Shivamogga: ವೇಶ್ಯಾವಾಟಿಕೆ ಅಡ್ಡೆ ಮೇಲೆ ಪೊಲೀಸರ ದಾಳಿ: ಮೂವರು ಮಹಿಳೆಯರ ರಕ್ಷಣೆ
* ಶಿವಮೊಗ್ಗ ನಗರದ ಹೊರವಲಯದ ತೋಟದ ಮನೆ ಮೇಲೆ ಪೊಲೀಸರ ದಾಳಿ
* ವೃದ್ಧ ಸೇರಿ ಇಬ್ಬರ ಬಂಧನ
* ಮಹಿಳಾ ಠಾಣೆ ಇನ್‌ಸ್ಪೆಕ್ಟರ್ ವೀರೇಶ್ ನೇತೃತ್ವದಲ್ಲಿ ದಾಳಿ
ಶಿವಮೊಗ್ಗ(ಜ.30): ವೇಶ್ಯಾವಾಟಿಕೆ(Prostitution) ಅಡ್ಡೆ ಮೇಲೆ ಮಹಿಳಾ ಠಾಣೆಯ ಪೋಲಿಸರು ದಾಳಿ(Raid) ಮಾಡಿ ವೃದ್ಧ ಸೇರಿ ಇಬ್ಬರ ಬಂಧಿಸಿ ಮೂವರು ಮಹಿಳೆಯರನ್ನ(Woman) ರಕ್ಷಿಸಿದ ಘಟನೆ ನಗರದ ಹೊರವಲಯದಲ್ಲಿ ಇಂದು(ಭಾನುವಾರ) ನಡೆದಿದೆ. ಬಂಧಿತರನ್ನ(Arrest) ದುರ್ಗಿಗುಡಿ ಕೆ.ಎಚ್.ಶಂಕರ್ ಮತ್ತು ಭೋಜಪ್ಪ ಕ್ಯಾಂಪ್‌ನ ಮುನಿಯಪ್ಪ ಎಂದು ಗುರುತಿಸಲಾಗಿದೆ.
ಖಚಿತ ಮಾಹಿತಿ ಮೇರೆಗೆ ನಗರದ ಹೊರವಲಯದಲ್ಲಿ ತೋಟದ ಮನೆ ಮೇಲೆ ಪೊಲೀಸರು(Police) ದಾಳಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ದಾಳಿ ವೇಳೆ ಬೆಂಗಳೂರಿನ(Bengaluru) 38 ವರ್ಷದ ಮಹಿಳೆ, ತೀರ್ಥಹಳ್ಳಿಯ 28 ವರ್ಷದ ಯುವತಿ ಹಾಗೂ ಕುಂದಾಪುರ ತಾಲೂಕಿನ 22 ವರ್ಷದ ಯುವತಿಯನ್ನ ರಕ್ಷಣೆ ಮಾಡಲಾಗಿದೆ.
ಹಗರಿಬೊಮ್ಮನಹಳ್ಳಿ: ಕಬೋರ್ಡ್ ಮಧ್ಯೆ ಸುರಂಗದಲ್ಲಿ ವೇಶ್ಯಾವಾಟಿಕೆ..!
ಸೊಗಾನೆ ಬಳಿಯಿರುವ ಭೋಜಪ್ಪ ಕ್ಯಾಂಪ್‌ನ ತೋಟದ ಮನೆಯಲ್ಲಿ ಅಕ್ರಮ ಚಟುವಟಿಕೆ(Illegal Activity) ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೊಲೀಸರು ಈ ಕಾರ್ಯಾಚರಣೆಯನ್ನ ಮಾಡಿದ್ದಾರೆ.
ಮಹಿಳಾ ಠಾಣೆ ಇನ್‌ಸ್ಪೆಕ್ಟರ್ ವೀರೇಶ್ ಅವರ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ ಅಂತ ತಿಳಿದು ಬಂದಿದೆ. ದಾಳಿ ವೇಳೆ ಪೊಲೀಸರು ಒಂದು ಬೈಕ್‌ನ್ನು ಜಪ್ತಿ ಮಾಡಿದ್ದಾರೆ. ಈ ಸಂಬಂಧ ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರಿನ ನಕಲಿ ದಾಖಲೆ ಅಡವಿಟ್ಟು ಹಣ ಪಡಿತಿದ್ದ ಗ್ಯಾಂಗ್‌ನ ಮೂವರ ಬಂಧನ
ಹುಬ್ಬಳ್ಳಿ(Hubballi): ಬಾಡಿಗೆಗೆಂದು ಕಾರನ್ನು ಪಡೆದು ಬಳಿಕ ನಕಲಿ ದಾಖಲೆ ಸೃಷ್ಟಿಸಿ ಕಾರು ಅಡವಿಟ್ಟು ಹಣ ಪಡೆಯುತ್ತಿದ್ದ ಗ್ಯಾಂಗಿನ ಮೂವರನ್ನು ಕೇಶ್ವಾಪುರ ಪೊಲೀಸರು ಬಂಧಿಸಿದ್ದು, ಒಟ್ಟಾರೆ ಈ ವರೆಗೆ ಏಳು ಜನ ಬಲೆಗೆ ಬಿದ್ದಂತಾಗಿದೆ. ಜತೆಗೆ ಇವರಿಂದ ವಿವಿಧೆಡೆಯ 12 ಕಾರು, 1 ಬೈಕು ಸೇರಿ . 90.27 ಲಕ್ಷ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಇಬ್ಬರು ಮಂಗಳೂರು(Mangaluru) ಮೂಲದ ಹಾಗೂ ಒಬ್ಬ ಹುಬ್ಬಳ್ಳಿಯ ಆರೋಪಿ ಸೇರಿದ್ದಾರೆ. ಬಂಧಿತರಿಂದ ಟೋಯೊಟೋ ಇನ್ನೋವಾ, ಮಾರುತಿ ಸ್ವಿಫ್ಟ್, ಮಾರತಿ ಸ್ವಿಫ್ಟ್ ವಿಡಿಐ, ಮಹಿಂದ್ರಾ ಎಕ್ಸ್‌ಯುವಿ, ಮಹಿಂದ್ರಾ ಟಿಯುವಿ, ಟ್ರೈಬರ ಆರ್‌ಎಕ್ಸ್‌ಎಲ್, ಸುಜಕಿ ಬಲೆನೋ ಡೆಲ್ಟಾ, ಹುಂಡೈ ಐ ಕಾರುಗಳು ಹಾಗೂ ರಾಯಲ್ ಎನ್‌ಫೀಲ್ಡ ಬುಲೇಟ್ ಕಂಪನಿಯ ಬೈಕು ಹಾಗೂ . 2.27 ಲಕ್ಷ ನಗದು ಸೇರಿ ಒಟ್ಟು . 90,27,000 ಮೌಲ್ಯದ ವಸ್ತುವನ್ನು ವಶಪಡಿಸಿಕೊಂಡಿದ್ದಾರೆ. ಇನ್ನು ಗ್ಯಾಂಗ್‌ನ ಇತರೆ ಆರೋಪಿಗಳ ಬಂಧನ ಹಾಗೂ ಅಡವಿಟ್ಟ ಇತರೆ ವಾಹನಗಳ ಪತ್ತೆಗಾಗಿ ತನಿಖೆ ಮುಂದುವರಿದಿದೆ.
ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾದ ಕೇಶ್ವಾಪುರ ಪೊಲೀಸ್ ಇನಸ್ಪೆಕ್ಟರ್ ಜಗದೀಶ ಹಂಚನಾಳ, ಗುಳೇಶ ಎಚ್.ಎಂ., ಎಂ.ಡಿ. ಕಾಲವಾಡ, ವಿಠಲ ಆರ್. ಮಾದರ, ಆನಂದ ಪೂಜಾರ, ಎಚ್.ಆರ್. ರಾಮಾಪುರ, ಎಫ್.ಎಸ್. ರಾಗಿ, ಸಿ.ಕೆ. ಲಮಾಣಿ, ಸಿಇಎನ್ ಪಿಎಸ್ ಸದಾಶಿವ ಕಾನಟ್ಟಿ, ಪಿಎಸ್‌ಐ ರಾಘವೇಂದ್ರ ಗುರ್ಲ, ವೈ.ಆರ್. ಲಕ್ಕಣ್ಣವರ, ಸಿ.ಎಂ. ಕಂಬಾಳಿಮಠ ಅವರ ಕಾರ್ಯ ವೈಖರಿಯನ್ನು ಹುಧಾ ಮಹಾನಗರ ಪೊಲೀಸ್ ಆಯುಕ್ತರು ಶ್ಲಾಘಿಸಿದ್ದಾರೆ.
ಮಹಾರಾಷ್ಟ್ರದ ಮೂವರು ಮನೆಗಳ್ಳರ ಬಂಧನ
ದಾವಣಗೆರೆ(Davanagere): ಹರಿಹರ, ರಾಣೆಬೆನ್ನೂರು, ಹಾವೇರಿ, ಖಾನಾಪುರ, ನಿಪ್ಪಾಣಿ, ಸಂಕೇಶ್ವರ ಸೇರಿದಂತೆ ವಿವಿಧೆಡೆ ಮನೆಗಳ್ಳತನ ಮಾಡುತ್ತಿದ್ದ ಮಹಾರಾಷ್ಟ್ರ ಮೂಲದ ಮೂವರು ಆರೋಪಿಗಳನ್ನು ಬಂಧಿಸಿ, 22 ಲಕ್ಷ ರು.ಗೂ ಅಧಿಕ ಮೌಲ್ಯದ ಚಿನ್ನಾಭರಣಗಳನ್ನು ಹರಿಹರ ಪೊಲೀಸರು ಜಪ್ತು ಮಾಡಿದ್ದಾರೆ.
5 ವರ್ಷದಲ್ಲಿ 75 ಮದುವೆ, ನಂಬಿಸಿ ಕರೆತಂದು ವೇಶ್ಯಾವಾಟಿಕೆಗೆ ದೂಡುತ್ತಿದ್ದ!
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಜಿಲ್ಲಾ ಪೊಲೀಸ್ ವರಿಷ್ಠ ಸಿ.ಬಿ.ರಿಷ್ಯಂತ್, ಮಹಾರಾಷ್ಟ್ರ(Maharashtra) ಮೂಲದ ಮೂವರು ಆರೋಪಿಗಳನ್ನು ಬಂಧಿಸಿದ್ದು, ಬಂಧಿತರು ನಿಪ್ಪಾಣಿ, ಸಂಕೇಶ್ವರ, ಖಾನಾಪುರ, ಹರಿಹರ, ಹಾವೇರಿ, ರಾಣೆಬೆನ್ನೂರಿನಲ್ಲಿ ಬೀಗ ಹಾಕಿದ್ದ ಮನೆಗಳನ್ನೇ ಗುರಿಯಾಗಿಟ್ಟುಕೊಂಡು, ತಮ್ಮ ಕೈಚಳಕ ತೋರುತ್ತಿದ್ದರು ಎಂದರು.
ಮಹಾರಾಷ್ಟ್ರ ಮೂಲಕ ಮೂವರೂ ಕಳ್ಳರ ತಂಡವು(Gang of Thieves) ಇದೇ ಮೊದಲ ಸಲ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದೆ. ಇದರೊಂದಿಗೆ 10 ಕಳ್ಳತನ ಪ್ರಕರಣಗಳು ಪತ್ತೆಯಾಗಿವೆ. ಬಂಧಿತರಿಂದ 16.84 ಲಕ್ಷ ಮೌಲ್ಯದ 421 ಗ್ರಾಂ ಚಿನ್ನಾಭರಣ, 2.16 ಲಕ್ಷ ಮೌಲ್ಯದ 3600 ಗ್ರಾಂ ಬೆಳ್ಳಿ ಆಭರಣ, 1 ಲಕ್ಷ ರು. ನಗದು, 7 ಸಾವಿರ ರು. ಮೌಲ್ಯದ ಒಂದು ಪಾಸಿಲ್ ಕಂಪನಿ ವಾಚ್, 2.85 ಲಕ್ಷ ರು. ಮೌಲ್ಯದ ಮಾರುತಿ ಸುಜುಕಿ ಸ್ವಿಫ್ಟ್ ಕಾರು ಸೇರಿದಂತೆ 22.92 ಲಕ್ಷ ಮೌಲ್ಯದ ಸ್ವತ್ತು ಜಪ್ತು ಮಾಡಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅವರು ತಿಳಿಸಿದರು.