ಸಲಿಂಗ ಕಾಮದ ಆರೋಪ: ಸೂರಜ್ ರೇವಣ್ಣಗೆ ಪೊಲೀಸ್ ಗ್ರಿಲ್..!
ಸೂರಜ್ ರೇವಣ್ಣ ಅವರು ತಮ್ಮ ಮೇಲೆ ಅನೈಸರ್ಗಿಕ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಅರಕಲಗೂಡು ಮೂಲದ ಜೆಡಿಎಸ್ ಕಾರ್ಯಕರ್ತರೊಬ್ಬರು ಶನಿವಾರ ಹೊಳೆನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದರು. ಈ ದೂರಿನನ್ವಯ ಸೂರಜ್ ವಿರುದ್ಧ ಆನೈಸರ್ಗಿಕ ಲೈಂಗಿಕ ದೌರ್ಜನ್ಯ ದೂರು ದಾಖಲಿಸಲಾಗಿದೆ.
ಹೊಳೆನರಸೀಪುರ/ಹಾಸನ(ಜೂ.23): ವಿಧಾನ ಪರಿಷತ್ ಸದಸ್ಯ ಡಾ.ಸೂರಜ್ ರೇವಣ್ಣ ಅವರ ವಿರುದ್ಧ ಸಲಿಂಗ ಕಾಮದ ಆರೋಪ ಕೇಳಿಬಂದ ಮರುದಿನವೇ ಆ ಸಂಬಂಧ ಹೊಳೆನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಶನಿವಾರ ಪ್ರಕರಣ ದಾಖಲಾಗಿದೆ. ಇದರ ಬೆನ್ನಲ್ಲೇ ಸೂರಜ್ ರೇವಣ್ಣ ಅವರನ್ನು ತಡರಾತ್ರಿವರೆಗೂ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಸೂರು ಅವರನ್ನು ಬೆರುವಾರ ಪಡೆದಿದ್ದಾರೆ, ವಿಚಾರಣೆ ಬಳಿಕ ಬಂಧಿಸಲಿದ್ದಾರೆ ಎನ್ನಲಾಗುತ್ತಿದ್ದರೂ, ಖಚಿತಪಟ್ಟಿಲ್ಲ.
ಸೂರಜ್ ರೇವಣ್ಣ ಅವರು ತಮ್ಮ ಮೇಲೆ ಆನೈಸರ್ಗಿಕ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಅರಕಲಗೂಡು ಮೂಲದ ಜೆಡಿಎಸ್ ಕಾರ್ಯಕರ್ತರೊಬ್ಬರು ಶನಿವಾರ ಹೊಳೆನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದರು. ಈ ದೂರಿನನ್ವಯ ಸೂರಜ್ ವಿರುದ್ಧ ಆನೈಸರ್ಗಿಕ ಲೈಂಗಿಕ ದೌರ್ಜನ್ಯ ದೂರು ದಾಖಲಿಸಲಾಗಿದೆ. ಈ ಮಧ್ಯೆ, ದೂರುದಾರ ತಮ್ಮನ್ನು ಬ್ಲ್ಯಾಕ್ ಮೇಲ್ ಮಾಡಿದ್ದಾನೆ ಎಂದು ಆರೋಪಿಸಿ ದೂರು ನೀಡಲು ಸೂರಜ್ ಹಾಸನದ 'ಸೆನ್' (ಸೈಬರ್, ಆರ್ಥಿಕ ಅಪರಾಧ, ನಾರ್ಕೋಟಕ್ಸ್) ಪೊಲೀಸ್ ಠಾಣೆಗೆ ಆರಂಭಿಸಿದ ಅವರನ್ನು ರಾತ್ರಿ 11.30ರವರೆಗೂ ಪೊಲೀಸರು ವಿಚಾರಣೆ ನಡೆಸಿದರು.
ಸೂರಜ್ ರೇವಣ್ಣ ಸಲಿಂಗ ಕಾಮದ ಕುರಿತು ಅಧಿಕೃತ ದೂರು ದಾಖಲಾಗಿಲ್ಲ: ಗೃಹ ಸಚಿವ ಪರಮೇಶ್ವರ
ಬಳಿಕ ಅಧಿಕಾರಿಗಳ ಜತೆ ಸೂರಜ್ ನಿಗೂಢ ಸ್ಥಳಕ್ಕೆ ತೆರಳಿದರು. ಅರ್ಧತಾಸಿನಲ್ಲಿ ಮತ್ತೆ ಸಿ.ಎನ್ ತಾಣೆಗೆ ಮರಳಿದರು. ರಾತ್ರಿ 1.30 ಆದರೂ ವಿಚಾರಣೆ ಮುಂದುವರಿದಿತ್ತು. ಪ್ರಕರಣದಲ್ಲಿ ಶನಿಖಾಧಿಕಾರಿಯಾಗಿರುವ ಸಕಲೇಶಪುರ ಡಿವೈಎಸ್ಪಿ ಪ್ರಮೋದ್ ಕುಮಾರ್ ಅವರು ಸೂರಜ್ ಅವರನ್ನು ತೀವ್ರ ವಿಚಾರಣೆಗೆ ಗುರಿಪಡಿಸಿದರು.
ಈ ವೇಳೆ, ದೂರುದಾರ ತಮ್ಮ ಬಳಿ 5 ಕೋಟಿ ರು. ಗೆ ಬೇಡಿಕೆಯಿಟ್ಟು ಕರೆ ಮಾಡಿದ್ದು, ಆ ಆಡಿಯೋ ತಮ್ಮ ಹೇಳಿದ್ದಾರೆನ್ನಲಾಗಿದೆ. ಸೂರಜ್ ರೇವಣ್ಣ ಅವರ ಕಿರಿಯ ಸೋದರ, ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಜೈಲಿನಲ್ಲಿದ್ದಾರೆ. ಆ ಪ್ರಕರಣದ ಸಂತ್ರಸ್ತೆಯ ಅಪಹರಣ ಪ್ರಕರಣದಲ್ಲಿ ಸೂರಜ್ ತಂದೆ ರೇವಣ್ಣ ಅವರು ಜೈಲಿಗೂ ಹೋಗಿ ಬಂದಿದ್ದಾರೆ. ಇದರ ಬೆನ್ನಲ್ಲೇ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಮತ್ತೊಬ್ಬ ಮೊಮ್ಮಗನ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ.
ದೂರು ದಾಖಲು:
ತಮಗಾದ ಅನೈಸರ್ಗಿಕ ಲೈಂಗಿಕ ದೌರ್ಜನ್ಯಕ್ಕೆ ನ್ಯಾಯ ಕೋರಿ ಐಜಿ ಹಾಗೂ ಡಿಐಜಿ ಅವರಿಗೆ ದೂರುದಾರ ಇ-ಮೇಲ್ ಮೂಲಕ ದೂರು ನೀಡಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಈ ಮಧ್ಯೆ, ಶನಿವಾರ ಕೃತ್ಯ ನಡೆದ ಹೊಳೆನರಸೀಪುರ ವ್ಯಾಪ್ತಿಯ ಠಾಣೆಗೆ ಆಗಮಿಸಿ ಅಧಿಕೃತವಾಗಿ ದೂರು ನೀಡಿದ್ದಾರೆ. ಮುಖಕ್ಕೆ ಮಾಸ್ಕ್ ಹಾಕಿಕೊಂಡು, ಬಿಳಿ ಇನ್ನೋವಾ ಕಾರಿನಲ್ಲಿ ಠಾಣೆಗೆ ಅವರು ಆಗಮಿಸಿದ್ದರು. ಈ ವೇಳೆ ಠಾಣೆ ಸುತ್ತಮುತ್ತ ಭದ್ರತೆಗಾಗಿ ಕೆಎಸ್‌ಆರ್‌ಪಿ ತುಕಡಿ
ಜೆಡಿಎಸ್ ಕಾರ್ಯಕರ್ತರಾಗಿದ್ದ ದೂರುದಾರ, ಡಾ.ಸೂರಜ್ ರೇವಣ್ಣಗೆ ಪರಿಚಿತರು. ನೌಕರಿ ಕೊಡಿಸುವಂತೆ ಕೋರಿ ಜೂ.16 ರಂದು ಸೂರಜ್ ರೇವಣ್ಣ ಅವರ ಗನ್ನಿಕಡ ಫಾರಂಹೌಸ್‌ಗೆ ತೆರಳಿದ್ದ ವೇಳೆ ತಮ್ಮ ಮೇಲೆ ಸೂರಜ್ ಅನೈಸರ್ಗಿಕ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ಈ ಮಧ್ಯೆ, ಸೂರಜ್ ರೇವಣ್ಣ ಅವರ ಆಪ್ತ ಹನುಮನಹಳ್ಳಿಯ ಶಿವಕುಮಾರ್ ಎಂಬುವರು ದೂರುದಾರನೇ ವಿರುದ್ಧವೇ ಹೊಳೆನರಸೀಪುರ ಠಾಣೆಯಲ್ಲಿ ಶುಕ್ರವಾರ ಪ್ರತಿದೂರುದಾಖಲಿಸಿದ್ದಾರೆ. ದೂರುದಾರ ಜೂ.16ರಂದು ತಮ್ಮ ನಾಯಕ (ಸೂರಜ್)ರ ಬಳಿ ಕೆಲಸ ಕೇಳಲು ಬಂದಿದ್ದರು. ಬಳಿಕ, ನಿಮ್ಮ ನಾಯಕರಿಂದ ಕೆಲಸ ಕೊಡಿಸಲು ಸಾಧ್ಯವಿಲ್ಲ. ನನಗೆ ತುಂಬಾ ಕಷ್ಟವಿದೆ ಎಂದು ಹೇಳಿ 5 ಕೋಟಿ ರು.ಗಾಗಿ ಬೇಡಿಕೆ ಇಟ್ಟಿದ್ದರು. ಹಣ ನೀಡದಿದ್ದರೆ ಶಾಸಕರ ವಿರುದ್ಧ ಅನೈಸರ್ಗಿಕ ಲೈಂಗಿಕ ದೌರ್ಜನ್ಯದ ಕೇಸು ದಾಖಲಿಸುವುದಾಗಿ ಬೆದರಿಕೆ ಹಾಕಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಸಂಬಂಧ ಖುದ್ದು ಸೂರಜ್ ಅವರೇ ಶನಿವಾರ ಸಂಜೆ ಹಾಸನ ಪೊಲೀಸ್ ಠಾಣೆಗೆ ಬಂದು ದೂರು ದಾರನ ವಿರುದ್ಧ ಪ್ರತಿ ದೂರು ದಾಖಲಿಸಿದ್ದಾರೆ.
ತಡರಾತ್ರಿವರೆಗೆ ನಡೆದಿದ್ದು ಏನು?
• ಮುಖಕ್ಕೆ ಮಾಸ್ಕ್ ಧರಿಸಿ ಬೆಂಗಳೂರಿನಿಂದ ಆಗಮಿಸಿದ ಜೆಡಿಎಸ್ ಕಾರ್ಯಕರ್ತ
* ಹೊಳೆನರಸೀಪುರ ಠಾಣೆ ಯಲ್ಲಿ ಸೂರಜ್ ವಿರುದ್ಧ ಸಲಿಂಗ ಕಾಮ ದೂರು
• ಬೆನ್ನಲ್ಲೇ ಸಂಜೆ 5 ಸುಮಾರಿಗೆ ಹಾಸನದ ಸೆನ್ ಠಾಣೆಗೆ ತೆರಳಿದ ಸೂರಜ್ ರೇವಣ್ಣ
ಆ ಠಾಣೆಯಲ್ಲೇ ರಾತ್ರಿ 11.30ರವರೆಗೂ ವಿಧಾ ನಪರಿಷತ್ ಸದಸ್ಯನ ತೀವ್ರ ವಿಚಾರಣೆ
• ಬಳಿಕ ಪೊಲೀಸರ ಜತೆಗೆ ಹೊರಹೋದ ಸೂರಜ್ ರೇವಣ್ಣ, ಅರ್ಧ ತಾಸಿನಲ್ಲಿ ವಾಪಸ್
* ಸೆನ್ ಠಾಣೆಯಲ್ಲಿ ಮುಂದುವರಿದ ವಿಚಾ ರಣೆ. ಸೂರಜ್ ವಶಕ್ಕೆ ವಡೆದ ಬಗ್ಗೆ ಗುಸುಗುಸು
ಜೆಡಿಎಸ್ ಕಾರ್ಯಕರ್ತನಿಗೆ ಸಲಿಂಗ ಲೈಂಗಿಕ ಕಿರುಕುಳ, ಸೂರಜ್ ರೇವಣ್ಣ ವಿರುದ್ಧ ದೂರು!
ಇದು ರಾಜಕೀಯ ಷಡ್ಯಂತ್ರ: ಸೂರಜ್ ಮೊದಲ ಪ್ರತಿಕ್ರಿಯೆ
ಹಾಸನ: ತಮ್ಮ ಮೇಲೆ ಬಂದಿರುವ ಅನೈಸರ್ಗಿಕ ಲೈಂಗಿಕ ದೌರ್ಜನ್ಯ ಆರೋಪದ ಕುರಿತಾಗಿ ಮೊದಲ ಇವೆಲ್ಲಾ ರಾಜಕೀಯ ಷಡ್ಯಂತ್ರ ಎಂದು ವಿಧಾನ ವರಿಷತ್ ಸದಸ್ಯ ಸೂರಜ್ ರೇವಣ್ಣ, ಆರೋಪಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಸೂರಜ್, 'ಇದೆಲ್ಲಾ ರಾಜಕೀಯ ಷಡ್ಯಂತ್ರ. ಇದರ ಹಿಂದೆ ಯಾರಿದ್ದಾರೆ ಎನ್ನು ವುದು ಗೊತ್ತಿದೆ. ಅವರು ಯಾರು ಎನ್ನುವುದನ್ನು ಈಗಲೇ ನಾನು ಹೇಳುವುದಿಲ್ಲ. ಸಮಯ ಬಂದಾಗ ಎಲ್ಲವನ್ನೂ ಹೇಳುತ್ತೇನೆ. ಆದರೆ, ಇದರಲ್ಲಿ ನನ್ನನ್ನು ಸಿಲುಕಿಸುವ ತಂತ್ರ ನಡೆದಿದೆ. ನನಗೆ ಕಾನೂನಿನ ಬಗ್ಗೆ ನಂಬಿಕೆ ಇದೆ. ತನಿಖೆ ನಂತರ ಸತ್ಯ ಹೊರಬಲಿದೆ ಎಂದು ಹೇಳಿದ್ದಾರೆ.
ಇಂಥ ವಿಚಾರ ಬಗ್ಗೆ ನಾನು ಚರ್ಚಿಸಲ್ಲ
ಇಂತಹ ವಿಚಾರಗಳನ್ನು (ಸೂರಜ್ ಕೇಸ್) ನನ್ನ ಬಳಿ ಚರ್ಚೆ ಮಾಡಲು ಬರಬೇಡಿ. ರಾಜ್ಯದ ಸಮಸ್ಯೆಗಳಿಗೆ ಸಂಬಂಧಪಟ್ಟ ವಿಚಾರಗಳನ್ನು ಮಾತ್ರ ಚರ್ಚೆ ಮಾಡಿ ಎಂದು ಕೇಂದ್ರ ಕೈಗಾರಿಕೆ ಸಚಿವ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.