕ್ ಇತ್ತು.  ಕೆಲವರು ಆಗಾಗ ಚಂದ್ರಕಲಾಗೆ ಫೋನ್ ಮಾಡಿ ದಂಧೆಗೆ ಬರುವಂತೆ ಕರೆಯುತ್ತಿದ್ರು. ಈ ವಿಚಾರ ತಿಳಿದಾಗ ಸಿದ್ದಲಿಂಗಪ್ಪ ಕೋಪ ತರಿಸಿತ್ತು. ಹೀಗಾಗಿ ಚಂದ್ರಕಲಾ ಸ್ನೇಹಿತೆಯರನ್ನ ಕೊಲೆ ಮಾಡಲು ನಿರ್ಧಾರ ಮಾಡಿದ್ದ. ಅದ್ರಂತೆ ಚಂದ್ರಕಲಾ ಮೂಲಕ ಮೇ30ರಂದು ಚಿತ್ರದುರ್ಗದ ಪಾರ್ವತಿಯನ್ನ ಮೈಸೂರಿನ ತನ್ನ ಮನೆಗೆ ಕರೆಸಿಕೊಂಡಿದ್ದ. ಮಧ್ಯ ರಾತ್ರಿ ಕುತ್ತಿಗೆ ಬಿಗಿದು ಕೊಂದು, ದೇಹವನ್ನ ಎರಡು ಭಾಗಗಳನ್ನಾಗಿ ಕಟ್ ಮಾಡಿದ್ದ. 

ಬಳಿಕ ಪ್ಲಾಸ್ಟಿಂಗ್ ಚೀಲಕ್ಕೆ ತುಂಬಿಕೊಂಡು ಒಂದು ಭಾಗವನ್ನ ಶ್ರೀರಂಗಪಟ್ಟಣದ ಕಾವೇರಿ ನದಿಗೆ ಮತ್ತೊಂದು ಭಾಗವನ್ನ ಸಿಡಿಎಸ್ ನಾಲೆಗೆ ಎಸೆದಿದ್ದ. ಬಳಿಕ ಜೂನ್ 3ರಂದು ಚಾಮರಾಜನಗರದ ಗೀತ @ಪುಟ್ಟಿ ಎಂಬಾಕೆಯನ್ನ ಮಧ್ಯಾಹ್ನ ಕೊಂದು ಎರಡು ಭಾಗವಾಗಿ ದೇಹ ಕಟ್ ಮಾಡಿ ಒಂದು ಭಾಗವನ್ನ ಪಾಂಡವಪುರ ತಾಲೂಕಿನ ಬಳಿ ವಿಶ್ವೇಶ್ವರಯ್ಯ ನಾಲೆಗೆ ಮತ್ತೊಂದು ಭಾಗವನ್ನ ಬೇಬಿ ಗ್ರಾಮದ ಕೆರೆಗೆ ಎಸೆದು ಪರಾರಿಯಾಗಿದ್ದರು.  ಬಳಿಕ ಮೈಸೂರಿನ ಮನೆ ಖಾಲಿ ಮಾಡಿ ಬೆಂಗಳೂರಿನ ಡಾಬಸ್ ಪೇಟೆಯಲ್ಲಿ ಶಿಫ್ಟ್ ಆಗಿದ್ರು. ಇನ್ನು ಹೇಗಾದ್ರೂ ಕೊಲೆ ಪ್ರಕರಣವನ್ನ ಪತ್ತೆ ಮಾಡಲೆಬೇಕೆಂದು ನಿರಂತರವಾಗಿ ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಜುಲೈ 25ರಂದು ಚಾಮರಾನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಗೀತಾ ನಾಪತ್ತೆ ಪ್ರಕರಣದ ಬಗ್ಗೆ ಮಾಹಿತಿ ಸಿಕ್ಕಿತ್ತು. 

ಆಡಳಿತ ನಡೆಸುವವರಿಗೆ ನಾಲ್ವಡಿ ದಾರಿದೀಪ: ಸಂತೋಷ್‌ ಹೆಗ್ಡೆ

ಬಳಿಕ ಗೀತಾಳ ಮೊಬೈಲ್ ಲಾಸ್ಟ್ ಕಾಲ್ ಹಾಗೂ ಲಾಸ್ಟ್ ಲೊಕೇಷನ್ ಟ್ರೇಸ್ ಪರಿಶೀಲಿಸಿದಾಗ ಚಂದ್ರಕಲಾ ಬಗ್ಗೆ ಮಾಹಿತಿ ಸಿಕ್ಕಿತ್ತು. ಬಳಿಕ ಚಂದ್ರಕಲಾ ಹಾಗೂ ಸಿದ್ದಲಿಂಗಪ್ಪನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಸತ್ಯ ಹೊರಬಂದಿದೆ. ತನಿಖೆ ವೇಳೆ ಮತ್ತೊಂದು ಕೊಲೆ ಬಗ್ಗೆ ಹಂತಕರು ಬಾಯ್ಬಿಟ್ಟಿದ್ದು ಕಳೆದ ಮೇ 1ರಂದು ಬೆಂಗಳೂರಿನಲ್ಲಿ ಕುಮುದಾ ಎಂಬಾಕೆಯನ್ನ ಕೊಲೆ ಮಾಡಿದ್ರಂತೆ. ಅಲ್ಲದೆ ಮತ್ತೈದು ಕೊಲೆಗೆ ಸ್ಕೆಚ್ ಹಾಕಿದ ಬಗ್ಗೆಯೂ ಸೈಕೋ ಕಿಲ್ಲರ್ ಸಿದ್ದಲಿಂಗಪ್ಪ ಒಪ್ಪಿಕೊಂಡಿದ್ದಾರೆ.

Follow Us:
Download App:
  • android
  • ios